ನೃತ್ಯ ನಿಲ್ಲಿಸಿದ ಬಾಲಿವುಡ್ ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್..!!
Published
5 years agoon
By
Adminನೃತ್ಯ ನಿಲ್ಲಿಸಿದ ಬಾಲಿವುಡ್ ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್..!!
ಮುಂಬೈ: ಬಾಲಿವುಡ್ ನ ಹಿರಿಯ ನೃತ್ಯ ಸಂಯೋಜಕಿ ಸರೋಜ್ ಖಾನ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
71 ವರ್ಷದ ಸರೋಜ್ ಖಾನ್ ಅವರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮುಂಬೈನ ಬಾಂದ್ರಾದಲ್ಲಿರುವ ಗುರುನಾನಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಇದೀಗ ಹೃದಯಾಘಾತವಾಗಿ ಚಿಕಿತ್ಸೆ ಫಲಕಾರಿಯಾಗದೆ ಸರೋಜ್ ಖಾನ್ ನಿಧನರಾಗಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದ ಅವರು,
ಹಿಂದಿ ಸಿನಿಮಾ ಕ್ಷೇತ್ರದಲ್ಲಿ ಸ್ಮರಣೀಯ ಹಾಡುಗಳಿಗೆ ನೃತ್ಯಸಂಯೋಜನೆ ಮಾಡಿ ಜನಪ್ರಿಯತೆ ಗಳಿಸಿದ್ದರು.
ಅವರ ನಾಲ್ಕು ದಶಕಗಳ ಸಿನಿಮಾ ಜೀವಿತಾವಧಿಯಲ್ಲಿ 2,000ಕ್ಕೂ ಹೆಚ್ಚು ಹಾಡುಗಳಿಗೆ ನೃತ್ಯಸಂಯೋಜನೆ ಮಾಡಿದ್ದರು.
ಸಂಜಯ್ ಲೀಲಾ ಬನ್ಸಾಲಿ ಅವರ ‘ದೇವದಾಸ್’ ಸಿನಿಮಾದ ‘ಡೋಲ ರೇ ಡೋಲ’ ಹಾಡಿನ ನೃತ್ಯ, ಮಾಧುರಿ ದೀಕ್ಷಿತ್ ನಟನೆಯ ‘ತೇಜಾಬ್’ ಚಿತ್ರದ ‘ಏಕ್ ದೋ ತೀನ್’ ಹಾಡಿನ ನೃತ್ಯ,
2007ರಲ್ಲಿ ‘ಜಬ್ ವಿ ಮೆಟ್’ ಚಿತ್ರದ ‘ಯೇ ಇಷ್ಕ್ ಹಾಯೇ’ ಹಾಡಿನ ನೃತ್ಯ ಸಂಯೋಜನೆ ಕೂಡಲೇ ನೆನಪಿಗೆ ಬರುವಂತವು.
You may like
LATEST NEWS
ಬೈಕ್ ಅಪಘಾತಕ್ಕೆ ಬಲಿಯಾದ ಹೈಸ್ಕೂಲ್ ವಿದ್ಯಾರ್ಥಿ; ಪ್ರಕರಣದ ಬಳಿಕ ವಾರ್ನಿಂಗ್ ನೀಡಿದ ತಹಶೀಲ್ದಾರ್
Published
7 minutes agoon
18/01/2025By
NEWS DESK3ಕಡಬ : ಶಾಲೆಗೆ ಬೈಕ್ನಲ್ಲಿ ತೆರಳುತ್ತಿದ್ದ ಅಪ್ರಾಪ್ತ ಬಾಲಕ ಮೃತ ಪಟ್ಟ ಘಟನೆ ನಿನ್ನೆ ಕಡಬದಲ್ಲಿ ನಡೆದಿತ್ತು. ಕಡಬದ ಕಲ್ಲುಗುಡ್ಡೆ ನಿವಾಸಿ ಅಶೀಶ್ ಎಂಬ 16 ವರ್ಷದ ವಿದ್ಯಾರ್ಥಿ ಅಪಘಾತದಲ್ಲಿ ಮೃತ ಪಟ್ಟಿದ್ದ.
ಈ ಘಟನೆಯ ಬಳಿಕ ಕಡಬ ವ್ಯಾಪ್ತಿಯಲ್ಲಿ ಅನೇಕ ಅಪ್ರಾಪ್ತ ಯುವಕರು ಬೈಕ್ ಚಲಾಯಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿ ಬಂದಿತ್ತು. ಹೀಗಾಗಿ ಕಾರ್ಯಪ್ರವೃತ್ತರಾದ ಕಡಬ ತಾಲೂಕು ದಂಡಾಧಿಕಾರಿಯೂ ಆಗಿರುವ ತಹಶೀಲ್ದಾರರು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಅಪ್ರಾಪ್ತರು ಹಾಗೂ ಪರವಾನಿಗೆ ಇಲ್ಲದೆ ಬೈಕ್ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಅಪ್ರಾಪ್ತರ ಕೈಲಿ ಬೈಕ್ ನೀಡಿದ ಪೋಷಕರ ವಿರುದ್ಧ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ನಿಯಂತ್ರಣ ತಪ್ಪಿ ಮೋರಿಗೆ ಗುದ್ದಿದ ಬೈಕ್: ಸವಾರ ಸಾವು
ಅಷ್ಟೇ ಅಲ್ಲದೆ ಶಾಲಾ ಕಾಲೇಜುಗಳಿಗೆ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರದ ವಾಹನಗಳನ್ನು ವಿದ್ಯಾರ್ಥಿಗಳು ತಾರದಂತೆ ಶಾಲಾ ಮುಖ್ಯೋಪಾಧ್ಯಯರು ಮತ್ತು ಪ್ರಾಂಶುಪಾಲರು ಸೂಚನೆ ನೀಡಬೇಕು ಹಾಗೂ ಪೋಷಕರಿಗೆ ಈ ಬಗ್ಗೆ ಸೂಚನೆ ನೀಡಬೇಕು.
ಮತ್ತೊಮ್ಮೆ ಇಂತಹ ಘಟನೆ ಮರುಕಳಿಸಿದರೆ ಶಾಲೆಯ ಆಡಳಿತ ಹಾಗೂ ಮುಖ್ಯಸ್ಥರನ್ನೇ ಹೊಣೆಯಾಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಕಡಬ , ಸುಬ್ರಹ್ಮಣ್ಯ, ಬೆಳ್ಳಾರೆ, ಉಪ್ಪಿನಂಗಡಿ ಪೊಲೀಸ್ ಠಾಣಾಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.
DAKSHINA KANNADA
ಚಿನ್ನ ಕಡಿಮೆ ಬೆಲೆಗೆ ನೀಡುವವರ ಬಗ್ಗೆ ಎಚ್ಚರ; ಮಂಗಳೂರಿನಲ್ಲಿ ಅಂಗಡಿಯವರೊಬ್ಬರನ್ನು ವಂಚಿಸಲು ಯತ್ನ
Published
21 minutes agoon
18/01/2025By
NEWS DESK3ಮಂಗಳೂರು : ಕೃಷಿ ಮಾಡುವಾಗ ಭೂಮಿಯಲ್ಲಿ ನಿಧಿ ಸಿಕ್ಕಿದೆ. ನಮಗೆ ತುರ್ತಾಗಿ ಹಣ ಬೇಕಾದ ಕಾರಣ ಕಡಿಮೆಯಲ್ಲಿ ಚಿನ್ನ ಕೊಡ್ತೇವೆ … ಹೀಗಂತ ಯಾರಾದರೂ ನಿಮ್ಮ ಬಳಿ ಬಂದು ಹೇಳಿದ್ರೆ ಎಚ್ಚರವಾಗಿರಿ.
ಯಾಕಂದ್ರೆ ಇಂತಹ ಕಥೆ ಹೇಳಿ ನಕಲಿ ಚಿನ್ನ ನೀಡಿ ವಂಚಿಸುವ ತಂಡವೊಂದು ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದೆ. ನಗರದ ನಾಗುರಿ ಬಳಿ ಇದೇ ಕಥೆ ಹೇಳಿಕೊಂಡು ಅಂಗಡಿಯವರೊಬ್ಬರನ್ನು ವಂಚಿಸಲು ಪ್ರಯತ್ನಿಸಿದ್ದಾರೆ.
ಮಹಿಳೆ ಹಾಗೂ ನಾಲ್ವರು ಯುವಕರ ತಂಡ ಈ ಪ್ರಯತ್ನ ಮಾಡಿ ತಗಲಾಕೊಂಡಿದ್ದಾರೆ. ಮೊದಲಿಗೆ ಅಸಲಿ ಚಿನ್ನ ನೀಡಿ ಪರೀಕ್ಷಿಸಲು ಹೇಳಿದ್ದು ಪರೀಕ್ಷೆ ವೇಳೆ ಅದು ಅಸಲಿಯೇ ಆಗಿತ್ತು. 2 ಲಕ್ಷಕ್ಕೆ ಮತ್ತೊಂದು ಚಿನ್ನ ನೀಡಿದ್ದು ಅದು ನಕಲಿಯಾಗಿತ್ತು.
ಇದನ್ನೂ ಓದಿ: 23 ವರ್ಷದ ಹಿಂದಿ ಕಿರುತೆರೆ ನಟ ಸಾವು
ಆದರೆ ಇಂತಹ ವಂಚನೆ ಬಗ್ಗೆ ಮೊದಲೇ ಅನುಮಾನ ಇದ್ದ ಅಂಗಡಿಯವರು ಈ ಚಿನ್ನ ಕೂಡಾ ಪರೀಕ್ಷೆ ಮಾಡುವುದಾಗಿ ಹೇಳಿದ್ದಾರೆ. ಈ ವೇಳೆ ಬಂಡವಾಳ ಬಯಲಾಗುತ್ತದೆ ಎಂದು ನಾಲ್ವರು ಯುವಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಆದರೆ ಜೊತೆಯಲ್ಲಿದ್ದ ಮಹಿಳೆಯನ್ನು ಅಂಗಡಿಯವರು ಹಿಡಿದಿಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಡಿಮೆ ಬೆಲೆಗೆ ಇಂತಹ ಮೋಸದ ಕಥೆ ಹೆಣೆದು ಚಿನ್ನದ ಆಸೆ ತೋರಿಸಿ ವಂಚಿಸೋ ದೊಡ್ಡ ತಂಡವೇ ಇಲ್ಲಿ ಕಾರ್ಯಾಚರಿಸ್ತಾ ಇದೆ. ಹೀಗಾಗಿ ಸಾರ್ವಜನಿಕರು ಇಂತವರ ಬಗ್ಗೆ ಎಚ್ಚರವಾಗಿರುವುದು ಒಳ್ಳೆಯದು.
ಮಂಗಳೂರು/ಮುಂಬೈ : ಮುಂಬೈನ ಜೋಗೇಶ್ವರಿ ರಸ್ತೆಯಲ್ಲಿ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಹಿಂದಿ ಕಿರುತೆರೆ ನಟ ಅಮನ್ ಜೈಸ್ವಾಲ್ (23) ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡಿದ್ದ ಜೈಸ್ವಾಲ್ ಅವರನ್ನು ಕೂಡಲೇ ಕಾಮಾ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಟ್ರಕ್ ಚಾಲಕನ ವಿರುದ್ದ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕುಂದಾಪುರ : ಕಾರು ಡಿ*ಕ್ಕಿ; ಮಹಿಳೆಗೆ ಗಂಭೀ*ರ ಗಾ*ಯ
‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಜೈಸ್ವಾಲ್ ಅವರು ಪ್ರಮುಖ ಪಾತ್ರಕ್ಕಾಗಿ ಹೆಸರುವಾಸಿಯಾಗಿದ್ದರು.
‘ಹೊಸ ಕನಸುಗಳು ಮತ್ತು ಅಂತ್ಯವಿಲ್ಲದ ಸಾಧ್ಯತೆಗಳೊಂದಿಗೆ 2025ಕ್ಕೆ ಕಾಲಿಡುತ್ತಿದ್ದೇನೆ’ ಎಂದು ಜೈಸ್ವಾಲ್ ಅವರು ಹೊಸ ವರ್ಷದ ಪ್ರಯುಕ್ತ ಇನ್‌ಸ್ಟಾಗ್ರಾಮ್‌ನಲ್ಲಿ ಕೊನೆಯದಾಗಿ ಹಂಚಿಕೊಂಡಿದ್ದ ಪೋಸ್ಟ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
LATEST NEWS
ಖ್ಯಾತ ಡಾಲಿ ಚಾಯ್ವಾಲ ಮಂಗಳೂರಿಗೆ ಆಗಮನ
ಸುಳ್ಯ: ಹೆಂಡತಿಯನ್ನು ಕೊಂ*ದು ಆ*ತ್ಮಹ*ತ್ಯೆಗೆ ಶರಣಾದ ಗಂಡ
ತಡೆಬೇಲಿಗೆ ಡಿಕ್ಕಿ ಹೊಡೆದು ಅಂಡರ್ಪಾಸ್ ಗೆ ಉರುಳಿದ ವಾಹನ; ಹಲವರಿಗೆ ಗಾಯ
ಮಂಗಳೂರು : ರಾಜೀವ್ ಗಾಂಧಿ ವಿವಿ ಪ್ರಾದೇಶಿಕ ಕೇಂದ್ರಕ್ಕೆ ಸಿಎಂ ಶಿಲಾನ್ಯಾಸ
ಆ ನಟ ಕಿಸ್ ಮಾಡಿದಕ್ಕೆ ವಾಂತಿ ಮಾಡಿಕೊಂಡಿದ್ದರಂತೆ ಸ್ಟಾರ್ ನಟಿ
ಮೂರನೇ ದಾಖಲೆ ಬರೆದ ಉಡುಪಿಯ ಕಲಾವಿದ; ವರ್ಲ್ಡ್ ರೆಕಾರ್ಡ್ ಸೇರಿದ ಅಪೂರ್ವ ಕಲಾಕೃತಿ
Trending
- BIG BOSS7 days ago
BBK11: ಐವರು ನಾಮಿನೇಟ್, ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್ಪಾಸ್ ಯಾರಿಗೆ..?
- BIG BOSS5 days ago
ಕಣ್ಣೀರು ಒರೆಸಿದ ಸುದೀಪ್.. ಕಿಚ್ಚನ ಈ ದೊಡ್ಡ ಗುಣಕ್ಕೆ ಸೆಲ್ಯೂಟ್ ಹೊಡೆದ ಫ್ಯಾನ್ಸ್..!
- BIG BOSS4 days ago
ಮಿಡ್ ವೀಕ್ ಎಲಿಮಿನೇಷನ್ ನಿಂದ ಬಚಾವ್ ಆಗುವವರು ಯಾರು ?
- BIG BOSS4 days ago
ಚೈತ್ರಾ ಕುಂದಾಪುರ ಪ್ರಕಾರ ಈ ಸಲ ಬಿಗ್ ಬಾಸ್ ವಿನ್ನರ್ ಇವರೇ ?