LATEST NEWS
ವಾಟರ್ ಹೀಟರ್ ನಿಂದ ಹೊಡೆದು ವ್ಯಕ್ತಿಯ ಬರ್ಬರ ಹತ್ಯೆ
Published
3 days agoon
By
NEWS DESK2ಬೆಂಗಳೂರು: ಸ್ನೇಹಿತನನ್ನೇ ವ್ಯಕ್ತಿಯೊಬ್ಬ ವಾಟರ್ ಹೀಟರ್ ನಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಶ್ರೀನಿವಾಸಪುರದಲ್ಲಿ ನಡೆದಿದೆ.
ನಾಗರಾಜ್ ಎಂಬಾತ ಶ್ರೀನಿವಾಸ್ ನನ್ನು ವಾಟರ್ ಹೀಟರ್ ನಿಂದ ಹೊಡೆದ ಕೊಲೆ ಮಾಡಿದ್ದಾನೆ.
ಶ್ರೀನಿವಾಸ್ ಹಾಗೂ ನಾಗರಾಜ್ ಇಬ್ಬರು ಗಾರೆ ಕೆಲಸ ಮಾಡಿಕೊಂಡಿದ್ದರು. ಶ್ರೀನಿವಾಸ್ ಮದುವೆಯಾಗಿದ್ದರೂ ಪತ್ನಿಯನ್ನು ಬಿಟ್ಟು ಪ್ರತ್ಯೇಕವಾಗಿ ವಾಸವಾಗಿದ್ದ. ಕೊಲೆ ಆರೋಪಿ ನಾಗರಾಜ್ ಗೆ ಇನ್ನೂ ಮದುವೆಯಾಗಿರಲಿಲ್ಲ.ಇಬ್ಬರೂ ಶ್ರೀನಿವಾಸಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಶ್ರೀನಿವಾಸ್ ಹಾಗೂ ನಾಗರಾಜ್ ಜಗಳವಾಗಿದ್ದು, ಈ ವೇಳೆ ನಾಗರಾಜ್ ಕೋಪದ ಬರದಲ್ಲಿ ವಾಟರ್ ಹೀಟರ್ ನಿಂದ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶ್ರೀನಿವಾಸ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
LATEST NEWS
ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ !
Published
29 minutes agoon
01/01/2025By
NEWS DESK3ಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿದ ಜನರಿಗೆ ಈಗ ಗೂಡ್ ನ್ಯೂಸ್ ಒಂದು ಸಿಕ್ಕಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ರಿಫಿಲ್ ಮತ್ತಷ್ಟು ಅಗ್ಗವಾಗಿದೆ.
ಸರ್ಕಾರಿ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ.
ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಪ್ರತಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆ ಆಗಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂಪಾಯಿಯಿಂದ 1804 ರೂಪಾಯಿಗೆ ಇಳಿಕೆ ಆಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆ ಪ್ರಕಟಿಸುತ್ತವೆ.
ಹೊಸ ವರ್ಷದಂದು ತಮ್ಮ ಗ್ರಾಹಕರಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಕೋಲ್ಕತ್ತಾದಲ್ಲಿ 1911 ರೂಪಾಯಿಗೆ ಇಳಿಕೆ ಆಗಿದೆ. ಈ ಮುಂಚೆ 1927 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಮುಂಬೈನಲ್ಲಿ ಸಿಲಿಂಡರ್ ಬೆಲೆ 1756 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ ಇವತ್ತಿನಿಂದ 19 ಕೆಜಿ ಸಿಲಿಂಡರ್ಗೆ 1966 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಈ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಎಲ್ ಪಿಜಿ ಬೆಲೆ ಇಳಿಕೆಯಾಗಿರುವುದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.
LATEST NEWS
ಹೊಸ ವರ್ಷದ ಅಮಲಿನಲ್ಲಿ ಹಾಸ್ಟೆಲ್ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು
Published
42 minutes agoon
01/01/2025ಉಡುಪಿ : ಹೊಸ ವರ್ಷಾಚರಣೆ ಸಂಭ್ರಮವನ್ನು ಎಲ್ಲೆಡೆ ಸಂಭ್ರಮದಿಂದ ಸ್ವಾಗತಿಸಲಾಗಿದೆ. ಶಿಕ್ಷಣ ನಗರಿ, ವೈದ್ಯಕೀಯ ಲೋಕದ ಕ್ಷೇತ್ರವೆಂದೇ ಬಣ್ಣಿಸಲಾಗಿರುವ ಮಣಿಪಾಲ ಕಾಲೇಜಿನ ಪರಿಸರದಲ್ಲಿ ಸಂಭ್ರಮ ಕಂಡು ಬಂದಿದೆ.
ಬಾರ್ ಪಬ್‌ಗಳು ತುಂಬಿ ತುಳುಕಿದ್ದು, ಎಲ್ಲೆಡೆ ಯುವ ಸಮೂಹ ಕಂಠ ಪೂರ್ತಿ ಕುಡಿದು ತೂರಾಡಿದ ಘಟನೆಗಳು ಕೂಡಾ ಕಂಡು ಬಂದಿದೆ. ಇನ್ನು ನಶೆಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದಾರಿಯನ್ನು ಪೊಲೀಸರೇ ತೋರಿಸಬೇಕಾಯಿತು.
ಇದನ್ನೂ ಓದಿ : 2025 ರ ಜಗತ್ತಿನ ಭವಿಷ್ಯದ ಬಗ್ಗೆ ಕಾಲಜ್ಞಾನಿಗಳು ಹೇಳಿದ್ದೇನು ?
ಮಣಿಪಾಲ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬೀಟ್ ನಡೆದಿದೆ. ಲಾಠಿಗಳನ್ನು ಹಿಡಿದು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಪೊಲೀಸರು ದಿನವಿಡಿ ಜಾಗರಣ ಕುಳಿತು ಯಾವುದೇ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸಿದರು. ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ನಲ್ಲಿ ನಾಕಾಬಂದಿ ಏರ್ಪಡಿಸಲಾಗಿತ್ತು. ಬೈಕ್ ವ್ಹೀಲಿಂಗ್ ಗಳಿಗೆ ಪೊಲೀಸರು ಸಂಪೂರ್ಣ ಬ್ರೇಕ್ ಹಾಕಿದ್ದು, ಯಾವುದೇ ದುರಂತಗಳಿಗೆ ಆಸ್ಪದ ನೀಡಲಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಕಂಡು ಬಂತು.
LATEST NEWS
ಕಿರಿಬತಿ ದ್ವೀಪ ರಾಷ್ಟ್ರದಿಂದ ಹೊಸ ವರ್ಷ ಆರಂಭ
Published
52 minutes agoon
01/01/2025By
NEWS DESK3ಮಂಗಳೂರು: ಹೊಸ ವರ್ಷವನ್ನು ಎಲ್ಲಾ ದೇಶಗಳು ಸಂಭ್ರಮದಿಂದ ಬರಮಾಡಿಕೊಂಡಿದೆ. ಅದೇ ರೀತಿ ಭಾರತದಲ್ಲೂ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಫೆಸಿಫಿಕ್ ಸಾಗರದ ಕಿರಿಬತಿ (Kiribati) ಎಂಬ ದ್ವೀಪ ರಾಷ್ಟ್ರ 2025ರ ಹೊಸ ವರ್ಷವನ್ನು ಮೊದಲು ಸ್ವಾಗತಿಸಲಾಯಿತು. ನಂತರ ಅದರ ಸನಿಹದ ನ್ಯೂಜಿಲ್ಯಾಂಡ್ ಹೊಸ ವರ್ಷವನ್ನು ಸ್ವಾಗತಿಸಿದವು.
ಆ ನಂತರ ಆಸ್ಟ್ರೇಲಿಯಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಹೊಸ ವರ್ಷ ಸ್ವಾಗತಿಸಿದವು. ಆಸ್ಟ್ರೇಲಿಯಾ ನಗರದ ಸಿಡ್ನಿಯ ಒಪೆರಾ ಹೌಸ್ ಬಳಿ ಚಿತ್ತಾಕರ್ಷಕ ಬಾಣ ಬಿರುಸುಗಳನ್ನು ಸಿಡಿಸಿ ಸ್ವಾಗತ ಮಾಡಲಾಯಿತು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.
ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ
ನಂತರ ರಷ್ಯಾದಲ್ಲಿ 2025ಕ್ಕೆ ಸ್ವಾಗತಿಸಲಾಯಿತು. ರಾತ್ರಿಯಿಡಿ ಸಂಭ್ರಮಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತ ಥೈಲ್ಯಾಂಡ್ ನಲ್ಲಿ ಕೊನೆಯ ಸೂರ್ಯಾಸ್ತಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದರು.
ಭಾರತದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದ್ದು ವರ್ಷದ ಕೊನೆ ದಿನದಂದು ಪ್ರವಾಸಿ ತಾಣಗಳು, ಹೋಟೆಲ್, ರೆಸಾರ್ಟ್, ರೆಸ್ಟೊರೆಂಟ್ ಗಳು ತುಂಬಿ ತುಳುಕುತ್ತಿದ್ದವು.
LATEST NEWS
ಭೀ*ಕರ ರಸ್ತೆ ಅ*ಪಘಾತ ; ಯಕ್ಷಗಾನ ಯುವ ಕಲಾವಿದ ಸಾ*ವು
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ
ಮಕ್ಕಳನ್ನು ಬಾವಿಗೆಸೆದು ಕೊಲೆ ಮಾಡಿದ ಆರೋಪಿಗೆ ಮರಣ ದಂಡನೆ..!
ಉಡುಪಿ : ಶ್ರೀಕೃಷ್ಣ ಮಠದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ದಾಂ*ಧಲೆ; 8 ಮಂದಿಯ ಬಂಧನ
ನಿಂತುಕೊಂಡು ನೀರು ಕುಡಿದರೆ ಏನಾಗುತ್ತದೆ ಗೊತ್ತಾ..?
ಮೋದಿ ಮೆಚ್ಚಿದ ಗಾಯಕಿಯ ಕೈ ಹಿಡಿಯಲಿದ್ದಾರೆ ಸಂಸದ ತೇಜಸ್ವಿ ಸೂರ್ಯ
Trending
- DAKSHINA KANNADA5 days ago
ದಿ।ಮನಮೋಹನ್ ಸಿಂಗ್ ಸಹಿ ಇರುವ ರೂ 1ರ ನೋಟು ರೂ.100 ಕ್ಕೆ ಮಾರಾಟ…!
- FILM7 days ago
ಶಿವರಾಜ್ಕುಮಾರ್ಗೆ ಕ್ಯಾನ್ಸರ್ ತಗುಲಿದ್ದು ದೇಹದ ಈ ಭಾಗಕ್ಕೆ
- BIG BOSS4 days ago
ಎಂಟು ಮಂದಿ ನಾಮಿನೇಟ್; ಈ ವಾರ ಮನೆಯಿಂದ ಹೊರ ಬರೋದು ಇವರೇ ?
- DAKSHINA KANNADA4 days ago
‘ದಿ ಅಕ್ಸಿಡೆಂಟಲ್ PM’ ಸುಳ್ಳಿನ ಕಂತೆ..! ಕ್ಷಮಿಸಿ ಎಂದ ಚಿತ್ರ ನಿರ್ಮಾಪಕ..!
Pingback: ಹೋಟೆಲ್ ಕೋಣೆಯಲ್ಲಿ ಮಲಯಾಳಂ ನಟ ದಿಲೀಪ್ ಶಂಕರ್ ಶ*ವವಾಗಿ ಪತ್ತೆ! - NAMMAKUDLA NEWS - ನಮ್ಮಕುಡ್ಲ ನ್ಯೂಸ್