ಬ್ರೆಜಿಲ್ ನ ಬಿಳಿ ಕೂದಲಿನ ಈ ಪುಟ್ಟ ಪೋರಿ ಫೊಟೋ ಸಖತ್ ವೈರಲ್..!
Brazilian Baby girl Maya born with amazing head of hair..!
ಬ್ರೆಜಿಲ್ : ಬ್ರೆಜಿಲ್ ನ ಹುಡುಗಿಯೋರ್ವಳು ಹುಟ್ಟಿನಿಂದಲೇ ಬಿಳಿಕೂದಲು ಹೊಂದಿದ್ದು ಈ ಕಂದನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈದ್ಯರ ಪ್ರಕಾರ ತಿನ್ನುವ ಆಹಾರ ಹಾಗು ಇತರ ಕಾರಣಗಳು ಚಿಕ್ಕ ವಯಸ್ಸಿನಲ್ಲೇ ದೃಷ್ಟಿ ದೋಷ, ತಲೆಗೂದಲು ಸಂಪೂರ್ಣ ಉದುರುವುದು ಮತ್ತು ತಲೆಕೂದಲು ತುಂಬಾ ಸಣ್ಣ ವಯಸ್ಸಿನಲ್ಲೆ ಬಿಳಿಯಾಗಲು ಕಾರಣವಾಗಿದೆ.
ಆದರೆ ಈ ಮಗುವಿಗೆ ಹುಟ್ಟಿನಿಂದಲೇ ಬಿಳಿಕೂದಲು ಕಾಣಿಸಿಕೊಂಡಿದ್ದು ಇದು ಅನುವಂಶೀಯ ಗುಣದ ಕಾರಣದಿಂದ ತಾಯಿಗೆ ಇದ್ದ ಈ ಕೂದಲಿನ ಸಮಸ್ಯೆ ಈಗ ಕಂದನಿಗೆ ಬಂದಿದೆ ಎನ್ನಲಾಗಿದೆ.
ಬ್ರೆಜಿಲ್ ನ ಟಾಲ್ಯಾತಾ ಯೂಸೋಫ್ ಎಂಬುವವರ ಮಗಳು ಮಯಾ. ಮಯಾ ಗೆ ಹುಟ್ಟುವಾಗಲೇ ಮುಂದಲೇ ಬಿಳಿಬಣ್ಣದ ಕೂದಲು ಕಾಣಿಸಿಕೊಂಡಿದೆ.
ಪುಟ್ಟ ಕಂದ ಮತ್ತು ತಾಯಿಯ ಫೊಟೊಗಳು ಸಕತ್ ವೈರಲ್ ಆಗಿದ್ದು ವಿಶ್ವ ಪ್ರಸಿದ್ದಿ ಪಡೆದಿವೆ.