ಮಂಗಳೂರು : ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಕಟ್ಟಿ ಹಾಕಲು ಇದೀಗ ಬಿರುವೆರ್ ಕುಡ್ಲ ಸಂಘಟನೆ ಕೂಡ ಕೈ ಜೋಡಿಸಿದ್ದು ಮಂಗಳೂರಿನಲ್ಲಿ ಉಚಿತ ಅತ್ಯಾಧುನಿಕ ಅ್ಯಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಆರಂಭಿಸಿದೆ.
ಆಕ್ಸಿಜನ್ ಸಹಿತ ಅತ್ಯಾಧುನಿಕ ಸೌಲಭ್ಯ ಇರುವ ಆಂಬುಲೆನ್ಸ್ ನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಬ್ರಹ್ನಶ್ರೀ ನಾರಾಯಣಗುರುಗಳ ತತ್ವಾದರ್ಶದಂತೆ ಬಿರುವೆರ್ ಕುಡ್ಲ ಸಂಘಟನೆ ಬಡವರಿಗೆ ನೆರವು ನೀಡುತ್ತಾ ಬರುತ್ತಿದ್ದು ಇದೀಗ ಕೊರೊನಾ ಸಂದರ್ಭ ಸರಕಾರದ ಜತೆ ಕೈ ಜೋಡಿಸಿ ಉಚಿತ ಆಂಬುಲೆನ್ಸ್ ಸೇವೆ ನೀಡಿರುವುದು ಶ್ಲಾಘನೀಯ ಎಂದರು.
ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ಬಿರುವೆರ್ ಕುಡ್ಲದ ಜನಪರ ಕೆಲಸ ಕಾರ್ಯ ವನ್ನು ಶ್ಲಾಘಿಸಿ, ಸಂಸ್ಥೆಯ ಸೇವಾ ಕಾರ್ಯ ಮುಂದುವರಿಯಲಿ ಎಂದು ಹಾರೈಸಿದರು ಶಾಸಕರಾದ ಡಿ ವೇದವ್ಯಾಸ ಕಾಮತ್ ಶುಭ ಹಾರೈಸಿದರು.
ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್,ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್,ಕುದ್ರೋಳಿ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಸಾಯೀರಾಂ, ನಮ್ಮಟಿವಿಯ ಆಡಳಿತ ನಿರ್ದೇಶಕ ಡಾ.ಶಿವಶರಣ್ ಶೆಟ್ಟಿ , ಕೆ.ಟಿ.ಸುವರ್ಣ, ಜಗದೀಪ್ ಸುವರ್ಣ, ಬಿರುವೆರ್ ಕುಡ್ಲ ಸ್ಥಾಪಕಾಧ್ಯಕ್ಷ ಉದಯಪೂಜಾರಿ ಬಳ್ಳಾಲ್ ಬಾಗ್ ಹಾಗೂ ಫ್ರೆಂಡ್ಸ್ ಬಳ್ಳಾಲ್ ಭಾಗ್ ಬಿರುವೆರ್ ಕುಡ್ಲ (ರಿ) ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.