Friday, June 2, 2023

ಪ್ರವಾದಿ ಅವಹೇಳನ: ಯುಎಇ, ಮಲೇಷ್ಯಾ ಸೇರಿ 15ಕ್ಕೂ ಹೆಚ್ಚು ದೇಶಗಳಿಂದ ಖಂಡನೆ

ನವದೆಹಲಿ: ಪ್ರವಾದಿ ಮಹಮ್ಮದ್‌ ಬಗ್ಗೆ ಬಿಜೆಪಿ ವಕ್ತಾರರು ಅವಮಾನಿಸಿ ನೀಡಿದ್ದ ಹೇಳಿಕೆಗಳನ್ನು ಯುಎಇ, ಇರಾಕ್‌, ಇರಾನ್‌ ಸೇರಿ 15ಕ್ಕೂ ಹೆಚ್ಚಿನ ಇಸ್ಲಾಮಿಕ್‌ ರಾಷ್ಟ್ರಗಳು ಖಂಡನೆ ವ್ಯಕ್ತಪಡಿಸಿವೆ.


ಈ ನಿಂದನೆಗಳು, ದ್ವೇಷಪೂರಿತ ಮತ್ತು ಅವಮಾನಕರ ನಡವಳಿಕೆಗಳನ್ನು ತಡೆಯದೇ ಇದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಶಾಂತಿಯುತ ಸಹಬಾಳ್ವೆಯ ಮೇಲೆ ಊಹಾತೀತ ಪರಿಣಾಮಗಳಿಗೆ ಇದು ಕಾರಣವಾಗಬಹುದು, ಜನರ ನಡುವೆ ಸಂಘರ್ಷ ಮತ್ತು ಪ್ರಕ್ಷುಬ್ಧತೆಯನ್ನು ಹೆಚ್ಚಿಸಬಹುದು’ ಎಂದು ಇರಾಕ್‌ನ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಶಾಂತಿ, ಸ್ಥಿರತೆಯ ಹಿತಾಸಕ್ತಿಗಳಿಗೆ ಧಕ್ಕೆ ಉಂಟು ಮಾಡುವ ಯಾವುದೇ ಪ್ರಚೋದನಕಾರಿ ನಡೆಯನ್ನು ತಡೆಗಟ್ಟಬೇಕು ಹಾಗೂ ಇಸ್ಲಾಮೋಫೋಬಿಯಾವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಭಾರತ ಕೈ ಜೋಡಿಸಬೇಕು ಎಂದು ಮಲೇಷ್ಯಾ ಕರೆ ನೀಡಿದೆ.

‘ನಮ್ಮ ನಾಗರಿಕ ಪರಂಪರೆ ಮತ್ತು ವೈವಿಧ್ಯದಲ್ಲಿ ಏಕತೆಯ ಸಾಂಸ್ಕೃತಿಕ ಪರಂಪರೆಗೆ ಅನುಗುಣವಾಗಿ ಭಾರತ ಸರ್ಕಾರವು ಎಲ್ಲ ಧರ್ಮಗಳಿಗೂ ಅತ್ಯಂತ ಹೆಚ್ಚಿನ ಗೌರವ ಕೊಡುತ್ತದೆ.

ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ’ ಎಂದು ಭಾರತದ ರಾಯಭಾರ ಕಚೇರಿಯ ಹೇಳಿಕೆಯು ತಿಳಿಸಿದೆ.

LEAVE A REPLY

Please enter your comment!
Please enter your name here

Hot Topics