LATEST NEWS
ವಿಶೇಷ ಬೋರ್ಡಿಂಗ್ ಪಾಸ್ ನೀಡಿದ ವಿಮಾನ ಪ್ರಯಾಣಿಕ..! ಶಾಕ್ ಆದ ಸಿಐಎಸ್‌ಎಫ್ ಸಿಬ್ಬಂದಿ..!
Published
2 days agoon
By
NEWS DESK2ವಿಮಾನದಲ್ಲಿ ಪ್ರಯಾಣಿಸಲು ಬಂದ ವ್ಯಕ್ತಿಯೊಬ್ಬ ತೋರಿಸಿರುವ ಬೋರ್ಡಿಂಗ್ ಪಾಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಮಾನ ನಿಲ್ದಾಣದ ಗೇಟ್‌ನಲ್ಲಿ ಸೆಕ್ಯುರಿಟಿಗೆ ತೋರಿಸಿದ ಈ ಬೋರ್ಡಿಂಗ್ ಪಾಸ್ ನೋಡಿ ಎಲ್ಲರೂ ನಗೆಗಡಲಲ್ಲಿ ತೇಲಾಡಿದ್ದಾರೆ. ಈ ವಿಡಿಯೋ 19 ಮಿಲಿಯನ್ ಜನರು ವೀಕ್ಷಿಸಿದ್ದು, “ನಿಮ್ಮ ಬೋರ್ಡಿಂಗ್ ಪಾಸ್ ಮುದ್ರಿಸಲು ನಿಮ್ಮ ಸ್ನೇಹಿತರಲ್ಲಿ ಕೇಳಬೇಡಿ” ಅಂತ ಟ್ಯಾಗ್ ಮಾಡಿ ಹಂಚಿಕೊಳ್ಳಲಾಗಿದೆ.
ವಿಮಾನ ನಿಲ್ದಾಣ ಪ್ರವೇಶಿಸಲು ಸರತಿ ಸಾಲಿನಲ್ಲಿ ಬಂದಿದ್ದ ಯುವಕನಲ್ಲಿ ಸಿಐಎಸ್‌ಎಫ್ ಅಧಿಕಾರಿ ಬೋರ್ಡಿಂಗ್ ಪಾಸ್ ತೋರಿಸಲು ಹೇಳಿದ್ದಾರೆ. ಈ ವೇಳೆ ನಗುತ್ತಲೇ ಬೋರ್ಡಿಂಗ್ ಪಾಸ್ ತೆಗೆದು ಅದನ್ನು ಬಿಡಿಸಲು ಆರಂಭಿಸಿದಾಗ ಸಿಐಎಸ್‌ಎಫ್ ಅಧಿಕಾರಿ ಸಹಿತ ಎಲ್ಲರೂ ನಗಲು ಆರಂಭಿಸಿದ್ದಾರೆ. ಸಾಮಾನ್ಯವಾಗಿ ಬೋರ್ಡಿಂಗ್ ಪಾಸ್ ಎ4 ಶೀಟ್‌ನಲ್ಲಿ ಮುದ್ರಿಸಲಾಗುತ್ತದೆಯಾದ್ರೂ ಈ ಯುವಕ ತೋರಿಸಿದ್ದ ಬೋರ್ಡಿಂಗ್ ಪಾಸ್ ಗಾತ್ರ ಎ1 ಸೈಝ್ ಇತ್ತು ಅನ್ನೋದೇ ಇದಕ್ಕೆ ಕಾರಣ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋ ವೀಕ್ಷಿಸಿದ ಅನೇಕರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. “ನೀವು ವಿಮಾನದಲ್ಲಿ ಹಾರುತ್ತೀರಾ ಅಥವಾ ಈ ಬೋರ್ಡಿಂಗ್ ಪಾಸ್‌ನಲ್ಲಿ ಹಾರುತ್ತೀರಾ” ಅಂತ ಒಬ್ರು ಕೇಳಿದ್ರೆ, ಇನ್ನೂ ಕೆಲವರು “ಅವರು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿರಬೇಕು” ಅಂದಿದ್ದಾರೆ. ಇನ್ನೂ ಕೆಲವರು “ಇವರ ಸ್ನೇಹಿತರು ಪ್ರಿಂಟಿಂಗ್ ಇಂಜೀನಿಯರ್‌ಗಳು ಇರಬಹುದು” ಎಂದಿದ್ದಾರೆ.
ಬೋರ್ಡಿಂಗ್ ಪಾಸ್‌ನಲ್ಲಿ ಮೇಕ್ ಮೈ ಟ್ರಿಪ್ ಟ್ರಾವೆಲ್ ಏಜೆನ್ಸಿಯ ಲೋಗೋ ಇರುವ ಕಾರಣ ಪ್ರಯಾಣಿಕ ಏಜೆನ್ಸಿ ಮೂಲಕ ಆನ್‌ಲೈನ್‌ನಲ್ಲಿ ಟಿಕೇಟ್ ಬುಕ್ ಮಾಡಿದ್ದು, ಪ್ರಿಂಟ್ ತೆಗೆಯುವಾಗ ಆಗಿರುವ ಪ್ರಮಾದದಿಂದ ಇಷ್ಟು ದೊಡ್ಡ ಬೋರ್ಡಿಂಗ್ ಪಾಸ್ ಪ್ರಿಂಟ್ ಆಗಿರುವ ಸಾದ್ಯತೆ ಇದೆ.
BELTHANGADY
ಧರ್ಮಸ್ಥಳ; ಭಕ್ತರಿಗೆ ಸುಸಜ್ಜಿತವಾದ ಸರತಿ ಸಾಲಿನ ನೋಂದಣಿ ವ್ಯವಸ್ಥೆ: ಡಾ. ವೀರೇಂದ್ರ ಹೆಗ್ಗಡೆ
Published
3 minutes agoon
07/01/2025By
NEWS DESK2ಧರ್ಮಸ್ಥಳ: ವಿವಿಧ ಪ್ರದೇಶದಿಂದ ಆಗಮಿಸುವ ಜನರು ಸಾಕಷ್ಟು ಹೊತ್ತು ಸರತಿ ಸಾಲಿನಲ್ಲಿ ದೇವರ ದರ್ಶನಕ್ಕೆ ಕಾಯು ತ್ತಾರೆ. ಭಕ್ತರಿಗೆ ಆಗುತ್ತಿರುವ ಈ ತೊಂದರೆಯನ್ನು ತಪ್ಪಿಸಲು ಸುಸಜ್ಜಿತವಾದ ಸರತಿ ಸಾಲಿನ ನೋಂದಣಿ ವ್ಯವಸ್ಥೆ ಮತ್ತು ಆರಾಮವಾಗಿ ಕುಳಿತುಕೊಳ್ಳಲು ವ್ಯವಸ್ಥೆ ಇರುವ ಸುಸಜ್ಜಿತ ಕಟ್ಟಡ ನಿರ್ಮಿಸಬೇಕೆನ್ನುವುದು ಹಲವು ವರ್ಷಗಳ ಹಿಂದಿನ ನಿರೀಕ್ಷಿತ ಯೋಜನೆ ಇದೀಗ ಪೂರ್ಣಗೊಂಡು ಉಪರಾಷ್ಟ್ರಪತಿ ಜಗದೀಪ್ ಧನಕರ್ ಉದ್ಘಾಟಿಸಲಿದ್ದಾರೆ. ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾಧಿಗಳು ಈ ವ್ಯವಸ್ಥೆಯನ್ನು ಉಪಯೋಗಿಸುವಂತೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಭಾರತದ ಉಪರಾಷ್ಟ್ರ ಪತಿ ಜಗದೀಪ್ ಧನ್ಕರ್ ಅವರು ಮಂಗಳವಾರ ಶ್ರೀ ಕ್ಷೇತ್ರದ ನೂತನ ಸೌಲಭ್ಯಗಳನ್ನು ಒಳ ಗೊಂಡ ಸರತಿ ಸಾಲಿನ ಕಟ್ಟಡ ಸಂಕೀರ್ಣ ಶ್ರೀ ಸಾನ್ನಿಧ್ಯ ಇದರ ಉದ್ಘಾಟನೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ 2024- 25ರ ಜ್ಞಾನದೀಪ ಕಾರ್ಯಕ್ರಮದ ಉದ್ಘಾಟನೆಯ ತಯಾರಿಯ ಸಂದರ್ಭ ಸೋಮವಾರ ಸುದ್ದಿಗಾರ ರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಈ ರೀತಿಯ ಸುಸಜ್ಜಿತ ಸಂಕೀರ್ಣ ನಿರ್ಮಿ ಸಲು ಕಳೆದ 15 ವರ್ಷದಿಂದ ಯೋಜಿಸಿ 11 ವಿವಿಧ ಯೋಜನೆ ರೂಪಿಸಿ ಅಂತಿಮವಾಗಿ ರೂಪಿಸಿದ ಸಾನಿಧ್ಯ ಸಂಕೀರ್ಣ ಸುಸಜ್ಜಿತ ವಾಗಿ ರೂಪಿಸಲಾಗಿದೆ.ಇದರಲ್ಲಿ ವ್ಯವಸ್ಥಿ ತವಾಗಿ ನೋಂದಣಿ, ಸೂಕ್ತ ಮಾಹಿತಿ ನೀಡುವ ವ್ಯವಸ್ಥೆ, ಕುಳಿತು ಕೊಳ್ಳಲು ವ್ಯವಸ್ಥೆ, ಇದರಿಂದ ಭಕ್ರರು ಸಮಾಧಾನ ಚಿತ್ತ ರಾಗಿ ಕುಳಿತು ದೇವರ ದರ್ಶನ ಮಾಡಬಹುದಾಗಿದೆ. ಈ ವ್ಯವಸ್ಥೆ ಉಪಯೋಗ ಭಕ್ತಾದಿಗಳಿಗೆ ಲಭಿಸಲಿದೆ ಎಂದು ಹೆಗ್ಗಡೆ ವಿವರಿಸಿದರು.
ಮಂಗಳೂರು: ನಗರದ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಶಿಶುಗಳಿಗೆ ಜನ್ಮ ನೀಡಿದ್ದಾರೆ. ವೈದ್ಯರ ತಂಡ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದು, ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ತೆಲಂಗಾಣ ರಾಜ್ಯದ ತೇಜ ಎಂಬವರ ಪತ್ನಿ ಬಾನೋತ್ ದುರ್ಗಾ ಅವರು ನಾಲ್ವರು ಶಿಶುಗಳಿಗೆ ಜನ್ಮ ನೀಡಿದ ಮಹಾತಾಯಿ. ಈ ನಾಲ್ವರು ಶಿಶುಗಳ ಪೈಕಿ ಎರಡು ಗಂಡು, ಎರಡು ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಈ ಶಿಶುಗಳು ಕ್ರಮವಾಗಿ 1.1 ಕೆಜಿ, 1.2 ಕೆಜಿ, 800 ಗ್ರಾಂ, 900 ಗ್ರಾಂ ತೂಕ ಹೊಂದಿದೆ. ಆದರೆ 30 ವಾರಗಳ ಹೆರಿಗೆಯಾಗಿದ್ದು, ಪ್ರಸವ ಪೂರ್ವ ಜನನವಾದ್ದರಿಂದ ಸದ್ಯ ಶಿಶುಗಳಿಗೆ ಎನ್‌ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಾಲ್ಕು ಶಿಶುಗಳ ಜನನ ಬಹಳ ಅಪರೂಪವಾಗಿದ್ದು, ಇದು 7,00,000 ಗರ್ಭಧಾರಣೆಗಳಲ್ಲಿ ಒಂದರಲ್ಲಿ ಮಾತ್ರ ಸಂಭವಿಸುತ್ತವೆ. ಸ್ತ್ರೀರೋಗತಜ್ಞೆ, ಡಾ.ಜೋಯ್ಲೀನ್ ಡಿಅಲ್ಮೇಡಾ ಗರ್ಭಿಣಿಯ ಪ್ರಸವಪೂರ್ವ ಆರೈಕೆ ಮಾಡಿದರು. ಹೆರಿಗೆ ಸಂದರ್ಭ ಆಸ್ಪತ್ರೆಯ ಹೆರಿಗೆ ಮತ್ತು ಮಕ್ಕಳ ವಿಭಾಗದ ವೈದ್ಯಕೀಯ ತಂಡ ಮುತುವರ್ಜಿಯಿಂದ ಕಾರ್ಯನಿರ್ವಹಿಸಿ ತಾಯಿ-ಮಕ್ಕಳಿಗೆ ಆರೈಕೆ ಮಾಡಿದೆ. ದ.ಕ.ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪರೂಪದ ಹೆರಿಗೆ ಪ್ರಕರಣವಾಗಿದೆ.
LATEST NEWS
ಉಡುಪಿ: ಬೈಕ್‌ಗೆ ಕಂಟೈನರ್ ಲಾರಿ ಡಿಕ್ಕಿ-ಮಹಿಳೆ ಸಾವು
Published
42 minutes agoon
07/01/2025By
NEWS DESK2ಉಡುಪಿ: ಬೈಕ್‌ಗೆ ಕಂಟೈನರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನ ಹಿಂದೆ ಕುಳಿತಿದ್ದ ನಾಗವೇಣಿ (30) ಮೃತಪಟ್ಟ ಘಟನೆ ಜ.5ರಂದು ನಡೆದಿದೆ.
ಬೈಂದೂರಿನ ಬೋಳಂಬಳ್ಳಿ ನಿವಾಸಿಗಳಾದ ಸತೀಶ್ (33) ಮತ್ತು ಅವರ ಪತ್ನಿ ನಾಗವೇಣಿ (30) ಅವರು ಜ.5ರಂದು ರಾಷ್ಟ್ರೀಯ ಹೆದ್ದಾರಿ 66ರ ಮೂಲಕ ಮಣಿಪಾಲ ಕಡೆಗೆ ಮೋಟಾರು ಸೈಕಲ್‌ನಲ್ಲಿ ತೆರಳುತ್ತಿದ್ದು, ಸಂಜೆ 4.30ರ ಸುಮಾರಿಗೆ ಬ್ರಹ್ಮಾವರ ತಾಲೂಕಿನ ಹೇರೂರು ಗ್ರಾಮದ ಶೆಟ್ಟಿಗಾರ್ ಇಂಡಸ್ಟ್ರೀಸ್ ಬಳಿ ಬರುತ್ತಿದ್ದಂತೆ. KL-07-DC-6401 ನೋಂದಣಿ ಸಂಖ್ಯೆ ಹೊಂದಿರುವ ಅತಿವೇಗ ಮತ್ತು ಅಜಾಗರೂಕ ಕಂಟೈನರ್ ಲಾರಿ, ತೀವ್ರ ಎಡಕ್ಕೆ ತಿರುಗಿ ಮೋಟಾರ್‌ಸೈಕಲ್‌ನ ಬಲ ಹ್ಯಾಂಡಲ್‌ಗೆ ಹೊಡೆದಿದೆ.
ಪರಿಣಾಮ ದಂಪತಿ ಬೈಕ್‌ನಿಂದ ರಸ್ತೆಗೆ ಬಿದ್ದಿದ್ದಾರೆ. ಸತೀಶ್ ಅವರ ಕೈ ಮತ್ತು ತೊಡೆಯ ಭಾಗಕ್ಕೆ ಗಾಯಗಳಾಗಿದ್ದರೆ, ನಾಗವೇಣಿ ಅವರ ತಲೆ, ಮುಖ ಮತ್ತು ಎಡ ಭುಜಕ್ಕೆ ತೀವ್ರ ಗಾಯಗಳಾಗಿವೆ. ಚಿಕಿತ್ಸೆಗಾಗಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಗವೇಣಿ ಸಂಜೆ 6.30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಕಂಟೈನರ್ ಲಾರಿ ಚಾಲಕ ವಾಹನವನ್ನು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ.ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
ಇಂದು ಉಪರಾಷ್ಟ್ರಪತಿ ಜಗದೀಪ್ ಧನ್ ಕರ್ ಧರ್ಮಸ್ಥಳಕ್ಕೆ ಭೇಟಿ
ಜನವರಿ 11 ಮತ್ತು 12 ರಂದು ಮಂಗಳೂರಿನಲ್ಲಿ ಬೀಚ್ ಉತ್ಸವ
ಕೆಲಸದ ವೇಳೆ ಮಣ್ಣು ಕುಸಿದು ಬಿದ್ದು ಕಾರ್ಮಿಕ ಸಾ*ವು
ಕೊಣಾಜೆ ತಿಬ್ಲಪದವು ಬಳಿ ಭೀ*ಕರ ರಸ್ತೆ ಅ*ಪಘಾತ; ಮೆಡಿಕಲ್ ಅಂಗಡಿ ಮಾಲಕ ಸಾ*ವು
ರೋಹಿತ್ ಶರ್ಮಾ ಅವರ ಹೆಂಡತಿಗೆ ಕಳುಹಿಸಲಾದ ಸಂದೇಶವನ್ನು ಅಳಿಸಿ ಹಾಕಿದ ಆರ್.ಅಶ್ವಿನ್ !
ಶಿಕ್ಷಕಿಗೆ ನೋಟ್ಸ್ ತೋರಿಸುವಾಗ ಕುಸಿದುಬಿ*ದ್ದು ಮೂರನೇ ತರಗತಿ ವಿದ್ಯಾರ್ಥಿನಿ ಸಾ*ವು
Trending
- DAKSHINA KANNADA6 days ago
ಬೊಜ್ಜು ಕರಗಿಸಲು ವ್ಯಾಯಾಮದ ಅಗತ್ಯ ಇಲ್ಲ : ಮಾತ್ರೆ ತಿಂದರೆ ಸಾಕು..!
- DAKSHINA KANNADA4 days ago
ಜಮೀನು ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್..!
- BIG BOSS3 days ago
2ನೇ ಮದುವೆಗೆ ಸಜ್ಜಾದ ಬಿಗ್ ಬಾಸ್ ಮಾಜಿ ಸ್ಪರ್ಧಿ ವರ್ತೂರು ಸಂತೋಷ್; ಹುಡುಗಿ ಯಾರು ಗೊತ್ತಾ..?
- LATEST NEWS7 days ago
ಮೈಸೂರು: ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ ಪ್ರತ್ಯಕ್ಷ; ಉದ್ಯೋಗಿಗಳಿಗೆ ಮನೆಯಿಂದ ಕೆಲಸಕ್ಕೆ ಸೂಚನೆ