Monday, July 4, 2022

ಪುಟ್ಟ ಬಾಲಕನ ಪ್ರಾಣ ತೆಗೆದ ಪರೋಟ.!

ಕೇರಳ: ಪರೋಟ ತಿನ್ನುವಾಗ ಗಂಟಲಲ್ಲಿ‌ ಸಿಲುಕಿಕೊಂಡು ಬಾಲಕ ಸಾವನ್ನಪ್ಪಿರುವ ಘಟನೆ ಕೇರಳದ ಇಡುಕ್ಕಿ ನೆಡುಮಕಂದಂ ಎಂಬಲ್ಲಿ ನಡೆದಿದೆ.

ಪರತೋಡು ಕಾಲೋನಿಯ ಸಂತೋಷ್ ಕಾರ್ತಿಕ್(9) ಮೃತ ಬಾಲಕ.

ನಿನ್ನೆ ರಾತ್ರಿ ಪರೋಟಾ ತಿಂದ ಬಳಿಕ ಬಾಲಕ ಉಸಿರಾಟದ ತೊಂದರೆಯ ಬಗ್ಗೆ ಮನೆಯವರಿಗೆ ತಿಳಿಸಿದ್ದಾನೆ. ಕೂಡಲೇ ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.


ಹುಡುಗ ತುಂಬಾ ಅಸ್ವಸ್ಥನಾಗಿರುವುದನ್ನು ಗಮನಿಸಿದ ವೈದ್ಯರು ಕೂಡಲೇ ಚಿಕಿತ್ಸೆ ನೀಡಿದ್ದಾರೆ. ಆದರೆ ಕೆಲವೇ ಕ್ಷಣದಲ್ಲಿ ಆತ ಮೃತಪಟ್ಟಿದ್ದಾನೆ.

ಇನ್ನು ಬಾಲಕ ಕಳೆದ ಒಂದು ವರ್ಷದಿಂದ ಮೂರ್ಛೆರೋಗಕ್ಕೆ ಕೂಡ ತುತ್ತಾಗಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here

Hot Topics

ಕಣಿವೆಗೆ ಉರುಳಿದ ಶಾಲಾ ಬಸ್‌: 16 ವಿದ್ಯಾರ್ಥಿಗಳು ಕೊನೆಯುಸಿರು

ಕುಲು: ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ಬಸ್‌ ಕಣಿವೆಗೆ ಉರುಳಿ ಬಿದ್ದ ಪರಿಣಾಮ 16 ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ.‘ಸಾಯಿಂಜ್‌ಗೆ ತೆರಳುತ್ತಿದ್ದ ಬಸ್ ಬೆಳಿಗ್ಗೆ 8.30ರ...

ಕಾರ್ಕಳದಲ್ಲಿ ಅಕ್ರಮ ಗೋಸಾಗಾಟ: ಓರ್ವ ಪರಾರಿ-ಕಾರಿನಲ್ಲೇ ಅಸುನೀಗಿದ ದನ

ಕಾರ್ಕಳ: ಕಾರಿನಲ್ಲಿ ಎರಡು ಗೋವುಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಸಿನಿಮಾ ಶೈಲಿಯಲ್ಲಿ ಪೊಲೀಸರು ಚೇಸ್ ಮಾಡಿದ ಘಟನೆ ಕಾರ್ಕಳದ ಹೆಬ್ರಿ ಕೆರೆಬೆಟ್ಟು ಮಹಾಲಿಂಗೇಶ್ವರ ದೇವಸ್ಥಾನದ ಬಳಿ ನಡೆದಿದೆ.ಉಡುಪಿಯ ಮಲ್ಪೆ...

ಬೆಳ್ತಂಗಡಿ: ತೋಟಕ್ಕೆ ಹೋದವ ನದಿ ದಡದಲ್ಲಿ ಪತ್ತೆಯಾದ

ಬೆಳ್ತಂಗಡಿ: ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರು ಶವವಾಗಿ ಪತ್ತೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಪುದುವೆಟ್ಟು ಗ್ರಾಮದ ಅಡ್ಯ ಎಂಬಲ್ಲಿ ನಡೆದಿದೆ.ಪುದುವೆಟ್ಟು ಗ್ರಾಮದ ಅಡ್ಯ ನಿವಾಸಿ ಲಿಂಗಪ್ಪ ಪೂಜಾರಿ (65) ಎಂಬವರು ಮೃತಪಟ್ಟ...