ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ..!
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ ಬಂದಿದೆ.
ಮಂಗಳೂರಿನ ಬಜಪೆ ಬಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಬಾಂಬ್ ಇಟ್ಟಿರುವುದಾಗಿ ಮಧ್ಯಾಹ್ನದ ಸುಮಾರಿಗೆ ಅನಾಮಧೇಯ ಬೆದರಿಕೆಯ ಕರೆ ಏರ್ ಪೋರ್ಟ್ ಗೆ ಬಂದ ಹಿನ್ನೆಲೆಯಲ್ಲಿ ಏರ್ ಪೋರ್ಟ್ ನಲ್ಲಿ ತೀವ್ರ ತಪಾಸಣೆ ನಡೆಸಲಾಗಿದೆ.
ಸಿಐಎಸ್ ಎಫ್ ಸಿಬ್ಬಂದಿ ಮತ್ತು ಪೊಲೀಸರ ಬಾಂಬ್ ಸ್ವಾಡ್ ಸಂಪೂರ್ಣ ಏರ್ ಪೋರ್ಟ್ ತಪಾಸಣೆ ನಡೆಸಿದ್ದು ತೀವ್ರ ತಪಾಸಣೆಯ ಬಳಿಕ ಇದೊಂದು ಹುಸಿ ಕರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಬಜಪೆ ಪೊಲೀಸ್ ಠಾಣೆಗೆ ಏರ್ ಪೋರ್ಟ್ ಅಧಿಕಾರಿಗಳು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
ಇದೇ ಜನವರಿ ತಿಂಗಳಲ್ಲಿ ಇದೇ ರೀತಿಯ ಬೆದರಿಕೆ ಕರೆ ಮಾಡಿ ಆದಿತ್ಯ ಎಂಬವ ಬಾಂಬ್ ಇಟ್ಟಿದ್ದು ಇಧಿಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ.