LATEST NEWS
ಮೈದಾನ ತೊರೆದ ಬುಮ್ರಾ; ತಂಡದ ಹೊಣೆ ಯಾರ ಹೆಗಲಿಗೆ ?
Published
2 days agoon
By
NEWS DESK3ಮಂಗಳೂರು/ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಐದನೇ ಮತ್ತು ಕೊನೆಯ ಟೆಸ್ಟ್ ನಲ್ಲಿ ಭಾರತಕ್ಕೆ ದೊಡ್ಡ ಆಘಾತ ಉಂಟಾಗಿದೆ. ನಾಯಕ ಜಸ್ ಪ್ರೀತ್ ಬುಮ್ರಾ ಮೈದಾನದಿಂದ ನಿರ್ಗಮಿಸಿದ್ದಾರೆ.
ದ್ವಿತೀಯ ದಿನದಾಟದ ಭೋಜನಾ ವಿರಾಮಕ್ಕೂ ಕೆಲ ಹೊತ್ತು ಮುಂಚಿತವಾಗಿ ಜಸ್ ಪ್ರೀತ್ ಬುಮ್ರಾ ಮೈದಾನದಿಂದ ಹೊರ ನಡೆದರು. ಇದಾದ ಬಳಿಕ ಅವರು ಟೀಮ್ ಇಂಡಿಯಾ ವೈದ್ಯಕೀಯ ಸಿಬ್ಬಂದಿಗಳೊಂದಿಗೆ ಆಸ್ಪತ್ರೆಗೆ ತೆರಳುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: 185 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ; ಆಸೀಸ್ ಗೆ ಆರಂಭಿಕ ಆಘಾತ
ಮೇಲ್ನೋಟಕ್ಕೆ ಜಸ್ಪ್ರೀತ್ ಬುಮ್ರಾ ನೋವಿನ ಸಮಸ್ಯೆಗೆ ಒಳಗಾಗಿದ್ದು, ಹೀಗಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದಾರೆ. ಅಲ್ಲದೆ ಇದೀಗ ಸ್ಕ್ಯಾನಿಂಗ್ ಮಾಡಲು ಸಿಡ್ನಿಯಲ್ಲಿರುವ ಆಸ್ಪತ್ರೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ತಂಡದ ಹೊಣೆ ಕೊಹ್ಲಿ ಹೆಗಲಿಗೆ
ಇತ್ತ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡದ ನಾಯಕರಾಗಿ ವಿರಾಟ್ ಕೊಹ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮೂಲಕ ವರ್ಷಗಳ ಬಳಿಕ ಕಿಂಗ್ ಕೊಹ್ಲಿ ಟೆಸ್ಟ್ ತಂಡದ ಕ್ಯಾಪ್ಟನ್ ಆಗಿ ಕಾಣಿಸಿಕೊಂಡಿದ್ದಾರೆ.
LATEST NEWS
ಬಾಯ್ ಫ್ರೆಂಡ್ ಗಾಗಿ ಹುಡುಗಿಯರಿಬ್ಬರ ಬೀದಿ ಜಗಳ
Published
46 minutes agoon
06/01/2025By
NEWS DESK3ಮಂಗಳೂರು/ಉತ್ತರಪ್ರದೇಶ : ‘ಪ್ರೀತಿಸುವ ಹುಡುಗಿಗೆ ಬುದ್ದಿ ಬಂತು ಎಂದರೆ ಯಮರಾಜನ ಜೊತೆಗೂ ಜಗಳವಾಡುತ್ತಾಳೆ’ ಎಂಬ ಆಡು ಭಾಷೆಯಂತೆ ಇಬ್ಬರು ಸಹೋದರಿಯರು ತಮ್ಮ ತಂದೆಯ ಎದುರೇ, ನಡುರಸ್ತೆಯಲ್ಲಿ ಬಟ್ಟೆ ಹರಿದಾಡಿಕೊಂಡು ಬಾಯ್ ಫ್ರೆಂಡ್ ಗಾಗಿ ಜಗಳವಾಡಿದ್ದಾರೆ.
ಇದು ಉತ್ತರಪ್ರದೇಶದ ಬಾಗ್ ಪತ್ ನಲ್ಲಿ ಎರಡು ಹುಡುಗಿಯರ ಗುಂಪುಗಳ ನಡುವೆ ನಡೆದ ಜಗಳ. ಅಷ್ಟಕ್ಕೂ ವಿಷಯ ಏನೂ ಅಂದರೆ, ಇಬ್ಬರೂ ಹುಡುಗಿಯರು ಒಬ್ಬ ಹುಡುಗನೊಂದಿಗೆ ಮಾತನಾಡಿದಕ್ಕೆ ಇಷ್ಟೆಲ್ಲಾ ಅವಾಂತರ ಸೃಷ್ಟಿಯಾಗಿದೆ.
ಒಬ್ಬ ಹುಡುಗನನ್ನು ಇಬ್ಬರೂ ಹುಡುಗಿಯರು ಪ್ರೀತಿಸುತ್ತಿದ್ದರು. ಇವರ ನಡುವೆ ಮೆಸೇಜ್ ಚಾಟ್ ಕೂಡ ನಡೆಯುತ್ತಿತ್ತು. ಇದೀಗ ಇದು, ಪರಸ್ಪರ ಜಗಳಕ್ಕೆ ಕಾರಣವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಪ್ರಕಾರ, ರಸ್ತೆಯಲ್ಲಿ ಗುಂಪಾಗಿ ಹೋಗುತ್ತಿದ್ದ ಹುಡುಗಿಯರ ಗುಂಪನ್ನು ತಡೆದು ತನ್ನ ಗೆಳತಿಗೆ ಹುಡುಗ ಕಪಾಳಮೋಕ್ಷ ಮಾಡಿದ್ದಾನೆ.
ಇದನ್ನೂ ಓದಿ: ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಇದರಿಂದ ಗೆಳತಿ, ಪಕ್ಕದಲ್ಲೇ ಬರುತ್ತಿದ್ದ ಇನ್ನೊಂದು ಗುಂಪಿನಲ್ಲಿದ್ದ ತನ್ನ ಪ್ರೇಮಿಯೊಂದಿಗೆ ನಂಟು ಹೊಂದಿರುವ ಸಹೋದರಿಗೆ ಹೊಡೆದಿದ್ದಾಳೆ. ಇದರಿಂದ ಇಬ್ಬರ ನಡುವೆ ತೀವ್ರ ಹೊಡೆದಾಟ ನಡೆದಿದೆ. ಪರಸ್ಪರ ಕೂದಲನ್ನು ಎಳೆದಾಡಿಕೊಂಡು, ಬಟ್ಟೆಗಳನ್ನು ಹರಿದು ಹಾಕುವ ಹಂತಕ್ಕೆ ಈ ಜಗಳ ತಲುಪಿತ್ತು. ಇದನ್ನು ತಡೆಯಲು ಬಂದ ತಂದೆಯ ಮಾತುಗಳನ್ನು ಕೇಳದೆ ಸಹೋದರಿಯರು ಜಗಳವಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಸ್ಥಳೀಯರು, ಈ ಎರಡು ಗುಂಪುಗಳ ನಡುವೆ ನಡೆಯುತ್ತಿದ್ದ ಜಗಳವನ್ನು ನಿಲ್ಲಿಸಿದ್ದಾರೆ.
LATEST NEWS
ಸೆಂಟ್ರಿಂಗ್ ಮರದ ತುಂಡು ಬಿದ್ದು ಬಾಲಕಿ ಸಾವು ಕೇಸ್: ಎಂಜಿನಿಯರ್ ಪೊಲೀಸ್ ವಶಕ್ಕೆ
Published
1 hour agoon
06/01/2025By
NEWS DESK2ಬೆಂಗಳೂರಲ್ಲಿ ಶಾಲೆ ಮುಗಿಸಿಕೊಂಡು ಮನೆಗೆ ತೆರಳುವ ವೇಳೆ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ತೇಜಸ್ವಿನಿ ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಕಟ್ಟಡದ ಇಂಜಿನಿಯರ್ ಚಂದ್ರಶೇಖರ್ ಎನ್ನುವವರನ್ನು ವಿವಿ ಪುರಂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಹೌದು ಕಟ್ಟಡ ನಿರ್ಮಾಣ ಮಾಡುತ್ತಿರುವ ಇಂಜಿನಿಯರ್ ಅನ್ನು ವಿವಿ ಪುರಂ ಠಾಣೆ ಪೋಲಿಸಿರುವ ಅವಶ್ಯಕತೆ ಪಡೆದುಕೊಂಡು ಸದ್ಯ ವಿಚಾರಣೆ ನಡೆಸುತ್ತಿದ್ದಾರೆ.ಘಟನೆ ಸಂಬಂಧ ತೇಜಸ್ವಿನಿ ತಂದೆ ಸುಧಾಕರ್ ರಾವ್ ಅವರು ನೀಡಿದ ದೂರಿನ ಮೇರೆಗೆ ಕಟ್ಟಡ ಮಾಲಿಕ, ಗುತ್ತಿಗೆದಾರ, ಎಂಜಿನಿಯರ್, ಬಿಬಿಎಂಪಿ ಅಧಿಕಾರಿಗಳು ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಇನ್ನು ಕಟ್ಟಡ ಮಾಲಿಕ, ಗುತ್ತಿಗೆದಾರ ಹಾಗೂ ಘಟನೆ ವೇಳೆ ಕೆಲಸ ಮಾಡುತ್ತಿದ್ದ ಕಟ್ಟಡ ಕಾರ್ಮಿಕರು ನಾಪತ್ತೆಯಾಗಿದ್ದಾರೆ. ಇನ್ನು ಕಟ್ಟಡ ನಿರ್ಮಾಣ ಮಾಡಲು ಅನುಮತಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಸುರಕ್ಷತಾ ಕ್ರಮಗಳ ಬಗ್ಗೆ ಪರಿಶೀಲಿಸಿಲ್ಲ ಎಂಬುದು ಗೊತ್ತಾಗಿದೆ. ಎಲ್ಲಾ ಆರೋಪಿಗಳನ್ನು ಸದ್ಯದಲ್ಲೇ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಪೊಲೀಸರು ಹೇಳಿದರು.
LATEST NEWS
ಬರ್ತ್‌ಡೇ ದಿನದಂದೇ ಹಾಸ್ಟೆಲ್ ಕಟ್ಟಡದಿಂದ ಬಿದ್ದು ‘IIM’ ವಿದ್ಯಾರ್ಥಿ ಸಾವು
Published
2 hours agoon
06/01/2025By
NEWS DESK2ಬೆಂಗಳೂರು: ಬೆಂಗಳೂರಲ್ಲಿ ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ತನ್ನ ಹುಟ್ಟು ಹಬ್ಬದ ದಿನದಂದೇ ಐಐಎಂ ವಿದ್ಯಾರ್ಥಿ ಒಬ್ಬ ಹಾಸ್ಟೆಲ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿಯನ್ನು ಎಂಬಿಎ ಎರಡನೇ ವರ್ಷದ ವಿದ್ಯಾರ್ಥಿ ಕೈಲಾಶ್‌ಭಾಯ್ ಪಟೇಲ್ (28) ಎಂದು ಗುರುತಿಸಲಾಗಿದೆ. ಈತ ಗುಜರಾತ್ ಮೂಲದವನು ಎಂದು ತಿಳಿದುಬಂದಿದ್ದು, ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು, ಕೈಲಾಶ್ ಮೃತಪಟ್ಟಿದ್ದಾನೆ.
ಶನಿವಾರ ನಿಲಯ್ ತನ್ನ ಹುಟ್ಟುಹಬ್ಬವಿದ್ದ ಕಾರಣ ಸ್ನೇಹಿತರೊಂದಿಗೆ ಹೊರಗಡೆ ತೆರಳಿದ್ದ. ನಂತರ ಹಾಸ್ಟೆಲ್ನಲ್ಲಿರುವ ಸ್ನೇಹಿತನ ಕೊಠಡಿಯಲ್ಲಿ ನಿಲಯ್ ಹುಟ್ಟುಹಬ್ಬ ಆಚರಿಸಲಾಗಿತ್ತು. ಬಳಿಕ ತನ್ನ ಕೋಣೆಗೆ ಹಿಂತಿರುಗುತ್ತಿದ್ದಾಗ ಅವಘಡ ಸಂಭವಿಸಿದೆ. ಭಾನುವಾರ ಬೆಳಗ್ಗೆ ಹಾಸ್ಟೆಲ್ ಭದ್ರತಾ ಸಿಬ್ಬಂದಿ ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
LATEST NEWS
ಪತ್ರಕರ್ತನ ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಪೊಲೀಸ್ ವಶಕ್ಕೆ
UPI ಬಳಕೆದಾರರೇ ಎಚ್ಚರ: ಈ ಕೆಲಸ ಮಾಡದಿದ್ದರೆ ನಿಮ್ಮ ಖಾತೆಯೇ ಖಾಲಿ.!
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
ಬೈಕ್ ಕಾರು ನಡೆವೆ ಭೀಕರ ಅ*ಪಘಾ*ತ ; ಆರ್ಎಸ್ಎಸ್ ಪ್ರಮುಖ್ ವಿ*ಧಿವಶ
ಮತ್ತೋರ್ವ ಬಾಣಂತಿ ಸಾವು – ಸಾವಿನ ಸಂಖ್ಯೆ 12ಕ್ಕೆ ಏರಿಕೆ
BBK 11: ತ್ರಿವಿಕ್ರಮ್ ಡೇಂಜರ್ ಎಂದ ಭವ್ಯಾ ಗೌಡ
Trending
- DAKSHINA KANNADA5 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA3 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- LATEST NEWS6 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
- BIG BOSS2 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?