Monday, January 24, 2022

ಉಡುಪಿ: ಬಸ್ ಪಲ್ಟಿ- 20ಕ್ಕೂ ಅಧಿಕ ಮಂದಿಗೆ ಗಾಯ-ಹಲವರ ಕೈ ಮುರಿತ

ಉಡುಪಿ: ಯಾತ್ರಾರ್ಥಿಗಳಿದ್ದ ಬಸ್ ಪಲ್ಟಿಯಾದ ಘಟನೆ ಉಡುಪಿ ಜಿಲ್ಲೆಯ ಕೊಲ್ಲೂರು ಗ್ರಾಮದಲ್ಲಿ ಹಾದುಹೋಗುವ ಎನ್‌ಎಚ್‌ 76 ಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ಸಂಜೆ ನಡೆದಿದೆ.

ಘಟನೆಯಲ್ಲಿ 20ಕ್ಕೂ ಅಧಿಕ ಮಂದಿಗೆ ಗಾಯವಾಗಿದ್ದು, ಹಲವರ ಕೈ ಮುರಿತಕ್ಕೊಳಗಾಗಿದ್ದಾರೆ, ಸದ್ಯ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.


ಕೋಲಾರ ಜಿಲ್ಲೆಯಿಂದ ಕೊಲ್ಲೂರು ಕ್ಷೇತ್ರಕ್ಕೆ 42 ಜನ ಬಸ್‌ ಮೂಲಕ ಯಾತ್ರೆ ಮಾಡಿದ್ದರು. ನಿನ್ನೆ ಕೊಲ್ಲೂರು ಗ್ರಾಮದ ಸಮೀಪ ಸಂಜೆ 3 ಗಂಟೆಗೆ NH 766 C ರಸ್ತೆಯ ಒಣ್ಕಣ್ ಮೋರಿ ತಿರುವಿನಲ್ಲಿ ಬಸ್‌ನ ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿದ್ದಾನೆ.

ಪರಿಣಾಮ ಬಸ್ ಹತೋಟಿ ತಪ್ಪಿ ರಸ್ತೆಯ ಎಡಬದಿಗೆ ಬಿದ್ದಿದೆ. ಈ ವೇಳೆ ಬಸ್‌ನಲ್ಲಿದ್ದ 20ಕ್ಕೂ ಅಧಿಕ ಮಂದಿಗೆ ಗಾಯವಾಗಿದೆ.

ಶ್ಯಾಮಲಮ್ಮ, ರೂಪಮ್ಮ ಎಡ ಕೈ ತುಂಡಾಗಿದೆ. ಕಲಾವತಿ, ರತ್ನಾವತಿ ಅವರ ಕೈ ಮೂಳೆ ಮುರಿತವಾಗಿದೆ. ಉಳಿದ ಸಹ ಪ್ರಯಾಣಿಕರಿಗೆ ಸಣ್ಣಪುಟ್ಟ ತರಚಿದ ರಕ್ತಗಾಯಗಳಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Hot Topics

ಮೂಡುಬಿದಿರೆ: ಕಾರು ಢಿಕ್ಕಿ- ಪಾದಾಚಾರಿ ಸ್ಥಳದಲ್ಲೇ ಮೃತ್ಯು

ಮೂಡುಬಿದಿರೆ: ಇಲ್ಲಿನ ಕಲ್ಲಮುಂಡ್ಕೂರು ಪೇಟೆಯ ರಸ್ತೆಯಲ್ಲಿ ಪಾದಾಚಾರಿಯೋರ್ವರು ಹೋಗುತ್ತಿದ್ದಾಗ ರಿಡ್ಸ್ ಕಾರೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಪಾದಾಚಾರಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ.ಸಂಪಿಗೆಯ ಇಡ್ಡಬೆಟ್ಟು ನಿವಾಸಿ 53 ವರ್ಷದ ಹರೀಶ್...

ಮಲಗಿದ್ದ ಅತ್ತೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಸೊಸೆ

ಚಿತ್ರದುರ್ಗ: ಅತ್ತೆ-ಸೊಸೆ ನಡುವೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಜಿಲ್ಲೆಯ ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿಯಲ್ಲಿ ನಡೆದಿದೆ.ರುದ್ರಮ್ಮ(60) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಆರೋಪಿ ಸೊಸೆ ಮುದ್ದಕ್ಕ (38)ಳನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ತೆ-ಸೊಸೆ ನಡುವೆ ಹೊಂದಾಣಿಕೆ...

ನೇತಾಜಿ ಸುಭಾಸ್ ಚಂದ್ರ ಬೋಸ್ ಜನ್ಮ ದಿನದ ಪ್ರಯುಕ್ತ ರಕ್ತದಾನ ಶಿಬಿರ

ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ...