DAKSHINA KANNADA
ಬಿಜೆಪಿಯ ಲವ್ ಜಿಹಾದ್ ಕುರಿತ ಹೇಳಿಕೆ ಹಾಸ್ಯಾಸ್ಪದ: ಪಾಪ್ಯುಲರ್ ಫ್ರಂಟ್
ಬಿಜೆಪಿಯ ಲವ್ ಜಿಹಾದ್ ಕುರಿತ ಹೇಳಿಕೆ ಹಾಸ್ಯಾಸ್ಪದ: ಪಾಪ್ಯುಲರ್ ಫ್ರಂಟ್
ಮಂಗಳೂರು : ದೇಶದಲ್ಲಿ ಲವ್ ಜಿಹಾದ್ ನ ಅಸ್ತಿತ್ವವೇ ಇಲ್ಲವೆಂದು ಪೊಲೀಸರು, ತನಿಖಾ ಏಜೆನ್ಸಿಗಳು, ಕೇಂದ್ರ ಸರಕಾರವು ಈಗಾಗಲೇ ಸ್ಪಷ್ಟಪಡಿಸಿದ್ದರೂ, ರಾಜ್ಯ ಬಿಜೆಪಿ ಸರಕಾರದ ಭಾಗವಾಗಿರುವ ಮಂದಿ ಲವ್ ಜಿಹಾದ್ ಕುರಿತು ನೀಡುತ್ತಿರುವ ಹೊಣೆಗೇಡಿ ಹೇಳಿಕೆಗಳು ಹಾಸ್ಯಾಸ್ಪದವಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಹೇಳಿದ್ದಾರೆ.
ಈ ಮಧ್ಯೆ ಲವ್ ಜಿಹಾದ್ ಬಗ್ಗೆ ತನಿಖೆ ನಡೆಸಿರುವ ಕೇರಳ ಹಾಗೂ ಕರ್ನಾಟಕದ ಪೊಲೀಸರು ಇಂತಹ ಆರೋಪ ನಿರಾಧಾರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಲವ್ ಜಿಹಾದ್ ಎಂಬುದು ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ನಡೆಸಲು ಬಲಪಂಥೀಯ ಹಿಂದುತ್ವ ಶಕ್ತಿಗಳು ಪ್ರಾರಂಭಿಸಿದ ಭೀಕರ ಹಾಗೂ ದುರಾಲೋಚನೆಯ ಪರಿಣಾಮಗಳಿಂದ ನಡೆಸಿದ ಕೆಡುಕಿನ ಅಭಿಯಾನವಾಗಿದೆ ಎಂದು ಎನ್ಐಎ ತನಿಖೆ ಧೃಡಪಡಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರದ ಬಿಜೆಪಿ ಸರಕಾರವೂ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂಬ ಲಿಖಿತ ಉತ್ತರವನ್ನು ಸಂಸತ್ತಿಗೆ ನೀಡಿತ್ತು. ಆದಾಗ್ಯೂ, ರಾಜ್ಯದ ಬಿಜೆಪಿ ನಾಯಕರು ಕಲ್ಪಿತ ಲವ್ ಜಿಹಾದ್ ಗೆ ಮತ್ತೇ ಜೀವ ತುಂಬಿ ತಮ್ಮ ವಿಭಜನಕಾರಿ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರ.
ಅಸಂವಿಧಾನಿಕ ಮತಾಂತರ ನಿಷೇಧ ಕಾಯ್ದೆ ತರುವ ಕುರಿತು ರಾಜ್ಯದ ಮುಖ್ಯಮಂತ್ರಿ ಮತ್ತು ಇತರ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ.
ವಾಸ್ತವದಲ್ಲಿ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನವು ನಾಗರಿಕರಿಗೆ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಇಲ್ಲದ ಲವ್ ಜಿಹಾದ್ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಲು ಪ್ರಯತ್ನಿಸುತ್ತಿದ್ದಾರೆ.
ಮಂದಿರ ನಿರ್ಮಾಣ, ಗೋಹತ್ಯೆ, ಘರ್ ವಾಪ್ಸಿಯಂತೆ ಲವ್ ಜಿಹಾದ್ ಕೂಡ ಬಿಜೆಪಿಯ ಭಾವನಾತ್ಮಕ ರಾಜಕೀಯದ ಅಸ್ತ್ರವಾಗಿದೆ. ಸಂಘಪರಿವಾರವು 2009ರಲ್ಲಿ ಚಾಲ್ತಿಗೆ ತಂದ ಕಪೋಲಕಲ್ಪಿತ ಲವ್ ಜಿಹಾದ್, ಧರ್ಮಗಳ ಮಧ್ಯೆ ಪರಸ್ಪರ ಅಪನಂಬಿಕೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ.
ಬಿಜೆಪಿ-ಸಂಘಪರಿವಾರದ ದ್ವೇಷಪೂರಿತ ಮತ್ತು ಕೋಮು ಧ್ರುವೀಕರಣದ ರಾಜಕೀಯದ ವಿರುದ್ಧ ಜಾಗೃತರಾಗಬೇಕು ಮತ್ತು ಈ ಕೋಮುವಾದಿ ಮತಾಂಧ ಫ್ಯಾಶಿಸ್ಟರ ಎಲ್ಲಾ ಷಡ್ಯಂತ್ರಗಳನ್ನು ವಿಫಲಗೊಳಿಸಲು ರಾಜ್ಯದ ಜನತೆ ಮುಂದೆ ಬರಬೇಕಾಗಿದೆ ಎಂದು ಯಾಸಿರ್ ಹಸನ್ ಕರೆ ನೀಡಿದ್ದಾರೆ.
DAKSHINA KANNADA
ಕಬಕ-ಮುರ ರೈಲ್ವೇ ಹಳಿಯಲ್ಲಿ ವ್ಯಕ್ತಿಯ ಶ*ವ ಪತ್ತೆ
ಪುತ್ತೂರು: ಇಲ್ಲಿನ ಮುರ ಎಂಬಲ್ಲಿ ಕಬಕ-ಪುತ್ತೂರು ರೈಲು ಸಂಚಾರದ ರೈಲ್ವೇ ಹಳಿಯಲ್ಲಿ ವ್ಯಕ್ತಿಯೊಬ್ಬರ ಮೃ*ತದೇಹ ಪತ್ತೆಯಾಗಿರುವ ಘಟನೆ ಎ.23ರಂದು ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಮೃತಪಟ್ಟ ವ್ಯಕ್ತಿಯ ದೇಹ ಹಳಿಯಿಂದ ಸ್ವಲ್ಪ ದೂರಕ್ಕೆ ಎಸೆಯಲ್ಪಟ್ಟಿದ್ದು ಕಾಲು ತುಂಡಾದ ಸ್ಥಿತಿಯಲ್ಲಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಇದು ಆತ್ಮಹ*ತ್ಯೆಯೋ? ಅಥವಾ ರೈಲು ಡಿಕ್ಕಿಯಾಗಿ ಸಂಭವಿಸಿದ ಘಟನೆಯೋ ಅನ್ನುವುದು ತನಿಖೆ ವೇಳೆ ಬೆಳಕಿಗೆ ಬರಲಿದೆ.
ಮುಂದೆ ಓದಿ..; ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
BELTHANGADY
ಬೆಳ್ತಂಗಡಿ: ಕೆರೆಗೆ ಬಿದ್ದು ಕಾಡುಕೋಣ ಸಾ*ವು.. ಸಾರ್ವಜನಿಕರಿಂದ ಅಂತ್ಯಸಂಸ್ಕಾರ
ಬೆಳ್ತಂಗಡಿ: ಇಲ್ಲಿನ ಬೆಳಾಲು ಗ್ರಾಮಕ್ಕೆ ಸಂಬಂಧಪಟ್ಟಂತೆ ಕೊಯ್ಯೂರು ರಸ್ತೆಯ ಬದ್ಯಾರು ಎಂಬಲ್ಲಿ ಹೆಚ್ ಪದ್ಮಗೌಡ ಎಂಬವರ ತೋಟದ ಕೆರೆಯಲ್ಲಿ ಬೃಹತ್ ಗಾತ್ರದ ಕಾಡುಕೋಣದ ಮೃತ*ದೇಹ ಪತ್ತೆಯಾಗಿದೆ.
ಮುಂದೆ ನೋಡಿ..; ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಕೆಎಸ್ ಈಶ್ವರಪ್ಪ ಬಿಜೆಪಿ ಪಕ್ಷದಿಂದ ಉಚ್ಛಾಟನೆ..!
ಈ ಕೆರೆಗೆ ಸುತ್ತ ಕಾಂಕ್ರೀಟ್ ರಿಂಗ್ ಅಳವಡಿಸಿದ್ದು ನೀರು ಕುಡಿಯಲು ಬಂದ ಕಾಡುಕೋಣ ಮೂರ್ನಾಲ್ಕು ದಿನಗಳ ಹಿಂದೆಯೇ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ. ಹೆಚ್ಚೂ ಕಮ್ಮಿ 10 ಕ್ವಿಂಟಾಲ್ ತೂಕ ಹೊಂದಿರಬಹುದೆಂದು ಅಂದಾಜಿಸಲಾಗಿದ್ದು, ಕೊಳೆತು ವಾಸನೆ ಬೀರುತ್ತಿತ್ತು. ಶೌರ್ಯ ವಿಪತ್ತು ತಂಡಕ್ಕೆ ಬಂದ ಮಾಹಿತಿಯಂತೆ ಉಜಿರೆ- ಬೆಳಾಲು ಘಟಕದ ಸಂಯೋಜಕ ಸುಲೈಮಾನ್ ಬೆಳಾಲು, ಮುಳುಗು ಪರಿಣತ ಹರೀಶ ಕೂಡುಗೆ, ಮುಹಮ್ಮದ್ ಶರೀಫ್ ಬೆಳಾಲು, ಅವಿನಾಶ್ ಭಿಡೆ ಅರಸಿಮನಕ್ಕಿ, ರವೀಂದ್ರ ಉಜಿರೆ, ಸುರೇಂದ್ರ ಉಜಿರೆ, ಅನಿಲ್ ಚಾರ್ಮಾಡಿ, ಶೌರ್ಯ ಘಟಕದ ಮಾಸ್ಟರ್ ಪ್ರಕಾಶ್ ಧರ್ಮಸ್ಥಳ, ನಳಿನ್ ಕುಮಾರ್ ಧರ್ಮಸ್ಥಳ ಮೊದಲಾದವರು ಸಾರ್ವಜನಿಕರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಕಾಡುಕೋಣದ ಕಳೇಬರವನ್ನು ಮೇಲೆತ್ತಿದ್ದಾರೆ. ಬಳಿಕ ಪಶುವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ಪ್ರಕ್ರೀಯೆ ನಡೆಸಿದ್ದು, ತೋಟದಲ್ಲೇ ಹೊಂಡ ತೋಡಿ ಅಂತ್ಯಸಂಸ್ಕಾರ ನಡೆಸಲಾಗಿದೆ.
DAKSHINA KANNADA
ಕಾಗೆ ನಿಜಕ್ಕೂ ನಮ್ಮ ಪಿತೃನಾ..?
ಹಿಂದೂ ಸಂಪ್ರದಾಯದ ಪ್ರಕಾರ ಕಾಗೆಗೆ ವಿಶೇಷವಾದ ಸ್ಥಾನಮಾನವಿದೆ. ಪಕ್ಷಿ ಜಾತಿಗೆ ಸೇರಿದ ಕಾಗೆಯನ್ನ ಹಿಂದಿನ ಕಾಲದಲ್ಲಿ ಸಂಪರ್ಕ ಸಾಧನವಾಗಿ ಬಳಸಲಾಗುತ್ತಿತ್ತು. ಯಾವೂದೇ ರೀತಿಯ ತಂತ್ರಜ್ಞಾನ ಹಾಗೂ ದೂರವಾಣಿ ಇಲ್ಲದಂತಹ ಸಮಯದಲ್ಲಿ ಕಾಗೆಯನ್ನೇ ಸಂದೇಶ ರವಾನಿಸಲು ಬಳಸಲಾಗುತ್ತಿತ್ತು. ನಮ್ಮ ಹಿರಿಯರ ಪ್ರಕಾರ ಕಾಗೆಗೂ ಮನುಷ್ಯರಿಗೂ ಅವೀನಾಭಾವ ಸಂಬಂಧ ಇದೆ ಎಂದು ಹೇಳಲಾಗುತ್ತದೆ. ಹಿಂದೂಗಳ ಆಚರಣೆಯಲ್ಲಿ ಕಾಗೆಗೆ ಪಿಂಡ ಕೂಡ ಇಡುತ್ತಾರೆ.
ಪಿತೃ ಪಕ್ಷದ ಶ್ರಾದ್ಧ ಸಮಯದಲ್ಲಿ ಕಾಗೆಗೆ ಪಿಂಡ ಇಡುತ್ತೇವೆ. ಕಾರಣ ಇಷ್ಟೇ, ಕಾಗೆಯನ್ನ ‘ಮೇಸೆಂಜರ್ ಆಫ್ ಪಿತೃಲೋಕ’ ಎಂದು ಪರಿಗಣಿಸಲಾಗುತ್ತೆ. ಇನ್ನು, ಅದೇ ಪಿತೃಲೋಕದಲ್ಲಿ ನಮ್ಮ ಪಿತೃಗಳು ಇರುವುದು. ನಮ್ಮ ಪಿತೃಗಳ ಆತ್ಮ ಕಾಗೆಯಲ್ಲಿ ಇದೆ ಎನ್ನುವ ನಂಬಿಕೆಯಿಂದ. ಕಾಗೆ ಸ್ವೀಕಾರ ಮಾಡಿದ ಆಹಾರ ನಮ್ಮ ಪಿತೃಗಳನ್ನ ಖುಷಿ ಪಡಿಸುತ್ತೆ ಎನ್ನುವ ನಂಬಿಕೆ ಕೂಡ ಇದೆ.
ಪಿತೃಗಳಂತೆ ಕಾಗೆ..!
ಕಾಗೆ ಎದ್ದೇಳೋದು ಬ್ರಾಹ್ಮಿ ಮುಹೂರ್ತದಲ್ಲಿ. ಕೋಳಿ ಅಲ್ವಾ ಮುಂಜಾನೆ ಬೇಗ ಏಳೋದು ಅಂತ ಕೇಳಿದ್ರೆ ನೀವು, ಕೋಳಿ ಸೂರ್ಯೋದಯದ ಸಮಯದಲ್ಲಿ ಎದ್ದೇಳುತ್ತೆ. ಆದ್ರೆ, ಬ್ರಾಹ್ಮಿ ಮೂಹೂರ್ತದಲ್ಲಿ ಅಂದ್ರೆ ಸೂರ್ಯೋದಯಕ್ಕೂ ಮುಂಚೆ ಎದ್ದೇಳೋದು ಕಾಗೆ. ಇನ್ನು ಸೂರ್ಯಾಸ್ತ ಆದ ನಂತರ ಅದು ಏನನ್ನು ಸೇರಿಸೋದಿಲ್ಲ. ಇವೆಲ್ಲಾ ಶಾಸ್ತ್ರದ ಪ್ರಕಾರ ಇದೆ.
ನಾವು ಏನೇ ಆಹಾರ ಕೊಟ್ರು ಕಾಗೆಗಳು ಅದನ್ನ ಹಂಚಿ ತಿನ್ನುತ್ತವೆ. ನಮ್ಮ ಪಿತೃಗಳು ಇದ್ದದ್ದೂ ಹಾಗೇ ಅಲ್ವಾ.. ಈಗ ಹಂಚಿ ತಿನ್ನೋದು, ಬ್ರಾಹ್ಮಿ ಮೂಹೂರ್ತಕ್ಕೆ ಏಳೋದು, ಸೂರ್ಯಾಸ್ತ ಆಗುವ ಮೊದಲು ಊಟ ಮುಗಿಸೋದು ಈ ಎಲ್ಲವೂ ಕಮ್ಮಿ ಆಗಿದೆ. ಅದಕ್ಕೆ ಕಾಗೆಗಳು ಕೂಡ ಮೊದಲಿನ ಹಾಗೇ ಹೆಚ್ಚು ಕಂಡು ಬರುವುದಿಲ್ಲ.
ಕಾ..ಕಾ…ಅಂದ್ರೇನು..?
ಕಾಗೆ ಶನಿಯ ವಾಹನ ಕೂಡ ಹೌದು. ಹಾಗಾಗಿ ಕಾಗೆ ಜೀವನದಲ್ಲಿ ಬರುವ ಒಳ್ಳೆಯ ಅಥವಾ ಕೆಟ್ಟ ಸೂಚನೆಗಳನ್ನ ಕೊಡುವ ಒಂದು ಮಾಧ್ಯಮ ಕೂಡ ಹೌದು. ಕಾಗೆಯನ್ನು ನಾವು ಕರೆಯುವಾಗ ಕಾ… ಕಾ… ಅಂತ ಕರೆಯುತ್ತೇವೆ. ಈ ಕಾ ಅಂದ್ರೆ ಕಾಪಾಡು ಅನ್ನೋ ಅರ್ಥ ಕೂಡ ಬರುತ್ತೆ. ಒಂದು ಲೆಕ್ಕದಲ್ಲಿ ನೋಡಲು ಹೋದರೆ ಪಿತೃಗಳಲ್ಲಿ ನಾವು ಕೇಳೋ ಮೊರೆ ಇದು. ‘ನಮ್ಮನ್ನು ಕಾಪಾಡಿ’ ಎಂದು. ಇದಕ್ಕೆ ಉತ್ತರವಾಗಿ ಕಾಗೆ ಕೂಡ ‘ಕಾ ಕಾ’ ಅನ್ನುತ್ತದೆ.
ಕಾ ಅಂದ್ರೆ ಸಂಸ್ಕೃತದಲ್ಲಿ ಯಾರು ಎಂದು ಅರ್ಥ. ನೀನ್ಯಾರು..? ನಿನ್ನೊಂದಿಗೆ ಇರೋರು ಯಾರು..? ನೀನು ಸತ್ತ ಮೇಲೆ ನಿನ್ನೊಂದಿಗೆ ಬರುವವರು ಯಾರು..? ಯೋಚಿಸು ಅನ್ನೋ ಸಂದೇಶ ಕೂಡ ಇದರಲ್ಲಿ ಗೌಪ್ಯವಾಗಿ ಅಡಗಿದೆ. ಹೆಚ್ಚಿನ ಜನರಿಗೆ ನಿಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಬಂದು ನಿಮಗೆ ಸೂಚನೆ ಕೊಟ್ಟದ್ದು ಇರಬಹುದು. ಒಟ್ಟಾರೆಯಾಗಿ, ಹೇಳುವುದಾದರೆ ಕಾಗೆಗೇ ತನ್ನದೇ ಆದಂತಹ ವೈಶಿಷ್ಟ್ಯಗಳು ಇವೆ.
- DAKSHINA KANNADA6 days ago
ಮಂಗಳೂರು : ಬೈಕ್ಗೆ ಕಾರು ಡಿಕ್ಕಿ; ಇಹಲೋಕ ತ್ಯಜಿಸಿದ ವಿದ್ಯಾರ್ಥಿ
- DAKSHINA KANNADA6 days ago
ಸೀರೆ ಉಟ್ರೆ ಕ್ಯಾನ್ಸರ್ ಬರುತ್ತಂತೆ..! ಏನಿದು ಸೀರೆ ಕ್ಯಾನ್ಸರ್?
- FILM7 days ago
ಹಿರಿಯ ನಟ ನಿರ್ಮಾಪಕ…ಕಳ್ಳ ‘ಕುಳ್ಳ’ ಖ್ಯಾತಿಯ ದ್ವಾರಕೀಶ್ ಇನ್ನಿಲ್ಲ
- DAKSHINA KANNADA7 days ago
ದಂತ ವೈದ್ಯೆಯಾಗಿ ಸೇವೆ ಆರಂಭದ ದಿನವೇ ವಿಧಿಯಾಟ..! ಯುವ ವೈದ್ಯೆ ಸಾ*ವು..!