DAKSHINA KANNADA
ಮಂಗಳೂರು ರಥಬೀದಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಣಾ ಕಾರ್ಯಕ್ರಮ
Published
3 years agoon
By
Adminಮಂಗಳೂರು: ಡಾ. ದಯಾನಂದ್ ಪೈ, ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ದ. ಕ ಜಿಲ್ಲಾ ಬಸ್ ಮಾಲಕರ ಸಂಘ ಮತ್ತು ಚಲೋ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿ ಡಿಜಿಟಲ್ ಬಸ್ ಪಾಸ್ ವಿತರಣಾ ಕೇಂದ್ರದ ಉದ್ಘಾಟನೆ ಮತ್ತು ಬಸ್ ಪಾಸ್ ವಿತರಣಾ ಕಾರ್ಯಕ್ರಮ ಮಂಗಳೂರಿನ ರಥಬಿದಿಯ ಡಾ. ದಯಾನಂದ್ ಪೈ , ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮಕ್ಕೆ ದ.ಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ದೀಪ ಬೆಳಗಿ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಚಲೋ ಬಸ್ ಪಾಸ್ ವಿತರಣೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಅವರು ಕಳೆದ ನಲವತ್ತು ಅಧಿಕ ವರ್ಷಗಳಿಂದ ದ.ಕ ಜಿಲ್ಲಾ ಬಸ್ ಮಾಲಕರ ಸಂಘ ಕಾರ್ಯ ನಿರ್ವಹಿಸುತ್ತಿದ್ದು ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಏನಾದರೂ ಒಳಿತು ಮಾಡಬೇಕೆಂದು ಎರಡು ವರ್ಷಗಳ ಹಿಂದೆ ಮುಂಬೈ ಮೂಲದ ಚಲೋ ಸಂಸ್ಥೆ ಮೂಲಕ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿತ್ತು.
ಕೊರೋನಾ ಕಾರಣದಿಂದ ಈ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಲಾಗದಿದ್ರು ಇದೀಗಾ ಹೆಚ್ಚಿನ ವಿದ್ಯಾರ್ಥಿಗಳು ಈ ಚಲೋ ಪಾಸ್ ನ ಸದುಪಯೋಗ ಪಡೆಯುವ ಮೂಲಕ ನಮ್ಮ ಈ ಯೋಜನೆಗೆ ಪುಷ್ಟಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಸಹಕಾರ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಲಭ್ಯವಾಗಬೇಕಿದೆ ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ದಯಾನಂದ್ ಪೈ , ಪಿ ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಸಿ, ದಕ ಜಿಲ್ಲಾ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಗಣೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಜಂಟಿ ಕಾರ್ಯದರ್ಶಿ ರಾಜ್ ಕುಮಾರ್, ಕೋಶಾಧಿಕಾರಿ ಸತ್ಯರಾಜ್, ಚಲೋ ಸಂಸ್ಥೆ ಪ್ರತಿನಿಧಿಗಳಾದ ಅಮೃತ್ ಮಯ್ಯ, ಶಿವರಾಜ್, ಸಸ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಯಕರ ಭಂಡಾರಿ, ವಿದ್ಯಾರ್ಥಿ ಕ್ಷೇಮಪಾಲಕರು ಡಾ. ಸುಧಾಕರನ್ ಟಿ ಮತ್ತಿತರರು ಉಪಸ್ಥಿತರಿದ್ದರು.
DAKSHINA KANNADA
ಕರಾವಳಿ ಉತ್ಸವ: ಕದ್ರಿ ಪಾರ್ಕಿನಲ್ಲಿ ರೋಮಾಂಚಕಾರಿಯಾದ ಚಿಟ್ಟೆ ಪ್ರದರ್ಶನ
Published
38 minutes agoon
23/12/2024ಮಂಗಳೂರು : ಕೆಲವು ವರ್ಷಗಳ ಬಳಿಕ ಈ ಬಾರಿ ಮತ್ತೆ ಆರಂಭಗೊಂಡಿರುವ ಕರಾವಳಿ ಉತ್ಸವ ಎರಡೇ ದಿನಗಳಲ್ಲಿ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಇದಕ್ಕೆ ಜಿಲ್ಲಾಡಳಿತ ಉತ್ತಮ ವ್ಯವಸ್ಥೆಯನ್ನು ಕೂಡಾ ಮಾಡಿದ್ದು, ಈ ಬಾರಿ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಸಂಘಟಿಸಿರುವುದಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ಡಿಸೆಂಬರ್ 21ರಿಂದ ಆರಂಭಗೊಂಡಿರುವ ಕರಾವಳಿ ಉತ್ಸವದ ಆಕರ್ಷಕ ಮೆರವಣಿಗೆ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡಿವೆ. ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಡಿ.೨೧ರಿಂದ ಜನವರಿ ೧೯ರವರೆಗೆ ನಡೆಯಲಿದೆ. ಪ್ರತೀ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ಝಲಕ್ ಇರಲಿದೆ. ಕರಾವಳಿ ಕರ್ನಾಟಕದ ಕಲೆ, ಕರಕುಶಲ ಮತ್ತು ಖಾದ್ಯಗಳ ಪ್ರದರ್ಶನ, ಸಾಂಸ್ಕೃತಿಕ ವೈವಿಧ್ಯಗಳ ಜೊತೆಗೆ ಮನೋರಂಜನೆಯ ಭರಪೂರವಿದೆ. ಇದಲ್ಲದೇ ಡಿ.29ರವರೆಗೆ ಮೇರಿಹಿಲ್ ಹೆಲಿಪ್ಯಾಡಿನಲ್ಲಿ ಹೆಲಿಕಾಫ್ಟರ್ ರೈಡ್ ಆರಂಭಿಸಲಾಗಿದ್ದು, ಇದಕ್ಕೂ ಬಹಳಷ್ಟು ಜನ ಆಗಮಿಸುತ್ತಿದ್ದಾರೆ. ಡಿ.22ರಿಂದ ಜ.19ರವರೆ ಕದ್ರಿ ಪಾರ್ಕಿನಲ್ಲಿ ರೋಬೋಟಿಕ್ ಚಿಟ್ಟೆ ಪ್ರದರ್ಶನವಿದ್ದು, ಈ ಪ್ರದರ್ಶನವನ್ನು ವೀಕ್ಷಣೇ ಮಾಡಲು ಬಹಳಷ್ಟು ಜನ ಆಗಮಿಸುತ್ತಿದ್ದಾರೆ.
ಶನಿವಾರ ಮತ್ತು ಭಾನುವಾರ ಭಾರೀ ಸಂಖ್ಯೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಈ ಪ್ರದರ್ಶನ ಸಂಜೆ 4 ರಿಂದ ರಾತ್ರಿ 9 ರವರೆಗೆ ಮಾತ್ರ ಇರಲಿದೆ. ಅಲ್ಲದೆ ಇಂದು ವಸ್ತುಪ್ರದರ್ಶನ ವೇದಿಕೆಯಲ್ಲಿ ನೃತ್ಯರೂಪಕವಿರಲಿದೆ. ನೃತ್ಯೋಪಾಸನ ಕಲಾ ಅಕಾಡೆಮಿ ಪುತ್ತೂರು ಇವರಿಂದ ಕಾರ್ಯಕ್ರಮವಿದೆ. ನಾಳೆ ಸಂಜೆ ದೇವದಾಸ್ ಕಾಪಿಕಾಡ್ ನಿದೇಆರ್ಶನದ ತುಳುಹಾಸ್ಯ ನಾಟಕ ಎರ್ಲಾ ಗ್ಯಾರಂಟಿ ಅತ್ತ್ ಎನ್ನುವ ನಾಟಕ ವಸ್ತು ಪ್ರದರ್ಶನ ವೇದಿಕೆಯಲ್ಲಿ ಪ್ರದರ್ಶಿಸಲ್ಪಡಲಿದೆ.
bangalore
ಕ್ರಿಸ್ಮಸ್ ಸ್ಪೆಷಲ್ ಆಫರ್; ಮಂಗಳೂರು – ಬೆಂಗಳೂರು ವಿಶೇಷ ರೈಲು ಸಂಚಾರ
Published
1 day agoon
22/12/2024ಮಂಗಳೂರು : ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬೆಂಗಳುರು – ಮಂಗಳೂರು ನಡುವೆ ಡಿಸೆಂಬರ್ 23 ಹಾಗೂ 27 ರಂದು ವಿಶೇಷ ರೈಲು ಸಂಚರಿಸಲಿದೆ. ಮತ್ತೆ ಪುನಃ ಅದೇ ರೈಲು (06506) ಡಿಸೆಂಬರ್ 24 ಮತ್ತು 28 ರಂದು ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಧ್ಯಾಹ್ನ 1:00 ಗಂಟೆಗೆ ಹೊರಟು, ಅದೇ ದಿನ ರಾತ್ರಿ 10.30 ಕ್ಕೆ ಯಶವಂತಪುರ ತಲುಪಲಿದೆ.
ಕೆಲಸದ ನಿಮಿತ್ತ ಮಂಗಳೂರಿನ ಹಲವು ಜನ ಬೆಂಗಳೂರಿನಲ್ಲಿ ವಾಸವಿದ್ದಾರೆ. ಇದೀಗ ಕ್ರಿಸ್ಮಸ್ ಹಬ್ಬ ಸಮೀಪಿಸುತ್ತಿದ್ದು, ಊರಿಗೆ ಮರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಅವರಿಗೆಲ್ಲಾ ಅನುಕೂಲವಾಗಲೆಂದು ಈ ವಿಶೇಷ ರೈಲು ಸಂಚಾರವನ್ನು ಅಳವಡಿಸಿದ್ದು, ಹಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಇದರ ಫಲಾನುಭವಿಗಳಾಗಲಿದ್ದಾರೆ.
ಈ ರೈಲು ಕುಣಿಗಲ್, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕಪುತ್ತೂರು ಮತ್ತು ಬಂಟ್ವಾಳ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ. ಪ್ರಯಾಣಿಕರು ಅಧಿಕೃತ (www.enquiry.indianrail.gov.in) ವೆಬ್ಸೈಟ್ಗೆ ಭೇಟಿ ನೀಡಿ. NTES ಅಪ್ಲಿಕೇಶನ್ ಬಿಳಸಿ ಅಥವಾ 139 ನಂಬರಗೆ ಡಯಲ್ ಮಾಡುವ ಮೂಲಕ ಈ ರೈಲುಗಳ ಪ್ರತಿ ನಿಲ್ದಾಣದ ಆಗಮನ/ನಿರ್ಗಮನ ಸಮಯ ಮತ್ತು ಇತರ ಮಾಹಿತಿಯನ್ನು ವಡೆದುಕೊಳ್ಳಬಹುದು.
DAKSHINA KANNADA
ಮೂಲ್ಕಿ: ವಿವಿಧ ರಂಗಗಳ ಸಾಧಕರಿಗೆ ‘ಅರಸು ಕಂಬಳ’ ಪ್ರಶಸ್ತಿ ಪ್ರದಾನ
Published
2 days agoon
21/12/2024ಮೂಲ್ಕಿ: ಮೂಲ್ಕಿ ಅರಸು ಕಂಬಳ ಸಂದರ್ಭ ಮೂಲ್ಕಿ ಸೀಮೆ ವ್ಯಾಪ್ತಿಯ ವಿವಿಧ ರಂಗಗಳ 14 ಮಂದಿ ಸಾಧಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಅರಮನೆಯ ಧರ್ಮ ಚಾವಡಿಯಲ್ಲಿ ಅರಸು ಪ್ರಶಸ್ತಿ ನೀಡಿ ಗೌರವಿಸುವ ಕಾರ್ಯಕ್ರಮ ಡಿ. 22ರಂದು ಮಧ್ಯಾಹ್ನ 12ಕ್ಕೆ ನಡೆಯಲಿದೆ ಎಂದು ಅರಸರಾದ ದುಗ್ಗಣ್ಣ ಸಾವಂತರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮೂಲ್ಕಿ ಅರಮನೆ ಟ್ರಸ್ಟ್ ಮತ್ತು ಹಳೆಯಂಗಡಿಯ ಪ್ರಿಯ ದರ್ಶಿನಿ ಕೋ-ಆಪರೇಟಿವ್ ಸೊಸೈಟಿಯ ಸಹಭಾಗಿತ್ವದಲ್ಲಿ ಕಾಠ್ಯಕ್ರಮ ನಡೆ. ಯಲಿದೆ. ಶ್ರೀ ಅರುಣಾನಂದ ತೀರ್ಥ ಸ್ವಾಮೀ ಜಿ (ಸಾಧನಾ ಪ್ರಶಸ್ತಿ) ದಿ। ಎಚ್. ನಾರಾಯಣ ಸನಿಲ್ (ಮರಣೋತ್ತರ-ಸಮಾಜ ಸೇವೆ ಮತ್ತು ಶಿಕ್ಷಣ, ಸಹಕಾರಿ) ದಿ। ಎನ್. ಬಾಬು ಶೆಟ್ಟಿ (ಮರಣೋತ್ತರ-ಸಮಾಜ ಸೇವೆ), ಮೀರಾ ಬಾಯಿ ಕೆ. (ಶಿಕ್ಷಣ), ಎಚ್. ಶಕುಂತಳಾ ಭಟ್ (ಸಾಹಿತ್ಯ) ವಾಲ್ಟರ್ ಡಿ’ಸೋಜಾ (ಕೃಷಿ ಮತ್ತು ಪರಿಸರ), ಡಾ। ಹಸನ್ ಮುಬಾರಕ್ (ವೈದ್ಯಕೀಯ), ಸೀತಾರಾಮ್ ಕುಮಾರ್ ಕಟೀಲು (ಯಕ್ಷಗಾನ), ಪರಮಾನಂದ ಸಾಲ್ಯಾನ್ (ಸಾಹಿತ್ಯ), ಶಿವ ಸಂಜೀವಿನಿ ಸುರಗಿರಿ (ಸಂಘ ಸಂಸ್ಥೆ), ಮಾಧವ ಶೆಟ್ಟಿಗಾರ್ ಮತ್ತು ಚಂದ್ರಕುಮಾರ್ (ಸಾಮಾಜಿಕ ಕ್ಷೇತ್ರ) ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್ ತೋಕೂರು (ಸಂಘಸಂಸ್ಥೆ) ವಿನಾಯಕಯಕ್ಷಗಾನ ಫೌಂಡೇಶನ್ ಕೆರೆಕಾಡು (ಯಕ್ಷಗಾನ ತಂಡ) ಇವರಿಗೆ ಪ್ರಶಸ್ತಿ ನೀಡಲಾಗುವುದು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಳದಂಗಡಿ ಅರಮನೆಯ ತಿಮ್ಮಣ್ಣ ಅರಸರಾದ ಡಾ। ಪದ್ಮಪ್ರಸಾದ್ ಅಜಿಲರು, ದ.ಕ. ಕೇಂದ್ರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿವೃತ್ತ ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ಪಿ. ಮುಂತಾದವರು ಉಪಸ್ಥಿತರಿರುವರು ಎಂದರು. ಅರಮನೆಟ್ರಸ್ಟ್‌ನ ಗೌತಮ್ ಜೈನ್, ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ್ ಬೆರ್ನಾಡ್ ಹಾಗೂ ಸಿಇಒ ಸುದರ್ಶನ್ ಉಪಸ್ಥಿತರಿದ್ದರು.
LATEST NEWS
WWE ಫ್ಯಾನ್ಸ್ ಗೆ ಆಘಾತ: ರೇಯ್ ಮಿಸ್ಟೀರಿಯೋ ನಿಧನ !
ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪ*ಲ್ಟಿ; ರೈಡರ್ ಕ*ಣ್ಮರೆ
ದಿ*ಢೀರ್ ಹ*ಚ್ಚಿಕೊಂಡ ಬೆಂ*ಕಿ; ಆರು ಅಂಗಡಿಗಳು ಅ*ಗ್ನಿಗಾ*ಹುತಿ !!
ಮೊಹಾಲಿ ಕಟ್ಟಡ ಕು*ಸಿತ ಪ್ರಕರಣ; ಎರಡು ಸಾ*ವು, ಹಲವರು ಕಟ್ಟಡದಡಿ ಇರುವ ಶಂಕೆ !!
ಮೆಲ್ಬೋರ್ನ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಗಾಯಾಳುಗಳ ಬರೆ !
ಮಹಾರಾಷ್ಟ್ರ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆ; ಯಾರಿಗೆ ಯಾವ ಖಾತೆ ?
Trending
- BIG BOSS7 days ago
ಡ್ರೋನ್ ಪ್ರತಾಪ್ ಪೊಲೀಸ್ ಕಸ್ಟಡಿ ಇಂದಿಗೆ ಅಂತ್ಯ; ವಿಚಾರಣೆಯಲ್ಲಿ ಪೊಲೀಸರಿಗೆ ಸಿಕ್ತು ಮಹತ್ವದ ಮಾಹಿತಿ
- LATEST NEWS5 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
- BIG BOSS3 days ago
ಚೈತ್ರಾ ಕುಂದಾಪುರಗೆ ಮತ್ತೆ ಜೈಲು.. ಮುಂದಿನ ವಾರಕ್ಕೆ ಕ್ಯಾಪ್ಟನ್ ಯಾರೆಂದು ರಿವೀಲ್..!
- DAKSHINA KANNADA6 days ago
ಸಾವಿರ ಕಂಬದ ಬಸದಿಗೆ ಜಪಾನ್ನಿಂದ ಬಂದ ಅತಿಥಿಗಳು