ಮಂಗಳೂರು: ಬಿಜೆಪಿಯವರು ದೈವ ಮತ್ತು ದೇವರನ್ನು ಹಾಗೂ ಹಿಂದುತ್ವವನ್ನು ವೋಟಿಗಾಗಿ ಮಾತ್ರ ಬಳಸುತ್ತಿದ್ದಾರೆ. ಗೆದ್ದ ಮೇಲೆ ದೈವ-ದೇವರನ್ನು ಹೀಯಾಳಿಸುತ್ತಾರೆ.
ಬಿಜೆಪಿ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡಾ ಇದೇ ಮನಸ್ಥಿತಿಯವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಸ ಅಧ್ಯಕ್ಷ ಹರೀಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನಾಯಕರಿಗೆ ಅಭಿವೃದ್ಧಿ ಬೇಡ, ಸಾಮರಸ್ಯವೂ ಬೇಡ. ಭಾವನೆಗಳನ್ನು ಕೆರಳಿಸುವುದು ಮತ್ತು ಸುಳ್ಳು ಹೇಳುವುದು ಮಾತ್ರ ಮಾಡುತ್ತಿದ್ದಾರೆ. ಈ ಮೂಲಕ ಅಧಿಕಾರವನ್ನು ಹಿಡಿಯುವ ಪ್ರಯತ್ನ ಅವರದ್ದು ಎಂದರು.
ಮಾರ್ಚ್ 24ರಂದು ಕೆಎಸ್‌ಆರ್‌ಟಿಸಿ ಮಾರ್ಗದಲ್ಲಿ ಖಾಸಗಿ ಬಸ್ಸಿನವರು ರೂಟ್ ಪರ್ಮಿಟ್‌ನೊಂದಿಗೆ 24 ಕಿಲೋ ಮೀಟರ್ ತನಕ ಸಂಚರಿಸಬಹುದೆಂಬ ಕಾನೂನನ್ನು ತರಲು ಸಿದ್ಧತೆ ಮಾಡಿಕೊಂಡಿದ್ದಾರೆ.
ಇದರಿಂದ ಕೆಎಸ್ಸಾರ್ಟಿಸಿ ಸಂಪೂರ್ಣ ನಷ್ಟಹೊಂದಲಿದೆ ಎಂದು ದೂರಿದರು.
ಮುಖಂಡರಾದ ಮಹಾಬಲ ಮಾರ್ಲ, ಪ್ರಕಾಶ್ ಸಾಲಿಯಾನ್, ಮೊಹಮ್ಮದ್ ಮೊದಲಾದವರಿದ್ದರು.