HomeLATEST NEWSಉಡುಪಿಯಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು, ಓರ್ವ ನಾಪತ್ತೆ..!

ಉಡುಪಿಯಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು, ಓರ್ವ ನಾಪತ್ತೆ..!

ಉಡುಪಿಯಲ್ಲಿ ದೋಣಿ ದುರಂತ: ಮೂವರು ಮೀನುಗಾರರು ಸಾವು, ಓರ್ವ ನಾಪತ್ತೆ..!

ಉಡುಪಿ : ಉಡುಪಿಯ ಕಿರಿಮಂಜೇಶ್ವರ ಸಮೀಪದ ಕೊಡೇರಿ ಸಮುದ್ರದಲ್ಲಿ ನಾಡದೋಣಿ ದುರಂತ ಸಂಭವಿಸಿದೆ. ಬಂಡೆಗೆ ನಾಡದೋಣಿ ಹೊಡೆದಿದ್ದು, ಈ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದಾರೆ. 

ಓರ್ವ ಮೀನುಗಾರ ಕಣ್ಮರೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.

11‌ ಮಂದಿ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದು, 7 ಮಂದಿಯನ್ನು ರಕ್ಷಿಸಲಾಗಿದೆ. ಅಲೆಗಳ ತೀವ್ರತೆಗೆ ನಾಡದೋಣಿ ಬಂಡೆಗೆ ಹೊಡೆದಿದ್ದು, ಸಾಗರಶ್ರೀ ಹೆಸರಿನ ನಾಡದೋಣಿಗೆ ಸಂಪೂರ್ಣ ಹಾನಿಯಾಗಿದೆ.

ಮೀನುಗಾರಿಕೆ ನಡೆಸಿ ನಾಡದೋಣಿ ವಾಪಾಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ದೋಣಿಯಲ್ಲಿ ೧೧ ಜನ ಮೀನುಗಾರರು ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಅದರಲ್ಲಿ ಏಳು ಮಂದಿ ಪಾರಾಗಿ ಬಂದಿದ್ದಾರೆ, ಪಾರಾಗಿ ಬಂದವರು ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದು ಮನೆಗೆ ಹಿಂದುರುಗಿದ್ದಾರೆ.ಉಳಿದ ನಾಲ್ವರರಲ್ಲಿ ಎರಡು ಮಂದಿ‌ ಮೀನುಗಾರರು, ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದ್ದು, ಬಲೆಯಲ್ಲಿ ಸಿಲುಕಿದವರನ್ನು ಮೇಲಕ್ಕೆ ತರಲು ಕಾರ್ಯಚರಣೆ ನಡೆಯುತ್ತಿದೆ.

ಉಳಿದ ಇಬ್ಬರಿಗಾಗಿಯೂ ಕಾರ್ಯಚರಣೆ ಮುಂದುವರಿದಿದ್ದು, ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಕಾರ್ಯಚರಣೆ ತೊಡಕಾಗುತ್ತಿದೆ ಎನ್ನಲಾಗಿದೆ.

ವೃತ್ತ ನಿರಿಕ್ಷಕ ಸುರೇಶ್ ನಾಯಕ್ ಮತ್ತು ಸ್ಥಳೀಯ ಶಾಸಕ ಸುಕುಮಾರ ಶೆಟ್ಟಿ ಅವರುಗಳ ನೇತ್ರತ್ವದಲ್ಲಿ ಕಾರ್ಯಾಚರಣೆ ಮುಂದುವೆರೆದಿದೆ.

 

Latest articles

ಮಂಗಳೂರು: ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸಿ ಮಂಗಳೂರಿನಲ್ಲಿ ಪ್ರತಿಭಟನೆ-ಬೃಜ್‌ ಭೂಷಣ್‌ ಬಂಧನಕ್ಕೆ ಆಗ್ರಹ

ಮಹಿಳಾ ಕುಸ್ತಿ ಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅರೋಪ ಹೊತ್ತ ಎಸಗಿದ ಉತ್ತರ ಪ್ರದೇಶದ ಬಿಜೆಪಿ ಸಂಸದ...

ಮಂಗಳೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಕಿರುಕುಳ, ಕೇಸುಗಳಿಗೆ ಖಂಡನೆ – ಸುಳ್ಳು ಮೊಕದ್ದಮೆ ವಾಪಾಸ್ ಪಡೆಯಲು ಒತ್ತಾಯಿಸಿ ಪ್ರತಿಭಟನೆ

ಜನಪರ ಹೋರಾಟಗಾರ, ಬೀದಿ ವ್ಯಾಪಾರಿಗಳ ಮುಂದಾಳು ಬಿ ಕೆ ಇಮ್ತಿಯಾಝ್‌ ಮತ್ತು ಮುಖಂಡರ ಮೇಲಿನ ಸುಳ್ಳು ಮೊಕದ್ದಮೆಗಳನ್ನು ವಾಪಾಸ್...

ರಾಮನಗರ: ಟೋಲ್ ವಿಚಾರಕ್ಕೆ ಸಂಬಂಧಿಸಿ ಗಲಾಟೆ- ಯುವಕರ ತಂಡದಿಂದ ಸಿಬಂದಿ ಹತ್ಯೆ..!

ಟೋಲ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಯುವಕರ ತಂಡವೊಂದು ಗಲಾಟೆ ಮಾಡಿದ ಹಿನ್ನಲೆಯಲ್ಲಿ ಟೋಲ್ ಸಿಬ್ಬಂದಿಯ ಕೊಲೆಯಾಗಿದೆ. ಈ ಘಟನೆ...

ಊರಿಗೆ ಹೋಗಲು ನಿಲ್ದಾಣದಲ್ಲಿ ಕಾದು ಸುಸ್ತಾಗಿ ತಾನೇ ಸರ್ಕಾರಿ ಬಸ್ ಚಲಾಯಿಸಿದ ಭೂಪನ ಮೇಲೆ ಪೊಲೀಸ್ ಕೋಪ..!

ವ್ಯಕ್ತಿಯೊಬ್ಬ ತನ್ನ ಊರಿಗೆ ಬಸ್ ಇಲ್ಲವೆಂದು ನಿಲ್ದಾಣದಲ್ಲಿ ನಿಲ್ಲಿಸಿದ್ದ ಸಾರಿಗೆ ಸಂಸ್ಥೆಯ ಬಸ್ಸನ್ನೇ ಚಲಾಯಿಸಿ ನಿಲ್ದಾಣದಿಂದ ಹೊರಗಿರುವ ಡಿವೈಡರ್...