Connect with us

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!!

Published

on

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಗೆ ಕೊರೊನಾ ಪಾಸಿಟಿವ್..!!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಸೂರಜ್ ಜೈಬ್ ಅವರಿಗೂ ಕೋವಿಡ್ 19 ಸೋಂಕು ದೃಢವಾಗಿದೆ.

ಈ ವಿಚಾರವನ್ನು ಖುದ್ದು ಅವರೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಕೋವಿಡ್ -19 ಪರೀಕ್ಷೆಯಲ್ಲಿ ನನ್ನ ವರದಿ ಪಾಸಿಟಿವ್ ಎಂದು ಬಂದಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಎಲ್ಲರೂ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಸುರಕ್ಷಿತವಾಗಿರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಇತ್ತೀಚೆಗೆ ಜಿಲ್ಲೆಯ ಬಿಜೆಪಿ ಶಾಸಕರೊಬ್ಬರಿಗೂ ಕೋವಿಡ್ 19 ಸೋಂಕು ದೃಢವಾಗಿತ್ತು. ಅವರೂ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿಯನ್ನು ಖಚಿತಪಡಿಸಿದ್ದರು.

Click to comment

Leave a Reply

Your email address will not be published. Required fields are marked *

DAKSHINA KANNADA

ಪದ್ಮರಾಜ್ ಪೂಜಾರಿ ಪ್ರಚಾರ ಶೈಲಿ..! ಜನಾರ್ದನ ಪೂಜಾರಿಯನ್ನ ನೆನೆದ ಜನ…!

Published

on

ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕೈ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಅವರ ಪ್ರಚಾರ ಶೈಲಿಗೆ ಜನ ಜನಾರ್ದನ ಪೂಜಾರಿಯವರನ್ನು ನೆನಪಿಸಿಕೊಳ್ತಾ ಇದ್ದಾರೆ. ಗುರುವಿನಂತೆ ಶಿಷ್ಯ ಕೂಡಾ ಪ್ರಚಾರ ಮಾಡ್ತಾ ಇರೋದು ನೋಡಿದ ಜನ ಇವರು ನಿಜವಾಗಿಯೂ ಜನಾರ್ದನ ಪೂಜಾರಿ ಅವರಂತೆ ಜನನಾಯಕ ಅಂತಿದ್ದಾರೆ.

ಜನಾರ್ದನ ಪೂಜಾರಿ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಕೊನೆಯ ಸ್ಪರ್ಧೆಯನ್ನ ನೀಡಿದ್ದರು. ಹತ್ತು ವರ್ಷದ ಬಳಿಕ ಅವರ ಶಿಷ್ಯ ಪದ್ಮರಾಜ್ ಪೂಜಾರಿ ಈಗ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಪದ್ಮರಾಜ್ ಪೂಜಾರಿ ಅವರು ಜನರೊಂದಿಗೆ ಬೆರೆಯುವ ರೀತಿ, ಜನರಿಗೆ ತೋರಿಸುವ ಪ್ರೀತಿ, ಹಾಗೂ ಪ್ರಚಾರದ ವೇಳೆ ಅವರು ವರ್ತಿಸೋ ರೀತಿ ನೋಡಿದ ಸಾಕಷ್ಟು ಜನ ಜನಾರ್ಧನ ಪೂಜಾರಿ ಅವರ ಚುನಾವಣ ಪ್ರಚಾರದ ವೈಖರಿಯನ್ನು ನೆನಪಿಸಕೊಳ್ಳುವಂತೆ ಮಾಡಿದೆ.

ಸಂಸದರಾಗಿ , ಕೇಂದ್ರ ಸಚಿವರಾಗಿ, ಬಡವರ ಬಂಧು ಅಂತ ಕರೆಸಿಕೊಂಡಿದ್ದ ಜನಾರ್ದನ ಪೂಜಾರಿ ಅವರಿಗೆ ಚುನಾವಣೆಯಲ್ಲಿ ಸೋಲಾಗಿದ್ರೂ, ಜನರು ಮಾತ್ರ ಅವರನ್ನು ಮರೆತಿಲ್ಲ. ಜನಾರ್ದನ ಪೂಜಾರಿಯವರು ರಾಜಕೀಯದಿಂದ ದೂರ ಉಳಿದು ವರ್ಷಗಳೇ ಕಳೆದ್ರು ಜನರಿಗೆ ಅವರ ಮೇಲಿರೋ ಪ್ರೀತಿ ಅಭಿಮಾನ ಕಡಿಮೆ ಆಗಿಲ್ಲ. ಚುನಾವಣಾ ಸಮುಯದಲ್ಲಿ ಪ್ರಚಾರಕ್ಕೆ ಇಳಿಯುತ್ತಿದ್ದ ಜನಾರ್ದನ ಪೂಜಾರಿ ಅವರ ಪ್ರಚಾರ ವೈಖರಿಯನ್ನಂತು ಜನ ಮರೆಯೋದೆ ಕಷ್ಟ. ಮುಂಜಾನೆಯಿಂದ ರಾತ್ರಿ ವರೆಗೂ ಅವರು ಮತಯಾಚನೆ ಮಾಡುತ್ತಿದ್ದ ರೀತಿಗೆ ಜನರೇ ದಂಗಾಗಿ ಹೋಗ್ತಾ ಇದ್ರು. ಇನ್ನು ನಡೆದುಕೊಂಡು ಮತಯಾಚಿಸೋ ಜನಾರ್ದನ ಪೂಜಾರಿ ಅವರ ಜೊತೆ ಕಾರ್ಯಕರ್ತರು ಓಡಿಕೊಂಡು ಹೋಗಬೇಕು ಅನ್ನುವಷ್ಟು ವೇಗವಾಗಿ ಸಾಗ್ತಾ ಇದ್ರು. ಅದೇ ಸೇಮ್ ಟು ಸೇಮ್ ಅನ್ನುವಂತೆ ಪದ್ಮರಾಜ್ ಪೂಜಾರಿ ಕೂಡಾ ಪ್ರಚಾರ ಮಾಡ್ತಾ ಇದ್ದಾರೆ.

ಪದ್ಮರಾಜ್ ಪೂಜಾರಿಯವರು ಒಮ್ಮೆ ಬೈಕ್‌ನಲ್ಲಿ ಮತಯಾಚನೆಗೆ ತೆರಳಿದ್ರೆ, ಮತ್ತೊಮ್ಮೆ ಜೀಪ್ ಏರಿ ರೋಡ್ ಶೋ ನಡೆಸ್ತಾರೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಪಾದಯಾತ್ರೆ ಮಾಡಿದ್ರೆ ಅವರ ವೇಗದ ನಡಿಗೆ ಮತ್ತು ಓಡಿಕೊಂಡು ಹೋಗುವ ಅವರ ಶೈಲಿ ಜನಾರ್ದನ ಪೂಜಾರಿ ಅವರನ್ನು ನೆನಪಿಸುತ್ತದೆ. ಎಲ್ಲೇ ಹೋದ್ರು ಜನ ಪದ್ಮರಾಜ್ ಅವರನ್ನು ಮುತ್ತಿಕೊಂಡು ಪ್ರೀತಿಯಿಂದ ಮಾತಾಡಿಸ್ತಾ ಇದ್ದಾರೆ. ಅದೇ ರೀತಿ ಪದ್ಮಾರಾಜ್ ಕೂಡಾ ಜನರಿಗೆ ಬಹಳಷ್ಟು ಹತ್ತಿರವಾಗಿ ಅಭಿಮಾನ ಪ್ರೀತಿಯನ್ನ ಗಳಿಸಿಕೊಂಡಿದ್ದಾರೆ. ಸದ್ಯಕ್ಕಂತು ಜನ ಜನಾರ್ದನ ಪೂಜಾರಿ ಅವರ ಸ್ಥಾನ ತುಂಬಲು ಪದ್ಮರಾಜ್ ಅವರೇ ಸರಿಯಾದ ಅಭ್ಯರ್ಥಿ ಅಂತ ಮಾತನಾಡುತ್ತಿದ್ದು, ಅವರ ಗೆಲುವಿಗೆ ಹಾರೈಸುತ್ತಿದ್ದಾರೆ.

ಇದನ್ನೂ ಓದಿ : ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Continue Reading

LATEST NEWS

ಉಡುಪಿ: ಅನ್ಯಕೋಮಿನವರ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತವೇ ಮುಖ್ಯ ಕಾರಣ : ಸುನಿಲ್ ಕುಮಾರ್

Published

on

ಉಡುಪಿ : ರಾಜ್ಯದಲ್ಲಿ ಅನ್ಯಕೋಮಿನವರು ದೊಡ್ಡ ಪ್ರಮಾಣದಲ್ಲಿ ವಿಜ್ರಂಭಿಸಲು ಆರಂಭ ಮಾಡಿದ್ದಾರೆ. ರಾಜ್ಯದಲ್ಲಿ ಒಂದಾದ ನಂತರ ಒಂದು ಘಟನೆಗಳು ನಡೆಯುತ್ತಿದೆ. ಅನ್ಯಕೋಮಿನವರ ಈ ಪ್ರಮಾಣದ ಕೊಬ್ಬಿಗೆ ಸಿದ್ದರಾಮಯ್ಯ ಆಡಳಿತ ಮತ್ತು ಧೋರಣೆಯೇ ಮುಖ್ಯ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.


ಹುಬ್ಬಳ್ಳಿಯ ನೇಹಾ ಹಿರೇಮಠ ಕೊ*ಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಶನಿವಾರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಸಿಎಂ ಸಿದ್ದರಾಮಯ್ಯನವರು ನೇಹಾ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ವೈಯಕ್ತಿಕ ಘಟನೆ ಎಂದು ಹೇಳುತ್ತಾರೆ.

ಇದನ್ನೂ ಓದಿ : ನೇಹಾ ಹ*ತ್ಯೆ ಪ್ರಕರಣ : ಆಕ್ರೋಶ ಹೊರ ಹಾಕಿದ ಸಿನಿತಾರೆಯರು

ಮುಖ್ಯಮಂತ್ರಿಯಾದವರು ಇಂತಹ ಘಟನೆಯಾದಾಗ ಜಾರಿಕೊಂಡರೆ ರಾಜ್ಯದ ರಕ್ಷಣೆ ಯಾರು ಮಾಡಬೇಕು? ರಾಮೇಶ್ವರಂ ಬಾಂಬ್ ಸ್ಫೋಟ, ಪಾಕ್ ಜಿಂದಾಬಾದ್, ಕೊ*ಲೆ ಸಂದರ್ಭದಲ್ಲಿ ಸಿಎಂ ಮಾತನಾಡುವುದಿಲ್ಲ. ಹಾಡು ಹಗಲೇ ಹ*ತ್ಯೆಯಾದಾಗ ಕಠಿಣ ಧೋರಣೆ ವಹಿಸಬೇಕಿತ್ತು. ಲವ್ ಜಿ*ಹಾದ್, ಮತಾಂ*ಧತೆ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಗರಿಗೆದರಿದೆ. ರಾಜ್ಯದ ರಕ್ಷಣೆ ಕಾಂಗ್ರೆಸ್ ನಿಂದ ಅಸಾಧ್ಯ. ಸಮಾಜ ದೊಡ್ಡ ಪ್ರಮಾಣದಲ್ಲಿ ಜಾಗೃತವಾಗ ಬೇಕಾದ ಅನಿವಾರ್ಯತೆ ಇದೆ ಎಂದರು.

 

Continue Reading

FILM

ಸೂಪರ್ ಹಿಟ್ ಚಿತ್ರ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಡೇಟ್ ಫಿಕ್ಸ್!

Published

on

ಮಲಯಾಳಂನ ಮಂಜುಮ್ಮೆಲ್ ಬಾಯ್ಸ್ ಭಾರೀ ಯಶಸ್ಸನ್ನು ಗಳಿಸಿದ ಚಿತ್ರ. ಚಿತ್ರ ನೋಡಿ ಮತ್ತೆ ಮತ್ತೆ ವೀಕ್ಷಿಸಲು ಥಿಯೇಟರ್ ಗೆ ಜನ ಲಗ್ಗೆ ಇಡುತ್ತಿದ್ದಾರೆ. ಮಲಯಾಳಂ ಸಿನಿ ಪ್ರಿಯರು ಚಿತ್ರ ನೋಡಿ ಭಾರೀ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಸಿನಿಮಾ ಬಂದ್ರೂ ಅದು ಓಟಿಟಿಯಲ್ಲಿ ಯಾವಾಗ ಬರುತ್ತೆ ಅಂತ ಕಾಯೋದು ಸಹಜ. ಇದೀಗ ‘ಮಂಜುಮ್ಮೆಲ್ ಬಾಯ್ಸ್’ ಸರದಿ.

ಅತಿ ಹೆಚ್ಚು ಗಳಿಕೆ :


‘ಮಂಜುಮ್ಮೆಲ್ ಬಾಯ್ಸ್’ ಸರಳ ಕಥಾಹಂದರ ಹೊಂದಿದ್ದರೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಚಿತ್ರವನ್ನು ಚಿದಂಬರಂ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಫೆಬ್ರವರಿ 22 ರಂದು ಈ ಚಿತ್ರ ತೆರೆಕಂಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ. ಈಗಾಗಲೇ ಗ್ರಾಸ್ ಕಲೆಕ್ಷನ್ 200 ಕೋಟಿ ರೂಪಾಯಿ ದಾಟಿದೆ. ಮಲಯಾಳಂನಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆ ಗಳಿಸಿದೆ.


ಶೌಬಿನ್ ಶಾಹಿರ್, ಶ್ರೀನಾಥ್ ಬಾಸಿ, ಬಾಲು ವರ್ಗೀಸ್, ಗಣಪತಿ ಸೇರಿದಂತೆ ಸಾಕಷ್ಟು ಜನ ಕಲಾವಿದರು ಚಿತ್ರದಲ್ಲಿ ಪಾತ್ರವಾಗಿದ್ದಾರೆ. ಅಂದಾಜು 20 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಸ್ಟಾರ್ ನಟರಿಲ್ಲದ ಈ ಸಿನಿಮಾ 200 ಕೋಟಿ ರೂ. ಕಲೆಕ್ಷನ್ ಮಾಡಿರೋದು ಆಶ್ಚರ್ಯ ಹುಟ್ಟು ಹಾಕಿದೆ.

ಓಟಿಟಿಯಲ್ಲಿ ಯಾವಾಗ ?

‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾವನ್ನು ಥಿಯೇಟರ್ ಅಂಗಳದಲ್ಲಿ ನೋಡಿ ಎಂಜಾಯ್ ಮಾಡಿದವರು ಅನೇಕ ಮಂದಿ ಇದ್ದಾರೆ. ಇದೀಗ ಸಿನಿಮಾ ಓಟಿಟಿಯಲ್ಲಿ ಯಾವಾಗ ಅನ್ನೋ ಪ್ರಶ್ನೆ ಹುಟ್ಟಿತ್ತು. ಇದಕ್ಕೆ ಉತ್ತರವೂ ಸಿಕ್ಕಿದೆ.

ಡಿಸ್ನಿ ಪ್ಲಸ್ ಹಾಟ್‌ಸ್ಟರ್‌ನಲ್ಲಿ ಮೇ 3 ರಂದು ಸ್ಟ್ರೀಮಿಂಗ್ ಆಗುವುದು ಬಹುತೇಕ ಖಚಿತವಾಗಿದೆ. ಫೆಬ್ರವರಿ 22 ರಂದು ತೆರೆಗೆ ಬಂದಿದ್ದ ಸಿನಿಮಾ ಈಗಾಗಲೇ 50 ದಿನ ಪೂರೈಸಿದೆ. ಸದ್ಯ ತೆಲುಗು, ತಮಿಳು, ಕನ್ನಡಕ್ಕೂ ಸಿನಿಮಾ ಡಬ್ ಆಗಿದ್ದು, ಏಕಕಾಲಕ್ಕೆ ಓಟಿಟಿಯಲ್ಲಿ ಸ್ಕ್ರೀಮಿಂಗ್ ಆಗಲಿದೆಯಾ ಎಂಬುದು ತಿಳಿದು ಬಂದಿಲ್ಲ.

 

Continue Reading

LATEST NEWS

Trending