LATEST NEWS
147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಿಸಿದ ಬುಮ್ರಾ !
Published
3 days agoon
By
NEWS DESK3ಮಂಗಳೂರು/ಮೆಲ್ಬೋರ್ನ್: ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಕ್ರಿಕೆಟ್ ತಂಡದ ಬಲಗೈ ವೇಗದ ಬೌಲರ್ ಜಸ್ ಪ್ರೀತ್ ಬೂಮ್ರಾ 200 ವಿಕೆಟ್ ಗಳ ಸಾಧನೆ ಮಾಡಿದ್ದಾರೆ.
ಎಂಸಿಜಿ ಮೈದಾನದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ 4ನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್ ನಲ್ಲಿ 474 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ 369 ರನ್ ಪೇರಿಸಿದೆ. ಇದೀಗ ಆಸ್ಟ್ರೇಲಿಯಾ ತಂಡವು ದ್ವಿತೀಯ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ಮಾಡುತ್ತಿದೆ.
ಭಾರತದ ಪರ ಜಸ್ ಪ್ರೀತ್ ಬುಮ್ರಾ 4 ವಿಕೆಟ್ ಗಳನ್ನು ಪಡೆದಿದ್ದು, ಈ ಮೂಲಕ 200 ವಿಕೆಟ್ ಗಳ ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಜಸ್ ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ !
ಅದು ಕೂಡ ಕೇವಲ 19.38 ರನ್ ಸರಾಸರಿಯಲ್ಲಿ ಎಂಬುದು ವಿಶೇಷ. ಈ ಮೂಲಕ 147 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 20ಕ್ಕಿಂತ ಕಡಿಮೆ ಅವರೇಜ್ ನಲ್ಲಿ 200 ವಿಕೆಟ್ ಕಬಳಿಸಿದ ವಿಶ್ವದ ಏಕೈಕ ಬೌಲರ್ ಎಂಬ ಹೊಸ ದಾಖಲೆಯನ್ನು ಜಸ್ ಪ್ರೀತ್ ಬುಮ್ರಾ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ನ ಜೋಯಲ್ ಗಾರ್ನರ್ 20.34 ರ ಸರಾಸರಿಯಲ್ಲಿ 200 ವಿಕೆಟ್ ಕಬಳಿಸಿದ್ದು ಟೆಸ್ಟ್ ನಲ್ಲಿ ಶ್ರೇಷ್ಠ ಸಾಧನೆಯಾಗಿತ್ತು. ಇದೀಗ ದಾಖಲೆ ಮುರಿದು ಹೊಸ ಇತಿಹಾಸ ನಿರ್ಮಿಸುವಲ್ಲಿ ಜಸ್ ಪ್ರೀತ್ ಬುಮ್ರಾ ಯಶಸ್ವಿಯಾಗಿರುವುದು ವಿಶೇಷ.
ಇದೀಗ ಟೆಸ್ಟ್ ಕ್ರಿಕೆಟ್ ನಲ್ಲಿ 85 ಇನಿಂಗ್ಸ್ ಗಳಲ್ಲಿ 1415* ಓವರ್ ಗಳನ್ನು ಎಸೆದಿರುವ ಜಸ್ ಪ್ರೀತ್ ಬುಮ್ರಾ ಒಟ್ಟು 202* ವಿಕೆಟ್ ಕಬಳಿಸಿದ್ದು, ಈ ಮೂಲಕ 200+ ವಿಕೆಟ್ ಪಡೆದ ಭಾರತದ 12ನೇ ಬೌಲರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ 82ನೇ ಬೌಲರ್ ಎಂಬ ಹೆಗ್ಗಳಿಕೆಗೂ ಜಸ್ ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ.
DAKSHINA KANNADA
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
Published
60 minutes agoon
01/01/2025By
NEWS DESKಮಂಗಳೂರು : ಆಧುನಿಕ ಜೀವನ ಶೈಲಿಗೆ ಒಗ್ಗಿಕೊಂಡಿರುವ ಜನರಿಗೆ ಕಾಡುವ ದೊಡ್ಡ ಸಮಸ್ಯೆ ಅಂದ್ರೆ ಅದು ದೇಹದಲ್ಲಿ ಹೆಚ್ಚಾಗುವ ಬೊಜ್ಜು. ಜೀವನ ಶೈಲಿಯ ಬದಲಾವಣೆ, ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಔಷಧಿಗಳ ಅಡ್ಡ ಪರಿಣಾಮ ಬೊಜ್ಜಿಗೆ ಕಾರಣವಾಗಬಹುದು. ವ್ಯಾಯಾಮ ಮಾಡಲು ಸೋಮಾರಿತನದಿಂದಾಗಿ ಸಾಕಷ್ಟು ಜನ ಡಯಟ್ ಫುಡ್ ಮೂಲಕ ಬೊಜ್ಜು ನಿಯಂತ್ರಿಸುವ ಪ್ರಯತ್ನ ಮಾಡ್ತಾರೆ. ಆದ್ರೆ ಬೊಜ್ಜಿನ ಸಮಸ್ಯೆಗೆ ವೈಜ್ಞಾನಿಕ ಜಗತ್ತು ಹೊಸದೊಂದು ಔಷಧಿ ಕಂಡು ಹಿಡಿದಿದ್ದು, ಈಗಾಗಲೇ ಇಲಿಗಳ ಮೇಲೆ ಇದನ್ನು ಪ್ರಯೋಗಿಸಿ ಯಶಸ್ವಿಯಾಗಿದೆ.
ಡೆನ್ಮಾರ್ಕ್‌ನ ಆರ್ಹಸ್ ವಿಶ್ವವಿದ್ಯಾಲಯ ಬೊಜ್ಜು ಕರಗಿಸುವ ಮಾತ್ರೆಯೊಂದನ್ನು ಕಂಡು ಹಿಡಿದಿದ್ದು, ಇದು ನೈಸರ್ಗಿಕ ಚಯಾಪಚಯ ಕ್ರಿಯೆಯಂತೆಯೇ ದೇಹದಲ್ಲಿ ಬದಲಾವಣೆ ಮಾಡುವ ಶಕ್ತಿ ಹೊಂದಿದೆ. ಈ ಮಾತ್ರೆಯನ್ನು ಸೇವನೆ ಮಾಡಿದರೆ ಒಂದಿಂಚೂ ಅಲುಗಾಡದೆ ಇದ್ರೂ ಖಾಲಿ ಹೊಟ್ಟೆಯಲ್ಲಿ ಹತ್ತು ಕಿಲೋ ಮೀಟರ್ ಓಡಿದ ಪರಿಣಾಮವನ್ನು ದೇಹಕ್ಕೆ ನೀಡುತ್ತದೆ. ಇನ್ನೂ ಪ್ರಾಯೋಗಿಕವಾಗಿ ಅಂತಿಮ ಹಂತದಲ್ಲಿರುವ ಈ ಮಾತ್ರೆ ಮಾರುಕಟ್ಟೆಗೆ ಬಂದರೆ ಜನರು ವ್ಯಾಯಾಮ ಮಾಡದೆ, ಡಯಟ್ ಮಾಡದೆ ತಮ್ಮ ದೇಹದ ಬೊಜ್ಜು ಕರಗಿಸಬಹುದಾಗಿದೆ.
ವ್ಯಾಯಾಮದ ಸಮಯದಲ್ಲಿ ರಕ್ತದ ಪ್ಲಾಸ್ಮಾ ಮಟ್ಟದ ಬದಲಾವಣೆ ಮತ್ತು ಬೀಟಾ ಹೈಡ್ರೋಬ್ಯುಟೈರೇಟ್ ಕ್ರಿಯೆಗಳು (BHB)ಸಂಭವಿಸುತ್ತದೆ. ಯಕೃತ್ತಿನಲ್ಲಿ ಉತ್ಪತ್ತಿ ಆಗುವ ಕೀಟೋನ್‌ಗಳು ಗ್ಲೂಕೋಸ್ ಅನುಪಸ್ಥಿತಿಯಲ್ಲಿ ಕೊಬ್ಬನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಕಾರಣವಾಗುತ್ತದೆ. ದೇಹದ ಕೊಬ್ಬನ್ನು ಕಡಿಮೆ ಮಾಡುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡುವ ಜೊತೆಗೆ ಹೃದಯ ಸಂಬಂಧಿ ಕಾಯಿಲೆಗಳು ಬಾರದಂತೆ ತಡೆಯಬಹದಾಗಿದೆ. ಈ ಎಲ್ಲಾ ಕಾರ್ಯವನ್ನು ಆ ಒಂದು ಮಾತ್ರೆ ಮಾಡಲಿದೆ ಅಂತ ಸಂಶೋಧಕರು ಹೇಳಿದ್ದಾರೆ.
LATEST NEWS
ಕೇರಳದ ನರ್ಸ್ ಗೆ ಯೆಮೆನ್ ನಲ್ಲಿ ಮರಣದಂಡನೆ; ಏನಿದು ಪ್ರಕರಣ ?
Published
3 hours agoon
01/01/2025By
NEWS DESK3ಮಂಗಳೂರು/ಕೇರಳ : ಯೆಮನ್ ಪ್ರಜೆಯನ್ನು ಹತ್ಯೆ ಮಾಡಿದ ಆರೋಪಕ್ಕೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರಿಗೆ ಗಲ್ಲು ಶಿಕ್ಷೆ ನೀಡಲು ಅಲ್ಲಿನ ಅಧ್ಯಕ್ಷ ರಷದ್-ಅಲ್-ಅಮಿನಿ ಅನುಮೋದನೆ ನೀಡಿದ್ದಾರೆ. ಮೂಲಗಳ ಪ್ರಕಾರ ಇನ್ನು ಒಂದು ತಿಂಗಳಲ್ಲಿ ಶಿಕ್ಷೆ ಜಾರಿಯಾಗಲಿದೆ.
ಯೆಮನ್ ಅಧ್ಯಕ್ಷರ ತೀರ್ಮಾನದ ಬಗ್ಗೆ ಪ್ರಿಯಾ ತಾಯಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರ ಸೂಕ್ತ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: 179 ಮಂದಿ ಬಲಿ ಪಡೆದ ದ.ಕೊರಿಯಾ ವಿಮಾನ ದುರಂತ; ಇಬ್ಬರು ಬದುಕಿ ಉಳಿಯಲು ಆ ನಿಗೂಢ ಕಾರಣ ಏನು ?
ಕುಟುಂಬದ ನೆರವಿಗೆ ನಿಂತ ವಿದೇಶಾಂಗ ಸಚಿವಾಲಯ
ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಅಧಿಕೃತ ತಾಣದಲ್ಲಿ ವಕ್ತಾರ ರಣಧೀರ್ ಜೈಸ್ವಾಲ್ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ನಿಮಿಷಾ ಪ್ರಿಯಾಗೆ ಯೆಮೆನ್ ಶಿಕ್ಷೆ ವಿಧಿಸುವ ಬಗ್ಗೆ ನಮಗೆ ತಿಳಿದಿದೆ. ನಿಮಿಷಾ ಪ್ರಿಯಾ ಅವರ ಕುಟುಂಬವು ಪರ್ಯಾಯ ಆಯ್ಕೆಗಳನ್ನು ಅನ್ವೇಷಿಸುತ್ತಿದೆ ಎಂಬುವುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷಯದಲ್ಲಿ ಸರ್ಕಾರವು ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಿದೆ’ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
2017ರಲ್ಲಿ ಹತ್ಯೆ ಪ್ರಕರಣದಲ್ಲಿ ಪ್ರಿಯಾ ಬಂಧನ
ಕೇರಳದ ಪಾಲಕ್ಕಾಡ್ ಮೂಲದವರಾದ ನಿಮಿಷಾ ಪ್ರಿಯಾ ಅವರನ್ನು ಜುಲೈ 2017ರಲ್ಲಿ ಯೆಮೆನ್ ಪ್ರಜೆಯಾದ ತಲಾಲ್ ಅಬ್ದೋ ಮೆಹದಿ ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಯೆಮೆನ್ ರಾಜಧಾನಿ ಸನಾದಲ್ಲಿರುವ ವಿಚಾರಣಾ ನ್ಯಾಯಾಲಯವು 2020ರಲ್ಲಿ ಆಕೆಗೆ ಮರಣದಂಡನೆ ವಿಧಿಸಿತ್ತು. ನವೆಂಬರ್ 2023ರಲ್ಲಿ ಆಕೆಯ ಮನವಿಯನ್ನು ಯೆಮೆನ್ ನ ಸುಪ್ರೀಂ ಜುಡಿಷಿಯಲ್ ಕೌನ್ಸಿಲ್ ವಜಾಗೊಳಿಸಿತ್ತು.
ಮಗಳ ಬಿಡುಗಡೆಗೆ ಪ್ರಯತ್ನಿಸುತ್ತಿರುವ ತಾಯಿ
ಮಗಳ ಬಿಡುಗಡೆಗಾಗಿ ತಾಯಿ ಪ್ರೇಮಾ ಕುಮಾರಿ ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಪ್ರಿಯಾ ತಾಯಿ ಪ್ರೇಮಾ ಕುಮಾರಿ ಏಪ್ರೀಲ್ 2024 ರಲ್ಲಿ ಯೆಮೆನ್ ಗೆ ಹೋಗಿ 11 ವರ್ಷಗಳ ನಂತರ ಮೊದಲ ಬಾರಿಗೆ ತಮ್ಮ ಮಗಳನ್ನು ಅಲ್ಲಿನ ಜೈಲಿನಲ್ಲಿ ಭೇಟಿಯಾಗಿದ್ದರು. ಅಂದಿನಿಂದ, ಆಕೆಯ ತಾಯಿ ತನ್ನ ಮಗಳ ಬಿಡುಗಡೆಗಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಇತ್ತೀಚೆಗೆ ತಮ್ಮ ಮಗಳನ್ನು ಶಿಕ್ಷೆಯಿಂದ ಪಾರು ಮಾಡಲು ಅಗತ್ಯ ನೆರವನ್ನು ಸಂಬಂಧಪಟ್ಟವರು ನೀಡಬೇಕು ಎಂದು ಮಾಧ್ಯಮದ ಮೂಲಕ ಮೊರೆಯಿಟ್ಟಿದ್ದರು.
ಮರಣದಂಡನೆಯಿಂದ ಪಾರಾಗಲು ಇದೆ ಒಂದು ಅವಕಾಶ !
ನಿಮಿಷಾ ಪ್ರಿಯಾ ಅವರಿಗೆ ಮರಣದಂಡನೆ ಶಿಕ್ಷೆ ಜಾರಿಯಾಗಿದ್ದರೂ, ಅದರಿಂದ ವಿನಾಯಿತಿ ಪಡೆದುಕೊಳ್ಳಲು ಒಂದು ಅವಕಾಶ ಇದೆ. ಅದುವೇ, ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕ ಕ್ಷಮೆ ನೀಡುವುದರ ಮೇಲೆ ಅವಲಂಬಿತವಾಗಿದೆ.
ಮೃತ ವ್ಯಕ್ತಿಯ ಕುಟುಂಬವು ಕೇರಳದ ನರ್ಸ್ ನಿಮಿಷಾ ಅವರನ್ನು ಕ್ಷಮಿಸಿ, ಪರಿಹಾರ ಹಣವನ್ನು ಸ್ವೀಕರಿಸಿದರೆ ಆಕೆಯ ಮರಣದಂಡನೆಯನ್ನು ಮನ್ನಾ ಮಾಡುವ ಅವಕಾಶ ಸಿಗಲಿದೆ. ಒಂದು ವೇಳೆ ಅವರು ಕ್ಷಮೆಯನ್ನು ಪಡೆಯಲು ವಿಫಲವಾದರೆ ಪ್ರಿಯಾಗೆ ಒಂದು ತಿಂಗಳೊಳಗೆ ಮರಣದಂಡನೆ ಶಿಕ್ಷೆಯಾಗಲಿದೆ.
ಮೃತ ತಲಾಲ್ ಅಬ್ದೋ ಮೆಹದಿಯ ಕುಟುಂಬ ಮತ್ತು ಅವರ ಬುಡಕಟ್ಟು ನಾಯಕನ ಜೊತೆ ಈ ಕುರಿತು ಮಾತುಕತೆ ನಡೆಯುತ್ತಿದ್ದು, ನಿಮಿಷಾ ಪ್ರಿಯಾ ಅವರಿಗೆ ನೇಮಕವಾದ ವಕೀಲರಿಗೆ ಹಣ ಪಾವತಿ ವಿಳಂಬವಾದ್ದರಿಂದ ಮಾತುಕತೆ ಸ್ಥಗಿತಗೊಂಡಿದೆ. ವಕೀಲರು ಮಾತುಕತೆ ಪೂರ್ವ ಶುಲ್ಕವಾಗಿ ಎರಡು ಕಂತುಗಳಲ್ಲಿ 40,000 ಡಾಲರ್ (32,45,500 ರೂ.) ಗೆ ಬೇಡಿಕೆ ಇಟ್ಟಿದ್ದಾರೆ. ಸಂಪೂರ್ಣ ಮೊತ್ತವನ್ನು ಅವರಿಗೆ ನೀಡದ ಹೊರತು ಅವರು ಮಾತುಕತೆ ಮುಂದುವರೆಸಲು ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಪ್ರಕರಣ ?
ಕೇರಳದ ಪಾಲಕ್ಕಾಡ್ ಮೂಲದ ನಿಮಿಷಾ 2008 ರಲ್ಲಿ ಯೆಮೆನ್ ಗೆ ತೆರಳಿದ್ದರು. ಮೊದಲು ಅಲ್ಲಿನ ಕೆಲವು ಆಸ್ಪತ್ರೆಗಳಲ್ಲಿ ಕೆಲಸ ಮಾಡಿಕೊಂಡಿದ್ದರು. 2015ರಲ್ಲಿ ಯೆಮೆನ್ ನಲ್ಲಿ ತನ್ನದೇ ಆದ ಕ್ಲಿನಿಕ್ ಅನ್ನು ಪ್ರಾರಂಭಿಸಲು ಮುಂದಾಗಿದ್ದರು. ಅದಕ್ಕಾಗಿ ಅಲ್ಲಿನ ನಿಯಮದಂತೆ ಸ್ಥಳೀಯ ತಲಾಲ್ ಅಬೊ ಮೆಹದಿ ಜತೆಗೆ ಪಾಲುದಾರಿಕೆ ಮಾಡಿಕೊಂದ್ದರು. ಒಂದು ಹಂತದಲ್ಲಿ ಆತನ ಜತೆಗೆ ಭಿನ್ನಾಭಿಪ್ರಾಯ ಉಂಟಾಗಿತ್ತು.
ಈ ನಡುವೆ ನರ್ಸ್ ದೇಶ ತೊರೆಯದಂತೆ ಆತ ಪಾಸ್ ಪೋರ್ಟ್ ವಶಪಡಿಸಿಕೊಂಡಿದ್ದ. ಅದನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಅವರು ಆತನಿಗೆ ಮತ್ತು ಬರುವ ಇಂಜೆಕ್ಷನ್ ನೀಡಿದ್ದರು. ಆದರೆ, ಅದು ಓವರ್ ಡೋಸ್ ಆದ ಪರಿಣಾಮ ಆತ ಮೃತಪಟ್ಟಿದ್ದ.
LATEST NEWS
ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾ*ವು
Published
3 hours agoon
01/01/2025By
NEWS DESK2ತುಮಕೂರು: ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ವಡ್ಡರಕುಪ್ಪೆ ಬಳಿ ನಡೆದಿದೆ.
ಘಟನೆಯಲ್ಲಿ ಮಣಿಕುಪ್ಪೆ ಗ್ರಾಮದ 28 ವರ್ಷದ ಯುವಕ ಮಧು ಸಾವನಪ್ಪಿದ್ದಾನೆ. ಕೇಕ್ ಮತ್ತು ಬಿರಿಯಾನಿ ತೆಗೆದುಕೊಂಡು ಬೈಕಲ್ಲಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.
ಕೂಡಲೇ ಸ್ಥಳೀಯರು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಬಿಗ್ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
ಈ 4 ವಸ್ತುಗಳನ್ನು ಮನೆಯಲ್ಲಿಡಿ; ವರ್ಷಪೂರ್ತಿ ಸುಖ, ಶಾಂತಿ, ನೆಮ್ಮದಿ, ನೆಲೆಯಾಗಲಿದೆ
ಒಂದೇ ವರ್ಷದಲ್ಲಿ 5 ಲಕ್ಷ ಮೌಲ್ಯದ ಆಹಾರ ಆರ್ಡರ್ ಮಾಡಿದ ವ್ಯಕ್ತಿ
ಕ್ಯಾನ್ಸರ್ ಗೆದ್ದ ಶಿವಣ್ಣ.. ಅಮೆರಿಕದಿಂದಲೇ I will back ಎಂದ ಸೆಂಚುರಿ ಸ್ಟಾರ್
ಪ್ರಿಯತಮೆಗಾಗಿ ಸಿಂಹದ ಬೋನು ಹೊಕ್ಕು ಬ*ಲಿಯಾದ ಪಾಗಲ್ ಪ್ರೇಮಿ
ಮಂಗಳೂರು: ರಾತ್ರಿ ವೇಳೆ ಉರುಳಿದ ಬೃಹತ್ ಮರ, ವಾಹನಗಳು ಜಖಂ
Trending
- DAKSHINA KANNADA5 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- BIG BOSS4 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA4 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
- BIG BOSS3 days ago
ಈ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದ ಸ್ಪರ್ಧಿ ಇವರೇ ನೋಡಿ..!
Pingback: ಬೈಕ್ಗೆ ಡಿ*ಕ್ಕಿ ಹೊಡೆದು ನಿಲ್ಲಿಸದೆ ತೆರಳಿದ ಸಿಟಿ ಬಸ್; ತಡೆದು ಪೊಲೀಸರಿಗೊಪ್ಪಿಸಿದ ಸಾರ್ವಜನಿಕರು - NAMMAKUDLA NEWS - ನ