ಉಡುಪಿ: ರಸ್ತೆ ಅವ್ಯವಸ್ಥೆ, ಕಳಪೆ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸುವ ಸಂದರ್ಭ ಕಾಂಗ್ರೆಸ್ ಮುಖಂಡ ಮಿಥುನ್ ರೈ ಸೆಲ್ಫಿ ವಿಥ್ ಶೋಭಾ ಕರಂದ್ಲಾಜೆ ಎಂಬ ವೈವಿಧ್ಯಮಯ ಪ್ರತಿಭಟನೆಯ ಬಗ್ಗೆ ಘೋಷಣೆ ಮಾಡಿದ್ದರು.
ಸಂಸದೆ ಶೋಭಾ ಕರಂದ್ಲಾಂಜೆಯೊಂದಿಗೆ ಸೆಲ್ಫಿ ತೆಗೆದು ಕಳುಹಿಸಿದರಿಗೆ 5 ಸಾವಿರ ಬಹುಮಾನವನ್ನು ನೀಡಲಾಗುವುದು ಎಂದು ಘಂಟಾಘೋಷವಾಗಿ ಹೇಳಿದ್ದರು.
ಈಗ ಅವರ ಈ ಹೇಳಿಕೆಗೆ ಬಿಜೆಪಿ ಕಾರ್ಯಕರ್ತರು ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಪ್ರವಾಸ ಕೈಗೊಂಡಿರುವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ, ಕೇಂದ್ರ ಸಹಾಯಕ ಸಚಿವೆ ಶೋಭಾ ಕರಂದ್ಲಾಜೆ ಅವರೊಂದಿಗೆ ಸೆಲ್ಫಿ ತೆಗೆಯಲು ಕಾರ್ಯಕರ್ತರು ಮುಗಿ ಬಿದ್ದಿದ್ದಾರೆ.
ಕಾಪು, ಮತ್ತು ಇತರೆಡೆ ಕಾರ್ಯಕ್ರಮಗಳಲ್ಲಿ ಭಾಗಿಯಾದಂತಹ ಸಂದರ್ಭಗಳಲ್ಲಿ ಸೆಲ್ಫಿ ತೆಗೆದು ಮಿಥುನ್ ರೈಗೆ ಟಕ್ಕರ್ ನೀಡಿದ್ದಾರೆ.