ಮುಂಬೈ : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿಗೆ ಜಾರಿ ನಿರ್ದೇಶನಾಲಯ ಅತಿದೊಡ್ಡ ಶಾಕ್ ನೀಡಿದೆ. ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿಲ್ಪಾ ಶೆಟ್ಟಿ ದಂಪತಿಗೆ ಸೇರಿದ ಬರೋಬ್ಬರಿ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹಾಗೂ ಫ್ಲಾಟ್ ಅನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಿಟ್‌ಕಾಯಿನ್ ಸೇರಿದಂತೆ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಅವರಿಗೆ ಸಂಬಂಧಪಟ್ಟ ಸ್ಥಿರ ಮತ್ತು ಚರ ಆಸ್ತಿಯ ಜೊತೆಗೆ ಪುಣೆಯಲ್ಲಿರುವ ಬಂಗ್ಲೆ ಮತ್ತು ಷೇರುಗಳನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
2017ರಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರಾಜ್ ಕುಂದ್ರಾ ಅವರನ್ನು 6,600 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ತನಿಖೆ ನಡೆಸಿತ್ತು. ಈ ಪ್ರಕರಣದಲ್ಲಿ ಬಿಟ್‌ಕಾಯಿನ್ ಮೂಲಕ ಹಲವರಿಗೆ ಶೇಕಡಾ 10 ರಷ್ಟು ಹಣ ರಿಟರ್ನ್ ಮಾಡುವ ಭರವಸೆ ನೀಡಿ ಮೋಸ ಮಾಡಿದ ಆರೋಪ ಕೂಡ ಕೇಳಿ ಬಂದಿತ್ತು. ಇದೇ ಹಗರಣದಲ್ಲಿ ತನಿಖೆ ನಡೆಸಿದ ಜಾರಿ ನಿರ್ದೇಶನಾಲಯ ಇದೀಗ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದೆ ಎನ್ನಲಾಗಿದೆ. ಒಟ್ಟಾರೆ ಶಿಲ್ಪಾ ಶೆಟ್ಟಿ ಹಾಗೂ ಉದ್ಯಮಿ ರಾಜ್ ಕುಂದ್ರಾ ದಂಪತಿಯ 98 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಸದ್ಯ ಜಾರಿ ನಿರ್ದೇಶನಾಲಯದ ವಶದಲ್ಲಿದೆ.
ಅನೇಕ ಕಲಾವಿದರು ಹೀರೋ/ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಆದರೆ, ಕೆಲವರು ಬೇರೆಯದೇ ಆಲೋಚನೆ ಇಟ್ಟುಕೊಂಡು ನಂತರ ಚಿತ್ರರಂಗಕ್ಕೆ ಬಂದು ಗೆಲುವು ಕಾಣುತ್ತಾರೆ. ಈ ಸಾಲಿಗೆ ಆದಿತ್ಯ ರಾಯ್ ಕಪೂರ್ ಸಹ ಸೇರುತ್ತಾರೆ. ಕ್ರಿಕೆಟರ್ ಆಗಬೇಕು ಎಂದು ಕನಸು ಕಂಡಿದ್ದ ಆದಿತ್ಯ ನಂತರ ಬಾಲಿವುಡ್ನ ಸ್ಟಾರ್ ಆಗಿರೋ ಕಥೆಯೇ ರೋಚಕ.
ಆದಿತ್ಯ ರಾಯ್ ಕಪೂರ್ ಅವರು ಬಾಲಿವುಡ್ಗೆ ಕಾಲಿಟ್ಟಿದ್ದು 2009ರ ‘ಲಂಡನ್ ಡ್ರೀಮ್ಸ್’ ಸಿನಿಮಾ ಮೂಲಕ. ಆ ಬಳಿಕ ‘ಆಶಿಕಿ 2’, ‘ಯೇ ಜವಾನಿ ಹೇ ದಿವಾನಿ’ ‘ಕಳಂಕ್’ ರೀತಿಯ ಸಿನಿಮಾ ಮಾಡಿ ಗಮನ ಸೆಳೆದರು. ಅವರು ನಟಿಸಿದ ‘ದಿ ನೈಟ್ ಮ್ಯಾನೇಜರ್’ ಸೀರಿಸ್ ಭರ್ಜರಿ ಮೆಚ್ಚುಗೆ ಪಡೆಯಿತು. ಈ ಸರಣಿಯಲ್ಲಿ ಅವರ ನಟನೆ ಸಾಕಷ್ಟು ಗಮನ ಸೆಳೆಯಿತು. ಈ ಸರಣಿಂದ ಅವರ ಜನಪ್ರಿಯತೆ ಹೆಚ್ಚಾಗಿದೆ. ಇದಕ್ಕೆ ಸೀಕ್ವೆಲ್ ಕೂಡ ಬರಬೇಕಿದೆ. ಇಷ್ಟೆಲ್ಲ ಹೆಸರು ಮಾಡಿದ ಆದಿತ್ಯ ಅವರ ಮೂಲ ಕನಸು ಮಾತ್ರ ಬೇರೆಯದೇ ಇತ್ತು.
‘ನಾನು ಕ್ರಿಕೆಟರ್ ಆಗಬೇಕು ಎಂದುಕೊಂಡಿದ್ದೆ. ಆದರೆ, ಅದು ಹೊಂದಾಣಿಕೆ ಆಗಿಲ್ಲ. ನಂತರ ನಟನೆಗೆ ಬಂದೆ. ನಾನು ವಿಡಿಯೋ ಜಾಕಿ ಕೂಡ ಆಗಿದ್ದೆ’ ಎಂದಿದ್ದರು ಆದಿತ್ಯ ರಾಯ್ ಕಪೂರ್. ಹಾಗಂತ ಆದಿತ್ಯ ರಾಯ್ ಕಪೂರ್ ಅವರಿಗೆ ಯಾವುದೇ ಹಿನ್ನೆಲೆ ಇಲ್ಲ ಎಂದುಕೊಳ್ಳಬೇಡಿ. ಅವರು ದೊಡ್ಡ ಕುಟುಂಬದ ಹಿನ್ನೆಲೆಯಿಂದಲೇ ಬಂದವರು.
ಕನ್ನಡ ಚಿತ್ರರಂಗ ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ದಂಪತಿ ತಮ್ಮ ಚೊಚ್ಚಲ ಮಗುವನ್ನು ಸ್ವಾಗತಿಸಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ (ನವೆಂಬರ್ 12) ಅವಿವಾ ಬಿದ್ದಪ್ಪ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸದ್ಯ ಅವಿವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಆಗಸ್ಟ್ ತಿಂಗಳಿನಲ್ಲಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸಿಹಿ ಸುದ್ದಿ ಹೊರಬಿದಿತ್ತು. ಅದರ ಬೆನ್ನಲ್ಲೇ ಸೆಪ್ಟೆಂಬರ್ 18, 2024ರಂದು ಅವಿವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿತ್ತು. ಅವಿವಾ ಸೀಮಂತದಲ್ಲಿ ಅನೇಕ ಸಿನಿಮಾ ತಾರೆಯರು ಭಾಗಿಯಾಗಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.
ಸೀಮಂತ ಕಾರ್ಯಕ್ರಮದ ಅವಿವಾ ಫೋಟೋ ನೋಡಿದ ಅಭಿಮಾನಿಗಳು ಗಂಡು ಮಗುವೇ ಜನಿಸುವುದು ಎಂದು ಗೆಸ್ ಮಾಡಿದ್ದರು. ಅವಿವಾ ಬಿದ್ದಪ್ಪ ಸಾಮಾಜಿಕ ಜಾಲತಾಣದಲ್ಲಿಗಳಲ್ಲಿ ಫೋಟೋಗಳನ್ನು ಪೋಸ್ಟ್ ಮಾಡಿದಾಗಲೂ ಕೂಡ ಅನೇಕರು ಗಂಡು ಮಗು, ಅಂಬರೀಷ್ ಮತ್ತೆ ಹುಟ್ಟಿ ಬರುತ್ತಿದ್ದಾರೆ ಎನ್ನುವ ಕಮೆಂಟ್‌ಗಳನ್ನು ಮಾಡುತ್ತಿದ್ದರು.
ಇದೀಗ ಎಲ್ಲರ ನಿರೀಕ್ಷೆಗಳು ಸರಿಯಾಗಿದ್ದು ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ದಂಪತಿಗೆ ಗಂಡು ಮಗುವಾಗಿದೆ. ಹೀಗಾಗಿ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಾಗಿ ಅಂಬರೀಷ್ ಅವರೇ ಮತ್ತೆ ಹುಟ್ಟಿ ಬಂದಿದ್ದಾರೆ ಎನ್ನುವ ಮಾತುಗಳು ಎಲ್ಲರ ಬಾಯಲ್ಲಿ ಇದೆ. ಜೊತೆಗೆ ಇನ್ನೊಂದು ವಿಶೇಷವಾದ ವಿಚಾರ ಎಲ್ಲೆಡೆ ಹರಿದಾಡುತ್ತಿದೆ. ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಅವರ ಮಗನಿಗೆ ಏನು ಹೆಸರಿಡಬಹುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿದ್ದರೆ. ಮುದ್ದಾದ ಮೊಗ್ಗಗನಿಗೆ ತಾತನ ಹೆಸರೇ ಇಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಅಂದರೆ ಅಭಿಷೇಕ್ ಮತ್ತು ಅವಿವಾ ಬಿದ್ದಪ್ಪ ಮಗನಿಗೆ ಅಂಬರೀಷ್ ಅವರ ಹೆಸರೇ ಇಡಲಾಗುತ್ತದೆ. ಹಳೆಯ ಸಂಪ್ರದಾಯದಂತೆ ತಾತನ ಹೆಸರನ್ನೇ ಮೊಮ್ಮಗನಿಗೆ ಇಡುವ ಪದ್ಧತಿಯನ್ನು ಸುಮಲತಾ ಹಾಗೂ ಅಭಿಷೇಕ್ ಮುಂದುವರಿಸುತ್ತಾರೆ ಎನ್ನುವ ಗಾಳಿ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲವರು ಹೊಸ ಹೆಸರಿಟ್ಟು ಸರ್ ನೇಮ್ ಅಂಬರೀಷ್ ಎಂದು ಇಡುವ ಸಾಧ್ಯತೆ ಎಂದು ಸಹ ಹೇಳುತ್ತಿದ್ದಾರೆ.
ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಪುತ್ರಿ ಅವಿವಾ ಮತ್ತು ಅಭಿಷೇಕ್ ಅಂಬರೀಶ್ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಜೂನ್ 5, 2023ರಂದು ಪೋಷಕರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು.
ಮಂಗಳೂರು/ಮುಂಬೈ : ಬಾಲಿವುಡ್ ನಟ ಶಾರುಖ್ ಖಾನ್‌ಗೆ ಕೊ*ಲೆ ಬೆ*ದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್ಗಢದಲ್ಲಿ ಬಂಧಿಸಲಾಗಿದೆ. ವಕೀಲ ಫೈಜಾನ್ ಖಾನ್ ಬಂಧಿತ ಆರೋಪಿ. ಛತ್ತೀಸ್‌ಗಢದ ರಾಯ್‌ಪುರದ ಆತನ ನಿವಾಸದಲ್ಲಿ ಬಾಂದ್ರಾ ಪೊಲೀಸರು ಬಂಧಿಸಿದ್ದಾರೆ.
50 ಲಕ್ಷ ರೂ. ನೀಡುವಂತೆ ಬೆ*ದರಿಕೆ:
ನವೆಂಬರ್ 7 ರಂದು ವ್ಯಕ್ತಿಯೊಬ್ಬ ಬಾಲಿವುಡ್ ನಟ ಶಾರುಖ್ ಖಾನ್‌ಗೆ ಜೀ*ವ ಬೆ*ದರಿಕೆ ಹಾಕಿದ್ದಲ್ಲದೇ, 50 ಲಕ್ಷ ರೂ. ನೀಡುವಂತೆ ಬೇಡಿಕೆಯೊಡ್ಡಿದ್ದ. ಈ ಸಂಬಂಧ ಮುಂಬಯಿಯ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಫೋನ್ ಟ್ರ್ಯಾಕ್ ಮಾಡಿದಾಗ, ಆರೋಪಿ ಛತ್ತೀಸ್‌ಗಢ ರಾಜ್ಯದ ರಾಯ್‌ಪುರದಿಂದ ಕರೆ ಮಾಡಿರುವುದು ತಿಳಿದು ಬಂದಿತ್ತು. ಇದೀಗ ಆರೋಪಿ ವಕೀಲ ಫೈಜಲ್ ಖಾನ್‌ನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸರು, ರಾಯ್‌ಪುರದಲ್ಲಿ ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ನವೆಂಬರ್ 2ರಂದು ತನ್ನ ಮೊಬೈಲ್ ಕಳೆದು ಹೋಗಿದ್ದು, ಈಗಾಗಲೇ ದೂರು ದಾಖಲಿಸಿದ್ದೇನೆ. ಕಳೆದು ಹೋಗಿರುವ ತನ್ನ ಫೋನ್‌ನಿಂದ ಯಾರೋ ಕಿಡಿಗೇಡಿಗಳು ಶಾರುಖ್ ಖಾನ್‌ಗೆ ಬೆ*ದರಿಕೆ ಕರೆ ಮಾಡಿದ್ದಾರೆ. ಇದು ನನ್ನ ವಿರುದ್ಧ ನಡೆದಿರುವ ಪಿತೂರಿಯಾಗಿದೆ ಎಂದು ಫೈಜಲ್ ಖಾನ್ ಪೊಲೀಸರಿಗೆ ತಿಳಿಸಿದ್ದಾನೆ.