ಮಂಗಳೂರು: ಸ್ವಾತಂತ್ರ ಸೇನಾನಿ ನೇತಾಜಿ ಸುಭಾಸ್ ಚಂದ್ರ ಬೋಸ್ 125 ನೇ ಜನ್ಮ ದಿನಾಚರಣೆಯ ಪ್ರಯುಕ್ತ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ) ನೇತೃತ್ವದಲ್ಲಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ಶಿಬಿರ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ಮತ್ತು ಬಿರುವೆರ್ ಕುಡ್ಲ(ರಿ)
ಸಮಾನ ಮನಸ್ಕ ಯುವಕರ ತಂಡವು ರಕ್ತದಾನ ಸಹಿತ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿ ಸಮಾಜ ಕಟ್ಟುವ ಕಾರ್ಯ ಮಾಡುತ್ತಿದೆ.
ನೇತಾಜೀ ಸುಭಾಷ್ ಚಂದ್ರ ಭೋಸ್ ಅವರ 125ನೇ ಜನ್ಮ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ರಕ್ತದಾನ ಹಮ್ಮಿಕೊಂಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್ ನ ಶ್ರೀ ನರೇಶ್ ಶೆಣೈ,ಹನುಮಂತ್ ಕಾಮತ್,ಬಿರುವೆರ್ ಕುಡ್ಲ(ರಿ) ಸ್ಥಾಪಕ ಅಧ್ಯಕ್ಷರು ಶ್ರೀ ಉದಯ್ ಪೂಜಾರಿ,ಮಾಜಿ ಮೇಯರ್ ಶ್ರೀ ದಿವಾಕರ್ ಪಾಂಡೇಶ್ವರ,ನರೇಶ್ ಪ್ರಭು,
ಚೇತನ್ ಕಾಮತ್,ಬಿರುವೆರ್ ಕುಡ್ಲ(ರಿ) ಉಪಾಧ್ಯಕ್ಷರು ರಾಕೇಶ್ ಸಾಲಿಯಾನ್ ಚಿಲಿಂಬಿ,ಕಿಶೋರ್ ಬಾಬು,ರಜತ್ ಕುಲಾಲ್,ಬಿರುವೆರ್ ಕುಡ್ಲ(ರಿ)ಅಶೋಕ ನಗರ ಸಂಚಾಲಕಿ ಸುಮಂಗಲ ಸಿ ಕೋಟ್ಯಾನ್,ನೀರೀಕ್ಷಾ,ಅಶ್ವಿತಾ ಅಮೀನ್ ಉಪಸ್ಥಿತರಿದ್ದರು.