Monday, October 18, 2021

‘ಪ್ಲೀಸ್‌ ನನ್ನ ಗೆಲ್ಲಿಸಿ, ಇಲ್ಲದಿದ್ದರೆ ಕೊಲೆಯಾಗುತ್ತೇನೆ’ ಎಂದು ಗೋಗರೆದ ಬ್ರೆಜಿಲ್‌ ಅಧ್ಯಕ್ಷ

ಬ್ರೆಜಿಲ್‌: ದಯವಿಟ್ಟು ನನ್ನನ್ನು ಗೆಲ್ಲಿಸಿ, ಇಲ್ಲದೇ ಹೋದರೆ ನಾನು ಕೊಲೆಯಾಗುತ್ತೇನೆ.ನನಗೆ ಇರುವುದು ಮೂರು ಆಯ್ಕೆ.

ಗೆಲ್ಲಬೇಕು, ಇಲ್ಲವೇ ಕೊಲೆಯಾಗಬೇಕು, ಒಂದು ವೇಳೆ ಕೊಲೆಯಾಗದಿದ್ದರೂ ನನ್ನನ್ನು ಅರೆಸ್ಟ್‌ ಮಾಡ್ತಾರೆ. ಆದ್ದರಿಂದ ನನ್ನನ್ನು ಗೆಲ್ಲಿಸಿ.
ಹೀಗೆಂದು ಗೋಗರೆಯುತ್ತಿರುವವರು ಬ್ರೆಜಿಲ್‌ನ ವಿವಾದಿತ ಅಧ್ಯಕ್ಷ ಎಂದೇ ಹೆಸರುವಾಸಿಯಾಗಿರುವ ಬೋಲ್ಸೊನಾರೊ.

ಸದಾ ಒಂದಿಲ್ಲೊಂದು ಹೇಳಿಕೆ ಕೊಡುತ್ತಾ ವಿವಾದ ಸೃಷ್ಟಿಸುತ್ತಿರುವ ಬೋಲ್ಸೊನಾರೊ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

2022ರ ಅಕ್ಟೋಬರ್ 2ರಂದು ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ತಮ್ಮನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿಕೊಂಡಿರುವ ಪರಿ ಇದು.
ಚುನಾವಣೆಯ ಹಿನ್ನೆಲೆ ಏರ್ಪಡಿಸಿದ್ದ ಸಭೆಯಲ್ಲಿ ತಮ್ಮದೇ ಪಕ್ಷದ ನಾಯಕರ ಎದುರು ಈ ಮಾತನ್ನು ಅವರು ಹೇಳಿದ್ದಾರೆ.

ತಾವು ಗೆಲ್ಲದೇ ಹೋದರೆ ವಿರೋಧಿಗಳು ತಮ್ಮನ್ನು ಕೊಲೆ ಮಾಡುತ್ತಾರೆ, ಇಲ್ಲವೇ ಅವರು ವಿನಾ ಕಾರಣ ತಮ್ಮನ್ನು ಯಾವುದಾದರೂ ಕೇಸ್‌ನಲ್ಲಿ ಸಿಲುಕಿಸಿ ಅರೆಸ್ಟ್‌ ಮಾಡುತ್ತಾರೆ ಎನ್ನುವುದು ಈ ಅಧ್ಯಕ್ಷರ ಆರೋಪ.

2018ರಲ್ಲಿ ಮೋಸ ನಡೆದಿತ್ತು. ಮತಯಂತ್ರ ಸರಿಯಿರಲಿಲ್ಲ. ಆದರೂ ಹೇಗೆ ನಾನು ಗೆಲ್ಲಲು ಸಾಧ್ಯವಾಗಿದೆ. ಈಗ ಮತ್ತ ಎಡವಟ್ಟಾಗುವ ಸಾಧ್ಯತೆ ಇದ್ದು, ಏನಾದರೂ ಮಾಡಿ ನನ್ನನ್ನು ಗೆಲ್ಲಿಸಿ ಎಂದಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...