LATEST NEWS
ದೇಹದ ಈ ಭಾಗಗಳಲ್ಲಿ ಮಚ್ಚೆಯಿದ್ದರೆ ತುಂಬಾ ಲಕ್ಕಿ! ಯಾವುದಕ್ಕೂ ಕೊರತೆ ಇರುವುದಿಲ್ಲ!
Published
3 hours agoon
By
NEWS DESK2ಮಚ್ಚೆಗಳು ಬಹುತೇಕ ಎಲ್ಲರ ದೇಹದಲ್ಲೂ ಇರುತ್ತವೆ. ಕೆಲವೊಮ್ಮೆ ಆಪ್ತರು ಮಚ್ಚೆಗಳ ವಿಚಾರಕ್ಕೆ ತಮಾಷೆ ಮಾಡುವುದೂ ಇದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಇರುತ್ತವೆ. ಇನ್ನು ಕೆಲವು ಆಮೇಲೆ ಉಂಟಾಗುತ್ತವೆ. ಮತ್ತೆ ಕೆಲವು ಕಾಲ ಕ್ರಮೇಣ ಸಣ್ಣದಾಗುತ್ತಾ ಹೋಗುತ್ತವೆ. ಹೀಗೆ ನಾನಾ ಥರದ ಮಚ್ಚೆಗಳಿವೆ. ಆದರೆ ಕೆಲವು ಮಚ್ಚೆಗಳು ಮಾತ್ರ ಅದೃಷ್ಟ ತರುತ್ತವೆ. ಆ ಅದೃಷ್ಟದ ಮಚ್ಚೆಗಳ ಕುರಿತ ಅಪರೂಪದ ಮಾಹಿತಿ ಇಲ್ಲಿವೆ.
ಮೂಗಿನ ಮೇಲಿನ ಮಚ್ಚೆ ಏನು ಸಂಕೇತಿಸುತ್ತದೆ?
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಮೂಗಿನ ಮೇಲೆ ಅಂದರೆ ತುದಿಯಲ್ಲಿ ಮಚ್ಚೆ ಇರುವ ವ್ಯಕ್ತಿಯು ವಿವಿಧ ಪ್ರತಿಭೆಗಳಲ್ಲಿ ಶ್ರೀಮಂತನಾಗಿರುತ್ತಾನೆ. ಅಂತಹ ವ್ಯಕ್ತಿಯು ತುಂಬಾ ಅದೃಷ್ಟವಂತರು. ಸಂತೋಷ ಮತ್ತು ಸಮೃದ್ದಿಯನ್ನು ಹೊಂದುತ್ತಾನೆ. ಅಂತಹ ಜನರು ತಮ್ಮ ವೃತ್ತಿ ಮತ್ತು ವ್ಯವಹಾರಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಾರೆ. ಇದಲ್ಲದೇ ಮೂಗಿನ ಬಲಭಾಗದಲ್ಲಿ ಮಚ್ಚೆ ಇರುವ ಮಹಿಳೆಯರು ತಮ್ಮ ಪೋಷಕರಿಂದ ಹೆಚ್ಚಿನ ಗೌರವ ಮತ್ತು ಬೆಂಬಲವನ್ನು ಪಡೆಯುತ್ತಾರೆ ಎಂದು ನಂಬಲಾಗಿದೆ. ಆದರೆ ಮೂಗಿನ ಮೇಲ್ಭಾಗದಲ್ಲಿ ಅಂದರೆ ಹುಬ್ಬುಗಳ ಸಮೀಪ ಮಚ್ಚೆ ಇದ್ದರೆ ಆರ್ಥಿಕವಾಗಿ ಕಷ್ಟಪಡಬೇಕಾಗುವುದು ಮತ್ತು ಉದ್ಯೋಗ ಸಿಗುವುದು ಕಷ್ಟವಾಗುತ್ತದೆ. ಇದು ಹಣಕಾಸಿನ ಅಸ್ಥಿರತೆಯ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿದೆ ಎಂದು ಕೆಲವರು ನಂಬುತ್ತಾರೆ.
ಕಿವಿಯಲ್ಲಿನ ಮಚ್ಚೆ ಏನು ಸಂಕೇತಿಸುತ್ತದೆ?
ಸಾಮುದ್ರಿಕಾ ಶಾಸ್ತ್ರದ ಪ್ರಕಾರ, ಕಿವಿಯ ಮಧ್ಯದಲ್ಲಿ ಮಚ್ಚೆ ಇರುವವರು ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಅಂತಹವರು ಒಮ್ಮೆ ನಿರ್ಧಾರ ತೆಗೆದುಕೊಂಡರೆ ಅದನ್ನು ಮಾಡದೇ ಮುಗಿಸಲಾರರು. ಕಿವಿಯ ಕೆಳಗೆ ಮಚ್ಚೆ ಹೊಂದಿರುವ ಜನರು ಸ್ವಭಾವತಃ ತುಂಬಾ ಭಾವನಾತ್ಮಕವಾಗಿರುತ್ತಾರೆ. ಆಗಾಗ್ಗೆ ಸಣ್ಣ ವಿಷಯಗಳನ್ನು ಬೇಗ ಮನಸ್ಸಿಗೆ ತೆಗೆದುಕೊಳ್ಳುತ್ತಾರೆ.
ಕಣ್ಣಿನಲ್ಲಿರುವ ಮಚ್ಚೆ ಏನು ಸಂಕೇತಿಸುತ್ತದೆ?
ಕಣ್ಣಿನಲ್ಲಿ ಮಚ್ಚೆ ಇರುವವರು ಸುಲಭವಾಗಿ ಇತರರನ್ನು ಆಕರ್ಷಿಸುತ್ತಾರೆ. ಅಂತಹ ಜನರು ತುಂಬಾ ಅದೃಷ್ಟವಂತರು ಮತ್ತು ಪ್ರತಿ ಹಂತದಲ್ಲೂ ಯಶಸ್ವಿಯಾಗುತ್ತಾರೆ. ಅಂತಹವರಿಗೆ ಹಣದ ಕೊರತೆ ಇರುವುದಿಲ್ಲ.
ತುಟಿಗಳ ಮೇಲಿನ ಮಚ್ಚೆ ಏನು ಸಂಕೇತಿಸುತ್ತದೆ?
ಮೇಲಿನ ತುಟಿಯ ಬಲಭಾಗದಲ್ಲಿ ಮಚ್ಚೆ ಇರುವವರು ತುಂಬಾ ಅದೃಷ್ಟವಂತರು ಎಂದು ನಂಬಲಾಗಿದೆ. ಅವರು ಜೀವನದಲ್ಲಿ ಎಲ್ಲಾ ರೀತಿಯ ಸೌಕರ್ಯಗಳು ಮತ್ತು ಐಷಾರಾಮಿಗಳನ್ನು ಬಹಳ ಸುಲಭವಾಗಿ ಪಡೆಯುತ್ತಾರೆ. ಅಂತಹ ಜನರು ಪ್ರೀತಿಯ ಸಂಬಂಧಗಳಲ್ಲಿ ಯಶಸ್ವಿಯಾಗುತ್ತಾರೆ. ಮತ್ತೊಂದೆಡೆ, ತುಟಿಯ ಎಡಭಾಗದಲ್ಲಿರುವ ಮಚ್ಚೆಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ.
ಗಲ್ಲದ ಮೇಲಿನ ಮಚ್ಚೆ ಏನು ಸಂಕೇತಿಸುತ್ತದೆ?
ಗಲ್ಲದ ಮೇಲೆ ಇರುವ ಮಚ್ಚೆಯನ್ನೂ ಮಂಗಳಕರ ಎಂದು ಪರಿಭಾವಿಸಲಾಗುತ್ತದೆ. ಗಲ್ಲದ ಮೇಲೆ ಮಚ್ಚೆ ಇರುವವರ ಆರ್ಥಿಕ ಸ್ಥಿತಿ ಯಾವತ್ತೂ ತೊಂದರೆ ಕೊಡುವುದಿಲ್ಲ. ಸದಾ ಒಳ್ಳೆಯ ಹಣಕಾಸು ಸ್ಥಿತಿ ಇವರದಾಗುತ್ತದೆ. ಹಣಕಾಸಿನ ಕುರಿತು ಚಿಂತೆ ಮಾಡುವ ಸ್ಥಿತಿ ಯಾವತ್ತೂ ಎದುರಾಗುವುದಿಲ್ಲ. ಅಲ್ಲದೇ ಹಲವು ಮೂಲಗಳಿಂದ ಇವರಿಗೆ ಆದಾಯ ಬರುತ್ತಿರುತ್ತದೆ.
DAKSHINA KANNADA
ನರಿಂಗಾನ ಜೋಡುಕರೆ ಕಂಬಳ ಕಣ್ತುಂಬಿಕೊಂಡ ಶಾನ್ವಿ ಶ್ರೀವಾಸ್ತವ್
Published
4 minutes agoon
12/01/2025By
NEWS DESK3ಉಳ್ಳಾಲ : ಕೊಣಾಜೆ ದೇರಳಕಟ್ಟೆ ಸಮೀಪದಲ್ಲಿ ವಿಧಾನ ಸಭಾಧ್ಯಕ್ಷ ಯು ಟಿ ಖಾದರ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಲವ- ಕುಶ ಜೋಡುಕರೆ ನರಿಂಗಾನ ಜೋಡುಕರೆ ಕಂಬಳೋತ್ಸವಕ್ಕೆ ಶನಿವಾರ ಚಾಲನೆ ದೊರಕಿದ್ದು, ಸಂಜೆಯ ಸಭಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗವಹಿಸಿದ್ದರು.
ಸಿಎಂ ಅವರನ್ನು ಪೂರ್ಣ ಕುಂಭ ಸ್ವಾಗತದೊಂದಿಗೆ ಬರಮಾಡಿಕೊಂಡು ಆರತಿ ಬೆಳಗಿ ಸ್ವಾಗತಿಸಲಾಯಿತು. ಸ್ಪೀಕರ್ ಯು ಟಿ ಖಾದರ್ ಸಿಎಂ ಅವರನ್ನು ವೇದಿಕೆಗೆ ಕರೆದುಕೊಂಡು ಬಂದರು. ಸಭಾ ಕಾರ್ಯಕ್ರಮವನ್ನು ಸಿಎಂ ಅವರು ಉದ್ಘಾಟಿಸಿದರು.
ಇದನ್ನೂ ಓದಿ: ನರಿಂಗಾನ ಕಂಬಳದಲ್ಲಿ ಭಾಗಿಯಾದ ಸಿಎಂ ಸಿದ್ದರಾಮಯ್ಯ; ತುಳುವಿಗೆ ಎರಡನೇ ರಾಜ್ಯಭಾಷೆ ಸ್ಥಾನಮಾನದ ಭರವಸೆ
ಇಂದಿನ ಕಂಬಳ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಶಾನ್ವಿ ಶ್ರೀವಾಸ್ತವ್, ಕಂಬಳದ ಓಟವನ್ನು ಬೆರಗುಗಣ್ಣಿನಿಂದ ವೀಕ್ಷಣೆ ಮಾಡಿದರು. ಮಾತ್ರವಲ್ಲದೆ ಕಂಬಳದ ಓಟವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದುಕೊಂಡರು.
ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ತೆಂಗಿನಕಾಯಿ ದರ ಭಾರಿ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ.
ಎಳನೀರು ಭರ್ಜರಿ ಮಾರಾಟವಾದ ಹಿನ್ನೆಲೆ ತೆಂಗಿನಕಾಯಿ ಕಡಿಮೆಯಾಗಿದ್ದು, ಈ ಹಿನ್ನೆಲೆ ದರ ಏರಿಕೆಯಾಗಿದೆ.
ಈ ಮೊದಲು ಒಂದು ತೆಂಗಿನಕಾಯಿಗೆ 20, 25, 30 ರೂ. ದರ ಇತ್ತು. ಈಗ 65 ರೂ.ವರೆಗೆ ಮಾರಾಟವಾಗುತ್ತಿದೆ. ಕೆಜಿಗೆ 32-33 ಗೆ ಮಾರಾಟವಾಗುತ್ತಿದ್ದ ತೆಂಗಿನಕಾಯಿ ಈಗ 60 ರೂ.ಗೆ ತಲುಪಿದೆ. ತೆಂಗಿನ ಇಳುವರಿ ಕಡಿಮೆಯಾಗಿದ್ದು, ಎಳನೀರಿಗೂ ಭಾರಿ ಪ್ರಮಾಣದಲ್ಲಿ ಕೊಯ್ದು ಮಾಡುವುದರಿಂದ ಬೆಲೆ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
Ancient Mangaluru
ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು
Published
37 minutes agoon
12/01/2025By
NEWS DESK2ಕಾಸರಗೋಡು: ಗಲ್ಫ್ ನಿಂದ ಅಪ್ಪ ತಂದ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕುಂಬಳೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಕುಂಬಳೆ ಭಾಸ್ಕರ ನಗರದ ಅನ್ವರ್ ಮೆಹರೂಫಾ ದಂಪತಿ ಪುತ್ರ ಅನಾಸ್ ಮೃತಪಟ್ಟ ಮಗು. ಅನಾಸ್ ಪಿಸ್ತಾವನ್ನು ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದ್ದು, ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದಾರೆ. ಬಳಿಕ ಕಂದಮ್ಮನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಯಿತು.
ಆದಿತ್ಯವಾರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದ್ದು, ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ ಎಂದು ತಿಳಿದು ಬಂದಿದೆ. ಊರಿಗೆ ಬಂದಿದ್ದ ತಂದೆ ಅನ್ವರ್ ಒಂದು ವಾರದ ಹಿಂದೆಯಷ್ಟೇ ಗಲ್ಫ್ ಗೆ ತೆರಳಿದ್ದರು. ಸುದ್ದಿ ತಿಳಿದು ತಂದೆ ಊರಿಗೆ ಮರಳಿದ್ದಾರೆ ಎನ್ನಲಾಗಿದೆ.
LATEST NEWS
ಪಿಲಿಕುಳ ಕಂಬಳ ವಿಚಾರಣೆ ಜನವರಿ 21 ಕ್ಕೆ ಮುಂದೂಡಿಕೆ
ಈ ವಾರ ಬಿಗ್ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿ ಇವರೇ..!
ಮಂಗಳೂರು: ಜ. 31 ರಿಂದ ಫೆ. 2 ರ ತನಕ ತಣ್ಣೀರುಬಾವಿ ಬೀಚ್ ಫೆಸ್ಟಿವಲ್
ಈ ಒಂದು ಕೆಲಸ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಪಡಿತರ ಚೀಟಿದಾರರಿಗೆ ಆಹಾರ ಧಾನ್ಯ ಸಿಗುವುದಿಲ್ಲ !?
ದೇಹದ ಈ ಭಾಗಗಳಲ್ಲಿ ಮಚ್ಚೆಯಿದ್ದರೆ ತುಂಬಾ ಲಕ್ಕಿ! ಯಾವುದಕ್ಕೂ ಕೊರತೆ ಇರುವುದಿಲ್ಲ!
ಕಡಬ : ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಬಾಣಂತಿ ಸಾ*ವು
Trending
- FILM6 days ago
ಸುದೀಪ್ ಮಗಳು ಸಾನ್ವಿ ಬಗ್ಗೆ ಯಾಕಿಷ್ಟು ಟ್ರೋಲ್? ಅವರು ಮಾಡಿದ ತಪ್ಪೇನು?
- FILM4 days ago
ಗೋವಾದಲ್ಲಿ ಕೇಕ್ ಕತ್ತರಿಸಿ ಯಶ್ ಬರ್ತ್ಡೇ ಸಂಭ್ರಮ
- LATEST NEWS2 days ago
ಹಲ್ಲು ಹುಳುಕಾಗಿದ್ಯಾ.? ಈ ಮನೆಮದ್ದು ಪ್ರಯತ್ನಿಸಿ, ತಕ್ಷಣ ಎಲ್ಲಾ ಹಲ್ಲಲ್ಲಿರುವ ಹುಳುಗಳು ಹೊರ ಬರುತ್ತವೆ.!
- FILM3 days ago
ಮಗುವಿನೊಂದಿಗೆ ಕೊಲ್ಲೂರು ದೇಗುಲಕ್ಕೆ ಹರ್ಷಿಕಾ ದಂಪತಿ ಭೇಟಿ