Connect with us

    NATIONAL

    ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ 11 ಮಂದಿ ಆಟಗಾರರಿಂದ ಬೌಲಿಂಗ್ !

    Published

    on

    ಮಂಗಳೂರು/ಮುಂಬೈ: ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಪಂದ್ಯವು ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ವಿಕೆಟ್ ಕೀಪರ್ ಸೇರಿದಂತೆ ಪ್ಲೆಯಿಂಗ್ 11ಲ್ಲಿದ್ದ ಎಲ್ಲಾ ಆಟಗಾರರು ಬೌಲಿಂಗ್ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.


    ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ದೆಹಲಿ ಹಾಗೂ ಮಣಿಪುರ ನಡುವಿನ ಸೈಯದ್ ಮುಷ್ತಾಕ್ ಅಲಿ ಟಿ20 ಪಂದ್ಯದಲ್ಲಿ ಅಚ್ಚರಿಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಮಣಿಪುರ ವಿರುದ್ದದ ಪಂದ್ಯದಲ್ಲಿ ತಂಡದ ಎಲ್ಲಾ 11 ಆಟಗಾರರು ಬೌಲಿಂಗ್ ಮಾಡುವ ಮೂಲಕ ದೆಹಲಿ ತಂಡ ವಿಶೇಷ ದಾಖಲೆಗೆ ಪಾತ್ರವಾಗಿದ್ದು, ವಿಕೆಟ್ ಕೀಪರ್ ಕೂಡ ಈ ಪಂದ್ಯದಲ್ಲಿ ಬೌಲಿಂಗ್ ಮಾಡಿ ವಿಕೆಟ್ ಪಡೆದಿದ್ದಾರೆ. ಈ ಮೂಲಕ ದೆಹಲಿ ತಂಡವು ಟಿ20 ಕ್ರಿಕೆಟ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.


    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಮಣಿಪುರ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಎದುರಾಳಿಗಳ ವಿರುದ್ದ ರಣತಂತ್ರ ರೂಪಿಸಿದ ದೆಹಲಿ ತಂಡದ ನಾಯಕ ಅಯುಷ್ ಬದೋನಿ ತಮ್ಮನ್ನು ಒಳಗೊಂಡಂತೆ ತಂಡದ ಎಲ್ಲಾ ಆಟಗಾರರು ಬೌಲಿಂಗ್ ಮಾಡಿದರು. ಇದರ ಫಲವಾಗಿ ಮಣಿಪುರ ತಂಡವು 120 ರನ್ ಗಳಿಸಲಷ್ಟೇ ಶಕ್ತವಾಯಿತು.

    ಇದನ್ನೂ ಓದಿ: ಮನೆ ಮನೆಗೆ ತೆರಳಿ ಆರೋಗ್ಯ ತಪಾಸಣೆ: ಸರ್ಕಾರದ ಮಹತ್ವದ ಯೋಜನೆ
    120 ರನ್ ಗಳ ಗುರಿ ಪಡೆದ ದೆಹಲಿ ತಂಡವು 18.3 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪುವ ಮೂಲಕ ಗೆಲುವಿನ ನಗೆ ಬೀರಿತು.

    ಈ ಮೂಲಕ ಟಿ20 ಕ್ರಿಕೆಟ್ ನಲ್ಲಿ ಹೊಸ ಅಚ್ಚರಿಯ ಇತಿಹಾಸ ನಿರ್ಮಾಣವಾಗಿದೆ.

    LATEST NEWS

    ಕ್ಯಾನ್ಸರ್ ಆಪರೇಷನ್ ವೇಳೆ ಮಹಿಳೆಯ ಹೊಟ್ಟೆಯೊಳಗೆ ಕತ್ತರಿ ಬಾಕಿ ; ಮುಂದೆ….??

    Published

    on

    ಮಂಗಳೂರು/ಭೂಪಾಲ್: ಎರಡು ವರ್ಷಗಳ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆಂದು ಆಸ್ಪತ್ರೆಗೆ ಹೋಗಿದ್ದ ಮಹಿಳೆಯ ಆಪರೇಷನ್ ಮಾಡಿದ ವೈದ್ಯರು ಆಕೆಯ ಹೊಟ್ಟೆಯೊಳಗೆ ಕತ್ತರಿ ಹಾಗೇ ಬಿಟ್ಟಿದ್ದಾರೆ. ವೈದ್ಯರ ನಿರ್ಲಕ್ಷ್ಯದ ಈ ಪ್ರಕರಣದಲ್ಲಿ ಎರಡು ವರ್ಷಗಳ ಬಳಿಕ ಮಹಿಳೆಯ ಹೊಟ್ಟೆಯ ಒಳಗಿನಿಂದ ಕತ್ತರಿ ಹೊರಗೆ ತೆಗೆಯಲಾಗಿದೆ. ಮಾಹಿತಿಗಳ ಪ್ರಕಾರ, 2 ವರ್ಷಗಳ ಹಿಂದೆ ಗ್ವಾಲಿಯರ್​ನ ಸರ್ಕಾರಿ ಆಸ್ಪತ್ರೆಯಲ್ಲಿ ಆ ಮಹಿಳೆ ಆಪರೇಷನ್ ಮಾಡಿಸಿಕೊಂಡ ವೇಳೆ ವೈದ್ಯರು ಆಕೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿದ್ದಾರೆ. ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಉಸ್ತುವಾರಿ ಸತೀಶ್ ಶರ್ಮಾ ಅವರು ಕಮಲಾ ಎಂಬ ಮಹಿಳೆಯ ಸಿಟಿ ಸ್ಕ್ಯಾನ್ ಮಾಡುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಏನಿದು ಘಟನೆ :

    ಮಹಳೆಯ ಹೊಟ್ಟೆಯ ಕ್ಯಾನ್ಸರ್‌ಗಾಗಿ 2022ರ ಫೆಬ್ರವರಿ 20ರಂದು ಗ್ವಾಲಿಯರ್‌ನ ಕಮಲಾ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ವೇಳೆ ವೈದ್ಯರು ನಿರ್ಲಕ್ಷ್ಯ ವಹಿಸಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟಿದ್ದಾರೆ. ಮಹಿಳೆಗೆ ಅದರ ಅರಿವೇ ಇರಲಿಲ್ಲ. ಆದರೆ, ಕಳೆದ ಕೆಲವು ದಿನಗಳಿಂದ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಔಷಧಿ ನೀಡಿದರೂ ನೋವು ಕಡಿಮೆಯಾಗದಿದ್ದಾಗ ವೈದ್ಯರು ಸಿಟಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದು, ಈ ವೇಳೆ ಹೊಟ್ಟೆಯಲ್ಲಿ ಕತ್ತರಿ ಸ್ಪಷ್ಟವಾಗಿ ಗೋಚರಿಸಿದೆ. ಹೊಟ್ಟೆಯಲ್ಲಿದ್ದ ಕತ್ತರಿ ಮಹಿಳೆಗೆ ಮಾರಕವಾಗಬಹುದು. ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಹಾಗೂ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿರುವ ವೈದ್ಯ ಸತೀಶ್ ಶರ್ಮಾ ಕೂಡ ಇದನ್ನು ಖಚಿತಪಡಿಸಿದ್ದಾರೆ.

    Continue Reading

    LATEST NEWS

    ಫೆಂಗಲ್ ಚಂಡಮಾರುತ ಭೀತಿ; ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

    Published

    on

    ಮಂಗಳೂರು/ಚೆನ್ನೈ  :  ಬಂಗಾಳ ಕೊಲ್ಲಿಯಲ್ಲಿ ಕಾಣಿಸಿಕೊಂಡಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಸುಮಾರು ಮೂರು ದಿನಗಳ ಬಳಿಕ ಇದೀಗ ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ‘ಫೆಂಗಲ್’ ಚಂಡಮಾರುತ ರೂಪುಗೊಂಡಿದೆ. ಅದು ಉತ್ತರ ತಮಿಳುನಾಡು – ಪುದುಚೇರಿ ಕರಾವಳಿಯತ್ತ ಸಾಗುತ್ತಿದ್ದು, ಇಂದು(ನ.30) ಅಪ್ಪಳಿಸುವ ಸಾಧ್ಯತೆಯಿದೆ. ಹಾಗಾಗಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

    ಹವಾಮಾನ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ, ಚಂಡಮಾರುತವು ವಾಯುವ್ಯಕ್ಕೆ 15 ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ನಾಗಪಟ್ಟಣಂನ ಪೂರ್ವ-ಈಶಾನ್ಯಕ್ಕೆ 240 ಕಿ.ಮೀ, ದೂರ, ಪಾಂಡಿಚೇರಿಯ ಪೂರ್ವ-ಆಗ್ನೇಯಕ್ಕೆ 230 ಕಿ.ಮೀ. ದೂರ ಹಾಗೂ ಚೆನ್ನೈನಿಂದ ಆಗ್ನೇಯಕ್ಕೆ 250 ಕಿ.ಮೀ. ದೂರ ಕೇಂದ್ರೀಕೃತವಾಗಿದೆ.

    ತೀವ್ರ ಚಂಡಮಾರುತವಾಗಿ ಗಂಟೆಗೆ 70 ರಿಂದ 80 ಕಿ.ಮೀ. ವೇಗದಲ್ಲಿ ಹಾಗೂ ಚಂಡಮಾರುತ ನೆಲೆಯಾಗುವ ಸಮಯದಲ್ಲಿ ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದು. ಪಾಂಡಿಚೇರಿಗೆ ಸಮೀಪದಲ್ಲಿರುವ ಕಾರೈಕಲ್ ಮತ್ತು ಮಹಾಬಲಿಪುರಂ ನಡುವೆ ಭೂಕುಸಿತ ಸಂಭವಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    7 ಜಿಲ್ಲೆಗಳಿಗೆ ರೆಡ್ ಅಲರ್ಟ್ :

    ತಿರುವಳ್ಳೂರು, ಚೆಂಗಲ್ಪಟ್ಟು, ಕಾಂಚೀಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಕಡಲೂರು ಮತ್ತು ಪಾಂಡಿಚೇರಿ, ಚೆನ್ನೈ ಸೇರಿದಂತೆ ಏಳು ಜಿಲ್ಲೆಗಳಿಗೆ ರೆಡ್ ಅಲರ್ಟ್ ಹಾಗೂ ಇತರ 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಚಂಡಮಾರುತದ ಪರಿಣಾಮ ಕರ್ನಾಟಕದ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದ್ದು,  ರಾಜ್ಯದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

    ಇದನ್ನೂ ಓದಿ : ಪತ್ನಿಯನ್ನು ಹನಿಮುನ್‌ಗೆ ಕರೆದೊಯ್ದು ಮಾರಿದ ಪಾ*ಪಿ ಪತಿ !! ಮುಂದೇನಾಯ್ತು…..

    ಕರ್ನಾಟಕ ಕರಾವಳಿಯಲ್ಲಿ ಮುಂದಿನ 3 ದಿನಗಳಿಗೆ ಎಲ್ಲೊ ಅಲರ್ಟ್ ಘೋಷಿಸಲಾಗಿದ್ದು, ಡಿಸೆಂಬರ್‌ 1,2, 3 ರಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ರಾತ್ರಿ ವೇಳೆ ಹೆಚ್ಚು ಚಳಿಯ ಅನುಭವವಾಗಿದ್ದು, ಮುಂದಿನ ಒಂದು ವಾರಕ್ಕೂ ಅಧಿಕ ಕಾಲ ಚಳಿಯ ವಾತಾವರಣ ಇರುವ  ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    Continue Reading

    NATIONAL

    ಪತ್ನಿಯನ್ನು ಹನಿಮುನ್‌ಗೆ ಕರೆದೊಯ್ದು ಮಾರಿದ ಪಾ*ಪಿ ಪತಿ !! ಮುಂದೇನಾಯ್ತು…..

    Published

    on

    ತನ್ನ ಪತ್ನಿಯನ್ನು ವ್ಯಕ್ತಿಯೊಬ್ಬ ಕತಾರ್‌ಗೆ ಹನಿಮೂನ್‌ಗೆಂದು ಕರೆದುಕೊಂಡು ಹೋಗಿದ್ದು, ಬಳಿಕ 10 ಲಕ್ಷ ರೂಪಾಯಿಗೆ ಆಕೆಯನ್ನು ಮಾ*ರಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆದರೆ, ಆಕೆ ಭಾರತಕ್ಕೆ ಮರಳಿದ್ದು, ಆ ಕಥೆಯೇ ರೋಚಕ.

    ಘಟನೆ ಏನಿದು ?

    2021 ರಲ್ಲಿ ಆರೋಪಿ ಶಹಬಾಜ್ ಹಸನ್​ನೊಂದಿಗೆ ಮಹಿಳೆಯ ವಿವಾಹವಾಗಿತ್ತು. ಮನೆಯವರಿಗೆ ಯುವಕ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರ ಎಂದು ತಿಳಿಸಿದ್ದರು. ಆದರೆ, ಮದುವೆ ಬಳಿಕ ಗಂಡನ ಮನೆಗೆ ಹೋದಾಗ ಪತಿ ಎನ್‌ಜಿಒದಲ್ಲಿ ಕೆಲಸ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹೆಂಡತಿಯ ಮನವೊಲಿಸಿ ಕತಾರ್‌ಗೆ ಕರೆದುಕೊಂಡು ಹೋಗಿದ್ದಾನೆ.

     

    ಇದನ್ನೂ ಓದಿ : ಪತ್ನಿ ಮೇಲೆ ಅನುಮಾನ ; ಹೆಂಡತಿಗೆ ಬೆಂ*ಕಿ ಹಚ್ಚಿ ಆ*ತ್ಮಹತ್ಯೆಗೆ ಯತ್ನಿಸಿದ ಪಾ*ಪಿ ಪತಿ

     

    ಪತ್ನಿಯನ್ನು ಮಾರಾಟ ಮಾಡಿ ಪಾಟ್ನಾಗೆ ತಲುಪಿದ್ದ ಈತ ಪತ್ನಿಗೆ ಅಂಚೆ ಮೂಲಕ ತ್ರಿವಳಿ ತಲಾಖ್ ಕಳುಹಿಸಿದ್ದಾನೆ. ವಾಸ್ತವ ವಿಚಾರ ಬೆಳಕಿಗೆ ಬಂದ ಪತ್ನಿ ಬುದ್ದಿವಂತಿಕೆ ತೋರಿ ಭದ್ರತಾ ಸಿಬ್ಬಂದಿಯ ಸಹಾಯದಿಂದ ತನಗಾದ ಕಹಿ ಅನುಭವವನ್ನು ಪತ್ರದಲ್ಲಿ ಬರೆದು ಭಾರತೀಯ ರಾಯಭಾರ ಕಚೇರಿಗೆ ತಲುಪಿಸಿದ್ದಾಳೆ. ನಂತರ ಅವರು ಮಹಿಳೆಯನ್ನು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಈ ಸಂಪೂರ್ಣ ವಿಷಯಕ್ಕೆ ಸಂಬಂಧಿಸಿದಂತೆ, ಮಹಿಳೆ ಇದೀಗ ರಾಜಧಾನಿಯ ದಿಘಾ ಪೊಲೀಸ್ ಠಾಣೆಯಲ್ಲಿ ತನ್ನ ಪತಿ ಮತ್ತು ಅತ್ತೆಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದಾರೆ. ಇಲ್ಲಿ ಒನ್ ಸ್ಟಾಪ್ ಸೆಂಟರ್ ಮೂಲಕ ಮಹಿಳೆಗೆ ಕಾನೂನು ನೆರವು ನೀಡುತ್ತಿದೆ.

    Continue Reading

    LATEST NEWS

    Trending