Saturday, February 4, 2023

ಶ್ರೀರಕ್ಷಾ ದೋಣಿ ದುರಂತ – ಗರಿಷ್ಠ ಪರಿಹಾರಕ್ಕೆ ಶಾಸಕ ಕಾಮತ್ ಮನವಿ..!

ಶ್ರೀರಕ್ಷಾ ದೋಣಿ ದುರಂತ – ಗರಿಷ್ಠ ಪರಿಹಾರಕ್ಕೆ ಶಾಸಕ ಕಾಮತ್ ಮನವಿ..!

ಬೆಂಗಳೂರು: ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ಶ್ರೀರಕ್ಷಾ ದೋಣಿ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಸದನದಲ್ಲಿ ಸರಕಾರಕ್ಕೆ ಮನವಿ ಸಲ್ಲಿಸಿದರು.

ಮೀನುಗಾರಿಕೆಗೆ ಸಮುದ್ರಕ್ಕೆ ತೆರಳಿ ವಾಪಸ್ಸಾಗುತ್ತಿದ್ದ ವೇಳೆ 25 ಜನರಿದ್ದ ಶ್ರೀ ರಕ್ಷಾ ಹೆಸರಿನ ದೋಣಿ ಮುಳುಗಡೆಯಾಗಿ 19 ಜನರು ಪ್ರಾಣಾಪಾಯದಿಂದ ಪಾರಾಗಿ 6 ಜನರು ಮೃತಪಟ್ಟ ಘಟನೆಯ ಕುರಿತು ಸದನದಲ್ಲಿ ಮಾತನಾಡಿದ ಶಾಸಕ ಕಾಮತ್ 6 ಜನರಲ್ಲಿ ಒಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ, ಮೃತದೇಹದ ಶೋಧ ಕಾರ್ಯ ನಡೆಯುತ್ತಿದೆ ಎಂದರು.

ಈಗಾಗಲೇ ಮೀನುಗಾರಿಕಾ ಇಲಾಖೆಯು ಮೃತರ ಕುಟುಂಬಗಳಿಗೆ ತಲಾ 6 ಲಕ್ಷ ರೂಪಾಯಿ ಪರಿಹಾರ ಧನವನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮೀನುಗಾರಿಕಾ ಸಚಿವರಾದ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನೀಡಲಾಗಿದೆ.

ಬೇರೆಡೆಗಳಲ್ಲಿ ಸಂಭವಿಸಿದ ದೋಣಿ ದುರಂತ ಘಟನೆಗಳಲ್ಲಿ 10 ಲಕ್ಷದ ವರೆಗೆ ಪರಿಹಾರ ನೀಡಲಾಗಿದೆ. ಹಾಗಾಗಿ ಸರಕಾರವು ಮುತುವರ್ಜಿ ವಹಿಸಿ ಹೆಚ್ಚಿನ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಶಾಸಕ ಕಾಮತ್ ಮನವಿ ಮಾಡಿಕೊಂಡರು.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, ಮೀನುಗಾರಿಕಾ ಸಚಿವರು ಹಾಗೂ ಸರಕಾರದ ಜೊತೆ ಈ ಕುರಿತು ಚರ್ಚಿಸಲಾಗುವುದು ಎಂದರು.

LEAVE A REPLY

Please enter your comment!
Please enter your name here

Hot Topics

ಸೌದಿ ಅರೇಬಿಯಾದಲ್ಲಿ ಭೀಕರ ವಾಹನ ಅಪಘಾತ : ಮಂಗಳೂರು ಮೂಲದ ಮೂವರ ದಾರುಣ ಅಂತ್ಯ..!

ಸೌದಿ ಅರೇಬಿಯಾದ ಅಲ್-ಹಸಾ ಎಂಬ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಸೇರಿದಂತೆ ಒಟ್ಟು ನಾಲ್ವರು ಅನಿವಾಸಿ ಉದ್ಯೋಗಿಗಳು ಮೃತಪಟ್ಟಿರುವ ದಾರುಣ ಘಟನೆ ಕಳೆದ ರಾತ್ರಿ ನಡೆದಿದೆ.ರಿಯಾದ್:...

ಮುಲ್ಕಿ : ಇಬ್ಬರ ಸಾವಿಗೆ ಕಾರಣರಾದ ತುಳು ಕಾಮಿಡಿಯನ್ ಅರ್ಪಿತ್ ಅರೆಸ್ಟ್..!

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಮಂಗಳವಾರ ಮಧ್ಯರಾತ್ರಿ ಕಾರುಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ...

ಮಂಗಳೂರು : ಸುರತ್ಕಲಿನಿಂದ ಕೆಲಸಕ್ಕೆ ತೆರಳಿದ್ದ ಯುವತಿ ಕಾವೇರಿ ಮಿಸ್ಸಿಂಗ್..!

ಮಂಗಳೂರು: ಯುವತಿಯೊಬ್ಬಳು ನಾಪತ್ತೆಯಾಗಿರುವ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಣೆಯಾದ ಯುವತಿ ತಡಂಬೈಲ್‌ ಗ್ರಾಮದ ಜಯಶ್ರೀ ಶೆಟ್ಟಿ ಎಂಬವರ ಮಗಳು ಕಾವೇರಿ(19) ಎಂದು ತಿಳಿದು ಬಂದಿದೆ.ಜ.27ರಂದು ಮನೆಯಿಂದ ಕೆಲಸಕ್ಕೆಂದು ತೆರಳಿದವರು...