Connect with us

DAKSHINA KANNADA

(Bone Marrow Transplant) ಖಾಯಿಲೆಯಿಂದ ಬಳಲುತ್ತಿದ್ದಾನೆ 7ರ ಪೋರ; ಆರ್ಥಿಕ ಬೆಂಬಲದ ನಿರೀಕ್ಷೆಯಲ್ಲಿ ತನಿಶ್ ಕುಟುಂಬ..! 

Published

on

(Bone Marrow Transplant) ಖಾಯಿಲೆಯಿಂದ ಬಳಲುತ್ತಿದ್ದಾನೆ 7ರ ಪೋರ; ಆರ್ಥಿಕ ಬೆಂಬಲದ ನಿರೀಕ್ಷೆಯಲ್ಲಿ ತನಿಶ್ ಕುಟುಂಬ..!

(Bone Marrow Transplant) suffering from disease 7; Thanish family in search of financial support ..!

ಮಂಗಳೂರು: ಈತ 7ರ ಪೋರ ತನಿಶ್ ಗಟ್ಟಿ! ತಂದೆ ನವೀನ್ ಗಟ್ಟಿ ಕಾವು ಬಜಾಲ್  ವಾಚ್ ಮ್ಯಾನ್, ಮನೆ ಕಾಯಕದಲ್ಲಿದ್ದ ತಾಯಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ಸಂತೋಷ,ಪ್ರೀತಿಗೆ ಕೊರತೆಯಿರಲಿಲ್ಲ.

ಚಿಕ್ಕ, ಚೊಕ್ಕ ಸಂಸಾರಕ್ಕೆ ಪುಟಾಣಿ ತನಿಶ್  ಉತ್ಸಾಹದ ಚಿಲುಮೆಯಾಗಿದ್ದ. ಆದರೆ ಬೆಳೆದು ದೊಡ್ಡವನಾಗುತ್ತಿದ್ದಂತೆ ಅಂದ್ರೆ 7ರ ಹರೆಯಕ್ಕೆ ಬರುವಾಗ ಪುಟಾಣಿ ವಿಪರೀತ ಜ್ವರದಿಂದ ಬಳಲಾರಂಬಿಸಿದ.

ಈತನನ್ನು ದೇರಳಕಟ್ಟೆ, ನಿಟ್ಟೆ, ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತಾದ್ರೂ ಈತನ ಜ್ವರ ಕ್ಷೀಣಿಸಲಿಲ್ಲ.

ಇದರ ನಡುವೆ ವೈದ್ಯರು ಹೇಳಿದ ರೋಗದ ಹೆಸರು ಕೇಳಿ ಪುಟ್ಟ ಸಂಸಾರಕ್ಕೆ ಆಘಾತದ ಬರಸಿಡಿಲು ಬಡಿದಂತಾಗಿದೆ.ಇದೀಗ ಮಗು H.L.H (Hemophagocytic Lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.K.M.C ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಾಗಿ ಹೇಳಿದ್ದಾರೆ.ಅವರ ನಿರ್ದೇಶನದಂತೆ ಮಗುವನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ ಕರೆದೊಯ್ದಾಗ  ಅಲ್ಲಿಯ ಉನ್ನತ ವೈದ್ಯರು ಮೂಳೆ ಅಸ್ಥಿ ಮಜ್ಜೆ ಕಸಿ ( Bone Marrow Transplant) ಮಾಡಲು ಸೂಚಿಸಿದ್ದಾರೆ.

ಈಗಾಗಲೇ ತನಿಶ್  ಚಿಕಿತ್ಸೆಗಾಗಿ  ದಾನಿಗಳ ಸಹಾಯದಿಂದ ಲಕ್ಷಾಂತರ ರೂಪಾಯಿ ವ್ಯಯಿಸಿರುವ ಈ ಕುಟುಂಬ ಇದೀಗ ವೈದ್ಯರು ಹೇಳಿರುವ ಈ ಖಾಯಿಲೆಯಿಂದ ಕಂಗಾಲಾಗಿದ್ದಾರೆ.

ವೈದ್ಯರು ಈ ಚಿಕಿತ್ಸೆಗೆ ಅಂದಾಜು ವೆಚ್ಚ 45 ಲಕ್ಷ ರೂಪಾಯಿ ತಗುಲಲಿದೆ  ಎಂದು ಹೇಳಿದ್ದು,  ಅದನ್ನು ಭರಿಸಲು ಈ ಬಡ ಕುಟುಂಬ ಅಶಕ್ತವಾಗಿದೆ.

ಈ ವರೆಗೆ ಖರ್ಚು ವೆಚ್ಚಕ್ಕಾಗಿ ದಾನ ಮಾಡಿದ ದಾನಿಗಳ ಸಹಾಯಹಸ್ತ ಸ್ಮರಿಸುತ್ತಾ ಮತ್ತಷ್ಟು ದಾನಿಗಳ ನೆರವಿಗಾಗಿ ಕುಟುಂಬ ನೆರವಿನ ನಿರೀಕ್ಷೆಯಲ್ಲಿದೆ.

   ನವೀನ್ ಗಟ್ಟಿಯವರ ಮನವಿ ಪತ್ರ

HLH (Hemophagocyti Lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿರುವ 7 ವರ್ಷದ ನಮ್ಮ ಮಗು ತನಿಶ್ ಗಟ್ಟಿಯ ಹೆಚ್ಚಿನ ಚಿಕಿತ್ಸೆಗೆ ನೆರವಿನ ನಿರೀಕ್ಷೆಯಲ್ಲಿ ಬಡ ಕುಟುಂಬ….🙏🙏🙏🙏

ವಾಚ್ ಮ್ಯಾನ್ ಕೆಲಸದಲ್ಲಿರುವ ತಂದೆ, ಮನೆಯಲ್ಲಿರುವ ತಾಯಿ, ಉತ್ಸಾಹದ ಚಿಲುಮೆಯಾಗಿದ್ದ ಮಗು ಪುಟ್ಟ ಕುಟುಂಬಕ್ಕೆ ಮಗುವಿನ ಈ ಖಾಯಿಲೆಯು ಬರಸಿಡಿಲಿನಂತೆ ಎರಗಿದೆ. ಎಲ್ಲರ ಕಣ್ಮಣಿಯಾಗಿದ್ದ ಮಗು, ಕಳೆದ ಕೆಲವು ತಿಂಗಳುಗಳಿಂದ ಕಾಡುವ ವಿಪರೀತ ಜ್ವರದಿಂದ ಕಂಗಾಲಾಗಿದ್ದಾನೆ. ಮಗುವನ್ನು ದೇರಳಕಟ್ಟೆ, ನಿಟ್ಟೆ ಆಸ್ಪತ್ರೆ, ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದರು.ಪ್ರಸ್ತುತ ಅತ್ತಾವರ K.M.C ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈಗ ಮಗು H.L.H (Hemophagocytic Lymphohistocytosis) ಎಂಬ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದಾನೆ.K.M.C ವೈದ್ಯರು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವುದಾಗಿ ಹೇಳಿದ್ದಾರೆ. ಅವರ ನಿರ್ದೇಶನದಂತೆ ಮಗುವನ್ನು ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ ಕ್ಯಾನ್ಸರ್ ಆಸ್ಪತ್ರೆಗೆ ಕೊಂಡುಹೋಗಿದ್ದು, ಅಲ್ಲಿಯ ಉನ್ನತ ವೈದ್ಯರು ಮೂಳೆ ಅಸ್ಥಿ ಮಜ್ಜೆ ಕಸಿ ( Bone Marrow Transplant) ಮಾಡಲು ಸೂಚಿಸುತ್ತಾರೆ. ಈ ಚಿಕಿತ್ಸೆಗೆ ಅಂದಾಜು ಸುಮಾರು 45 ಲಕ್ಷ ರೂಪಾಯಿ ಖರ್ಚು ಇದ್ದು ಅದನ್ನು ಬರಿಸಲು ನಮ್ಮ ಬಡ ಕುಟುಂಬವು ಅಶಕ್ತರಾಗಿದ್ದೇವೆ . ಇದುವರೆಗೂ ಚಿಕಿತ್ಸೆಗೆ ಸಹಾಯಹಸ್ತ ನೀಡಿದ ನೂರಾರು ಸಹೃದಯಿ ಬಂಧುಗಳಿಗೆ ಹೃದಯಪೂರ್ವಕ ವಂದಿಸುತ್ತಾ ಮಗುವಿನ ಮುಂದಿನ ಚಿಕಿತ್ಸೆಗೂ ಸಹೃದಯಿ ಬಾಂಧವರಲ್ಲಿ ನೆರವನ್ನು ಬೇಡುತ್ತಿದ್ದೇವೆ. ನಮ್ಮ ಪುಟ್ಟ ಮಗುವಿನ ಭವಿಷ್ಯ ನಿಮ್ಮ ಪುಟ್ಟ ಸಹಾಯದಲ್ಲಿ ನಿಂತಿದೆ.. ನಿಮ್ಮ ನೆರವಿನ ಸಹಾಯಹಸ್ತದೊಂದಿಗೆ, ಎಲ್ಲರ ಶುಭ ಹಾರೈಕೆಯು ನಮ್ಮ ಮಗುವಿನ ಮುಂದಿನ ಬದುಕಿಗೆ ಆಶಾಕಿರಣವಾಗಲಿ ಎಂದು ತಮ್ಮಲ್ಲಿ ಹೃದಯಪೂರ್ವಕ ಯಾಚಿಸುತ್ತೇವೆ….🙏🙏🙏

ಇತೀ ತಮ್ಮ ವಿಶ್ವಾಸಿ
ನವೀನ್ ಗಟ್ಟಿ
ಕಾವು ಬೈಲ್ ಬಜಾಲ್
Mob:- 7899500542

Name:- Naveen
Adress:- D.No 8-125/1
Kudthadka kankanady bajal.mangalore
Branch:- Bajal (Mangalore)
Account number:-38955686728
IFSC CODE:- SBINOOO9052

 

BANTWAL

ಬಂಟ್ವಾಳ : ಬಾವಿಯೊಳಗೆ ರಿಂಗ್ ಅಳವಡಿಸಲು ಇಳಿದ ಇಬ್ಬರು ಸಾ*ವು

Published

on

ಬಂಟ್ವಾಳ : 30 ಅಡಿ ಇರುವ ಆಳದ ಬಾವಿಗೆ ರಿಂಗ್‌ ಅಳವಡಿಸಲು ಇಳಿದ ಇಬ್ಬರು ಕೂಲಿ ಕಾರ್ಮಿಕರು ಬಾವಿಯೊಳಗೆ ಆಕ್ಸಿಜನ್ ಸಿಗದೇ ಸಾ*ವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಪಡಿಬಾಗಿಲಿನಲ್ಲಿ ನಡೆದಿದೆ.


ಮೃ*ತರನ್ನು ಪರ್ತಿಪ್ಪಾಡಿ ನಿವಾಸಿ ಇಬ್ರಾಹಿಂ(40) ಹಾಗೂ ಮಲಾರ್ ನಿವಾಸಿ ಆಲಿ (24) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ : ಡಿವೈಡರ್ ಗೆ ಡಿ*ಕ್ಕಿ ಹೊಡೆದ ಬೈಕ್; ಸವಾರ ಸ್ಥಳದಲ್ಲೇ ಸಾ*ವು

ಮೃ*ತ ಇಬ್ರಾಹಿಂ ಎಂಬವರು ಸುಮಾರು 20 ವರ್ಷಗಳಿಂದ ಬಾವಿಗೆ ರಿಂಗ್ ಹಾಕುವಲ್ಲಿ ಪರಿಣಿತರಾಗಿದ್ದರು. ಮೃ*ತ ದೇಹವನ್ನು ಬಾವಿಯಿಂದ ಮೇಲಕ್ಕೆತ್ತಲಾಗಿದೆ.

Continue Reading

DAKSHINA KANNADA

ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

Published

on

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಜನರು ರಾತ್ರಿಯ ಹೊತ್ತನ್ನು ಮೊಬೈಲ್, ಆನ್ಲೈನ್ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಕಳೆಯುತ್ತಾರೆ. ಇದು ಅವರಿಗೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗುತ್ತದೆ. ರಾತ್ರಿ ಬೇಗ ಮಲಗದೇ ಇರುವುದು ಮತ್ತು ಮಧ್ಯಾಹ್ನ ನಿದ್ದೆ ಮಾಡುವುದು ಹೀಗೆ ಮಾಡಿದರೆ ಆರೋಗ್ಯ ಹಾಳಾಗುತ್ತದೆ. ರಾತ್ರಿಯ ಹೊತ್ತು ಚಿಕ್ಕ ಮಕ್ಕಳು ಅಪ್ಪ ಅಮ್ಮನ ಒಟ್ಟಿಗೆ ಮಲಗುತ್ತಾರೆ. ಅದೇ ರೀತಿ ಗಂಡ ಹೆಂಡತಿಯರು ಒಟ್ಟಿಗೆ ಮಲಗುವುದು ಸರ್ವೇ ಸಾಮಾನ್ಯ.

ಮದುವೆಯ ನಂತರ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗುತ್ತಾರೆ. ಇದು ಸಮಾಜದ ಸಾಮಾನ್ಯ ನಿಯಮ ಸಹ ಹೌದು ಎನ್ನಬಹುದು. ಮದುವೆಯ ನಂತರ ಪತಿ-ಪತ್ನಿಯರ ನಡುವಿನ ಚರ್ಚೆಗಳು, ಮಾತುಗಳು ಸಾಮಾನ್ಯವಾಗಿ ಮಲಗುವ ಸಮಯದಲ್ಲೇ ಆಗುತ್ತದೆ. ಇನ್ನು ಪತಿ-ಪತ್ನಿಯರು ಪ್ರತ್ಯೇಕವಾಗಿ ಮಲಗುವುದರಿಂದಲೂ ಹಲವಾರು ರೀತಿಯ ಪ್ರಯೋಜನಗಳಿವೆ ಎಂದು ವರದಿ ಮೂಲಕ ತಿಳಿದುಬಂದಿದೆ.

ಮೊದಲಿಗೆ, ಈ ವಿಷಯದ ಬಗ್ಗೆ ಮಾಡಿದ ಎಲ್ಲಾ ಸಂಶೋಧನೆಗಳು ಗಂಡ ಮತ್ತು ಹೆಂಡತಿ ಪ್ರತ್ಯೇಕವಾಗಿ ಮಲಗುವುದು ತಪ್ಪಲ್ಲ ಎಂದು ತೋರಿಸುತ್ತದೆ ಮತ್ತು ಪ್ರತಿ ದಂಪತಿಗಳು ತಮ್ಮದೇ ಆದ ನಿಯಮಗಳನ್ನು ಮಾಡುವ ಹಕ್ಕನ್ನು ಹೊಂದಿದ್ದಾರೆ ಎಂದು ತಿಳಿಸಿದೆ. ಆದರೆ ಅನೇಕ ಬಾರಿ ಜನರು ಇಂತಹ ಮಾತುಗಳನ್ನು ಕೇಳಲು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ ಮತ್ತು ಈ ದಂಪತಿಗಳ ಜೀವನದಲ್ಲಿ ಏನೋ ಸರಿಯಾಗಿಲ್ಲ ಎಂದು ಭಾವಿಸುತ್ತಾರೆ.

ಆದರೆ ಅಷ್ಟೇ ಅಲ್ಲ, ಕೆಲವೊಮ್ಮೆ ಬೇರೆ ಬೇರೆ ಕೋಣೆಗಳಲ್ಲಿ ದಂಪತಿಗಳಿಗೆ ಮಲಗುವುದರಿಂದ ದಂಪತಿಗಳಿಗೆನೇ ಹೆಚ್ಚು ಅನುಕೂಲಕರವಾಗಿರುತ್ತದೆ. ಸಂಶೋಧನೆಯ ಪ್ರಕಾರ ನೀವು ಪ್ರತ್ಯೇಕವಾಗಿ ಏಕೆ ಮಲಗುವುದರಿಂದ ಯಾವುದೇ ನಿದ್ರಾ ಭಂಗವನ್ನು ಉಂಟುಮಾಡುವುದಿಲ್ಲ. ಇದರಿಂದ ಸುಖಕರವಾಗಿ ನಿದ್ರೆ ಮಾಡಬಹುದು.

ರಾತ್ರಿಯಲ್ಲಿ ಗೊರಕೆ ಹೊಡೆಯುವುದು, ಒದೆಯುವುದು, ದೇಹದ ಉಷ್ಣತೆಯ ಬದಲಾವಣೆ ವಿಭಿನ್ನವಾಗಿರುತ್ತದೆ. ನೀವು ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗಲು ಪ್ರಯತ್ನಿಸಿದರೆ ನಿಮ್ಮ ದೇಹವು ಅರಾಮವಾಗಲು ಸಹಾಯಕವಾಗುತ್ತದೆ. ಸ್ವಲ್ಪ ಸಮಯದ ಅಂತರವು ನಿಮ್ಮ ಸಂಬಂಧವನ್ನು ಹೆಚ್ಚು ಉತ್ತಮಗೊಳಿಸುತ್ತದೆ. ನಿಮಗೆ ವಿಶ್ರಾಂತಿ ಪಡೆಯಲು ಸಮಯ ಸಿಗುತ್ತದೆ.


ಜೊತೆಗೆ ಕೆಲವೊಮ್ಮೆ ದಂಪತಿಗಳ ನಡುವೆ ಮನಸ್ಥಾಪವಾದಾಗ ಈ ರೀತಿ ಕೆಲ ದಿನ ದೂರ ಮಲಗಿದರೆ ಆ ವಿರಹ ವೇದನೆಯಿಂದ ಕೋಪವೂ ತಣ್ಣಗಾಗುತ್ತದೆ. ದೈಹಿಕ ಅನ್ಯೋನ್ಯತೆ ಮತ್ತು ಭಾವನಾತ್ಮಕ ಪ್ರೀತಿಯ ಅವಶ್ಯಕತೆ ಯಾವಾಗಲೂ ಇರುತ್ತದೆ ಮತ್ತು ಆದ್ದರಿಂದ ಕೆಲವೊಮ್ಮೆ ಪ್ರತ್ಯೇಕವಾಗಿ ಮಲಗುವುದು ಉತ್ತಮ. ಜೊತೆಗೆ ಕೆಲವೊಮ್ಮೆ ಜ್ವರ ರೀತಿಯ ಅನಾರೋಗ್ಯವಿದ್ದಾಗ ದೂರ ಮಲಗಿದರೆ ಒಬ್ಬರಿಂದ ಒಬ್ಬರಿಗೆ ಅದು ಹರಡುವುದಿಲ್ಲ.

ಇದನ್ನೂ ಓದಿ ULLALA : ಮಲಗಿದ್ದಲ್ಲೇ ಹೃದಯಾಘಾ*ತಕ್ಕೆ ಬ*ಲಿಯಾದ ಯುವಕ

ಕೆಲವೊಮ್ಮೆ ದಂಪತಿಗಳಿಗೆ ಸ್ವಲ್ಪ ಅಂತರ ಕಾಯ್ದುಕೊಳ್ಳುವುದು ಅವರ ಲೈಂಗಿಕ ಜೀವನಕ್ಕೆ ಒಳ್ಳೆಯದು ಎಂದು ಸಂಶೋಧನೆ ಸೂಚಿಸುತ್ತದೆ. ಇದರಿಂದ ದಣಿವು ಆಗುವುದು ಕಡಿಮೆ ಆಗುತ್ತದೆ. ಪರಿಣಾಮವಾಗಿ, ಲೈಂಗಿಕ ಜೀವನವನ್ನು ಸುಧಾರಿಸಬಹುದು.

Continue Reading

DAKSHINA KANNADA

ಮೊಬೈಲ್ ನೋಡುತ್ತಿದ್ದಾಗ 16 ವರ್ಷದ ಬಾಲಕ ದಿಢೀರ್ ಸಾ*ವು; ವೈದ್ಯರಿಂದ ಶಾಕಿಂಗ್‌ ರಿಪೋರ್ಟ್‌; ಆಗಿದ್ದೇನು?

Published

on

ಸಾ*ವು ಹೇಗೆ, ಎಲ್ಲಿ ಬೇಕಾದರೂ ಬರಬಹುದು ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. 16 ವರ್ಷದ ಬಾಲಕ ಮೊಬೈಲ್ ಫೋನ್ ನೋಡುತ್ತಿದ್ದಾಗಲೇ ಕುಸಿದು ಬಿದ್ದು ಸಾ*ವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಈ ದುರಂತ ನಡೆದಿದೆ.

16 ವರ್ಷದ ಅಮನ್ ಖುರೇಷಿ ಮೃ*ತ ದುರ್ದೈವಿ. ಖುರೇಷಿ ಮೊಬೈಲ್ ಫೋನ್ ನೋಡುತ್ತಿದ್ದಾಗ ಹಾಸಿಗೆ ಮೇಲೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಅಮನ್ ಖುರೇಷಿ ಆಸ್ಪತ್ರೆ ತಲುಪುವಷ್ಟರಲ್ಲೇ ಪ್ರಾ*ಣ ಕಳೆದುಕೊಂಡಿದ್ದಾರೆ.

ಅಮನ್ ಖುರೇಷಿ ಸಾ*ವನ್ನಪ್ಪಿದ್ದನ್ನು ವೈದ್ಯರು ಖಚಿತ ಪಡಿಸಿದ್ದು, ಹಾರ್ಟ್ ಅಟ್ಯಾಕ್‌ನಿಂದ ಪ್ರಾ*ಣ ಬಿಟ್ಟಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಮೃ*ತಪಟ್ಟ ಬಾಲಕ ಮೊಬೈಲ್ ಫೋನ್‌ನಲ್ಲಿ ವಿಡಿಯೋ ನೋಡುತ್ತಿದ್ದಾಗ ಈ ದುರಂತ ನಡೆದಿದೆ.

ಇತ್ತೀಚೆಗೆ ದೇಶಾದ್ಯಾಂತ ಹೃದಯಾಘಾತಕ್ಕೆ ಸಾ*ವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಹದಿ ಹರಿಯದ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರೋದು ನಿಜಕ್ಕೂ ಶಾಕಿಂಗ್‌ ಘಟನೆಯಾಗಿದೆ.

ಹೃದಯಾಘಾತವು ವ್ಯಕ್ತಿಯ ಮಾನಸಿಕ ಒತ್ತಡ ಮತ್ತು ದೈಹಿಕ ಪರಿಶ್ರಮದಿಂದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ದೈನಂದಿನ ಕೆಲಸಗಳಲ್ಲಿ ಒತ್ತಡ ಹೆಚ್ಚಾಗುವುದರಿಂದ ಹೃದಯದ ಮೇಲೆ ಒತ್ತಡವೂ ಹೆಚ್ಚಾಗುತ್ತದೆ.

ಪ್ರಮುಖವಾಗಿ ನಮ್ಮ ದಿನನಿತ್ಯದ ಜೀವನಶೈಲಿ ಹಾಗೂ ಆಹಾರ ಕ್ರಮಗಳು ಸಣ್ಣ ವಯಸ್ಸಿನವರಿಂದ ವಯಸ್ಸಾದವರಿಗೂ ಹೃದಯಾಘಾತ ಆಗಲು ಕಾರಣವಾಗಿದೆ. ನ್ಯುಮೋನಿಯದಂತಹ ತೀವ್ರ ಸೋಂಕು ಹೃದಯ ಸ್ನಾಯುವಿನ ಊತಕವೂ ಸಾ*ವನ್ನು ಉಂಟು ಮಾಡಬಹುದು. ರಕ್ತನಾಳದಲ್ಲಿ ಬೇಗ ರಕ್ತು ಹೆಪ್ಪುಗಟ್ಟುವುದನ್ನು ತಡೆದರೆ ಹೃದಯಾಘಾತದಿಂದ ಪಾರಾಗಬಹುದು.

Continue Reading

LATEST NEWS

Trending