Thursday, December 1, 2022

ಹರಿದಾಡಿದ ಬಿಜೆಪಿ ರಾಜ್ಯಸಭಾ ಸದಸ್ಯ ಅಶೋಕ ಗಸ್ತಿ ನಿಧನ ಸುದ್ದಿ: ಗೊಂದಲ

ಬೆಂಗಳೂರು : 4 ತಿಂಗಳ ಹಿಂದೆ ರಾಜ್ಯಸಭಾ ಸದಸ್ಯರಾಗಿ ನೇಮಕವಾಗಿದ್ದ ಬಿಜೆಪಿಯ ಅಶೋಕ್ ಗಸ್ತಿ ಅವರು ಕೊರೊನಾ ಸೊಂಕಿನಿಂದಾಗಿ ಇಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬ ಸುದ್ದಿ ಸುಳ್ಳು ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.

ಕೋವಿಡ್‌ ದೃಢವಾಗಿದ್ದರಿಂದ ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ಅವರು ನಿಧನರಾಗಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣ ಹಾಗೂ ಖಾಸಗಿ ವಾಹಿನಿಗಳಲ್ಲಿ ಇಂದು ಮಧ್ಯಾಹ್ನದ ನಂತರ ಹರಿದಾಡಿತು.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುಳ್ಳುಸುದ್ದಿ ಗಮನಿಸಿ, ಕೇಂದ್ರ ಗೃಹ ಸಚಿವ ಅಮಿತ್‌ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ತಮ್ಮ ಟ್ವಿಟರ್ ಖಾತೆಗಳಲ್ಲಿ ಸಂತಾಪ ಸೂಚಿಸಿದ್ದರು. ಗುರುವಾರ ಸಂಜೆ ಮಣಿಪಾಲ್‌ ಆಸ್ಪತ್ರೆಯಿಂದ ಹೊರಬಿದ್ದ ಪ್ರಕಟಣೆಯ ಬಳಿಕ ತಮ್ಮ ಸಂದೇಶಗಳನ್ನು ಬದಲಿಸಿಕೊಂಡು ‘ಗಸ್ತಿ ಅವರಿಗೆ ಮರುಜನ್ಮ ದೊರಕಲಿ, ಬೇಗನೆ ಗುಣಮುಖರಾಗಿ ಹೊರಬರಲಿ’ ಎಂದು ಶುಭ ಹಾರೈಸುವ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ಈಗ ಹರಿದಾಡುತ್ತಿವೆ.

LEAVE A REPLY

Please enter your comment!
Please enter your name here

Hot Topics