Connect with us

    LATEST NEWS

    ಬಾಡಿಗೆಗೆ ಸಿಗ್ತಾರೆ ಬಾಯ್​ಪ್ರೆಂಡ್ಸ್; ಎಲ್ಲಾ ಕೆಲಸಕ್ಕೂ ಎತ್ತಿದ ಕೈ !!

    Published

    on

    ಮಂಗಳೂರು/ವಿಯೆಟ್ನಾಂ: ಹಿಂದಿನ ಕಾಲದಲ್ಲಿ ವಿದ್ಯಾವಂತರ ಸಂಖ್ಯೆ ಕಡಿಮೆ ಇದ್ದ ಕಾರಣ ಮದುವೆ ಸ್ವಲ್ಪ ಬೇಗನೇ ಆಗಿಬಿಡುತ್ತಿತ್ತು, ಬಾಲ್ಯವಿವಾಹಗಳು ಹೆಚ್ಚಾಗಿಯೇ ಇತ್ತು. ಆದರೆ, ವರ್ಷಗಳು ಕಳೆದಂತೆ ಎಲ್ಲವೂ ಬದಲಾಗುತ್ತಿವೆ. ಜನರು ವೃತ್ತಿಯ ಬಗ್ಗೆ ಸಾಕಷ್ಟು ಆಲೋಚನೆ ಮಾಡುತ್ತಿದ್ದು, ಒಂದೊಳ್ಳೆ ಸಂಬಳ, ಉತ್ತಮ ಕೆಲಸ ಸಿಗುವವರೆಗೂ ಮದುವೆಯೆಂಬ ಮಾತೇ ಬಾರದಂತೆ ಜೀವನ ಸಾಗಿಸುತ್ತಿದ್ದಾರೆ. ಮದುವೆ ಬಗ್ಗೆ ಯೋಚಿಸುವುದು ಹಾಗಿರಲಿ ಡೇಟಿಂಗ್ ಮಾಡಲು ಕೂಡ ಸಮಯವಿಲ್ಲದಂತಾಗಿದೆ.

     

    ಇದೀಗ ದಕ್ಷಿಣ ಏಷ್ಯಾದ ವಿಯೆಟ್ನಾಂನಲ್ಲಿ ಬಾಡಿಗೆ ಬಾಯ್​ಫ್ರೆಂಡ್​ ಕೂಡ ಸಿಗುತ್ತಿದ್ದು, ಆ ಹುಡುಗ ನೋಡಲು ಬಹಳ ಸುಂದರನಾಗಿರುತ್ತಾನೆ ಮಾತ್ರವಲ್ಲದೇ, ಅಡುಗೆ ಮಾಡುವುದರಿಂದ ಹಿಡಿದು ಪೋಷಕರನ್ನು ಮೆಚ್ಚಿಸುವ ಕೆಲಸವನ್ನು ಕೂಡ ಮಾಡುತ್ತಾನೆ. ಕುಟುಂಬದಲ್ಲಿ ಮದುವೆಯಾಗಬೇಕೆಂಬ ಒತ್ತಡ ಹೆಚ್ಚಾದಾಗ ಹುಡುಗಿಯರು ಈ ರೀತಿ ಬಾಡಿಗೆ ಬಾಯ್​ಫ್ರೆಂಡ್​ನನ್ನು ಕರೆತಂದು ಪೋಷಕರನ್ನು ಮೆಚ್ಚಿಸುತ್ತಿದ್ದಾರೆ. ವಿಯೆಟ್ನಾಂನ ಜನರು ಮದುವೆಯಾಗುವುದಕ್ಕೆ ಹಿಂದುಮುಂದು ನೋಡುತ್ತಿದ್ದು, ಬಾಡಿಗೆ ಸಂಗಾತಿಯನ್ನು ಕಂಡುಕೊಳ್ಳುವುದರಲ್ಲಿ ಹುಡುಗರಿಗಿಂತ ಹುಡುಗಿಯರ ಸಂಖ್ಯೆಯೇ ಹೆಚ್ಚಾಗುತ್ತಿದೆ. ಪೋಷಕರು ಅಳಿಯನಿಂದ ಬಯಸುವ ಎಲ್ಲಾ ಗುಣಗಳು ಈ ಬಾಡಿಗೆ ಬಾಯ್​ಫ್ರೆಂಡ್​ನಲ್ಲಿರುತ್ತದೆಯಂತೆ.

    ಬಾಡಿಗೆ ಬಾಯ್​ಫ್ರೆಂಡ್​ನ ಉತ್ತಮ ನಡವಳಿಕೆ, ಉತ್ತಮ ಗುಣವನ್ನು ನೋಡಿ ಪೋಷಕರು ಕೂಡ ಸಂತೋಷ ಪಡುತ್ತಾರೆ. ಈ ರೀತಿಯ ಬಾಡಿಗೆ ಗೆಳೆಯನನ್ನು ಪಡೆಯಲು, ಕೇವಲ ಹಣವನ್ನು ಖರ್ಚು ಮಾಡಬೇಕಷ್ಟೇ. ಒಂದು ದಿನಕ್ಕೆ ಬಾಯ್​ಫ್ರೆಂಡ್​ನನ್ನು ಬಾಡಿಗೆ ಪಡೆಯಬೇಕಾದರೆ 10-20 ಡಾಲರ್​ಗಳನ್ನು ಅಂದರೆ 800 ರಿಂದ 1700 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕುಟುಂಬವನ್ನು ಪರಿಚಯಿಸಲು ಬಯಸಿದರೆ ವೆಚ್ಚ ಸ್ವಲ್ಪ ಹೆಚ್ಚಾಗುತ್ತದೆ. ಸುಮಾರು 1 ಮಿಲಿಯನ್ ವಿಯೆಟ್ನಾಮೀಸ್ ಡಾಂಗ್ ಅಂದರೆ 3400 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಒಂದು ವಾರ ಮುಂಚಿತವಾಗಿಯೇ ಹುಡುಗಿಯನ್ನು ಭೇಟಿಯಾಗಲು ಪ್ರಾರಂಭಿಸುತ್ತಾರೆ. ಈ ಒಪ್ಪಂದ ಯಾವುದೇ ದೈಹಿಕ ಅಥವಾ ಮಾನಸಿಕ ಭಾವನೆಯುಳ್ಳ ಸಂಬಂಧಇರುವುದಿಲ್ಲ, ಇದನ್ನು ಸಂಪೂರ್ಣವಾಗಿ ವೃತ್ತಿಪರ ಸಂಬಂಧವಷ್ಟೇ ಎಂದು ಹೇಳಲಾಗುತ್ತದೆ.

    LATEST NEWS

    16 ವರ್ಷದ ಬಾಲಕನನ್ನು ಮದುವೆಯಾದ ಶಿಕ್ಷಕಿ !

    Published

    on

    ಮಂಗಳೂರು/ಉತ್ತರಪ್ರದೇಶ: ಮದುವೆ ಎನ್ನುವುದು ಜನುಮ-ಜನುಮದ ಅನುಬಂಧ ಎಂದು ಹೇಳುತ್ತಾರೆ. ಆದರೆ ಉತ್ತರಪ್ರದೇಶದ ಮೀರತ್ ನಲ್ಲಿ 25 ವರ್ಷದ ಶಿಕ್ಷಕಿಯೊಬ್ಬರು 16 ವರ್ಷದ ಅಪ್ರಾಪ್ತ ಬಾಲಕನೊಂದಿಗೆ ಮದುವೆಯಾಗಿರುವ ಘಟನೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.


    ಶಿಕ್ಷಕಿ ಪೋಷಕರಿಗೂ ತಿಳಿಸದೇ ಬಾಲಕನನ್ನು ಕರೆದುಕೊಂಡು ಹೋಗಿದ್ದಾಳೆ. ಇದರಿಂದ ಪೋಷಕರು ಪೊಲೀಸ್ ಠಾಣೆಯಲ್ಲಿ ಶಿಕ್ಷಕಿ ವಿರುದ್ದ ದೂರು ದಾಖಲಿಸಿದ್ದಾರೆ. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

    ಶಿಕ್ಷಕಿ ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್ ನ ಸ್ಥಳೀಯ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದ 25 ವರ್ಷದ ಯುವತಿ ಕೆಲವು ದಿನಗಳ ಹಿಂದೆ ಮೀರತ್ ನ 16 ವರ್ಷದ ಬಾಲಕನನ್ನು ಸಾಮಾಜಿಕ ಮಾಧ್ಯಮದ ಮೂಲಕ ಪರಿಚಯಿಸಿಕೊಂಡಿದ್ದಾಳೆ.

    ಇದನ್ನೂ ಓದಿ: ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂ*ಡಿನ ದಾ*ಳಿ

    ಬಳಿಕ ಇವರಿಬ್ಬರ ಪರಿಚಯ ಪ್ರೀತಿಯಾಗಿ ತಿರುಗಿದೆ. ಇತ್ತೀಚೆಗೆ ಶಿಕ್ಷಕಿ ಕಾರಿನಲ್ಲಿ ಮೀರತ್‌ಗೆ ಹೋಗಿ, ಬಾಲಕನ್ನು ಕಾರಿನಲ್ಲಿ ಗಾಜಿಯಾಬಾದ್‌ಗೆ ಕರೆದುಕೊಂಡು ಹೋಗಿದ್ದರು. ಗಾಜಿಯಾಬಾದ್‌ನಲ್ಲಿಯೇ ಬಾಲಕ ಮೇಜರ್ ಎಂಬಂತೆ ನಕಲಿ ದಾಖಲೆ ಸೃಷ್ಟಿಸಿ ಮದುವೆ ನೋಂದಣಿ ಮಾಡಿಸಿಕೊಂಡಿದ್ದಾಳೆ. ತಮ್ಮ ಮಗನ ಮದುವೆಯ ಬಗ್ಗೆ ತಿಳಿದ ಹುಡುಗನ ಪೋಷಕರು ಆಘಾತಕ್ಕೊಳಗಾಗಿ ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಶಿಕ್ಷಕಿ ತಮ್ಮ ಮಗನಿಗೆ ಹೆದರಿಸಿ ಮದುವೆಯಾಗಿದ್ದಾರೆ ಮತ್ತು ತಮ್ಮ ಮಗ ಅಪ್ರಾಪ್ತನಾಗಿದ್ದರೂ ಮೇಜರ್ ಎಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

    ಪೋಷಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಒಂದು ವೇಳೆ ಬಾಲಕನ ಒಪ್ಪಿಗೆಯೊಂದಿಗೆ ಈ ಮದುವೆ ನಡೆದಿದ್ದರೂ ಕೂಡ, ಅದಕ್ಕೆ ಕಾನೂನು ಮಾನ್ಯತೆ ಇಲ್ಲ. ಭಾರತೀಯ ಕಾನೂನಿನ ಪ್ರಕಾರ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ಮದುವೆಯನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗಿದೆ.

    Continue Reading

    DAKSHINA KANNADA

    ಉಳ್ಳಾಲ: ಯುಐ ಚಿತ್ರದ ಯಶಸ್ಸಿಗೆ ಕೊರಗಜ್ಜನಿಗೆ ಅಡ್ಡಬಿದ್ದ ಉಪೇಂದ್ರ

    Published

    on

    ಉಳ್ಳಾಲ: ಕುತ್ತಾರಿನಲ್ಲಿರುವ ಕೊರಗಜ್ಜನ ಆದಿ ಕ್ಷೇತ್ರವು ಪ್ರಕೃತಿಗೆ ಹತ್ತಿರವಾಗಿದ್ದು, ದೈವದ ಹೆಸರಲ್ಲಿ ಇಲ್ಲಿ ಪೃಕೃತಿಯ ಆರಾಧನೆಯಾಗುತ್ತಿದೆ ಎಂದು ಸ್ಯಾಂಡಲ್ ವುಡ್‌ನ ರಿಯಲ್ ಸ್ಟಾರ್ ನಟ , ನಿರ್ದೇಶಕ ಉಪೇಂದ್ರ ಹೇಳಿದರು.

    ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಕುತ್ತಾರು ದೆಕ್ಕಾಡುವಿನ ಕೊರಗಜ್ಜನ ಆದಿಸ್ಥಳಕ್ಕೆ ಮಂಗಳವಾರದಂದು ಅವರು ಭೇಟಿ ನೀಡಿ ಡಿಸೆಂಬರ್ 20 ರಂದು ತೆರೆ ಕಾಣಲಿರುವ ತನ್ನದೇ ನಟನೆ ಮತ್ತು ನಿರ್ದೇಶನದ ಪ್ಯಾನ್ ಇಂಡಿಯ ಸಿನೆಮಾ ಯುಐ ಸಿನೆಮಾದ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು.

    ಚಿತ್ರದ ಪ್ರಮೋಷನ್ ಗಾಗಿ ಮಂಗಳೂರಿಗೆ ಬಂದಿದ್ದೇವೆ. ಕುತ್ತಾರಿನ ಕೊರಗಜ್ಜ ದೈವದ ಕ್ಷೇತ್ರವು ಪ್ರಕೃತಿ ರಮಣೀಯವಾಗಿದೆ. ಕೊರಗಜ್ಜನ ದಯೆಯು ನಮ್ಮ ಮೇಲಿರಲಿ ಎಂದರು.  ಚಿತ್ರದ ನಿರ್ಮಾಪಕರಾದ ಕೆ ಪಿ ಶ್ರೀಕಾಂತ್, ಲಹರಿ ವೇಲು, ನವೀನ್ ಮನೋಹರ್ , ರಾಜೇಶ್ ಭಟ್ ಮೊದಲಾದವರಿದ್ದರು. ಶ್ರೀ ಪಂಜಂದಾಯ ಬಂಟ ವೈದ್ಯನಾಥ ಮತ್ತು ಕೊರಗತನಿಯ ದೈವಗಳ ಆದಿಸ್ಥಳ ಟ್ರಸ್ಟ್ ನ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಟ್ರಸ್ಟಿಗಳು ನಟ ಉಪೇಂದ್ರ ಅವರನ್ನು  ಕ್ಷೇತ್ರದ ಪರವಾಗಿ ಅಭಿನಂದಿಸಿದರು.

    Continue Reading

    LATEST NEWS

    ಪಂಜಾಬ್ ಮಾಜಿ ಡಿಸಿಎಂ ಮೇಲೆ ಗುಂ*ಡಿನ ದಾ*ಳಿ

    Published

    on

    ಮಂಗಳೂರು/ಅಮೃತಸರ :  ಅಮೃತಸರದ ಗೋಲ್ಡನ್ ಟೆಂಪನ್ ಪ್ರವೇಶದ್ವಾರದಲ್ಲಿ ಶಿರೋಮಣಿ ಅಕಾಲಿಕದಳದ ನಾಯಕ ಮತ್ತು ಪಂಜಾಬ್ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮೇಲೆ ಗುಂ*ಡಿನ ದಾ*ಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

    ಹೊರಗೆ ನಿಂತಿದ್ದವರು ಗುಂ*ಡು ಹಾರಿಸಿದ ನರೇನ್ ಸಿಂಗ್ ಎಂಬಾತನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಗಾಲಿ ಕುರ್ಚಿಯಲ್ಲಿ ಕುಳಿತಿದ್ದ ಸುಖ್ ಬೀರ್ ಸಿಂಗ್ ಬಾದಲ್‌ರನ್ನು ಗುರಿಯಾಗಿಸಿ ವ್ಯಕ್ತಿ ಹಾರಿಸಿದ ಗುಂಡು ಗೋಡೆಗೆ ತಗುಲಿದ್ದರಿಂದ, ಅದೃಷ್ಟವಶಾತ್ ಪ್ರಾ*ಣಾಪಾ*ಯದಿಂದ ಪಾರಾಗಿದ್ದಾರೆ.  ಭದ್ರತೆ ಒದಗಿಸಲು ಪಂಜಾಬ್ ಸರ್ಕಾರ ವಿಫಲವಾಗಿದೆ ಎಂದು ಎಸ್‌ಎಡಿ ಆರೋಪಿಸಿದೆ.

    ಇದನ್ನೂ ಓದಿ : ‘ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ’: ಜಿತೇಶ್ ಶರ್ಮಾ !

    ಇತ್ತೀಚೆಗಷ್ಟೇ, ಅಕಾಲಿ ದಳದ ನಾಯಕನಿಗೆ 2015ರಲ್ಲಿ ಗುರು ಗ್ರಂಥ ಸಾಹಿಬ್‌ನ ತ್ಯಾಗದಲ್ಲಿ ಡೇರಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಅವರನ್ನು ಬೆಂಬಲಿಸಿದಕ್ಕಾಗಿ ಅಕಾಲ್ ತಖ್ತ್ ಶಿಕ್ಷೆ ವಿಧಿಸಿತ್ತು. ಅವರು ಪ್ರತಿದಿನ ಒಂದು ಗಂಟೆ ದೇವಸ್ಥಾನದಲ್ಲಿ ದ್ವಾರಪಾಲಕನಾಗಿ ಕೆಲಸ ಮಾಡಬೇಕಾಗುತ್ತದೆ. ಶೌಚಾಲಯ ತೊಳೆಯುವುದು, ಪಾತ್ರೆ ತೊಳೆಯುವುದು ಸೇರಿದಂತೆ ಹಲವು ಕೆಲಸಗಳನ್ನು ಮಾಡಬೇಕಾಗುತ್ತದೆ.

    Continue Reading

    LATEST NEWS

    Trending