Connect with us

UDUPI

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ವಿಚಾರದಲ್ಲಿ ಸರಕಾರದ ತಾರತಮ್ಯ ನೀತಿ ಹಾಗು ಸಚಿವರುಗಳ ಸುಳ್ಳು ಭರವಸೆಗಳು

Published

on

ಉಡುಪಿ: ಸಾರ್ವಕಾಲಿಕ ಸತ್ಯನಿಷ್ಠವಾದ ಮಾನವೀಯ ಮೌಲ್ಯಗಳನ್ನು ಸಾಕಾರಗೊಳಿಸಿದ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಂತೆ ಸರ್ಕಾರವು ಪದೇ ಪದೇ ನಕಾರಾತ್ಮಕ ನಿಲುವನ್ನು ಪ್ರಕಟಿಸುತ್ತಿರುವುದು ಸಮಂಜಸವಲ್ಲ.

ಗಣರಾಜ್ಯೋತ್ಸವ ಟ್ಯಾಬ್ಲೋ ತಿರಸ್ಕಾರದ ಬಳಿಕ ಹೈಸ್ಕೂಲ್ ಪಠ್ಯಪುಸ್ತಕದಲ್ಲಿ ಗುರುಗಳ ಚಿಂತನೆಯ ಪಾಠವನ್ನು ಕೈಬಿಟ್ಟಿರುವುದರ ಕುರಿತು ಈಗಾಗಲೇ ಸಚಿವರುಗಳಿಗೆ ಮನವಿ ಸಲ್ಲಿಸಿದಾಗ ಯಾವುದೇ ಸಮಸ್ಯೆಯಾಗದಂತೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದ್ದರು‌.

ಆದರೆ ಇದು ಸುಳ್ಳಾಗಿದ್ದು ಗುರುಗಳನ್ನು ಕೇವಲ ಭಾಷಾ ಪಾಠದಲ್ಲಿ ತೋರಿಸಿ ಮೆಲ್ನೋಟಕ್ಕೆ ಎಲ್ಲವೂ ಸರಿಯಾಗಿದೆ ಎಂದು ನಂಬಿಸಿದ್ದಾರೆ.

ಗುರುಗಳ ಅನುಯಾಯಿಗಳಾದ ನಮಗೆ ಸರ್ಕಾರದ ನಡೆಯ ಕುರಿತು ತೀವ್ರ ಅಸಮಾಧಾನವಿದ್ದು ಈಗಾಗಲೇ ನೀಡಿರುವ ಮನವಿಯನ್ನು ಕಡೆಗಣಿಸಿರುವ ಕುರಿತು ಸಂಘಟನಾ ಸ್ವರೂಪದ ಹೋರಾಟಕ್ಕೆ ಮುಂದಾಗಿದ್ದೇವೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವಮಾನವೇ ಸಮಾಜ ಸುಧಾರಣೆಗೆ ಸೀಮಿತವಾಗಿರುವಾಗ ನಾವೂ ಕೂಡ ಪಕ್ಷಾತೀತವಾಗಿ ಸಮಾಜದ ಪರ ಸಮಾನಮನಸ್ಕ ನಿಲುವಿನಲ್ಲಿ ಗುರುಗಳ ಪಠ್ಯಕ್ರಮ ಈ ಹಿಂದಿನಂತೆ ಯಥಾಸ್ಥಿತಿಯಲ್ಲಿರಬೇಕೆಂದು ಬಯಸುತ್ತೇವೆ.

ಸಮಾಜದ ಎಲ್ಲಾ ಸಂಘ-ಸಂಸ್ಥೆಗಳು ಪಕ್ಷಾತೀತವಾಗಿ ವಿರೋಧಿಸಬೇಕು, ಕೇವಲ ಅಧಿಕಾರಕ್ಕೋಸ್ಕರ ಗುರುಗಳನ್ನು ಜಪಿಸುವ ಬದಲು ಯಾವ ಪಕ್ಷದ ಯಾವ ಪ್ರತಿನಿಧಿಯೆ ಆಗಲಿ ಸದ್ರಿ ಹಾಗೂ ಮುಂದೆಯೂ

ಗುರುಗಳಿಗೆ ಅವಮಾನವಾಗದಂತೆ ನಡೆಯುವುದು ಸಾಮಾಜಿಕ ಸೌಹಾರ್ದ ಸ್ಥಿತಿಗತಿಗೆ ಅತ್ಯಂತ ಅಗತ್ಯ ಎಂದು ಭಾವಿಸುತ್ತೇವೆ ಎಂದು ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಎಂ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LATEST NEWS

ಖತರ್ನಾಕ್ ಕಳ್ಳನನ್ನು ಬಂಧಿಸಿದ ಕೋಟ ಪೊಲೀಸರು; ‘ನನ್ನ ಬಗ್ಗೆ ಮಾಹಿತಿ ಬೇಕಾದ್ರೆ ಯೂಟ್ಯೂಬ್ ನೋಡಿ’ ಎಂದ ಖದೀಮ!

Published

on

ಕೋಟ : ಈತ ಅಂತಿಂಥ ಕಳ್ಳನಲ್ಲ..ಖತರ್ನಾಕ್ ಕಳ್ಳ! ಇತ್ತೀಚೆಗೆ ಕೇರಳದಿಂದ ಭಾರೀ ಮೊತ್ತದ ಚಿನ್ನಾಭರಣವನ್ನು ಕಳ್ಳತನ ಮಾಡಿ ಬಿಹಾರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಉಡುಪಿ ಜಿಲ್ಲೆಯ ಕೋಟ ಪೊಲೀಸರ ಅತಿಥಿಯಾಗಿದ್ದಾನೆ. ಬಿಹಾರ ಮೂಲದ ಮಹಮ್ಮದ್ ಇರ್ಫಾನ್‌ ಬಂಧಿತ ಆರೋಪಿ. ಬ್ರಹ್ಮಾವರ ತಾಲೂಕು ಕೋಟ ಮೂರ್ಕೈನಲ್ಲಿ ಶನಿವಾರ ರಾತ್ರಿ ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆ ಸಂದರ್ಭ ಈತ ಬಲೆಗೆ ಬಿದ್ದಿದ್ದಾನೆ. ವಿಚಾರಣೆ ವೇಳೆ ಈತನ ಕರಾಮತ್ತು ಕೇಳಿ ಪೊಲೀಸರೇ ಶಾಕ್ ಗೊಳಗಾಗಿದ್ದಾರೆ.


‘ಕೋಟಿ’ ಮೇಲೆ ಕಣ್ಣು:

ಇರ್ಫಾನ್ ಸಾಮಾನ್ಯ ಕಳ್ಳನಲ್ಲ. ಈತನ ವಿರುದ್ಧ 13 ರಾಜ್ಯಗಳಲ್ಲಿ ಹಲವಾರು ಕಳ್ಳತನ ಆರೋಪಗಳಿವೆ. ಇದರ ಜತೆಗೆ ಹಲವಾರು ಕುತೂಹಲಕಾರಿ ವಿಷಯಗಳು ಹೊರಬಿದ್ದಿವೆ. ಈತ ಈಗಾಗಲೇ ಹಲವು ಬಾರಿ ಪೊಲೀಸರ ಅತಿಥಿಯಾಗಿದ್ದು, ಸಿನಿಮಾ ನಟರು, ರಾಜಕಾರಣಿಗಳು, ಗುತ್ತಿಗೆದಾರರು ಸೇರಿದಂತೆ ಅತ್ಯಂತ ಶ್ರೀಮಂತರ ಮನೆಗಳನ್ನೇ ಹೊಂಚುಹಾಕಿ ಕಳ್ಳತನ ಮಾಡುತ್ತಿದ್ದ.

ಒಮ್ಮೆ ಕಣ್ಣಿಟ್ಟರೆ ಸಾಕು! ಎಷ್ಟೇ ದಿನಗಳಾದರೂ ಕಾದು ತನ್ನ ಕೈಚಳಕ ತೋರುತ್ತಿದ್ದ. ಹೆಚ್ಚಿನ ಬಾರಿ ಓರ್ವನೇ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದ ಹಾಗೂ ಪ್ರತಿ ಬಾರಿಯೂ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣಗಳನ್ನೇ ಲಪಟಾಯಿಸುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ : ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನ ಬ್ಯಾಗ್ ಪರಿಶೀಲಿಸಿದ ಕಸ್ಟಮ್ಸ್ ಅಧಿಕಾರಿಗಳಿಗೆ ಶಾಕ್; ಅದರಲ್ಲಿತ್ತು 10 ಅನಕೊಂಡಾ!

‘ನನ್ನ ಬಗ್ಗೆ ಯೂಟ್ಯೂಬ್ ನೋಡಿ’ ಎಂದ ಖದೀಮ :

ಕೋಟ್ಯಂತರ ರೂಪಾಯಿ ಕಳವುಗೈದು ಬಂಧಿಸಲ್ಪಟ್ಟ ಇರ್ಫಾನ್ ವಿಚಾರಣೆಗಿಳಿದ ಪೊಲೀಸರಿಗೆ ಆತನ ಹೇಳಿಕೆ ಅಚ್ಚರಿ ಹುಟ್ಟಿಸಿತ್ತು. ‘ ನನ್ನ ಬಗ್ಗೆ ಮಾಹಿತಿ ಬೇಕಾದರೆ ಯೂಟ್ಯೂಬ್‌ನಲ್ಲಿ ಮಹಮ್ಮದ್ ಇರ್ಫಾನ್ ರೋಬಿನ್‌ಹುಡ್ ಎಂದು ಸರ್ಚ್ ಮಾಡಿ’ ಎಂದಿದ್ದನಂತೆ ಈ ಖದೀಮ. ಯೂಟ್ಯೂಬ್‌ನಲ್ಲಿ ಸರ್ಚ್ ಮಾಡಿದಾಗ ಈತನ ಬಗ್ಗೆ ಇರುವ ಹತ್ತಾರು ವೀಡಿಯೋಗಳು ಸಿಕ್ಕಿವೆ. ಅದರಲ್ಲಿ ಕಳ್ಳತನ ಹಾಗೂ ಕೋಟ್ಯಂತರ ರೂ. ಮೊತ್ತವನ್ನು ಜನರಿಗೆ ಹಂಚುವ ಕುರಿತು ವಿಚಾರಗಳಿವೆ. ಇವೆಲ್ಲವನ್ನು ನೋಡಿದ ಪೊಲೀಸರಿಗೆ ಶಾಕ್ ಆಗಿದ್ದು ಸುಳ್ಳಲ್ಲ.

Continue Reading

LATEST NEWS

ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

Published

on

ಕುಂದಾಪುರ : ಬೈಕ್ ಸ್ಕಿಡ್ ಆಗಿ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಸಾ*ವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಸೀದಿ ಬಳಿ ನಡೆದಿದೆ. ಕೋಟ ಮಣೂರು ನಿವಾಸಿ ವಿಕಾಸ್ ಆಚಾರ್ಯ(22) ಮೃ*ತಪಟ್ಟ ಯುವಕ.

ಸೋಮವಾರ ರಾತ್ರಿ 1.30ರ ಸುಮಾರಿಗೆ ವಿಕಾಸ್ ಸಾಸ್ತಾನದಿಂದ ಕೋಟ ಮಣೂರು ಕಡೆ ಬರುತ್ತಿದ್ದ

ವೇಳೆ ಈ ದುರಂ*ತ ಸಂಭವಿಸಿದೆ. ಕೋಟ ಗುಜಿರಿ ಅಂಗಡಿ ಸಮೀಪ ಬೈಕ್ ನಿಯಂತ್ರಣ ತಪ್ಪಿದೆ. ಪರಿಣಾಮ ಹೆದ್ದಾರಿಯ ಡಿವೈಡರ್ ಗೆ ಡಿ*ಕ್ಕಿ ಹೊಡೆದು ಪಲ್ಟಿಯಾಗಿದೆ ಎನ್ನಲಾಗಿದೆ. ಗಂಭೀ*ರವಾಗಿ ಗಾಯಗೊಂಡ ವಿಕಾಸ್ ಸ್ಥಳದಲ್ಲೇ ಮೃ*ತಪಟ್ಟಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

Continue Reading

DAKSHINA KANNADA

ಮಲ್ಪೆ ಬೀಚ್‌ನಲ್ಲಿ ಮುಳುಗಿ ಯುವಕ ಮೃತ್ಯು.. ಮಂಡ್ಯ ಯುವಕನ ದುರಂತ ಅಂತ್ಯ..!

Published

on

ಉಡುಪಿ: ಮಲ್ಪೆ ಬೀಚ್‌ಗೆ ಪ್ರವಾಸಕ್ಕೆಂದು ಬಂದಿದ್ದ ಯುವಕನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಭಾನುವಾರ(ಎ.21) ನಡೆದಿದೆ.  ಮಂಡ್ಯ ಮೂಲದ 21 ವರ್ಷದ ನಾಗೇಂದ್ರ ಪ್ರಸಾದ್‌ ಜಿ. ಆರ್‌. ಮೃತ ಯುವಕ. ನಾಗೇಂದ್ರ ಬೆಂಗಳೂರಿನ ವಿಧಾನಸೌಧದಲ್ಲಿ ಲಿಫ್ಟ್‌ ಅಪರೇಟರ್‌ ಅಗಿದ್ದರು ಎನ್ನಲಾಗಿದೆ.

death

READ MORE..; ‘ಬಘೀರ’ ಸಿನೆಮಾ ಶೂಟಿಂಗ್ ವೇಳೆ ಅವಘಡ.. ರೋರಿಂಗ್ ಸ್ಟಾರ್ ಆಸ್ಪತ್ರೆ ದಾಖಲು

ಒಟ್ಟು ಐವರು ಸ್ನೇಹಿತರು ರವಿವಾರ ಮಲ್ಪೆ ಬೀಚ್‌ಗೆ ಬಂದಿದ್ದಾರೆ. ಈ ವೇಳೆ ನೀರಿನಲ್ಲಿ ಆಡುತ್ತಿದ್ದಾಗ ನಾಗೇಂದ್ರ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋದರು. ತತ್‌ಕ್ಷಣ ಧಾವಿಸಿ ಬಂದ ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಕಾರ್ಯಾಚರಣೆ ನಡೆಸಿ ನಾಗೇಂದ್ರನನ್ನು ಮೇಲಕ್ಕೆತ್ತಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ಅಸ್ವಸ್ಥಗೊಂಡಿದ್ದ ಅವರು ದಾರಿ ಮಧ್ಯೆಯೇ ಕೊನೆಯುಸಿರೆಳೆದರು ಎನ್ನಲಾಗಿದೆ. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending