Home ರಾಷ್ಟ್ರೀಯ ವಾರ್ತೆ ಬಜೆಟ್ 2020: ಯಾವುದು ಅಗ್ಗ, ಯಾವುದು ಏರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ

ಬಜೆಟ್ 2020: ಯಾವುದು ಅಗ್ಗ, ಯಾವುದು ಏರಿಕೆ, ಇಲ್ಲಿದೆ ಸಂಪೂರ್ಣ ಮಾಹಿತಿ

ನವದೆಹಲಿ: ಆರ್ಥಿಕ ಹಿಂಜರಿತದಿಂದ ಕಂಗಾಲಾಗಿರುವ ಭಾರತಕ್ಕೆ ಬೂಸ್ಟ್ ನೀಡುವ ನಿಟ್ಟಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಈ ಬಾರಿಯ ಬಜೆಟ್ ಮಂಡಿಸುತ್ತಿದ್ದಾರೆ. ರಾಷ್ಟ್ರದ ಭದ್ರತೆ ಜೊತೆಗೆ ಪರಿಸರ ನೈರ್ಮಲ್ಯಕ್ಕೆ ಈ ಬಾರಿ ವಿಶೇಷ ಆದ್ಯತೆ ನೀಡಲಾಗಿದೆ. 

ಪ್ರವಾಸೋದ್ಯಮ, ಮ್ಯೂಸಿಯಂ, ಪರಾತತ್ವ ಸ್ಥಳಗಳ ಅಭಿವೃದ್ಧಿ ಜೊತೆಗೆ ಜಮ್ಮು ಕಾಶ್ಮೀರ ಅಭಿವೃದ್ಧಿಗೂ ಭಾರೀ ಅನುದಾನಗಳನ್ನ ಮಂಡಿಸಲಾಗಿದೆ. ಅಲ್ಲದೇ ಉದ್ಯೋಗ ಹೆಚ್ಚಳದ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.. ಇನ್ನು ಕೃಷಿ, ಆರೋಗ್ಯ ಕ್ಷೇತ್ರಗಳಿಗೂ ವಿಶೇಷ ಆದ್ಯತೆ ನೀಡಲಾಗಿದೆ. ಸದ್ಯ ನಡೆಯುತ್ತಿರೋ ಬಜೆಟ್ ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಂದಿಗೆ ಯಾವುದೇ ವಿಶೇಷ ಆಶಾದಾಯಕ ಭರವಸೆಗಳು ಸಿಕ್ಕಿಲ್ಲ ಎನ್ನುವುದು ಗಮನಾರ್ಹ..

ಬಜೆಟ್‌ಗೂ ಮಂಡನೆಗೂ ಮುನ್ನ ಮಾತನಾಡಿದ ವಿತ್ತ ಸಚಿವೆ, 40 ಕೋಟಿ ಜನರು ಈ ಬಾರಿ ಜಿ.ಎಸ್.ಟಿ ಪಾವತಿಸಿದ್ದಾರೆ. ಜಿ.ಎಸ್.ಟಿ ಯಿಂದ ರಿಟರ್ನ್ಸ್ ಸಲ್ಲಿಕೆ ತುಂಬಾ ಸರಳವಾಗಿದೆ ಜೊತೆಗೆ ಭಾರತ ಜಗತ್ತಿನ 5ನೇ ಅತೀ ದೊಡ್ಡ ಆರ್ಥಿಕ ದೇಶವಾಗಿದೆ ಎಂದರು. 2020 ರ ವೇಳೇಗೆ ರೈತರ ಆದಾಯವನ್ನು ದ್ವಿಗುಣ ಗೊಳಿಸುವುದಕ್ಕೆ ಕೇಂದ್ರ ಸರಕಾರ ಬದ್ದವಾಗಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

 

ಕೃಷಿ ಅಭಿವೃದ್ದಿಗೆ 16 ಅಂಶಗಳ ಯೋಜನೆ ಮಾಡಲಾಗಿದೆ ಅಂತ ಹೇಳಿದರು. 20 ಲಕ್ಷ ರೈತರಿಗೆ ಪಂಪ್‌ಸೆಟ್‌ ವಿತರಣೆ ಮಾಡಲಾಗುತ್ತೆ. ಬರಡು ಭೂಮಿಯಲ್ಲಿ ವಿದ್ಯುತ್‌ ಉತ್ಪಾದನೆ ಮಾಡುವುದಕ್ಕೆ ಹೆಚ್ಚಿನ ಅವಕಾಶ ನೀಡಲಾಗುವುದು ಈ ಮೂಲಕ ಅನ್ನದಾತ ವಿದ್ಯುತ್‌ದಾತನೂ ಆಗುತ್ತಾನೆ ಎಂದರು. ಆದಾಯ ಮತ್ತು ಖರೀದಿ ಸಾಮರ್ಥ್ಯ ವಿಸ್ತರಣೆ ಮಾಡುವ ಬಜೆಟ್ ಇದಾಗಿರುತ್ತದೆ ಎಂದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಗ್ಗೆ 11ಕ್ಕೆ ಲೋಕಸಭೆಯಲ್ಲಿ ಬಜೆಟ್ ಮಂಡನೆ ಮಾಡಿದರು.

ಬಜೆಟ್ ಹೈಲೈಟ್ಸ್:

 • ಕೈಗಾರಿಕೆ ಮತ್ತು ವಾಣಿಜ್ಯ ಅಭಿವೃದ್ಧಿಗೆ 27,300 ಕೋಟಿ
 • ಕೃಷಿ ಮತ್ತು ಅದರ ಸಹವರ್ತಿ ಚಟುವಟಿಕೆಗಳಿಗೆ 2.83 ಲಕ್ಷ ಕೋಟಿ ರೂ. ಅನುದಾನ
 • 20 ಲಕ್ಷ ರೈತರಿಗೆ ಸೋಲಾರ್ ಪಂಪ್ ನೀಡಲಾಗುವುದು. ಹದಿನೈದು ಲಕ್ಷ ಮಂದಿಗೆ ಸೌರಶಕ್ತಿ ಮೂಲಕ ಸಹಾಯ ಮಾಡಲಾಗುವುದು. ಬರಡು ಭೂಮಿಯನ್ನು ಗ್ರಿಡ್ ಗೆ ಮಾರಿ, ಹಣ ಗಳಿಸಬಹುದು.
 • ರೈತರಿಗಾಗಿ ಕಿಸಾನ್ ರೈಲು ಘೋಷಣೆ, ಪಿಪಿಪಿ ಮಾದರಿಯಲ್ಲಿ ನಿರ್ಮಾಣ
 • ಸ್ವ ಸಹಾಯ ಗುಂಪುಗಳಿಗಾಗಿ ಧಾನ್ಯ ಲಕ್ಷ್ಮಿ ಯೋಜನೆ. ಈ ಗುಂಪುಗಳನ್ನು ಧಾನ್ಯ ಲಕ್ಷ್ಮಿ ಎಂದು ಕರೆಯಲಾಗುವುದು. ನಬಾರ್ಡ್, ಮುದ್ರಾ ಯೋಜನೆಯಡಿ ನೆರವು.
 • ಕೃಷಿ15 ಲಕ್ಷ ಕೋಟಿ ರೂ. ಕೃಷಿ ಸಾಲಕ್ಕಾಗಿ ನಬಾರ್ಡ್‌ಗೆ 15 ಲಕ್ಷ ಕೋಟಿ ರೂ. ನಬಾರ್ಡ್ ಮರುಹಣಕಾಸು ಯೋಜನೆ ವಿಸ್ತರಣೆ.
 • ನೀರಿನ ಸಮಸ್ಯೆ ಇರುವ ದೇಶದ 100 ಜಿಲ್ಲೆಗಳಿಗೆ ಸಮಗ್ರ ಯೋಜನೆ.
 • ಖಾಸಗಿ-ಸಾರ್ವಜನಿಕ ಸಹಭಾಗಿತ್ವದಡಿ ಆಸ್ಪತ್ರೆಗಳು.
 • ಹೊಸ ಶಿಕ್ಷಣ ನೀತಿ ಜಾರಿ. ಶಿಕ್ಷಣದಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಆದ್ಯತೆ. ಶಿಕ್ಷಣ ಕ್ಷೇತ್ರಕ್ಕೆ 99,300 ಕೋಟಿ ರು ಅನುದಾನ.
 • ಭಾರತದ ಮನೆ ಮನೆಗೂ ಇಂಟರ್ ನೆಟ್ ಸೇವೆ.
 • ಹಣ್ಣು, ತರಕಾರಿ ಶೇಖರಣೆಗೆ ದೇಶದಲ್ಲಿ ಜಾಲ ನಿರ್ಮಾಣ
 • ಆರೋಗ್ಯ69 ಸಾವಿರ ಕೋಟಿ ರೂ. ಆರೋಗ್ಯ ಕ್ಷೇತ್ರಕ್ಕೆ 69 ಸಾವಿರ ಕೋಟಿ ರೂ. ಮೀಸಲು. ಕಳೆದ ಬಜೆಟ್‌ನಲ್ಲಿ 62,659 ಕೋಟಿ ಘೋಷಿಸಲಾಗಿತ್ತು.
 • 112 ಜಿಲ್ಲೆಗಳಲ್ಲಿ ಆಯುಷ್ಮಾನ್ ಭಾರತ್ ಯೋಜನೆಡೆಯಡಿ ಆಸ್ಪತ್ರೆ ನಿರ್ಮಾಣ. 2024ರ ವೇಳೆಗೆ ದೇಶದೆಲ್ಲೆಡೆ ಜನೌಷಧ ಕೇಂದ್ರಗಳನ್ನು ವಿಸ್ತರಿಸಲು ಬದ್ಧ.
 • ಸ್ವಚ್ಛಭಾರತ್ ಯೋಜನೆಗೆ 12,300 ಕೋಟಿ ರು ಅನುದಾನ. ಜಲ ಜೀವನ್ ಮಿಷನ್ ಯೋಜನೆಗೆ 3.6 ಲಕ್ಷ ಕೋಟಿ ರು ಅನುದಾನ.
 • ರಾಷ್ಟ್ರೀಯ ಶೀತಲೀಗೃಹ ಜಾಲ ನಿರ್ಮಾಣಕ್ಕೆ ನಬಾರ್ಡ್ ನಿಂದ ಹಣಕಾಸು ಯೋಜನೆ ವಿಸ್ತರಣೆ.
 • ರೂ 12,300 ಕೋಟಿ ರೂ ಸ್ವಚ್ಚ ಭಾರತ ಯೋಜನೆಗೆ ಅನುದಾನ. ಕಳೆದ ಸಾಲಿನಲ್ಲಿ 10,000 ಕೋಟಿ ನೀಡಲಾಗಿತ್ತು.
 • ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸಲು ಇಂಧ್ರಧನುಷ್ ಯೋಜನೆ. ಜಲ್ ಜೀವನ್ ಅಭಿಯಾನ ಮತ್ತು ಒಳಚರಂಡಿ ಅಭಿಯಾನದ ಮೂಲಕ ಬಡವರ ಆರೋಗ್ಯ ಸ್ಥಿತಿ ಉತ್ತಮಗೊಳಿಸಲು ಯತ್ನ. ಆಯುಷ್ಮಾನ್ ಭಾರತ್ ಯೋಜನೆ ಅಡಿ ಇಪ್ಪತ್ತು ಸಾವಿರ ಆಸ್ಪತ್ರೆಗಳು.
 • ಯುವ ಎಂಜಿನಿಯರ್ ಗಳಿಗೆ ಶೀಘ್ರದಲ್ಲಿ ಇಂಟರ್ನ್ ಷಿಪ್! ಸ್ಥಳೀಯ ನಗರ ಸಂಸ್ಥೆಗಳಿಗೆ ಅವಕಾಶ ನೀಡಲು ನಿರ್ದೇಶನ.
 • 83 ಲಕ್ಷ ಕೋಟಿ ಕೃಷಿ ಮತ್ತು ಸಂಬಂಧಿಸಿದ ಚಟುವಟಿಕೆಗಳಿಗೆ, ನೀರಾವರಿ ಹಾಗೂ ಗ್ರಾಮೀಣಾಭಿವೃದ್ಧಿಗೆ 2.83 ಲಕ್ಷ ಕೋಟಿ.
 • ಮೆಡಿಕಲ್ ಕಾಲೇಜನ್ನು ಜಿಲ್ಲಾಸ್ಪತ್ರೆಗೆ ಸೇರ್ಪಡೆ.
 • 2023ಕ್ಕೆ ಬೆಂಗಳೂರು- ಚೆನ್ನೈ ಎಕ್ಸ್ ಪ್ರೆಸ್ ವೇ ಪೂರ್ಣ 9,000 ಕಿ. ಮೀ.
 • ಉಡಾನ್ ಯೋಜನೆ ಆಡಿಯಲ್ಲಿ ನೂರಕ್ಕೂ ಹೆಚ್ಚು ವಿಮಾನ ನಿಲ್ದಾಣ ಸೇರ್ಪಡೆ. ವಿಮಾನಗಳ ಸಂಖ್ಯೆ ದುಪ್ಪಟ್ಟು ಮಾಡಲಾಗುವುದು.
 • ಪೌಷ್ಟಿಕಾಂಶ ಕಾರ್ಯಕ್ರಮಗಳಿಗೆ 35,600 ಕೋಟಿ ಮೀಸಲು.
 • ಮೊಬೈಲ್ ಫೋನ್, ಸೆಮಿ ಕಂಡಕ್ಟರ್ಸ್ ಮತ್ತು ಇತರ ಎಲೆಕ್ಟ್ರಾನಿಕ್ ಸಲಕರಣೆಗಳ ತಯಾರಿಗೆ ಯೋಜನೆ ಪ್ರಸ್ತಾವ.
 • ಸ್ವಚ್ಛ ಭಾರತ್ ಅಭಿಯಾನಕ್ಕೆ 12,300 ಕೋಟಿ ಮೀಸಲು.
 • ಪ್ರವಾಸೋದ್ಯಮ ವಲಯಕ್ಕೆ 2,500 ಕೋಟಿ ಮೀಸಲು.
 • ಮಕ್ಕಳ ಆರೋಗ್ಯ ಸಂರಕ್ಷಣೆಗೆ ಇಂದ್ರಧನುಷ್ ಯೋಜನೆ ವಿಸ್ತರಣೆ.
 • ಪರಿಶಿಷ್ಟ ಜಾತಿಗಳು ಮತ್ತು ಇತರ ಹಿಂದುಳಿದ ವರ್ಗಗಳಿಗೆ 85,000 ಕೋಟಿ ಮತ್ತು ಪರಿಶಿಷ್ಟ ಪಂಗಡಗಳಿಗೆ 53,700 ಕೋಟಿ.

ಆದಾಯ ತೆರಿಗೆ ಪಾವತಿ ಬಗ್ಗೆ

 • ಮೂಲ ಆದಾಯ ತೆರಿಗೆ ಮಿತಿ 2.5 ಲಕ್ಷ ರು
 • 5 ಲಕ್ಷ ರು ತನಕ ಆದಾಯ ತೆರಿಗೆ ಪಾವತಿಸಬೇಕಾಗಿಲ್ಲ.
 • 5 ಲಕ್ಷ ರು ನಿಂದ 7.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 10% ತೆರಿಗೆ.
 • 5 ಲಕ್ಷ ರು ನಿಂದ1 0 ಲಕ್ಷ ರು ತನಕ ಆದಾಯ ಉಳ್ಳವರಿಗೆ 15% ತೆರಿಗೆ.
 • 10 ಲಕ್ಷ ರು ನಿಂದ 12.5 ಲಕ್ಷ ರು ತನಕ ಆದಾಯ ಉಳ್ಳವರಿಗೆ 20% ತೆರಿಗೆ.
 • 5 ಲಕ್ಷ ರು ನಿಂದ 15 ಲಕ್ಷ ರು ತನಕ ಆದಾಯ ಉಳ್ಳವರಿಗೆ 25% ತೆರಿಗೆ.
 • 15 ಲಕ್ಷ ರು ಮೇಲ್ಪಟ್ಟ ಆದಾಯ ಉಳ್ಳವರಿಗೆ ಶೇ 30 ರಷ್ಟು ತೆರಿಗೆ

ಯಾವುದರ ಬೆಲೆ ಇಳಿಕೆಯಾಗಬಹುದು:

ಕಾರು, ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಕಡಿಮೆಯಾಗಲಿದೆ
ಡಯಾಲಿಸಿಸ್ ಯಂತ್ರದ ಬೆಲೆಯಲ್ಲಿ ಇಳಿಕೆ
ಕೃತಕ ಕಿಡ್ನಿ, ಚರ್ಮೋತ್ಪನ್ನ
ಬೇಳೆಕಾಳು, ಗೊಬ್ಬರ, ಬೀಜಗಳ ಬೆಲೆಯಲ್ಲಿ ಇಳಿಕೆ

ಯಾವುದರ ಬೆಲೆ ಹೆಚ್ಛಳವಾಗಬಹುದು
ಪೆಟ್ರೋಲ್-ಡೀಸೆಲ್
ಗೋಡಂಬಿ, ತಾಳೆ ಎಣ್ಣೆ
ಬಂಗಾರ, ಬೆಳ್ಳಿ ಆಭರಣಗಳು
ಪ್ಲಾಸ್ಟಿಕ್, ರಬ್ಬರ್ ವಸ್ತುಗಳು, ಸಿಸಿಟಿವಿ, ಚಾರ್ಜರ್, ಅಡಾಪ್ಟರ್‌ಗಳು
ಗ್ಲಾಸ್, ಮುದ್ರಣ ಕಾಗದದ ಬೆಲೆ ಹೆಚ್ಚಳವಾಗಬಹುದು.

11 ಗಂಟೆಗೆ ಬಜೆಟ್ ಮಂಡನೆ ಆರಂಭಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಮಧ್ಯಾಹ್ನ 1.50ಕ್ಕೆ ಬಜೆಟ್ ಮಂಡನೆ ಪೂರ್ಣಗೊಳಿಸಿದರು. ಸಭೆಯನ್ನು ಸ್ಪೀಕರ್ ಸೋಮವಾರಕ್ಕೆ ಮುಂದೂಡಿದರು.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...