Monday, January 24, 2022

ಫಸ್ಟ್‌ನೈಟ್‌ನಲ್ಲಿ ಟೆರೇಸ್‌ ಹಾರಿ ಓಡಿ ಹೋದ ನವವಧು

ಭೋಪಾಲ್: ಫಸ್ಟ್ ನೈಟ್ ದಿನ ವಧು ಟೆರೇಸ್‍ನಿಂದ ಹಾರಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ ನಡೆದಿದೆ.


ಸೋನು ಜೈನ್ ಎಂಬ ಯುವಕ ಮದುವೆಯಾಗಲು ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದನು. ಹುಡುಗಿಗಾಗಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವರೇ ಆದ ಉದಲ್ ಖಾತಿಕ್ ಹುಡುಗಿಯನ್ನು ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾರೆ. ಮದುವೆಯಾಗಲು ಹುಡಗಿ ಹುಡುಕಿ ಸೋತಿದ್ದ ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ. ನಂತರ ಉದಲ್ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾನೆ. ಆಕೆಯ ಚೆಲುವನ್ನು ನೋಡಿ ಸೋನು ಮತ್ತು ಆತನ ಪೋಷಕರು ಮದುವೆಗೆ ಒಪ್ಪಿಕೊಂಡಿದ್ದಾರೆ. ಒಂದು ಲಕ್ಷ ರೂಪಾಯಿಗಳನ್ನೂ ಆಕೆಗೆ ನೀಡಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆಯಾಗಿದೆ.

ಫಸ್ಟ್ ನೈಟ್‍ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಯಾಕೋ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಎಷ್ಟೂ ಹೊತ್ತಾದರೂ ಆಕೆ ಬದರೆ ಇದ್ದಾಗ ವರ ಹೋಗಿ ನೋಡಿದ್ದಾನೆ. ಆಗ ಆಕೆ ಅಲ್ಲಿ ಇರಲಿಲ್ಲ. ಎಲ್ಲಡೆ ಹುಡುಕಿದರೂ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಆಕೆ ಹಣಕ್ಕಾಗಿ ಈ ರೀತಿ ಮೋಸ ಮಾಡಿರುವುದು ತಿಳಿದುಬಂದಿದೆ. ಈ ವಿಚಾರವಾಗಿ 5 ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Hot Topics

ಕಿನ್ನಿಗೋಳಿ ಶಾಂಭವಿ ನದಿಯಲ್ಲಿನ ಅಕ್ರಮ ಮರಳುಗಾರಿಕೆ ಅಡ್ಡೆಗೆ ಅಧಿಕಾರಿಗಳ ದಾಳಿ..!

ಮಂಗಳೂರು : ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಮಂಗಳೂರು ಗಣಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.ಇಲ್ಲಿನ ಶಾಂಭವಿ ನದಿಯಲ್ಲಿ ಕಳೆದ ಹಲವು ವರ್ಷಗಳಿಂದ ರಾತ್ರಿ ಹಗಲೆನ್ನದೆ...

ಮಂಗಳೂರಿನ ಕುವರಿ ರೆಮೊನಾ ಇವೆಟ್ಟಾ ಪಿರೇರಾಗೆ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ

ಮಂಗಳೂರು: ಈ ಬಾರಿಯ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲಪುರಸ್ಕಾರ ಪ್ರಶಸ್ತಿ ಮಂಗಳೂರಿನ ರೆಮೊನಾ ಇವೆಟ್ಟಾ ಪಿರೇರಾ ಅವರಿಗೆ ದೊರೆತಿದೆ.ಸಾಂಸ್ಕೃತಿಕ ರಂಗದಲ್ಲಿ ಮಾಡಿದ ಸಾಧನೆಗೆ ಈ ಗೌರವ ಲಭಿಸಿದ್ದು, ಪುರಸ್ಕಾರವು ಒಂದು ಲಕ್ಷ ಮೊತ್ತ,...

ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಸುನೀಲ್‌ ಕುಮಾರ್‌-ಉಡುಪಿಗೆ ಅಂಗಾರ ನೇಮಕ

ಮಂಗಳೂರು: ದಕ್ಷಿಣ ಕನ್ನಡ ಉಸ್ತುವಾರಿ ಸಚಿವರಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸುನೀಲ್‌ ಕುಮಾರ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಲ್ಲಾ ಜಿಲ್ಲೆಗಳ...