Friday, June 2, 2023

” ‘ಕಾಶ್ಮೀರ್​ ಫೈಲ್ಸ್’​ ಚಿತ್ರವನ್ನು ತೆರಿಗೆ ಮುಕ್ತ ಮಾಡುವ ಬದಲು ಯೂಟ್ಯೂಬ್​ನಲ್ಲಿ ಹಾಕಿಬಿಡಿ, ಎಲ್ಲರೂ ನೋಡಲಿ”

ನವದೆಹಲಿ: ದೇಶಾದ್ಯಂತ ಭಾರೀ ಸಂಚಲನ ಸೃಷ್ಟಿಸಿರುವ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರದ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ಈ ಮಧ್ಯೆ ದೆಹಲಿಯಲ್ಲಿ ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ನೀಡುವಂತೆ ಬೇಡಿಕೆ ಇಟ್ಟ ಬಿಜೆಪಿ ಶಾಸಕರಿಗೆ ಮುಖ್ಯಮಂತ್ರಿ ಕೇಜ್ರಿವಾಲ್‌ ತಿರುಗೇಟು ನೀಡಿದ್ದಾರೆ.


ಗುರುವಾರ ದೆಹಲಿ ವಿಧಾನಸಭಾ ಬಜೆಟ್​ ಅಧಿವೇಶನಕ್ಕೆ ಅಡ್ಡಿಪಡಿಸಿ, ಚಿತ್ರಕ್ಕೆ ತೆರಿಗೆ ಮುಕ್ತ ಅವಕಾಶ ನೀಡವಂತೆ ಮೊನ್ನೆ ಬೇಡಿಕೆ ಇಟ್ಟಿದ್ದರು.

ಇದಕ್ಕೆ ನಿನ್ನೆ ಉತ್ತರಿಸಿದ ಅವರು ‘ತೆರಿಗೆ ಮುಕ್ತ ಮಾಡುವುದನ್ನು ಕೇಳುವ ಬದಲು ಕಾಶ್ಮೀರ್​ ಫೈಲ್ಸ್​ ಚಿತ್ರವನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್​ ಮಾಡುವಂತೆ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರನ್ನು ಕೇಳಿರಿ,

ಆಗ ಎಲ್ಲರೂ ಉಚಿತವಾಗಿ ಸಿನಿಮಾವನ್ನು ವೀಕ್ಷಣೆ ಮಾಡಬಹುದು. ಕೆಲವರು ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೋಟಿಗಟ್ಟಲೆ ಸಂಪಾದಿಸಿದ್ದಾರೆ ಮತ್ತು ನಿಮಗೆ ಕೇವಲ ಪೋಸ್ಟರ್‌ಗಳನ್ನು ಹಾಕುವ ಕೆಲಸವನ್ನು ನೀಡಲಾಗಿದೆ ಎಂದು ವಿಧಾನಸಭೆಯಲ್ಲಿ ಬಿಜೆಪಿಯನ್ನುದ್ದೇಶಿಸಿ ಕೇಜ್ರಿವಾಲ್ ವ್ಯಂಗ್ಯವಾಡಿದರು.

LEAVE A REPLY

Please enter your comment!
Please enter your name here

Hot Topics