Saturday, October 1, 2022

ಬಾಲಕಿಯನ್ನು ರಕ್ಷಿಸಲು ಹೋಗಿದ್ದ ಸಹೋದರರು ದಾರುಣ ಅಂತ್ಯ…

ರಾಯಚೂರು: ಸ್ನಾನಕ್ಕೆ ತೆರಳಿದ್ದ ಸಹೋದರರಿಬ್ಬರು ನೀರುಪಾಲಾದ ಘಟನೆ ರಾಯಚೂರಿನ ದೇವದುರ್ಗ ತಾಲೂಕಿನ ಕೊಪ್ಪರ ಗ್ರಾಮದ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ ಬಳಿ ಕೃಷ್ಣಾ ನದಿಯಲ್ಲಿ ನಡೆದಿದೆ.

ಕೊಪ್ಪರ ಗ್ರಾಮದ ರಜಾಕ್ ಮುಲ್ಲಾ ಉಸ್ಮಾನ್(35), ಮೌಲಾಲಿ ಉಸ್ಮಾನ್ (32) ನಾಪತ್ತೆಯಾದ ಸಹೋದರರು.


ನದಿಯಲ್ಲಿ ಸ್ನಾನ ಮಾಡುತ್ತಿದ್ದಾಗ ಕೊಚ್ಚಿ ಹೋಗುತ್ತಿದ್ದ ಬಾಲಕಿಯನ್ನು ಕಾಪಾಡಲು ಹೋಗಿ ಇಬ್ಬರು ನೀರುಪಾಲಾಗಿದ್ದಾರೆ.

ಈಜು ಬಾರದ ಹಿನ್ನೆಲೆ ನೀರಿನ ಸೆಳೆತಕ್ಕೆ ಸಹೋದರರು ಕೊಚ್ಚಿಹೋಗಿದ್ದಾರೆ. ಸ್ಥಳೀಯರಿಗೆ ಬಾಲಕಿಯನ್ನು ಮಾತ್ರವೇ ರಕ್ಷಿಸಲು ಸಾಧ್ಯವಾಗಿದೆ.

ದೇವದುರ್ಗ ತಹಶೀಲ್ದಾರ್ ಶ್ರೀನಿವಾಸ್ ಚಾಪಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಶಾಮಕದಳ ಸಿಬ್ಬಂದಿಯಿಂದ ಶೋಧ ಕಾರ್ಯಾಚರಣೆ ನಡೆದಿದೆ.

ಎನ್‌ಡಿಆರ್‌ಎಫ್ ತಂಡದಿಂದ ಶೋಧ ಕಾರ್ಯಾಚರಣೆ ಮುಂದುವರಿಸಲು ತಾಲೂಕು ಆಡಳಿತ ಚಿಂತನೆ ನಡೆಸಿದೆ. .

LEAVE A REPLY

Please enter your comment!
Please enter your name here

Hot Topics

ಸಿದ್ಧರಾಮಯ್ಯನಿಗೆ ಧಮ್ ಇದ್ರೆ ಹಿಂದೂಗಳ ಓಟು ಬೇಡ ಎನ್ನಲಿ ನೋಡೋಣ-ರಾಜ್ಯಾಧ್ಯಕ್ಷ ನಳಿನ್

ಹುಬ್ಬಳ್ಳಿ: ನಮಗೆ ಪಿಎಫ್‌ಐ ಬ್ಯಾನ್ ಮಾಡುವಂತೆ ಹಾಕಿದ ಸವಾಲಿಗೆ ತಕ್ಕಂತೆ ಇಂದು ಮಾಡಿ ತೋರಿಸಿದ್ದೇವೆ. ಅಷ್ಟೊಂದು ಧಮ್ ಇದ್ರೆ ಸಿದ್ಧರಾಮಯ್ಯನವರು ಹಿಂದೂಗಳ ಓಟು ನನಗೆ ಬೇಕಾಗಿಲ್ಲ ಎಂದು ಹೇಳಲಿ ನೋಡೋಣ' ಎಂದು ಬಿಜೆಪಿ...

ಬಂಟ್ವಾಳ: ಬಸ್ & ಸ್ಕೂಟರ್ ಢಿಕ್ಕಿ-ಸವಾರನಿಗೆ ಗಂಭೀರ ಗಾಯ

ಬಂಟ್ವಾಳ: ಬಸ್ಸು ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಬೈಕ್ ಸವಾರ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ.ಅಪಘಾತದಲ್ಲಿ ಬೈಕ್...

ಬಂಟ್ವಾಳ: ನಿರ್ಲಕ್ಷ್ಯ ವಹಿಸಿ ಕಾರ್ ಡ್ರೈವಿಂಗ್-ಢಿಕ್ಕಿ ಹೊಡೆದ ರಭಸಕ್ಕೆ ಎರಡು ಕಾರುಗಳು ಜಖಂ

ಬಂಟ್ವಾಳ: ನಿರ್ಲಕ್ಷ್ಯತನದಲ್ಲಿ ಕಾರು ಚಲಾಯಿಸಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಎರಡು ಕಾರುಗಳಿಗೆ ಢಿಕ್ಕಿ ಹೊಡೆದು ಕಾರು ಜಖಂಗೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ಪರಂಗಿಪೇಟೆ ಎಂಬಲ್ಲಿ ಇಂದು ನಡೆದಿದೆ.ಆಸೀಫ್ ಮಹಮ್ಮದ್ ಎಂಬಾತ ಬಂಟ್ವಾಳ ಕಡೆಯಿಂದ...