ತುಮಕೂರು: ಸಿದ್ದರಾಮಯ್ಯನ ಹೆಸರು ಮಾತ್ರ ರಾಮಂದು, ಮುಖ ರಾವಣಂದು. ಗೋ ರಕ್ಷಣೆ ಮಾಡುವ ಬದಲು ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಗೋ ಹಂತಕರನ್ನು ರಕ್ಷಣೆ ಮಾಡಿದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ ಆಯೋಜಿಸಿದ್ದ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಟಿಪ್ಪು ಜಯಂತಿ ಬಗ್ಗೆ ಯೋಚನೆ ಮಾಡಿದ ಸಿದ್ದರಾಮಯ್ಯ, ರೈತರ ಬದುಕು ಹಸನು ಮಾಡುವ ಬಗ್ಗೆ ಯೋಚನೆ ಮಾಡಲಿಲ್ಲ.
ರೈತರ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಹಾಗಾಗಿ ಅನೇಕ ನಾಯಕರು ಕಾಂಗ್ರೆಸ್ ತೊರೆದಿದ್ದರು. ಅತಿ ಹೆಚ್ಚು ಗೋ ಹತ್ಯೆ ನಡೆದಿದ್ದು ಸಿದ್ದರಾಮಯ್ಯ ಕಾಲದಲ್ಲಿ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ರೈತರ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ನಾನು ಬಿಜೆಪಿಯ ರಾಜ್ಯಾಧ್ಯಕ್ಷನಾಗಿ ಮೂರು ವರ್ಷ ಕಳೆದಿದೆ. ಈ ದೇಶದಲ್ಲಿ ವಿಶಿಷ್ಟ ಸಂಸ್ಕೃತಿ ಇದೆ.
ಚರಾಚರ ಜೀವಿಯಲ್ಲಿ ದೇವರನ್ನು ಕಂಡಿದ್ದೇವೆ. ಹಾಗಾಗಿ ಗೋವಿನಲ್ಲೂ ದೇವರನ್ನು ಕಂಡಿದ್ದೇವೆ. ಕೃಷಿ ಸಂಸ್ಕೃತಿ ಋಷಿ ಸಂಸ್ಕೃತಿಯಂತೆ ಶ್ರೇಷ್ಠ. ಕುವೆಂಪು ರೈತರ ಬಗ್ಗೆ ವಿಶಿಷ್ಟವಾಗಿ, ವಿಭಿನ್ನವಾಗಿ ಹೇಳಿದ್ದಾರೆ ಎಂದರು.