Connect with us

DAKSHINA KANNADA

ಕೆಲಸ ಮಾಡುವುದನ್ನು ಬಿಜೆಪಿ ಕಾಂಗ್ರೆಸ್ ನಿಂದ ಕಲಿಯಲಿ : ಹರೀಶ್ ಕುಮಾರ್..!

Published

on

ಮಂಗಳೂರು :  ಬಿಜೆಪಿ ಕೆಲಸ ಕಾರ್ಯಗಳನ್ನು ಹೇಗೆ ಮಾಡಬೇಕೆಂದು ಕಾಂಗ್ರೆಸ್ ನಿಂದ ಕಲಿಯಬೇಕೆ ಹೊರತು ಕಾಂಗ್ರೆಸ್ ನವರಿಗೆ ಬಿಜೆಪಿ ಜಿಲ್ಲಾಧ್ಯಕ್ಷರಿಂದ ಕಲಿಯುವ ಅಗತ್ಯ ಇಲ್ಲ ಎಂದು ಕಾಂಗ್ರೆಸ್‌ ನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ತಿರುಗೇಟು ನೀಡಿದ್ದಾರೆ.

ಮಂಗಳೂರಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಲಸಿಕೆ ವಿಚಾರದಲ್ಲಿ ‌ಕಾಂಗ್ರೆಸ್ ರಾಜಕೀಯ ಮಾಡ್ತಿಲ್ಲ ಮತ್ತು ಅಪಪ್ರಚಾರ ಕೂಡ ಮಾಡಿಲ್ಲ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಮಸ್ಯೆ ಉಲ್ಭಣಿಸಿದ ಸಂದರ್ಭದಲ್ಲಿ ಅದನ್ನು ನಿಭಾಯಿಸಲು ಅಸಮರ್ಥವಾಗಿದ್ದಾಗ ಆಡಳಿತ ಪಕ್ಷವಾದ ಬಿಜೆಪಿ ವೈಫಲ್ಯಗಳ ಬಗ್ಗೆ ವಿರೋಧ ಪಕ್ಷವಾಗಿ ದ್ವನಿ ಎತ್ತಿದ್ದೇವೆ.

ಆದರೆ ಬಿಜೆಪಿ ನಾಯಕರುಗಳು ಕಾಂಗ್ರೆಸ್ ಹೆಸರು ಹೇಳಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು,

ಭಾಜಪಾ ಕೋವಿಡ್ ಕಂಟ್ರೋಲ್ ಮಾಡ್ತಿಲ್ಲ ಬದಲಾಗಿ ಮೋದಿಯ ಡೇಮೆಜ್ ಕಂಟ್ರೋಲ್ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಹರೀಶ್ ಕುಮಾರ್ ಆಡಳಿತ ವೈಫಲ್ಯ, ವ್ಯಾಕ್ಸಿಕ್ ಕೊರತೆ, ಬೆಡ್ ದಂದೆ, ವಿದೇಶದಿಂದ ಆಕ್ಸಿಜನ್ ತರಿಸುತ್ತಿರೋದು ಬಿಜೆಪಿಯ ಸಾಧನೆ ಎಂದು ವ್ಯಂಗ್ಯವಾಡಿದ್ದಾರೆ.

ಸರ್ಕಾರ ಕೆಲಸ ಮಾಡಲು ವಿಫಲವಾದ ಕಾರಣ ಕಾಂಗ್ರೆಸ್ ಕೋವಿಡ್ ನಿಗ್ರಹಕ್ಕೆ ಜಿಲ್ಲೆಯಲ್ಲಿ ವಾರ್ ರೂಂ ಮಾಡಬೇಕಾಯಿತು.

ಇದುವರೆಗೆ ವಾರ್ ರೂಂ ಗೆ ಆರು ಸಾವಿರ ಕರೆಗಳು ಬಂದಿವೆ . ಕೊರೊನಾಕ್ಕಾಗಿ ಜಿಲ್ಲೆಯಲ್ಲಿ ಆರು ಆಕ್ಸಿಜನ್ ಸಹಿತ 13 ಆ್ಯಂಬುಲೆನ್ಸ್ ‌ಉಚಿತ ಸೇವೆ ಕೊಡುತ್ತಿವೆ.

10 ಸಾವಿರ ಕುಟುಂಬಳಿಗೆ ದಿನಸಿ ಕಿಟ್ ಒದಗಿಸಿದ್ದೇವೆ ಎಂದ ಅವರು ಕಾಂಗ್ರೆಸ್ ‌ಪಕ್ಷ ಅಧಿಕಾರ ಇಲ್ಲದಿದ್ದರೂ ಜನ ಸೇವೆ ಮಾಡುವುದರಲ್ಲಿ ಹಿಂದೆ ಉಳಿದಿಲ್ಲ ಎಂದರು.

BELTHANGADY

ಸಾಕುನಾಯಿಯನ್ನು ಹೊತ್ತೊಯ್ದ ಚಿರತೆ..!! ಭಯ ಭೀತರಾದ ಜನತೆ

Published

on

ಬೆಳ್ತಂಗಡಿ: ಇತ್ತೀಚೆಗೆ ಕಾಡಿನಲ್ಲಿರುವ ಪ್ರಾಣಿಗಳು ನಾಡಿಗೆ ಬರೋದು ಕಾಮನ್‌ ಆಗಿ ಬಿಟ್ಟಿದೆ. ಹೆಚ್ಚಾಗಿ ಕಾಡಾನೆಗಳು ಊರಿಗೆ ಬಂದು ಕೃಷಿಗಳನ್ನು ನಾಶ ಮಾಡ್ತಾಇತ್ತು. ಆದರೆ ಈಗೀಗ ಹುಲಿ ಚಿರತೆಗಳು ಕೂಡ ನಾಡಿನತ್ತ ಮುಖ ಮಾಡ್ತಾ ಇದೆ.

chitha

ಮುಂದೆ ಓದಿ..; ಕಾಗೆ ನಿಜಕ್ಕೂ ನಮ್ಮ ಪಿತೃನಾ..?

ಬೆಳ್ತಂಗಡಿಯ ವೇಣೂರು ಪಚ್ಚೇರಿ ಪರಿಸರದಲ್ಲಿ ಚಿರತೆಯೊಂದು ರಾತ್ರಿ ಹೊತ್ತು ಓಡಾಡುವುದು ಕಂಡು ಬಂದಿದೆ. ಈ ಘಟನೆಯಿಂದ ಊರಿನ ಜನ ಭಯಭೀತರಾಗಿದ್ದಾರೆ. ಹಚ್ಚೇರಿ ಗೋಳಿದಡ್ಕ ನಿವಾಸಿ ಕೃಷ್ಣಾನಂದ ಭಟ್ ಅವರ ಸಾಕುನಾಯಿಯನ್ನು ಚಿರತೆ ಕಚ್ಚಿ ಕೊಂಡೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೃಷ್ಣಾನಂದ ಅವರು ಚಿರತೆಯಿಂದ ರಕ್ಷಣೆ ಕೋರಿ ವೇಣೂರು ಅರಣ್ಯ ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

Continue Reading

BANTWAL

ಚುನಾವಣಾ ಮತದಾನ ಹಿನ್ನೆಲೆ ಜಿಲ್ಲೆಯಲ್ಲಿ ಮೂರು ದಿನ ಮದ್ಯ ನಿಷೇಧ

Published

on

ದ.ಕ: ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮೊದಲ ಹಂತದ ಮತದಾನ ಹಾಗೂ ಚುನಾವಣಾ ಮತ ಎಣಿಕಾ ಕಾರ್ಯ ನಡೆಯಲಿರುವ ಹಿನ್ನೆಲೆ ದ.ಕ ಕ್ಷೇತ್ರ ಸೇರಿದಂತೆ 14 ಕ್ಷೇತ್ರಗಳಲ್ಲಿ ಎ.24ರ ಸಂಜೆ 6 ಗಂಟೆಯಿಂದ ಮದ್ಯ ನಿಷೇಧ ಮಾಡಲಾಗಿದೆ.

drinks ban for 3 days

ಮುಂದೆ ಓದಿ..; ಉಡುಪಿ : ಕರಾವಳಿ ಜನರ ರಕ್ತದಲ್ಲೇ ಹಿಂದುತ್ವ ಇದೆ : ಬಿ.ವೈ.ವಿಜಯೇಂದ್ರ

ಏ. 24ರ ಸಂಜೆ 6ಗಂಟೆಯಿಂದ ಏಪ್ರಿಲ್ 26ರ ಮಧ್ಯರಾತ್ರಿವರೆಗೆ ಎಲ್ಲಾ ಹೋಟೆಲ್, ರೆಸ್ಟೋರೆಂಟ್ ಮತ್ತು ಪರವಾನಿಗೆ ಹೊಂದಿರುವ ಅಂಗಡಿಗಳಲ್ಲಿ ಯಾವುದೇ ರೀತಿಯ ಮದ್ಯಪಾನ, ಮಾರಾಟವನ್ನು ನಿಷೇಧ ಮಾಡಲಾಗಿದೆ, ಪರವಾನಗಿ ಪಡೆಯದ ಆವರಣಗಳಲ್ಲಿ ಮದ್ಯ ಶೇಖರಣೆಯನ್ನು ನಿಷೇಧ ಮಾಡಲಾಗಿದೆ. ಜಿಲ್ಲೆಯಾದ್ಯಂತ ಸಿಆರ್ಪಿಸಿ ಕಲಂ 144ರ ಅನ್ವಯ ಏಪ್ರಿಲ್ 24ರ ಸಂಜೆ 6ರಿಂದ ಪ್ರಾರಂಭಿಸಿ ಏಪ್ರಿಲ್ 26ರ ಮತದಾನ ಮುಕ್ತಾಯದ ವರೆಗೂ ಸೆಕ್ಷನ್ 144 ರಡಿ ಪ್ರತಿಬಂಧಕಾಜ್ಞೆಯನ್ನು ಜಿಲ್ಲೆಯಾದ್ಯಂತ ಹೊರಡಿಸಲಾಗಿದೆ. ಅದೇ ರೀತಿ ಏ. 24ರ ಸಂಜೆ 6 ರಿಂದ‌ ಮತದಾನ ಕೊನೆಗೊಳ್ಳುವ ಏ.26ರ ಅವಧಿಯಲ್ಲಿ ಧ್ವನಿವರ್ಧಕಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ನಿಡಿದ್ದಾರೆ.

Continue Reading

bangalore

ಮಹಿಳೆಯ ಅತಿಯಾದ ಕಾಮದಾಹ…! ದಾಹಕ್ಕೆ ಅಂತ್ಯ ಹಾಡಿದ ಯುವಕ..!

Published

on

ಬೆಂಗಳೂರು : ಆಕೆ 48 ವರ್ಷ ಪ್ರಾಯದ ಮಹಿಳೆಯಾಗಿದ್ದು, ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸಿ ಕೊಟ್ಟಿದ್ದಾಳೆ. ಬೆಂಗಳೂರಿನ ಕೊಡಿಗೆ ಹಳ್ಳಿಯಲ್ಲಿ ಮನೆ ಮಾಡಿಕೊಂಡು ಒಂಟಿಯಾಗಿದ್ದ ಆಕೆಯ ದೇಹ ನಗ್ನವಾಗಿ ಬೆಡ್‌ರೂಮಿನಲ್ಲಿ ಪತ್ತೆಯಾಗಿತ್ತು. ಎಪ್ರಿಲ್ 19 ರಂದು ನಡೆದಿದ್ದ ಈ ಘಟನೆಯನ್ನು ಭೇದಿಸಿದ ಪೊಲೀಸರಿಗೆ ಶಾಕ್ ಆಗುವಂತ ವಿಚಾರಗಳು ಗೊತ್ತಾಗಿದೆ.

ಕೊಡಿಗೆ ಹಳ್ಳಿಯ ಭದ್ರಪ್ಪ ಲೇಔಟ್‌ನಲ್ಲಿ ನಡೆದಿದ್ದ ಶೋಭಾ ಎಂಬ ಮಹಿಳೆಯ ಕೊ*ಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಕೊಲೆ ಆರೋಪಿಯಾಗಿರುವ ನವೀನ್ ಎಂಬ ಯುವಕನನ್ನು ಕೊಡಿಗೆ ಹಳ್ಳಿಯ ಪೊಲೀಸರು ಬಂದಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ವಿಚಾರ ಕೇಳಿ ಪೊಲೀಸರೇ ಸುಸ್ತಾಗಿದ್ದಾರೆ. ಬಳಿಕ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ ಶೋಭಾಳ ಕಾಮದಾಹ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಗಂಡ-ಹೆಂಡತಿ ಬೇರೆ ಬೇರೆ ಮಲಗಿದ್ರೆ ಏನೆಲ್ಲಾ ಪ್ರಯೋಜನ ಇದೆ ಗೊತ್ತಾ?

ಶೋಭಾಳಿಗೆ ಇನ್‌ಸ್ಟಾಗ್ರಾಂ ಮೂಲಕ ಪರಿಚಿತನಾಗಿದ್ದ ನವೀನ್ ಬಳಿಕ ಸ್ನೇಹಿತನಾಗಿ, ಅದು ಪ್ರೀತಿಗೆ ತಿರುಗಿ ಬಳಿಕ ಇಬ್ಬರ ನಡುವೆ ಅನೈತಿಕ ಸಂಬಂಧದವರೆಗೂ ಬಂದು ನಿಂತಿತ್ತು. ಮಗನ ವಯಸ್ಸಿನ ಹುಡುಗನ ಜೊತೆಯಲ್ಲಿ ನಿರಂತರ ಸೆಕ್ಸ್ ಮಾಡುತ್ತಿದ್ದ ಶೋಭಾಳ ಅತಿಯಾದ ಕಾಮಧಾಹದಿಂದ ಬೇಸತ್ತು ಆಕೆಯನ್ನು ಕೊಲೆ ಮಾಡಿದ್ದಾಗಿ ಹೇರೋಹಳ್ಳಿ ಮೂಲದ ಆರೋಪಿ ನವೀನ್ ಹೇಳಿಕೆ ನೀಡಿದ್ದಾನೆ.

ಕೊಲೆ ನಡೆದ ದಿನವೂ ಶೋಭಾ ಮನೆಗೆ ನವೀನ್ ಬಂದಿದ್ದ. ಏ.19ರಂದು ಇಬ್ಬರು ದೈಹಿಕ ಸಂರ್ಪಕವನ್ನು ಬೆಳೆಸಿದ್ದರು. ಆ ನಂತರ ಶೋಭಾ ಮತ್ತೆ ನವೀನ್‌ಗೆ ಸೆಕ್ಸ್‌ಗೆ ಒತ್ತಾಯಿಸಿದ್ದು ನಿರಾಕರಿಸಿದಾಗ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಈಕೆ ಅತಿಯಾಗಿ ಸೆಕ್ಸ್‌ಗೆ ಒತ್ತಾಯಿಸಿದ್ದಕ್ಕೆ ಬೇಸರಗೊಂಡ ನವೀನ್‌ ಬೆಡ್‌ ರೂಮಿನಲ್ಲೇ ಆಕೆಯ ಕಥೆ ಮುಗಿಸಿದ್ದ.

48ರ ಮಹಿಳೆಗೆ ಯುವಕರ ಮೇಲೆ ಹುಚ್ಚು

48ರ ಶೋಭಾ ಕೇವಲ ನವೀನ್ ಮಾತ್ರವಲ್ಲದೇ ಅನೇಕ ಯುವಕರ ಸಹವಾಸ ಬೆಳೆಸಿದ್ದಳು. ಒಬ್ಬೊಬ್ಬ ಹುಡುಗರಿಗೂ ಒಂದೊಂದು ಹಣ್ಣಿನ ಹೆಸರಿಟ್ಟಿದ್ದು, ನವೀನ್‌ಗೆ ಆ್ಯಪಲ್ ಎಂದು ಹೆಸರಿಟ್ಟಿದ್ದಳಂತೆ. ಆ್ಯಪಲ್, ಆರೆಂಜ್, ಬನಾನ ಹೆಸರಿನಲ್ಲಿ ಹುಡುಗರ ಹೆಸರು ಸೇವ್ ಮಾಡಿಕೊಳ್ಳುತ್ತಿದ್ದಳು. ಆ್ಯಪ್‌ಗಳಲ್ಲಿಯೂ ಆ್ಯಕ್ಟಿವ್ ಆಗಿದ್ದ ಶೋಭಾ ಸುಮಾರು 20 ಕ್ಕೂ ಹೆಚ್ಚು ಹುಡುಗರನ್ನು ಖೆಡ್ಡಾಗೆ ಬೀಳಿಸಿಕೊಂಡಿದ್ದಳು. ಈಕೆ ಕರೆದಾಗ ಯುವಕರು ಏನಾದರೂ ಬಾರದೆ ಇದ್ದರೆ ಅವರ ಮನೆ ಬಳಿಯೇ ಹೋಗುತ್ತಿದ್ದಳು. ನಂತರ ಕಾರಿನ ಹಾರ್ನ್ ಜೋರಾಗಿ ಹಾಕುತ್ತಿದ್ದಳು. ಇಷ್ಟಕ್ಕೂ ಜಗ್ಗದೆ ಹೋದರೆ ಮನೆಯವರಿಗೆ ಖಾಸಗಿ ಫೋಟೊವನ್ನು ತೋರಿಸುವುದಾಗಿ ಬೆದರಿಕೆ ಹಾಕುತ್ತಿದ್ದಳು. ಅಷ್ಟೇ ಅಲ್ಲದೆ ಆ ಯುವಕರ ಮದುವೆಗೂ ಅಡ್ಡಿ ಪಡಿಸಿ ಮದುವೆ ನಿಲ್ಲಿಸಿದ್ದಳು.

ಇದನ್ನೂ ಓದಿ ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ಕೊಲೆಯಾದ ದಿನವೂ ನವೀನ್‌ಗೆ ಬ್ಲಾಕ್ ಮೇಲ್ ಮಾಡಿ ಕರೆಸಿಕೊಂಡಿದ್ದಳು. ನವೀನ್‌ ಎಡಗೈಗೆ ಗಾಯವಾಗಿತ್ತು, ಗಾಯದ ಮೇಲೆ ಕೂತು ನೀನು‌ ಮದುವೆ ಆಗಬಾರದು, ಹೀಗೆ ನನ್ನ ಜತೆ ಇರಬೇಕು. ಮದುವೆ ಆದರೆ ಅಲ್ಲೆ ಬಂದು ಗಲಾಟೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಳು. ಇದರಿಂದ ಬೇಸತ್ತ ನವೀನ್‌, ಶೋಭಾಳ ಕತ್ತು ಹಿಸುಕಿ ಕೊ*ಲೆ‌ ಮಾಡಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ.

Continue Reading

LATEST NEWS

Trending