Connect with us

    LATEST NEWS

    ಯಜಮಾನರ ಗಲಾಟೆಗೆ ಪರಿಹಾರ ಕೊಟ್ಟ ಎಮ್ಮೆ!

    Published

    on

    ಮಂಗಳೂರು / ಪ್ರತಾಪಗಢ : ಪೊಲೀಸ್ ಪಂಚಾಯಿತಿಯಲ್ಲಿ ಪರಿಹಾರ ಆಗದ ಸಮಸ್ಯೆಯೊಂದನ್ನು ಎಮ್ಮೆಯೇ ಪರಿಹರಿಸಿದೆ. ಇದು ಅಂತಿಂಥ ಸಮಸ್ಯೆಯಾಗಿರಲಿಲ್ಲ. ಪೊಲೀಸರಿಗೆ ದೊಡ್ಡ ತಲೆನೋವೇ ಆಗಿತ್ತು. ಹೇಗಪ್ಪ ಇದನ್ನು ಪರಹರಿಸೋದು ಅನ್ನೋ ಚಿಂತೆಯಲ್ಲಿದ್ದ ಪೊಲೀಸರಿಗೆ ಕೊನೆಗೆ ಎಮ್ಮೆಯೇ ದಾರಿ ತೋರಿಸಿದೆ.


    ಎಮ್ಮೆ ಮಿಸ್ಸಿಂಗ್ …ಮಾಲಕ ಯಾರು?

    ಉತ್ತರ ಪ್ರದೇಶದ ಪ್ರತಾಪಗಢದಲ್ಲಿ ಅಪರೂಪದ ಘಟನೆ ನಡೆದಿದೆ. ನಂದಲಾಲ್ ಸರೋಜ್ ಎಂಬವರ ಎಮ್ಮೆಯೊಂದು ನಾಪತ್ತೆಯಾಗಿತ್ತು. ಅದು ಹನುಮಾನ್ ಸರೋಜ್ ಎಂಬಾತನ ಮನೆಗೆ ಹೋಗಿತ್ತು. ಆದರೆ, ಆತ ಇದು ನನ್ನ ಎಮ್ಮೆ ಎಂದು ಆತ ಹೇಳಿದ್ದ. ಕೊನೆಗೆ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು.

    ಈ ಸಮಸ್ಯೆಯನ್ನು ಪರಿಹಾರ ಮಾಡಲು ಪೊಲೀಸರು ಮಾಸ್ಟರ್​​​ ಪ್ಲಾನ್ ಮಾಡುವ ಮೂಲಕ ಮಾಲಕ ಯಾರು ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡಿದ್ದಾರೆ. ಪೊಲೀಸ್ ಪಂಚಾಯಿತಿಯಲ್ಲಿ ಪರಿಹಾರ ಮಾಡಲು ಸಾಧ್ಯವಾಗದ ಕಾರಣ ಆ ಎಮ್ಮೆಯಿಂದಲೇ ಸಮಸ್ಯೆ ಬಗೆ ಹರಿಸಿದ್ದಾರೆ.

    ಸಮಸ್ಯೆ ಬಗೆಹರಿಸಿದ ಎಮ್ಮೆ :

    ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಎಮ್ಮೆ ಹರಿಕೇಶ್ ಗ್ರಾಮಕ್ಕೆ ದಾರಿ ತಪ್ಪಿ ಹೋಗಿತ್ತು. ಈ ವೇಳೆ ಹನುಮಾನ್ ಸರೋಜ ಎಂಬಾತ ಅದನ್ನು ಹಿಡಿದು ತನ್ನ ಮನೆಗೆ ಕರೆದೊಯ್ದಿದ್ದಾನೆ. ರಾಯ್ ಅಸ್ಕರನ್‌ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಕಾಣೆಯಾದ ತಮ್ಮ ಎಮ್ಮೆಯನ್ನು ಮೂರು ದಿನಗಳ ಕಾಲ ಹುಡುಕಾಡುತ್ತಿದ್ದರು.

    ಕೊನೆಗೆ ಈ ಎಮ್ಮೆ ಹನುಮಾನ್ ಸರೋಜ ಎಂಬಾತನ ಮನೆಯಲ್ಲಿದೆ ಎಂದು ಪತ್ತೆ ಮಾಡಲಾಗಿತ್ತು. ಆದರೆ ಹನುಮಾನ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದ್ದಾನೆ. ಬೇರೆ ವಿಧಿ ಕಾಣದೆ ನಂದಲಾಲ್ ಮಹೇಶ್‌ಗಂಜ್ ಪೊಲೀಸ್ ಠಾಣೆಗೆ ತೆರಳಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾನೆ. ಈ ಇಬ್ಬರನ್ನು ಕೂಡ ಪೊಲೀಸ್ ಠಾಣೆಗ ಕರೆದು ವಿಚಾರಣೆ ಮಾಡಿದ್ದಾರೆ. ಎಮ್ಮೆ ತನ್ನದು ಎಂದು ನಂದಲಾಲ್ ಸರೋಜ್ ಹೇಳಿದರೆ, ತನ್ನದು ಎಂದು ಹನುಮಾನ್ ಸರೋಜ ವಾದಿಸಿದ್ದಾನೆ.

    ನಂತರ ಮಹೇಶ್‌ಗಂಜ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಶ್ರವಣ್ ಕುಮಾರ್ ಸಿಂಗ್ ಈ ಸಮಸ್ಯೆಯನ್ನು ಪರಿಹರಿಸಲು ಒಂದು ಮಾರ್ಗವನ್ನು ಕಂಡುಹಿಡಿದರು. ನಿರ್ಧಾರವನ್ನು ಎಮ್ಮೆಗೆ ಬಿಡಬೇಕು ಎಂದು ಹೇಳಲಾಯಿತು. ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಡಲಾಗುತ್ತದೆ ಮತ್ತು ಅದು ಯಾರನ್ನು ಹಿಂಬಾಲಿಸುತ್ತದೆಯೋ ಅವರು ಅದರ ಮಾಲಕ ಎಂದು ಹೇಳಿದರು.

    ಇದನ್ನೂ ಓದಿ : Zika Virus : ಝಿಕಾ ವೈರಸ್ ತಡೆಗಟ್ಟಲು ಜನಸಾಮಾನ್ಯರ ಜವಾಬ್ದಾರಿ ಏನು?

    ಗ್ರಾಮಸ್ಥರು ಸಹ ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿದರು. ನಂದಲಾಲ್ ಮತ್ತು ಹನುಮಾನ್ ಇಬ್ಬರನ್ನೂ ತಮ್ಮ ಹಳ್ಳಿಗಳಿಗೆ ಹೋಗುವ ಮಾರ್ಗದಲ್ಲಿ ವಿರುದ್ಧ ದಿಕ್ಕಿನಲ್ಲಿ ನಿಲ್ಲುವಂತೆ ಹೇಳಲಾಯಿತು. ನಂತರ ಪೊಲೀಸರು ಎಮ್ಮೆಯನ್ನು ಪೊಲೀಸ್ ಠಾಣೆಯಿಂದ ಬಿಟ್ಟರು. ಅದು ನಂದಲಾಲ್ ನನ್ನು ಹಿಂಬಾಲಿಸಿಕೊಂಡು ಅಸ್ಕರನ್‌ಪುರ ಗ್ರಾಮಕ್ಕೆ ಹೋಗಿದೆ. ಹನುಮಾನ್ ಸರೋಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಂತು ಇಂತು ಸಮಸ್ಯೆ ಬಗೆಹರಿದಿದ್ದು, ಎಮ್ಮೆ ಸಮಸ್ಯೆ ಪರಿಹರಿಸಿ, ತನ್ನ ಹಟ್ಟಿ ಸೇರಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ವಿದ್ಯುತ್ ತಂತಿಯಲ್ಲಿ ಜೀ*ವ ಕಳೆದುಕೊಂಡ ಹೆಬ್ಬಾವು..!

    Published

    on

    ಮಂಗಳೂರು ( ಉಳ್ಳಾಲ ) : ವಿದ್ಯುತ್ ಕಂಬ ಏರಿದ ಹೆಬ್ಬಾವೊಂದು ವಿದ್ಯುತ್ ಪ್ರವಹಿಸಿ ಸಾ*ವನ್ನಪ್ಪಿದ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲದ ಮುಕ್ಕಚ್ಚೇರಿಯಲ್ಲಿ ಈ ಘಟನೆ ನಡೆದಿದ್ದು, ಮುಂಜಾನೆ ವಿದ್ಯುತ್ ಶಾರ್ಟ್ ಆದ ಸದ್ದು ಕೇಳಿ ಹೊರ ಬಂದ ಮನೆಯವರಿಗೆ ಈ ದೃಶ್ಯ ಕಂಡು ಬಂದಿದೆ.

     

    ಬೃಹತ್ ಗಾತ್ರದ ಈ ಹೆಬ್ಬಾವು ವಿದ್ಯುತ್ ಕಂಬ ಏರಿದ್ದು ಯಾರೂ ಗಮನಿಸಿರಲಿಲ್ಲ. ಮಳೆಯ ಕಾರಣದಿಂದ ಮನೆಯೊಳಗೆ ಇದ್ದ ಜನರಿಗೆ ಶಾರ್ಟ್ ಸರ್ಕ್ಯೂಟ್ ಸದ್ದಿನಿಂದ ವಿಚಾರ ಗೊತ್ತಾಗಿದೆ. ಮಾಹಿತಿ ಪಡೆದು ಆಗಮಿಸಿದ ವಿದ್ಯುತ್ ಇಲಾಖೆಯ ಸಿಬ್ಬಂದಿ ಹೆಬ್ಬಾವಿನ ಕಳೇಬರವನ್ನು ಕಂಬದಿಂದ ತೆರವು ಮಾಡಿದ್ದಾರೆ.

    Continue Reading

    DAKSHINA KANNADA

    ಕಳ್ಳರನ್ನು ಹಿಡಿದ 60 ರ ವೃದ್ಧೆ..!

    Published

    on

    ಮಂಗಳೂರು :ವೃದ್ಧೆ ಮಹಿಳೆಯ ಕತ್ತಿನಿಂದ ಚಿನ್ನದ ಸರ ಎಗರಿಸಲು ಯತ್ನಿಸಿದ್ದ ಕಳ್ಳರಿಬ್ಬರಿನ್ನು ಮಹಿಳೆಯೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಗುಂಡ್ಯಾ ಸಮೀಪದ ಅಡ್ಡಹೊಳೆ ಎಂಬಲ್ಲಿ ನಡೆದಿದೆ.

    ಅಂಗಡಿಯಲ್ಲಿ ವೃದ್ಧ ಮಹಿಳೆ ಒಬ್ಬರೇ ಇದ್ದ ವೇಳೆ ಸ್ಕೂಟಿಯಲ್ಲಿ ಬಂದಿದ್ದ ಇಬ್ಬರು ವೃದ್ಧೆಯ ಕತ್ತಿನ ಸರ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ಜಾಗೃತಗೊಂಡ ಮಹಿಳೆ ತಕ್ಷಣ ಇಬ್ಬರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

    ತ್ರೇಸಿಯಾಮ್ಮ ಅವರಿಗೆ 60 ವರ್ಷ ವಯಸ್ಸಾಗಿದ್ದು, ಅಡ್ಡಹೊಳೆ ಹೆದ್ದಾರಿಯಲ್ಲಿ ಅಂಗಡಿ ನಡೆಸುತ್ತಿದ್ದಾರೆ. ಬೆಂಗಳೂರಿನಿಂದ ಕಳ್ಳತನ ನಡೆಸಲೆಂದೇ ಬಂದಿದ್ದ ಬೆಂಗಳೂರು ಯಶವಂತಪುರ ಮೂಲದ ರೋಹಿತ್ (25) ಮತ್ತು ಅಶೋಕ್ (25), ಎಂಬವರು ಮಂಗಳೂರಿನಲ್ಲಿ ವಾಹನ ಮಾರಾಟಗಾರಿಂದ ಟೆಸ್ಟ್ ಡ್ರೈವ್ ಮಾಡುತ್ತೇವೆ ಎಂದು ಸ್ಕೂಟಿ ಕಳ್ಳತನ ಮಾಡಿದ್ದಾರೆ. ಅದೇ ಸ್ಕೂಟಿಯಲ್ಲಿ ಬೆಂಗಳೂರಿಗೆ ಹೋಗುವ ದಾರಿಯಲ್ಲಿ ಚಿನ್ನದ ಸರ ಎಳೆಯಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

    ಕಳ್ಳರಿಬ್ಬರನ್ನೂ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    Continue Reading

    DAKSHINA KANNADA

    ಜುಲೈ 16. ದ.ಕ, ಉಡುಪಿ ಶಾಲಾ ಕಾಲೇಜಿಗೆ ರಜೆ..!

    Published

    on

    ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಉಡುಪಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು,ಸೋಮವಾರ ಜುಲೈ 15 ರಂದು ರಜೆ ನೀಡಲಾಗಿತ್ತು. ನಾಳೆ (ಜುಲೈ 16 )ಕೂಡಾ ರೆಡ್‌ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಬಹುತೇಕ ಹಳ್ಳ ನದಿಗಳು ಉಕ್ಕಿ ಹರಿಯುತ್ತಿದೆ. ಜುಲೈ 15 ರ ಮಳೆಯಿಂದ ಸಾಕಷ್ಟು ಕಡೆಗಳಲ್ಲಿ ಜನರು ತೊಂದರೆ ಅನುಭವಿಸಿದ್ದಾರೆ.

    ತಗ್ಗು ಪ್ರದೇಶಗಳಲ್ಲಿ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದ ಘಟನೆ ಕೂಡಾ ನಡೆದಿದೆ. ಕೆಲೆವಡೆ ಶಾಲೆಯ ಗೋಡೆ ಕುಸಿತವಾಗಿದ್ದು, ಕೆಲವೆಡೆ ಗಾಳಿಗೆ ಶಾಲೆಯ ಹೆಂಚು ಹಾರಿ ಹೋಗಿದೆ. ನದಿಯ ನೀರು ಉಕ್ಕಿ ಹರಿಯುತ್ತಿದ್ದು, ಅಪಾಯದ ಅಂಚಿನಲ್ಲಿದೆ.

    ಹವಾಮಾನ ಇಲಾಖೆಯ ಸೂಚನೆಯಂತೆ ಜುಲೈ 16 ರಂದು ಕೂಡಾ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಎಲ್ಲಾ ಸರ್ಕಾರಿ, ಖಾಸಗಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
    ಭಾನುವಾರದಿಂದ ಶಾಲೆಗೆ ನಿರಂತರ ರಜೆ ಅನುಭವಿಸಿದ ಮಕ್ಕಳಿಗೆ ಬುಧವಾರ ಮೊಹರಂ ಪ್ರಯುಕ್ತ ಸರ್ಕಾರಿ ರಜೆ ಕೂಡ ಸಿಗಲಿದೆ. ಗುರುವಾರದಿಂದ ಮಳೆ ಕಡಿಮೆ ಆಗುವ ಸೂಚನೆ ಇದೆ.

    Continue Reading

    LATEST NEWS

    Trending