ಮುಲ್ಕಿ: ದ.ಕ ಜಿಲ್ಲೆಯ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಜಾತ್ರಾ ಮಹೋತ್ಸವಕ್ಕೆ ಬಾಲಿವುಡ್ ನ ಖ್ಯಾತ ನಟ ಸುನೀಲ್ ಶೆಟ್ಟಿ ಭೇಟಿ ನೀಡಿದ್ದಾರೆ.
ಮೂಲತಃ ದ.ಕ ಜಿಲ್ಲೆಯ ಮುಲ್ಕಿ ಬಪ್ಪನಾಡಿನವರಾದ ಸುನೀಲ್ ಶೆಟ್ಟಿ ಪ್ರತಿ ಬಾರಿಯೂ ತಮ್ಮೂರಿಗೆ ಭೇಟಿ ನೀಡಿದ ಸಂದರ್ಭ ಬಪ್ಪನಾಡು ಕ್ಷೇತ್ರಕ್ಕೆ ಆಗಮಿಸಿ ತಾಯಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.
ಈ ಬಾರಿಯೂ ತಮ್ಮ ಮನೆಯ ಸಮೀಪದ ದೇವರ ಕಟ್ಟೆ ಪೂಜೆಯಲ್ಲಿ ಕುಟುಂಬ ಸಮೇತರಾಗಿ ಭಾಗಿಯಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.