Connect with us

DAKSHINA KANNADA

ಇದೀಗ ಮಂಗಳೂರಿನ ಕಂಕನಾಡಿಯಲ್ಲಿ ಶುಭಾರಂಭಗೊಂಡಿದೆ ಹೆಸರಾಂತ ಆರ್ ಎಂ ಝಡ್ ಸಂಸ್ಥೆಯ ಶಾಖೆ..!

Published

on

ಇದೀಗ ಮಂಗಳೂರಿನ ಕಂಕನಾಡಿಯಲ್ಲಿ ಶುಭಾರಂಭಗೊಂಡಿದೆ ಹೆಸರಾಂತ ಆರ್ ಎಂ ಝಡ್ ಸಂಸ್ಥೆಯ ಶಾಖೆ..!

ಮಂಗಳೂರು: ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಆರ್‌ ಎಂ ಝಡ್‌ ಸಿವಿಲ್ ಇಂಜಿನಿಯರ್ ಮತ್ತು ಇಂಟೀರಿಯರ್ ಡಿಸೈನರ್ ಕಚೇರಿಯು ಮಂಗಳೂರಿನಲ್ಲಿ ಆರಂಭಗೊಂಡಿದೆ.ಮಂಗಳೂರಿನ ಕಂಕನಾಡಿಯ ಸಿಟಿ ಆರ್ಕೇಡ್‌ನಲ್ಲಿ ಆರಂಭಗೊಂಡ ಶಾಖೆಯನ್ನು ಮಂಗಳೂರು ಕ್ಷೇತ್ರ ಶಾಸಕ ಯು ಟಿ ಖಾದರ್ ರಿಬ್ಬನ್ ಕತ್ತರಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಬಳಿಕ ಮಾತನಾಡಿದ ಅವರು ಮಾಲಕ ಅಸ್ಮತಾಲಿ ಮತ್ತು ಅವರ ಕುಟುಂಬಸ್ಥರಾಗಿರುವ ಜಹೀರ್ ಅಹಮ್ಮದ್ ಖಾನ್‌ ಮತ್ತು ಮೊಹಮ್ಮದ್ ಸುಹೈಬ್ ತಂಡ ಆರ್ ಎಂ ಝಡ್‌ ಎಂಬ ಕನ್ಸ್ಟ್ರಕ್ಷನ್ ಕಂಪೆನಿ ಆರಂಭಿಸಿದ್ದಾರೆ.

ಬಳಿಕ ಮಾತನಾಡಿದ ಅವರು ಮಾಲಕ ಅಸ್ಮತಾಲಿ ಮತ್ತು ಅವರ ಕುಟುಂಬಸ್ಥರಾಗಿರುವ ಜಹೀರ್ ಅಹಮ್ಮದ್ ಖಾನ್‌ ಮತ್ತು ಮೊಹಮ್ಮದ್ ಸುಹೈಬ್ ತಂಡ ಆರ್ ಎಂ ಝಡ್‌ ಎಂಬ ಕನ್ಸ್ಟ್ರಕ್ಷನ್ ಕಂಪೆನಿ ಆರಂಭಿಸಿದ್ದಾರೆ.

ಸಿವಿಲ್ ಇಂಜಿನಿಯರ್ ಆಗಿದ್ದು, ಇಂಟೀರಿಯರ್ ಡಿಸೈನರ್ ಕ್ಷೇತ್ರದಲ್ಲಿ ಬೆಂಗಳೂರಿನಲ್ಲಿ ಈಗಾಗಲೇ ಆರ್ ಎಂ ಝಡ್ ಸಂಸ್ಥೆ ಪ್ರಾರಂಭಿಸಿ, ಇದೀಗ ಯೋಜನೆಯನ್ನು ಮಂಗಳೂರಿಗೂ ವಿಸ್ತರಿಸಿದ್ದು  ಸಂತೋಷದ ವಿಚಾರವಾಗಿದೆ ಎಂದರು.ವಾಣಿಜ್ಯ ಮತ್ತು ವಸತಿ ಸಮುಚ್ಛಯದಲ್ಲಿ ಈಗಾಗಲೇ ಹೆಸರಾಗಿರುವ ಕಂಪೆನಿ ಇದೀಗ ಮಂಗಳೂರಿನಲ್ಲಿ ಕಚೇರಿ ಆರಂಭಿಸಿದೆ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.

ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್,  ಸಂಸ್ಥೆಯ ಮಾಲಕರು, ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

DAKSHINA KANNADA

Sullia : ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿದ ಸರ್ಕಾರಿ ಅಧಿಕಾರಿ

Published

on

ಸುಳ್ಯ : ಸರ್ಕಾರಿ ಅಧಿಕಾರಿಯೊಬ್ಬರು ಮದ್ಯದ ನಶೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಸಾರ್ವಜನಿಕರಿಂದ ಬೈಗುಳ ತಿಂದ ಸುಳ್ಯದ ಅರಂಬೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಕಂಠಪೂರ್ತಿ ಕುಡಿದ ಮದ್ಯದ ಮತ್ತಿನಲ್ಲಿ ಸುಳ್ಯ ಅರಂಬೂರು ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ, ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಹಲವಾರು ವಾಹನಗಳಿಗೆ ಢಿಕ್ಕಿ ಆಗುವಂತಹ ಸಂಭಾವ್ಯ ದುರಂತವೊಂದು ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ತಪ್ಪಿದೆ. ರಸ್ತೆಯುದ್ದಕ್ಕೂ ವಿರುದ್ಧ ದಿಕ್ಕಿನಲ್ಲಿ, ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಪಘಾತ ಸಂಭವಿಸುವ ಸಾಧ್ಯತೆಯನ್ನು ಮನಗಂಡ ಕೆಲವು ವಾಹನ ಸವಾರರು ಸಾರ್ವಜನಿಕರ ಸಹಕಾರದಿಂದ ಅಡ್ಡಗಟ್ಟಿದ್ದಾರೆ. ಸರ್ಕಾರಿ ಅಧಿಕಾರಿಯ ಈ ವರ್ತನೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

Continue Reading

DAKSHINA KANNADA

ಉಪ್ಪಿನಂಗಡಿ:12 ಅಡಿ ಉದ್ದದ‌ ಕಾಳಿಂಗ ಸರ್ಪ ಹಿಡಿಯೋಕು ಮೀಟ್ರು ಬೇಕು

Published

on

ಉಪ್ಪಿನಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ 12 ಅಡಿ ಉದ್ದದ‌ ಕಾಳಿಂಗ ಸರ್ಪ ಪ್ರತ್ಯಕ್ಷಗೊಂಡಿತು. ಇದನ್ನು ಸೆರೆ ಹಿಡಿದ ಉರಗ ತಜ್ಞ ಕೆ. ಝಕರಿಯ್ಯ ಎಂಬುವವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಎರಡು- ಮೂರು ದಿನಗಳಿಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ನೆಲ್ಯಾಡಿಯ ಸೈಂಟ್ ಜೋಸೆಫ್ ಮಲಂಕರ ಚರ್ಚ್ ಪರಿಸರದಲ್ಲಿ ಸುತ್ತಾಡಿಕೊಂಡಿತ್ತು.

ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿಯ ಕೆ. ಝಕರಿಯಾ ಅವರು ಅಲ್ಲಿಗೆ ತೆರಳಿ ಸುಮಾರು ಒಂದು ಗಂಟೆಯಷ್ಟು ಕಾರ್ಯಾಚರಣೆಯ ಬಳಿಕ ಕಾಳಿಂಗ ಸರ್ಪವನ್ನು ಹಿಡಿದು ಸುರಕ್ಷಿತವಾಗಿ ಗುಂಡ್ಯ ಬಳಿ ದಟ್ಟಾರಣ್ಯಕ್ಕೆ ಬಿಟ್ಟಿದ್ದಾರೆ.

Continue Reading

DAKSHINA KANNADA

ಅತ್ತಾವರ ಅಪಾರ್ಟ್‌ಮೆಂಟ್‌ನಲ್ಲಿ ಆಕಸ್ಮಿಕ ಬೆಂಕಿ – ವೃದ್ಧೆ ಸಾವು..!

Published

on

ಮಂಗಳೂರು: ಮಂಗಳೂರಿನ ಅತ್ತಾವರದ ಅಪಾರ್ಟ್‌ ಮೆಂಟ್‌ವೊಂದರಲ್ಲಿ ಇಂದು ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ವೃದ್ಧೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ‌ಮಾಹಿತಿ ನೀಡಿದ್ದಾರೆ.

ಶಾಹಿನಾ ನುಸ್ಬಾ(58) ಸಾವನ್ನಪ್ಪಿದ ವೃದ್ಧೆ ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ವೃದ್ಧ ಮಹಿಳೆ ದಟ್ಟ ಹೊಗೆಯಿಂದಾಗಿ ತಕ್ಷಣ ಹೊರಬರಲಾಗದೇ ಉಸಿರುಗಟ್ಟಿ ಚಿಂತಾಜನಕ ಸ್ಥಿತಿಯಲ್ಲಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

Continue Reading

LATEST NEWS

Trending