Connect with us

BANTWAL

ಪನಾಮಾ ಸಮೂಹ ಸಂಸ್ಥೆಗಳ ಸ್ಥಾಪಕ ಕಲ್ಲಡ್ಕ ಮುಹಮ್ಮದ್ ಪನಾಮಾ ನಿಧನ

Published

on

ಬಂಟ್ವಾಳ: ಪನಾಮಾ ಸಮೂಹ ಸಂಸ್ಥೆಗಳ ಸ್ಥಾಪಕ, ಹಿರಿಯ ಉದ್ಯಮಿ ಕಲ್ಲಡ್ಕ ಮುಹಮ್ಮದ್ ಪನಾಮಾ (76) ಅವರು ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ತಮ್ಮ ಸ್ವಗೃಹದಲ್ಲಿ ನಿಧನರಾದರು.


ಪನಾಮಾ ಸಮೂಹ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಉದ್ಯಮದಲ್ಲಿ ಹೆಸರುವಾಸಿಯಾದ ಅವರು, ಕಲ್ಲಡ್ಕ ಜಮಾಅತ್ ಕಮಿಟಿಯಲ್ಲೂ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಅವರು, ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅವರು ಪತ್ನಿ, ನಾಲ್ವರು ಗಂಡು, ಮೂವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಕಲ್ಲಡ್ಕ ಜಮಾಅತ್ ಕಮಿಟಿ, ಎಸ್.ಡಿ.ಪಿ.ಐ. ಕಲ್ಲಡ್ಕ ಬ್ಲಾಕ್, ಪಿ.ಎಫ್.ಐ. ಬಂಟ್ವಾಳ ತಾಲೂಕು ಅಧ್ಯಕ್ಷ ಸಲೀಂ ಕುಂಪನಮಜಲು ಸಂತಾಪ ವ್ಯಕ್ತಪಡಿಸಿದ್ದಾರೆ.

ಉದ್ಯಮ ಕ್ಷೇತ್ರದಲ್ಲಿ ಸುಮಾರು 50 ವರ್ಷಕ್ಕೂ ಹೆಚ್ಚಿನ ಅನುಭವವನ್ನು ಅವರು ಹೊಂದಿದ್ದರು. ಹಲವು ಗಣ್ಯರು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Click to comment

Leave a Reply

Your email address will not be published. Required fields are marked *

BANTWAL

ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ

Published

on

ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.

ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.

ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.

ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್‌ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

LATEST NEWS

Trending