Saturday, August 20, 2022

ಹೆಬ್ರಿ: ಚಾಲಕನ ಕಂಟ್ರೋಲ್ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಬಸ್-15 ಮಂದಿ ಪ್ರಯಾಣಿಕರಿಗೆ ಗಾಯ

ಹೆಬ್ರಿ: ಶಿವಮೊಗ್ಗದಿಂದ ಉಡುಪಿಗೆ ಹೋಗುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಹೆಬ್ರಿ ಸಮೀಪ ಕನ್ಯಾನ ಎಂಬಲ್ಲಿ ನಡೆದಿದೆ.


ಚಾಲಕ ರಾಘವೇಂದ್ರ ಅವರ ಅಜಾಗರೂಕತೆಯಿಂದ ಬಸ್ ರಸ್ತೆಯ ತೀರಾ ಎಡಬದಿಗೆ ಹೋಗಿದ್ದು, ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ಬೃಹತ್ ದೊಡ್ಡ ಮರಕ್ಕೆ ಹೋಗಿ ಢಿಕ್ಕಿ ಹೊಡೆದಿದೆ.

ಬಸ್‌ನಲ್ಲಿದ್ದ ನಿರ್ವಾಹಕ ಪುಟ್ಟಸ್ವಾಮಿ ಸಹಿತ ಸುಮಾರು 15 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Hot Topics