Connect with us

FILM

ಸುಶಾಂತ್​ ಸಿಂಗ್​ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ..!

Published

on

ಸುಶಾಂತ್​ ಸಿಂಗ್​ ಸಾವಿನ ಪ್ರಕರಣ: ರಿಯಾ ಚಕ್ರವರ್ತಿ ಬಂಧಿಸಿದ ಎನ್‌ಸಿಬಿ..! 

ಮುಂಬೈ : ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇಂದು ಮೂರನೇ ದಿನ ರಿಯಾ ಎಂದಿನಂತೆ ಎನ್​ಸಿಬಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಸುಶಾಂತ್​ ಸಾವಿನ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ರಿಯಾ ಸೇರಿದಂತೆ ಸಾಕಷ್ಟು ಮಂದಿಯನ್ನು ಸಿಬಿಐ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಇದೇ ವೇಳೆ ರಿಯಾಗೆ ಡ್ರಗ್​ ಜಾಲದೊಂದಿಗೆ ಸಂಪರ್ಕವಿದೆ ಎಂದು ಅನುಮಾನಿಸಲಾಗಿತ್ತು. ಅಲ್ಲದೆ ಡ್ರಗ್ಸ್​ ಬಗ್ಗೆ ರಿಯಾ ಅವರ ಮೊಬೈಲ್​ನಲ್ಲಿ ನಡೆಸಲಾಗಿದ್ದ ಸಂಭಾಷಣೆ ಯ ದಾಖಲೆ ಹೊರ ಬಿದ್ದಿತ್ತು.

ಇದೇ ಕಾರಣದಿಂದ ಮಾದಕ ವಸ್ತು ನಿಯಂತ್ರಣ ಸಂಸ್ಥೆ (ಎನ್​ಸಿಬಿ) ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ಇಂದು ಮೂರನೇ ದಿನ ರಿಯಾ ಎಂದಿನಂತೆ ಎನ್​ಸಿಬಿ ನಡೆಸುತ್ತಿರುವ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನಟಿ ರಿಯಾ ಅವರನ್ನು ಎನ್​ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಅದಕ್ಕೂ ಮೊದಲು ಇದೇ ಪ್ರಕರದಲ್ಲಿ ರಿಯಾ ಅವರ ಸಹೋದರ ಶೋವಿಕ್​ , ಸುಶಾಂತ್ ಮನೆಯಲ್ಲಿ ಕೆಲಸಕ್ಕಿದ್ದ ದೀಪೇಶ್​ ಸಾವಂತ್​ ಹಾಗೂ ಸುಶಾಂತ್​ ಅವರ ಮನೆಯ ವ್ಯವಸ್ಥಾಪಕ ಸ್ಯಾಮುಯೆಲ್​ ಮಿರಾಂಡ ಅವರನ್ನು ಎನ್​ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿ ವಶಕ್ಕೆ ಪಡೆದಿದ್ದರು.

ಸದ್ಯಕ್ಕೆ ರಿಯಾ ಅವರನ್ನು ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯಲಾಗಿದೆ. ರಿಯಾ ಅವರನ್ನು ಭಾನುವಾರ ಸತತ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು.

ನಂತರ ಸೋಮವಾರ 8 ಗಂಟೆ ಹಾಗೂ ಇಂದು ಅಂದರೆ ಮಂಗಳವಾರ 5 ಗಂಟೆಗಳ ಕಾಲ ಎನ್​ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಇದಾದ ನಂತರ ರಿಯಾ ಅವರನ್ನು ಬಂಧಿಸಲಾಗಿದೆ.

ರಿಯಾ, ವಿಚಾರಣೆ ವೇಳೆ ಬಾಲಿವುಡ್​ನಲ್ಲಿ ಡ್ರಗ್​ ಮಾಫಿಯಾ ಜೊತೆ ನಂಟು ಹೊಂದಿರುವ ಹಲವಾರು ಸೆಲೆಬ್ರಿಟಿಗಳ ಹೆಸರನ್ನು ಬಾಯಿಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಈ ಕುರಿತಾಗಿ ಎನ್​ಸಿಬಿ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡಿಲ್ಲ. ರಿಯಾ ಚಕ್ರವರ್ತಿ ವಿರುದ್ಧ ಸಾಕ್ಷಿಗಳು ಸಿಕ್ಕಿರಬಹುದು.

ಡ್ರಗ್​ ಪೆಡ್ಲರ್​ಗಳ ಜೊತೆ ನಂಟಿರುವ ಬಗ್ಗೆ ಖಾತ್ರಿಯಾಗಿರಬೇಕು ಅದಕ್ಕೆ ರಿಯಾ ಅವರನ್ನು ಬಂಧಿಸಲಾಗಿದೆ ಎಂದು ಬಿಹಾರದ ಡಿಜಿಪಿ ಗುಪ್ತೇಶ್ವರ್​ ಪಾಂಡೆ ತಿಳಿಸಿದ್ದಾರೆ.

FILM

ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ

Published

on

ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ಚೊಚ್ಚಲ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಮಗುವಿನೊಂದಿಗೆ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಹರ್ಷಿಕಾ ಮತ್ತು ಭುವನ್ ಜೋಡಿ ಭೇಟಿ ನೀಡಿದ್ದಾರೆ.

ಮಗು ಜನಿಸಿದ ಬಳಿಕ ಕೊಲ್ಲೂರಿಗೆ ಭೇಟಿ ನೀಡುತ್ತೇನೆ ಎಂದು ಹರ್ಷಿಕಾ ದಂಪತಿ ಹರಿಸಿಕೊಂಡಿದ್ದರು. ಅದರಂತೆ ಮಗಳ ಜೊತೆ ಮೊದಲ ಬಾರಿಗೆ ಕೊಲ್ಲೂರು ದೇಗುಲಕ್ಕೆ ಭೇಟಿ ಮೂಕಾಂಬಿಕೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇನ್ನೂ 2023ರ ಆಗಸ್ಟ್ 24ರಂದು ಕೊಡಗಿನಲ್ಲಿ ಹರ್ಷಿಕಾ ಮತ್ತು ಭುವನ್ ಹೊಸ ಬಾಳಿಗೆ ಕಾಲಿಟ್ಟರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು. ಈ ಮದುವೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಪೂಜಾ ಗಾಂಧಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

ಕಳೆದ ವರ್ಷ ಅಕ್ಟೋಬರ್ 3ರಂದು ಹೆಣ್ಣು ಮಗುವಿಗೆ ನಟಿ ಜನ್ಮ ನೀಡಿದರು. ಮಗಳ ಪಾಲನೆಯಲ್ಲಿ ಬ್ಯುಸಿಯಿರುವ ಹರ್ಷಿಕಾ ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ.

Continue Reading

FILM

ಶಾರುಖ್ ಪತ್ನಿ ಗೌರಿ ಮತಾಂತರ?

Published

on

ಮಂಗಳೂರು/ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಶಾರುಖ್ ಖಾನ್, ಪತ್ನಿ ಗೌರಿ ಖಾನ್ ಮತ್ತು ಮಗ ಆರ್ಯನ್ ಖಾನ್ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಅದರಲ್ಲಿ ಜ. 1ರಂದು ಹೊಸ ವರ್ಷಕ್ಕೆ ಶಾರುಖ್, ಪತ್ನಿ ಗೌರಿ ಖಾನ್, ಮಗ ಆರ್ಯನ್ ಖಾನ್ ಇಸ್ಲಾಂನ ಪವಿತ್ರ ಧಾರ್ಮಿಕ ಸ್ಥಳ ಮೆಕ್ಕಾಗೆ ತೆರಳಿದ್ದಾರೆ. ಗೌರಿ ಅವರು ಇಸ್ಲಾಂಗೆ ಮತಾಂತರ ಆಗಿದ್ದಾರೆ ಎನ್ನುವಂತೆ ಫೋಟೋ ವೈರಲ್ ಆಗಿತ್ತು.

ಆದರೆ ಬಳಿಕ ಇದು ಫೇಕ್ ಎಂದು ತಿಳಿದು ಬಂದಿದೆ. ಈ ಫೋಟೋವನ್ನು ಡೀಪ್ ಫೇಕ್ ಬಳಸಿ ಎಡಿಟ್ ಮಾಡಲಾಗಿದೆ.

“ಡೀಪ್ ಫೇಕ್” ಜಾಲಕ್ಕೆ ಖ್ಯಾತ ಸಿನಿ ತಾರೆಯರೆ ಸಿಲುಕುತ್ತಿದ್ದಾರೆ. ರಶ್ಮಿಕಾ ಮಂದಣ್ಣ, ಕಾಜಾಲ್, ಕತ್ರಿನಾ ಕೈಫ್, ಆಲಿಯಾ ಭಟ್ ಈಗಾಗಲೇ ಇದರ ಜಾಲಕ್ಕೆ ಸಿಲುಕಿಕೊಂಡಿದ್ದಾರೆ.

ಇದನ್ನೂ ಓದಿ: ಮೊಮ್ಮಗುವಿನ ಪಾಲನೆಗೆ ಟೆಕ್ಕಿ ಅತುಲ್ ತಾಯಿ ಮೊರೆ; ಸುಪ್ರೀಂ ನಕಾರ 

ರಶ್ಮಿಕಾ ಮಂದಣ್ಣ ಡೀಪ್ ಫೇಕ್ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕೇಂದ್ರ ಸರ್ಕಾರ ಡೀಪ್ ಫೇಕ್ ಗಳನ್ನು ಸೃಷ್ಟಿಸಿ ವೈರಲ್ ಮಾಡಿದರೆ 1 ಲಕ್ಷ ರೂ. ದಂಡ ಮತ್ತು 3 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.

ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲವೂ ವೈರಲ್ ಆಗುತ್ತವೆ. ರಾತ್ರಿ ಕಳೆದು ಬೆಳಕಾಗುವಷ್ಟರಲ್ಲಿ ಒಬ್ಬರ ಜೀವನವನ್ನೇ ಅಳಿಸುವಂತ ಶಕ್ತಿ ಈ ಇಂಟರ್ ನೆಟ್ ಗಿದೆ.

Continue Reading

FILM

ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್‌ಡೇ ಸಂಭ್ರಮ

Published

on

ನ್ಯಾಷನಲ್ ಸ್ಟಾರ್ ಯಶ್‌ಗೆ ಇಂದು (ಜ.8) 39ನೇ ವರ್ಷದ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಪತ್ನಿ ರಾಧಿಕಾ ಹಾಗೂ ಆಪ್ತರೊಂದಿಗೆ ಗೋವಾದಲ್ಲಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ್ದಾರೆ.

ಗೋವಾದಲ್ಲಿ ಮಧ್ಯರಾತ್ರಿ ಯಶ್‌ ಕೇಕ್‌ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್‌ ಮಾಡಿದ್ದಾರೆ. ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ಬರ್ತ್‌ಡೇ ಆಚರಿಸಿ ಯಶ್ ಖುಷಿಪಟ್ಟಿದ್ದಾರೆ. ನಟನ ಆಪ್ತ ಪಾನಿ ಪುರಿ ಕಿಟ್ಟಿ, KVN ಸಂಸ್ಥೆಯ ರೂವಾರಿ ವೆಂಕಟ್ ಸೇರಿದಂತೆ ಅನೇಕರು ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿ ಶುಭಕೋರಿದ್ದಾರೆ.

ಈ ಮೊದಲೇ ತಾವು ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ. ಅಭಿಮಾನಿಗಳಿಗೆ ನೀವು ಇರುವ ಕಡೆಯಿಂದಲೇ ಹಾರೈಸಿ ಎಂದು ನಟ ತಿಳಿಸಿದ್ದರು. ಆದರೆ ಇದೀಗ ‘ಟಾಕ್ಸಿಕ್‌’ ಲುಕ್‌ನಿಂದ ಫ್ಯಾನ್ಸ್‌ಗೆ ಸರ್ಪ್ರೈಸ್‌ ಕೊಟ್ಟಿದ್ದಾರೆ. ಫ್ಯಾನ್ಸ್‌ ನಿರೀಕ್ಷೆಗೆ ಅವರು ನಿರಾಸೆ ಮಾಡಿಲ್ಲ. ರಾಕಿ ಭಾಯ್ ಬರ್ತ್‌ಡೇ ಪ್ರಯುಕ್ತ 59 ಸೆಕೆಂಡ್ ಗ್ಲಿಂಪ್ಸ್ ರಿವೀಲ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಚಿತ್ರವಾಗಿದೆ. ರಿಲೀಸ್ ಆದ ಗ್ಲಿಂಪ್ಸ್‌ನಲ್ಲಿ ಕಲರ್‌ಫುಲ್ ಸೆಟ್‌ನಲ್ಲಿ ನಟನ ಸ್ಟೈಲೀಶ್ ವಾಕ್, ಹಾಟ್ ಮ್ಯಾನರಿಸಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Continue Reading

LATEST NEWS

Trending

Exit mobile version