Connect with us

LATEST NEWS

ಕಾಂಗ್ರೆಸ್ ಪಕ್ಷಕ್ಕೆ ಬ್ರಿಜೇಶ್ ಕಾಳಪ್ಪ ರಾಜೀನಾಮೆ

Published

on

ಬೆಂಗಳೂರು: ಕಾಂಗ್ರೆಸ್ ಪಕ್ಷದ ವಕ್ತಾರ ಹಾಗೂ ಸುಪ್ರೀಂ ಕೋರ್ಟ್‌ ವಕೀಲ ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್‌ಗೆ ಗುಡ್‌ ಬೈ ಹೇಳಿದ್ದಾರೆ.

ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕಾಳಪ್ಪ ಅವರು ರಾಜೀನಾಮೆ ಪತ್ರವನ್ನು ಕಳಿಸಿದ್ದು, ವೈಯಕ್ತಿಕ ಕಾರಣಗಳಿಂದ ಪಕ್ಷ ತೊರೆಯುವುದಾಗಿ ತಿಳಿಸಿದ್ದಾರೆ.


ಬ್ರಿಜೇಶ್ ಕಾಳಪ್ಪ ಅವರು ಕಾಂಗ್ರೆಸ್ ವಕ್ತಾರರಾಗಿಯೂ ಹಾಗೂ ಕಾನೂನು ಸಲಹೆಗಾರರಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು. ಈ ಹಿಂದೆ ಲೋಕಸಭೆ ಚುನಾವಣೆಗೂ ಕೊಡಗು ಮೈಸೂರು ಕ್ಷೇತ್ರದಿಂದ ಸ್ಪರ್ಧೆ ನಡೆಸಲು ಪ್ರಯತ್ನ ನಡೆಸಿದ್ದರು.

ಇತ್ತೀಚೆಗೆ ಇದೀಗ ವಿಧಾನಪರಿಷತ್‌ ಟಿಕೆಟ್‌ಗೂ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ ಎಂಬ ಅಸಮಾಧಾನ ರಾಜೀನಾಮೆಗೆ ಕಾರಣ ಆಗಿರಬಹುದು ಎಂದು ಹೇಳಲಾಗುತ್ತಿದೆ.

ಸೋನಿಯಾ ಗಾಂಧಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಏನಿದೆ?
‘ಪಕ್ಷದಲ್ಲಿ ನನಗೆ ಹಲವು ಅವಕಾಶಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ. 2013 ರಿಂದ ನಾನು ರಾಷ್ಟ್ರೀಯ ಹಾಗೂ ವಿವಿಧ ಮಾಧ್ಯಮಗಳಲ್ಲಿ ಕಾಂಗ್ರೆಸ್ ವಕ್ತಾರನಾಗಿ ಪಕ್ಷವನ್ನು ಸಮರ್ಥನೆ ಮಾಡಿಕೊಂಡಿದ್ದೇನೆ.

ಸುಮಾರು 6497 ಮಾಧ್ಯಮ ಚರ್ಚೆಗಳಲ್ಲಿ ಭಾಗಿಯಾಗಿದ್ದೇನೆ. ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ಆದರೆ ಇತ್ತೀಚಿನ ದಿನಗಳಲ್ಲಿ ನಾನು ಈ ವಿಚಾರವಾಗಿ ನಿರಾಸಕ್ತನಾಗಿದ್ದೇನೆ.

ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆಯನ್ನು ನೀಡುತ್ತೇನೆ. ಈ ಮೂಲಕ 1997 ರಿಂದ ಆರಂಭವಾದ ನನ್ನ ಕಾಂಗ್ರೆಸ್ ಪಕ್ಷದಲ್ಲಿನ ಪಯಣವನ್ನು ಕೊನೆಗೊಳಿಸುತ್ತೇನೆ’ ಎಂದು ಬ್ರಿಜೇಶ್ ಕಾಳಪ್ಪ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

LATEST NEWS

ಬಾಲಿವುಡ್‌ ನಟ ಸುದೀಪ್ ಪಾಂಡೆ ವಿಧಿವಶ

Published

on

ಮಂಗಳೂರು/ಮುಂಬಯಿ : ಭೋಜ್‌ಪುರಿ ಚಿತ್ರರಂಗದ ನಟ ಸುದೀಪ್‌ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುದೀಪ್‌ ಪಾಂಡೆ ತೀವ್ರ ಎದೆನೋವಿನಿಂದ ಬಳಲಿದ್ದ ಕಾರಣ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಸುದೀಪ್‌ ಪಾಂಡೆ ಭೋಜಪುರಿ ಸಿನಿಮಾರಂಗ ಮಾತ್ರವಲ್ಲದೇ, ಹಿಂದಿ ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ನಟನಾಗಿ, ನಿರ್ದೇಶಕರಾಗಿ ಕೂಡಾ ಕೆಲಸ ಮಾಡಿದ್ದಾರೆ.

ಖೂನಿದಂಗಲ್‌, ಭೋಜ್‌ಪುರಿ ಭಯ್ಯಾ, ಬಹಿನಿಯಾ ಸೇರಿ ಹಲವು ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಸಿನಿ ರಂಗಕ್ಕೆ ಎಂಟ್ರಿ ನೀಡುವ ಮೊದಲು ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿ ಕೆಲಸ ಮಾಡುತ್ತಿದ್ದರು.

Continue Reading

LATEST NEWS

ಗುರು ಗೋಪನ್ ಸ್ವಾಮಿಯ ಸಮಾಧಿ ತೆರೆಯಲು ಹೈಕೋರ್ಟ್ ಅಸ್ತು

Published

on

ಮಂಗಳೂರು/ತಿರುವನಂತಪುರ : ಸ್ವಯಂ ಘೋಷಿತ ಗುರು ಗೋಪನ್ ಸ್ವಾಮಿಯ “ಸಮಾಧಿ” ವಿಚಾರವಾಗಿ ಕೇರಳ ಹೈಕೋರ್ಟ್ ಬುಧವಾರ ಕಾಂಕ್ರಿಟ್ ಚೇಂಬರ್ ಅನ್ನು ತೆರೆಯಲು ಅನುಮತಿ ನೀಡಿದೆ.

ತಿರುವನಂತಪುರ ಜಿಲ್ಲೆಯ ನೆಯ್ಯತ್ತಿಂಕರದಲ್ಲಿನ ಗೋಪನ್ ಕಳೆದ ಶುಕ್ರವಾರ ಕಾಣೆಯಾಗಿದ್ದಾರೆ ಎನ್ನಲಾಗಿತ್ತು. ಗೋಪನ್ ಸ್ವಾಮಿಗಳ ಮಕ್ಕಳಾದ ಸನಂದನ್ ಮತ್ತು ರಾಜಸೇನನ್ ಅವರು ಸ್ಥಳೀಯ ಸಮುದಾಯ ಅಥವಾ ಸಂಬಂಧಿಕರಿಗೆ ತಿಳಿಸದೆ ತಮ್ಮ ತಂದೆಯನ್ನು ನೆಯ್ಯಟಿಂಕರಾದ ದೇವಸ್ಥಾನದ ಬಳಿ ಸಮಾಧಿ ಮಾಡಿದ ನಂತರ ಈ ವಿವಾದ ಭುಗಿಲೆದ್ದಿತ್ತು.

ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ

ಈ ಬಗ್ಗೆ ಗೋಪನ್ ಅವರ ಮಕ್ಕಳು, ‘ತಮ್ಮ ತಂದೆ ಕುಳಿತ ಭಂಗಿಯಲ್ಲಿ ಧ್ಯಾನ ಮಾಡುತ್ತಿದ್ದಾಗ ನಿಧನರಾದರು ಮತ್ತು ಅವರ ಸಾವಿಗೆ ಯಾರಿಗೂ ಕೂಡ ಅವಕಾಶ ನೀಡದಂತೆ ಸೂಚನೆ ನೀಡಿದ್ದರು’ ಎಂದು ಹೇಳಿದ್ದಾರೆ. ನಂತರ ಗೋಪನ್ ಅವರ ಸಮಾಧಿಯ ಕುರಿತ ಪೋಸ್ಟರ್ ಗಳನ್ನು ಕುಟುಂಬದವರು ಹಾಕಿದ್ದರು. ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದ್ದರಿಂದ ಪೊಲೀಸರು ತನಿಖೆ ಆರಂಭಿಸಿದ್ದರು.

ಹಾಗಾಗಿ ಕಂದಾಯ ಅಧಿಕಾರಿಯ ಆದೇಶ ಪತ್ರದೊಂದಿಗೆ ಪೊಲೀಸರು ತಪಾಸಣೆಗೆ ಮುಂದದಾಗ ಕುಟುಂಬವು ಆಕ್ಷೇಪ ವ್ಯಕ್ತಪಡಿಸಿತ್ತು. ಕೆಲವು ಹಿಂದೂ ಸಂಘಟನೆಗೆಳೂ ಕುಟುಂಬದ ಪರ ನಿಂತಿದ್ದವು.
ಜತೆಗೆ ಪೊಲೀಸರು ತಪಾಸಣೆಗೆ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಸಮಾಧಿ ತೆರೆಯಲು ಪೊಲೀಸರಿಗೆ ಅನುಮತಿ ನೀಡಿದೆ.

Continue Reading

DAKSHINA KANNADA

ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಆಮಿಷ; ಇಬ್ಬರು ಆರೋಪಿಗಳ ಸೆರೆ

Published

on

ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭ ಬರುತ್ತದೆ ಎಂಬ ಆಮಿಷ ಒಡ್ಡಿ ಸೈಬರ್ ಮೂಲಕ ವಂಚಿಸಿದ ಪ್ರಕರಣವೊಂದನ್ನು ಮಂಗಳೂರು ಸೆನ್‌ ಕ್ರೈಮ್‌ ಪೊಲೀಸರು ಬೇಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೇರಳದ ಕಣ್ಣೂರಿನ ಪತಾಯಕುನ್ನು ಉಮ್ಮರ್ ವಲಿಯ ಪರಂಬತ್ (41) ಮತ್ತು ರಿಯಾಝ್ ಎಂ.ವಿ. (45) ಬಂಧಿತ ಆರೋಪಿಗಳು ಶೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿದರೆ ಹೆಚ್ಚಿನ ಲಾಭಾಂಶ ಪಡೆಯ ಬಹುದು ಎಂಬ ವಾಟ್ಸ್‌ಆ್ಯಪ್ ಸಂದೇಶವನ್ನು ಗಮನಿಸಿದ ಮಂಗಳೂರಿನ ವ್ಯಕ್ತಿಯೊಬ್ಬರು ಹಂತ ಹಂತವಾಗಿ 77,96,322.08 ರೂ.ವನ್ನು ಪಾವತಿಸಿದ್ದರು.

ಆದರೆ ಆರೋಪಿಗಳು ಲಾಭಾಂಶ ನೀಡದೆ ವಂಚಿಸಿದ್ದರು. ಈ ಬಗ್ಗೆ ಹಣ ಕಳೆದುಕೊಂಡ ವ್ಯಕ್ತಿ ಮಂಗಳೂರು ಸೆನ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಅದರಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ರಸ್ತೆ ಬದಿ ನಿಲ್ಲಿಸಿದ್ದ ಸ್ಕೂಟರಿಗೆ ಕಾರು ಢಿಕ್ಕಿ; ಸವಾರ ದುರ್ಮರಣ

ವ್ಯಕ್ತಿಯಿಂದ ಪಾವತಿಯಾಗಿದ್ದ ಹಣದ ವಿವರಕ್ಕೆ ಸಂಬಂಧಿಸಿ ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಗೆ 26,27,114.4 ರೂಪಾಯಿ ವರ್ಗಾವಣೆಯಾಗಿರುವುದು ಹಾಗೂ ಬಳಿಕ ಈ ಖಾತೆಯಿಂದ ಉಮರ್ ವಲಿಯ ಪರಂಬತ್ ಎಂಬಾತನ ಬ್ಯಾಂಕ್ ಖಾತೆಗೆ 6 ಲಕ್ಷ ರೂ. ಪಾವತಿಯಾಗಿರುವುದು ಕಂಡು ಬಂತು.

ತನಿಖೆ ಕೈಗೊಂಡಾಗ ರಿಯಾಝ್ ಎಂ.ವಿ. ಎಂಬಾತನು ಹಣವನ್ನು ವರ್ಗಾವಣೆ ಮಾಡಿಸಿದ್ದ. ಹೀಗೆ ಈ ಪ್ರಕರಣದಲ್ಲಿ ಭಾಗಿಯಾದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಸೆನ್ ಪೊಲೀಸ್‌ ಠಾಣಾಧಿಕಾರಿಯೂ ಆಗಿರುವ ಎಸಿಪಿ ರವೀಶ್ ನಾಯಕ್, ಇನ್ಸ್ ಪೆಕ್ಟರ್‌ ಸತೀಶ್ ಎಂ.ಪಿ., ಸಬ್ ಇನ್ಸ್ ಪೆಕ್ಟರ್‌ ಗುರಪ್ಪಕಾಂತಿ ನೇತೃತ್ವದ ತಂಡವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು

Continue Reading

LATEST NEWS

Trending

Exit mobile version