‘ಇಡ್ಲಿ ‘ ಗೆ ಅವಹೇಳನ ಮಾಡಿದವನಿಗೆ ಮಂಗಳಾರತಿ ಮಾಡಿದ ನೆಟ್ಟಿಗರು..!
ಬೆಂಗಳೂರು : ಸಾಮಾಜಿಕ ಜಾಲತಾಣಗಳೆ ಹಾಗೇ. ಸುದ್ದಿ ಮಾದ್ಯಮಗಳಿಗಿಂತಲೂ ವೇಗವಾಗಿ ಸದ್ದು ಮಾಡುತ್ತಿವೆ. ಯಾವುದಾದರೂ ಒಂದು ವಿಚಾರ ತಗೊಂಡರೆ ಭಾರೀ ಚರ್ಚೆಗೆ ಒಳಗಾಗುತ್ತಲೇ ಇರುತ್ತದೆ. ಇದೀಗ ಸಾಮಾಜಿಕ ಜಾಲ ತಾಣದಲ್ಲಿ ನಮ್ಮ ಜನ ಪ್ರೀಯ ತಿಂಡಿಗಳಲ್ಲಿ ಒಂದಾದ ಇಡ್ಲಿ ಸುದ್ದಿ.
ಬ್ರಿಟಿಷ್ ಪ್ರಾಧ್ಯಾಪಕರೊಬ್ಬರು ಇಡ್ಲಿ ಬಲೇ ಬೋರ್ ಹೊಡೆಸುವ ತಿನಿಸು ಎಂದಿದ್ದಾರೆ. ಇದು ದೇಶದ ಟ್ವಿಟ್ಟಿಗರ ಅಸಹನೆಗೆ ಕಾರಣವಾಗಿದ್ದು ಆತನನ್ನು ಹಿಗ್ಗಾಮುಗ್ಗಾ ತರಾಟೆಗೆ ತಗೊಂಡಿದ್ದಾರೆ. ಆನ್ಲೈನ್ ಫುಡ್ ಡೆಲಿವರಿ ದಿಗ್ಗಜ ಝೊಮ್ಯಾಟೋ ಇತ್ತೀಚೆಗೆ ತನ್ನ ಫಾಲೋವರ್‌ಗಳನ್ನು, “ಯಾವ ತಿನಿಸನ್ನು ಜನ ಏಕೆ ಸಿಕ್ಕಾಪಟ್ಟೆ ಇಷ್ಟ ಪಡುತ್ತಾರೆ” ಎಂದು ಕೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ಬ್ರಿಟಿಷ್ ಮೂಲದ ಇತಿಹಾಸ ಪ್ರಾಧ್ಯಾಪಕ ಹಾಗೂ ಭಾರತ-ಬ್ರಿಟನ್ ಅಧ್ಯಯನದ ತಜ್ಞ ಎಡ್ವರ್ಡ್ ಆಂಡರ್ಸನ್, “ಜಗತ್ತಿನಲ್ಲೇ ಅತ್ಯಂತ ಬೋರಿಂಗ್ ತಿನಿಸೆಂದರೆ ಇಡ್ಲಿ” ಎಂದಿದ್ದಾರೆ. ಈ ವಿಚಾರದ ದಕ್ಷಿಣ ಭಾರತೀಯರಿಗೆಲ್ಲಾ ಭಾರೀ ಅಸಹನೆ ತಂದಿದ್ದು, ಟ್ವಿಟ್ಟರ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿ ಆತನನ್ನು ತರಾಟೆಗೆ ತಗೊಂಡಿದ್ದಾರೆ.
ಸಂಸದ ಶಶಿ ತರೂರ್ ಕೂಡ ಆತತನ್ನು ತರಾಟೆಗೆ ತಗೊಂಡು ಖಾರವಾಗಿ ಟ್ವೀಟ್ ಮಾಡಿದ್ದಾರೆ. “ನಾಗರೀಕತೆ ಎನ್ನುವುದನ್ನು ಕಲಿಯುವುದು ಕಷ್ಟ. ಇಡ್ಲಿಯ ರುಚಿ ಹಿಡಿಯುವುದು, ಕ್ರಿಕೆಟ್ ಎಂಜಾಯ್ ಮಾಡುವುದು ಹೇಗೆಂದು ಪ್ರತಿಯೊಬ್ಬ ಮಾನವನಿಗೂ ಬರುವುದಿಲ್ಲ. ಈ ಬಡ ಮನುಷ್ಯನನ್ನು ನೋಡಿದರೆ ಅಯ್ಯೋ ಎನಿಸುತ್ತದೆ, ಆತನಿಗೆ ಜೀವನವೆಂದರೇನೆಂದು ಅರ್ಥವಾಗುವುದೇ ಇಲ್ಲ ಎನಿಸುತ್ತದೆ” ಎಂದು ತರೂರ್ ಟ್ವೀಟ್ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಷಯ ಗಂಭೀರವಾಗಿ ಹೋಗುತ್ತಿರುವುದನ್ನು ಮನಗಂಡ ಎಡ್ವರ್ಡ್ ಕೂಡಲೇ ತಮ್ಮ ಮಾತಿಗೆ ಸ್ಪಷ್ಟನೆ ಕೊಟ್ಟು,”ದಕ್ಷಿಣ ಭಾರತೀಯರೆಲ್ಲಾ ನನ್ನ ಮೇಲೆ ದಾಳಿ ಮಾಡುವ ಮುನ್ನ ದಯವಿಟ್ಟು ಈ ವಿಷಯ ತಿಳಿಯಿರಿ, ದೋಸೆ ಮತ್ತು ಅಪ್ಪಂ ಎಂದರೆ ನನಗೆ ಇಷ್ಟವಾಗುತ್ತದೆ. ಆದರೆ ಇಡ್ಲಿ ಹಾಗೂ ಪುಟ್ಟು ಎಂದರೆ ಸಹಿಸುವುದು ಕಷ್ಟ” ಎಂದಿದ್ದಾರೆ.
https://twitter.com/PonnathPuraaNa/status/1314090070219997184?s=20