Connect with us

    ಶ್ರೀ ಮಹಾಮಾಯ ದೇವಸ್ಥಾನದಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ

    Published

    on

    ಶ್ರೀ ಮಹಾಮಾಯ ದೇವಸ್ಥಾನದಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ

    ಚಿತ್ರ : ಮಂಜು ನೀರೇಶ್ವಾಲ್ಯ

    ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಮಾಯ ದೇವಸ್ಥಾನದ ಬ್ರಹ್ಮ ರಥೋತ್ಸವ ವಿಜೃಂಭಣೆಯಿಂದ ಜರಗಿತು.

    ತಾ, 24-02-2020 ಸೋಮವಾರದಿಂದ ತಾ. 29-08-2020ನೇ ಶನಿವಾರದವರೆಗೆ ಕಾಲಂಪ್ರತಿ ನಡೆದು ಬರುವ ಶ್ರೀ ಬ್ರಹ್ಮ ರಥೋತ್ಸವ ಶ್ರೀ ದೇವತಾನುಗ್ರಹದಿಂದ ವಿಧಿಯುಕ್ತ ವಾಗಿ ಸಹಸ್ರಾರು ಭಜಕರ ಸಮುಖದಲ್ಲಿ ಜರಗಿತು.

    ಇಂದು ಶುಕ್ರವಾರ (ಪಂಚಮಿ) ಶ್ರೀ ಬ್ರಹ್ಮ ರಥೋತ್ಸವ ಹಗಲು 8.00ಕ್ಕೆ ಪ್ರಾರ್ಥನೆ 10.30ಕ್ಕೆ ಪಂಚಾಮೃತ ಅಭಿಷೇಕ, ಗಂಗಾಭಿಷೇಕ ಮಹಾಭಿಷೇಕ ಯಜ್ಞದಲ್ಲಿ ಪೂರ್ಣಾಹುತಿ ಆರತಿ ಮಹಾಬಲಿ 5.30ಕ್ಕೆ ರಥಪೂಜೆ, ಶ್ರೀ ಬ್ರಹ್ಮರಥಾರೋಹಣ ಬಳಿಕ ಸಮಾರಾಧನೆ ನಡೆಯಿತು .

    ವಿಡಿಯೋಗಾಗಿ..

     

    Click to comment

    Leave a Reply

    Your email address will not be published. Required fields are marked *

    LATEST NEWS

    Kambala Result: ಪಣಪಿಲ ಜಯ-ವಿಜಯ ಜೋಡುಕರೆ ಕಂಬಳ ಕೂಟದ ಫಲಿತಾಂಶ

    Published

    on

    ಮೂಡುಬಿದಿರೆ: ಕರಾವಳಿಯಲ್ಲಿ ಕಂಬಳ ಕಲರವ ಆರಂಭವಾಗಿದೆ. ಪಣಪಿಲದಲ್ಲಿ ಜಯ – ವಿಜಯ ಜೋಡುಕರೆ ಕಂಬಳ ಶನಿವಾರ (ನ.09) ನಡೆಯಿತು. 164 ಜೊತೆ ಕೋಣಗಳು ಭಾಗವಹಿಸಿದ್ದು 15ನೇ ವರ್ಷದ ಪಣಪಿಲ ಕಂಬಳವು ಭಾನುವಾರ ಬೆಳಗ್ಗೆ ಸಂಪನ್ನವಾಯಿತು.

    ಜೂನಿಯರ್‌ ಕೋಣಗಳಿಗೆ ಸೀಮಿತವಾಗಿದ್ದ ಸ್ಪರ್ಧೆಯಲ್ಲಿ ನೇಗಿಲು ಜೂನಿಯರ್‌ ವಿಭಾಗದಲ್ಲಿ 51 ಜೊತೆ, ಹಗ್ಗ ಜೂನಿಯರ್‌ ವಿಭಾಗದಲ್ಲಿ 21 ಜೊತೆ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 92 ಜೊತೆ ಕೋಣಗಳು ಭಾಗವಹಿಸಿದ್ದವು.

    ಪಣಪಿಲ ಕಂಬಳದ ಫಲಿತಾಂಶ

    ಹಗ್ಗ ಜೂನಿಯರ್

    ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಎ
    ಓಟಗಾರ: ಭಟ್ಕಳ ಶಂಕರ್
    ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ನರಸಿಂಹ ಕೆ ಶೆಟ್ಟಿ ಎ
    ಓಟಗಾರ: ಆದಿ ಉಡುಪಿ ಜಿತೇಶ್ ಸುವರ್ಣ

    ನೇಗಿಲು ಜೂನಿಯರ್

    ಪ್ರಥಮ: ಮೂಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ ಎ
    ಓಟಗಾರ: ಬಾಂಬ್ರಾಣಬೈಲು ವಂದಿತ್ ಶೆಟ್ಟಿ
    ದ್ವಿತೀಯ: ಪಣೋಲಿಬೈಲ್ ಬೊಳ್ಳಯಿ ಚೇತನ್ ಚಂದಪ್ಪ ಪೂಜಾರಿ
    ಓಟಗಾರ: ಪಡು ಸಾಂತೂರು ಸುಕೇಶ್ ಪೂಜಾರಿ

    ಸಬ್ ಜೂನಿಯರ್

    ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ
    ಓಟಗಾರ: ಬೈಂದೂರು ಮಂಜುನಾಥ್ ಗೌಡ
    ದ್ವಿತೀಯ: ಮೂಡಾರು ಅಚ್ಚೊಟ್ಟು ಫ್ಲೋರ ರೋಶನ್ ರಂಜಿತ್ ಫೆರ್ನಾಂಡಿಸ್‌ ಎ
    ಓಟಗಾರ: ಕಕ್ಯಪದವು ಮಹಮ್ಮಾಯಿ ಗೌತಮ್ ಗೌಡ

    Continue Reading

    LATEST NEWS

    ನನ್ನ ಸಾ*ವಿಗೆ ರಶ್ಮಿ ಟೀಚರ್ ಕಾರಣ…ಡೆ*ತ್ ನೋಟ್ ಬರೆದಿಟ್ಟು ಆತ್ಮಹ*ತ್ಯೆಗೆ ಯತ್ನಿಸಿದ ವಿದ್ಯಾರ್ಥಿ!

    Published

    on

    ಮಂಗಳೂರು/ಗ್ವಾಲಿಯರ್ : ವಿದ್ಯಾರ್ಥಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿಯ ಡೆತ್ ನೋಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಕಾರಣವನ್ನು ಬರೆದಿದ್ದಾನೆ.

    ಸಾಂದರ್ಭಿಕ ಚಿತ್ರ

    ಗ್ವಾಲಿಯರ್ ನ ಕೇಂದ್ರೀಯ ವಿದ್ಯಾಲಯ ನಂ.2ರಲ್ಲಿ ಓದುತ್ತಿರುವ 9ನೇ ತರಗತಿ ವಿದ್ಯಾರ್ಥಿ ಮನ್ವೇಂದ್ರ ಗೌತಮ್ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಪೋಷಕರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡೆತ್‌ನೋಟ್‌ನಲ್ಲಿ ಶಾಲಾ ಶಿಕ್ಷಕಿ ಕಿರುಕು*ಳ ನೀಡಿದ್ದಕ್ಕಾಗಿ ತಾನು ಆತ್ಮಹ*ತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ವಿದ್ಯಾರ್ಥಿ ಬರೆದಿದ್ದಾನೆ. ಘಟನೆ ಬಳಿಕ ಕುಟುಂಬಸ್ಥರು ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ರಶ್ಮಿ ಟೀಚರ್ ಕಾರಣ :

    ಶಿಕ್ಷಕರಾದ ರಶ್ಮಿ ಗುಪ್ತಾ ಮತ್ತು ದಿವಾಕರ್ ಸರ್ ಅವರು ತನಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ವಿದ್ಯಾರ್ಥಿ ಆರೋಪಿದ್ದಾನೆ. ಫೋಷಕರು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಇಬ್ಬರು ಶಿಕ್ಷಕರು ಹೊಣೆ ಎಂದು ದೂರು ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ತನ್ನ ಮಗ ಮನ್ವೇಂದ್ರನಿಗೆ ಶಿಕ್ಷಕಿ ನಿರಂತರವಾಗಿ ಕಿರುಕು*ಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿಯ ತಾಯಿ ಆರೋಪಿಸಿದ್ದಾರೆ.

    ಇದನ್ನೂ ಓದಿ : ಪತ್ನಿ, ಮಗುವನ್ನು ಕೊಂ*ದು ಪತಿ ಆ*ತ್ಮಹತ್ಯೆ ಪ್ರಕರಣ; ಡೆ*ತ್ ನೋಟ್‌ನಲ್ಲಿ ಏನಿತ್ತು ಗೊತ್ತಾ?
    ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೊನೆಗೆ ಮಗ ಮನನೊಂದು ಆತ್ಮಹ*ತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದೀಗ ತಾಯಿ ಪೊಲೀಸರಿಗೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ದೂರು ಸ್ವೀಕರಿಸಿದ ಮಹಾರಾಜಪುರ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿ ಮನ್ವೇಂದ್ರನ ಡೆ*ತ್ ನೋಟ್ ನ್ನು ವಶಪಡಿಸಿಕೊಳ್ಳಲಾಗಿದೆ.

    Continue Reading

    LATEST NEWS

    ಮಂಗಳೂರು: ವಯೋವೃದ್ಧ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸರ ಎಗರಿಸುತ್ತಿದ್ದ ಖತರ್ನಾಕ್ ಕಳ್ಳ ಅರೆಸ್ಟ್.!!

    Published

    on

    ಮಂಗಳೂರು: ಜಿಲ್ಲೆಯಾದ್ಯಂತ ವಯೋವೃದ್ಧ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಲವು ಬಾರಿ ಕಳ್ಳತನ ಹಾಗೂ ವಂಚನೆ ಮಾಡುತ್ತಿದ್ದ ಕುಖ್ಯಾತ ಕಳ್ಳ ಸುರೇಶ್ ಅಲಿಯಾಸ್ ಸಂತೋಷ್ (60) ಎಂಬಾತನನ್ನು ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.

    ಮೂಡುಬಿದಿರೆಯಲ್ಲಿ ಪರಿಚಯಸ್ಥನಂತೆ ನಟಿಸಿ ಮಹಿಳೆಯೊಬ್ಬರ ಕೊರಳಿನಲ್ಲಿದ್ದ ಚಿನ್ನದ ಸರವನ್ನು ಎಗರಿಸಿದ್ದ, ಹೀಗೆ ಹಲವು ಕಳ್ಳತನ ಪ್ರಕರಣ ನಡೆಸಿದ್ದ ಎಂದು ತಿಳಿದುಬಂದಿದೆ.

    ಬಂಧಿತನಿಂದ 2.50 ಲಕ್ಷ ರೂ. ಮೌಲ್ಯದ 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸುಂದರಿ ಪೂಜಾರಿ ಎಂಬವರು ತನ್ನ ಮಗಳ ಮನೆಗೆ ಹೋಗಲೆಂದು ಮೂಡುಬಿದಿರೆ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ಕಾಯುತ್ತಿದ್ದ ವೇಳೆ ಅಪರಿಚಿತನೋರ್ವ ಬಂದು ಪರಿಚಯಸ್ಥನಂತೆ ಮಾತನಾಡಿ, ತಮ್ಮ ಕೊರಳಿನ್ನಲ್ಲಿರುವಂತ ಸರ ಮಾಡಲಿದೆ ಎಂದು ಹೇಳಿ ಅವರ ಕುತ್ತಿಗೆಯಕಲ್ಲಿದ್ದ 2 ಪವನ್‌ ತೂಕದ ಸರವನ್ನು ಕಳವುಗೈದು ಪರಾರಿಯಾಗಿದ್ದ.

    ಈ ಸಂಬಂಧ ಮೂಡುಬಿದಿರೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪ್ರಕರಣದಕ್ಕೆ ಸಂಬಂಧಿಸಿ ತನಿಖೆ ಆರಂಭಿಸಿದ ಪೊಲೀಸರು, 2023ರಲ್ಲಿ ಕಾರ್ಕಳ ತಾಲೂಕು ಕಸಬ, ಮಣ್ಣು ಗೋಪುರದ ಬಳಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯನ್ನು ವಂಚನೆ ಮಾಡಿ ಪಡೆದಿದ್ದ ಒಂದುವರೇ ಪವನ್ ತೂಕದ ಹವಳ ಇರುವ ಚಿನ್ನದ ಸರ, ಸುಂದರಿ ಪೂಜಾರಿಯವರಿಂದ ಕಳವುಗೈದಿದ್ದ ಚಿನ್ನದ ಸರ ಸೇರಿ ಒಟ್ಟು 36 ಗ್ರಾಂ ತೂಕದ 2 ಚಿನ್ನದ ಸರಗಳನ್ನು ವಶಕ್ಕೆ ಪಡೆದುಕೊಂಡು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

    Continue Reading

    LATEST NEWS

    Trending