ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ವಿವಾದ ರಾಜಕೀಯ ಶಡ್ಯಂತ್ರದ ಭಾಗ ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆರೋಪಿಸಿದೆ.
ಕಳೆದ 4 ದಿನಗಳಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು ಇದರ ಹಿಂದೆ ದೊಡ್ಡ ರಾಜಕೀಯ ಷಡ್ಯಂತ್ರ ಅಡಗಿರುವುದನ್ನು ಬಿಜೆಪಿ ಪತ್ತೆ ಮಾಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ಹೇಳಿದ್ದಾರೆ.
ಮಂಗಳೂರು ನಗರದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕೇರಳದ ಅನೇಕ ಭಾಗಗಳಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ಧ್ವಂಸ ಮಾಡಿದವರಿಗೆ ಇವತ್ತು ನಾರಾಯಣ ಗುರುಗಳ ಮೇಲೆ ಗೌರವ ಎರಡು ಪಟ್ಟು ಹೆಚ್ಚಾಗಿದೆ.
ನಾರಾಯಣ ಗುರುಗಳ ಸಮಿತಿಯು ಸಮಾಜದಲ್ಲಿ ಅನೇಕ ಬದಲಾವಣೆಗಳು ಕೆಲಸವನ್ನು ಮಾಡ್ತಾ ಇದೆ. ಆದರೆ ಕಾಂಗ್ರೆಸ್ ನಾರಾಯಣ ಗುರುಗಳ ಹೆಸರನ್ನಿಟ್ಟು ಹಿಂದೂ ಸಮಾಜದ ಏಕತೆಗೆ ಒಡೆಯುತ್ತಾ ಈ ನಾಡಿನ ಏಕೀಕರಣಕ್ಕೆ ಭಂಗ ತರ್ತಾ ಇದೆ ಎಂದು ಆರೋಪಿಸಿದ ಅವರು ಧರ್ಮದ ಪಾಠ ಕಲಿಸುವ ಕಾಂಗ್ರೆಸ್ ನಿಂದ ಧರ್ಮದ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲ ಎಂದಿದ್ದಾರೆ.