Wednesday, October 5, 2022

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

Breaking News: ಉಡುಪಿ ಮಲ್ಪೆಯಲ್ಲಿ ತಮಿಳುನಾಡು ಮೀನುಗಾರರಿಂದ ಸ್ಥಳಿಯ ಮೀನುಗಾರಿಗೆ ಹಲ್ಲೆ ಬೋಟಿಗೆ ಹಾನಿ : ಉದ್ವಿಗ್ನ ಪರಿಸ್ಥಿತಿ..!

ಉಡುಪಿ: ಹೊರ ರಾಜ್ಯದ ಮೀನುಗಾರರು ರಾಜ್ಯದ ಕರಾವಳಿ ಪ್ರವೇಶಿಸಿ ಸ್ಥಳೀಯ ಮೀನುಗಾರರಿಗೆ ಕಿರುಕುಳ ಕೊಡುವ ಘಟನೆಗಳು ನಿತ್ಯ ನಡೆಯತ್ತಿದ್ದು, ಇದಕ್ಕೆ ಸಾಕ್ಷಿಯಾಗಿ  ಇಂದು ಉಡುಪಿಯಲ್ಲಿ ಸಂಭವಿಸಿದೆ.

ಉಡುಪಿ ಜಿಲ್ಲೆಯ ಮಲ್ಪೆ ಬಂದರಿನಲ್ಲಿ  ತಮಿಳುನಾಡು ಮೀನುಗಾರರಿಂದ ಗೂಂಡಾಗಿರಿ  ನಡೆದಿದೆ.

 

ಕಾನೂನು ಬಾಹಿರವಾಗಿ ಲೈಟ್ ಅಳವಡಿಸಿ ಆಳ ಸಮುದ್ರದಲ್ಲಿ  ಅಕ್ರಮವಾಗಿ ತಮಿಳುನಾಡು ಮೀನುಗಾರರು  ಮೀನುಗಾರಿಕೆ  ನಡೆಸ್ತಾ ಇದ್ದು ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ ಸ್ಥಳೀಯ  ಮೀನುಗಾರರ ಬೋಟಿಗೆ  ಹಾನಿ ಕೂಡ  ಮಾಡಲಾಗಿದೆ.

ತಮಿಳು ನಾಡು ಮೀನುಗಾರರ ಗೂಂಡಾಗಿರಿ ವರ್ತನೆಯನ್ನು ಖಂಡಿಸಿದ ಸ್ಥಳೀಯ ಮೀನುಗಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಡಿಡೀರ್ ಪ್ರತಿಭಟನೆಗಿಳಿದರು.

ಆಳ ಸಮುದ್ರಕ್ಕೆ ತೆರಳಿದ್ದ ಎಲ್ಲಾ ಮೀನುಗಾರಿಕಾ ಬೋಟುಗಳು ವಾಪಸಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸದ್ಯ ಸ್ಥಳಕ್ಕೆ ಕರಾವಳಿ ಕಾವಲು  ಪಡೆದ ಪೊಲೀಸ್ ಅಧಿಕಾರಿಗಳು, ಜಿಲ್ಲೆಯ ಹಿರಿಯ ಅಧಿಕಾರಿಗಳು  ಭೇಟಿ ನೀಡಿ ಪರಿಸ್ಥಿಯನ್ನು  ನಿಭಾಯಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

Breaking: ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನ..!

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಭಾರತೀಯ ಸೇನೆಯ ಚೀತಾ ಹೆಲಿಕಾಪ್ಟರ್‌ ಪತನವಾಗಿದೆ. ಇದರಲ್ಲಿದ್ದ ಓರ್ವ ಪೈಲೆಟ್‌ ಸಾವನ್ನಪ್ಪಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

‘ಮಂಗಳೂರು ದಸರಾ’ ವೈಭವದ ಶೋಭಾಯಾತ್ರೆಗೆ ಕ್ಷಣಗಣನೆ ಆರಂಭ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶರನ್ನವರಾತ್ರಿ ಅಂಗವಾಗಿ ಕಳೆದ 9 ದಿನಗಳಿಂದ ಪೂಜಿಸಲ್ಪಟ್ಟ ಶಾರದೆ ಹಾಗೂ ನವ ದುರ್ಗೆಯರ ವೈಭವದ ಶೋಭಾ ಯಾತ್ರೆ ಇಂದು ಸಂಜೆ ನಡೆಯಲಿದೆ.ಸಂಜೆ 4 ಗಂಟೆಗೆ ಶಾರದಾ...

ಎಲ್‌ಇಡಿ ಟಿ.ವಿ ಬ್ಲಾಸ್ಟ್‌..! : ಬಾಲಕ ಸಾವು-ಮನೆ ಗೋಡೆ ಕುಸಿತ

ಲಕ್ನೋ: ಎಲ್‌ಇಡಿ ಟಿ.ವಿ ಸ್ಪೋಟಗೊಂಡ ಪರಿಣಾಮ ಬಾಲಕನೊಬ್ಬ ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ.ಮೃತ ಬಾಲಕನನ್ನು ಓಮೇಂದ್ರ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಸಂದರ್ಭ ಎಲ್ ಐಡಿ ಟಿವಿ...