ಕಾರವಾರ: ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಎರಡು ಬೋಟುಗಳು ಹವಾಮಾನ ವೈಪರಿತ್ಯದಿಂದ ಗೋವಾದ ಪಣಜಿ ಬಳಿಯ ಅರಬ್ಬಿ ಸಮುದ್ರದಲ್ಲಿ ಅಲೆಗಳ ಹೊಡೆತಕ್ಕೆ ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.
ಮಲ್ಪೆಯಿಂದ ಗೋವಾಕ್ಕೆ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟ್‌ಗಳು ಅಲೆಗಳ ಅಬ್ಬರಕ್ಕೆ ಸಿಲುಕಿದ್ದು,
ಈ ವೇಳೆ ಇಂಜಿನ್ ಸಹ ಕೈ ಕೊಟ್ಟಿದೆ ಎನ್ನಲಾಗಿದೆ. ಮಾತಾ ಜಟಗೇಶ್ವರ ಮತ್ತು ಪಲ್ಲಕ್ ಹೆಸರಿನ ಬೋಟ್ ಮುಳುಗಡೆಯಾಗಿದ್ದು,
ಮುಳುಗಡೆಯಾದ ಎರಡು ಬೋಟ್‌ನಲ್ಲಿ ಇದ್ದ ಏಳು ಮಂದಿಯನ್ನು, ಸ್ಥಳೀಯ ಮೀನುಗಾರರು ಹಾಗೂ ಗೋವಾದ ಕೋಸ್ಟ್ ಗಾರ್ಡ್ ಪೊಲೀಸರು ರಕ್ಷಣೆ ಮಾಡಿ ವಾಸ್ಕೋಗೆ ಕರೆತಂದಿದ್ದಾರೆ.
ಕಡಲ ಪ್ರಿಯ ಹೆಸರಿನ ಬೋಟ್ ಸಹ ಮುಳುಗಡೆ ಹಂತದಲ್ಲಿದ್ದು ಇದನ್ನು ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ