ಹಕ್ಕಿಜ್ವರದಿಂದ ವಿಶ್ವದಲ್ಲೇ ಮೊದಲ ಸಾವು ಸಂಭವಿಸಿದೆ, ಮೆಕ್ಸಿಕೋದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಕೊರೊನಾಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳುತ್ತಿರುವ ಹಕ್ಕಿಜ್ವರ ಅನೇಕ ದೇಶಗಳಲ್ಲಿ ವೇಗವಾಗಿ ಹರಡುತ್ತಿದೆ. ಇತ್ತೀಚಿನ ವರದಿಗಳಲ್ಲಿ ಹಸುಗಳು ಮತ್ತು ಹಾಲಿನ ಮೂಲಕ ಮನುಷ್ಯರಿಗೆ ಹರಡುವ ಪ್ರಕರಣಗಳು ಅಮೆರಿಕದ ಅನೇಕ ನಗರಗಳಲ್ಲಿ ವರದಿಯಾಗಿದೆ. ಈ ತಿಂಗಳ ಆರಂಭದಲ್ಲಿ ಎಚ್5ಎನ್1 ವೈರಸ್ ಪ್ರಕರಣಗಳ ಹೆಚ್ಚಳದ ಬಗ್ಗೆ ಭಾರತವೂ ಎಚ್ಚರಿಕೆ ನೀಡಿತ್ತು.
H5N1 ವೈರಸ್ ಅನ್ನು ಪಕ್ಷಿ ಜ್ವರ ಎಂದೂ ಕರೆಯುತ್ತಾರೆ. ಈ ತಿಂಗಳ ಆರಂಭದಲ್ಲಿ , ಆಂಧ್ರಪ್ರದೇಶ (ನೆಲ್ಲೂರು ಜಿಲ್ಲೆ), ಮಹಾರಾಷ್ಟ್ರ (ನಾಗ್ಪುರ ಜಿಲ್ಲೆ), ಜಾರ್ಖಂಡ್ (ರಾಂಚಿ ಜಿಲ್ಲೆ) ಮತ್ತು ಕೇರಳ (ಆಲಪ್ಪುಳ, ಕೊಟ್ಟಾಯಂ ಮತ್ತು ಪತ್ತನಂತಿಟ್ಟ ಜಿಲ್ಲೆಗಳು) ನಾಲ್ಕು ರಾಜ್ಯಗಳಿಗೆ ಎಚ್ಚರಿಕೆ ನೀಡಲಾಗಿದೆ.
ಬುಧವಾರ (ಜೂನ್ 5) ಮೆಕ್ಸಿಕೋದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹಕ್ಕಿ ಜ್ವರದಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಆದರೆ ವ್ಯಕ್ತಿಗೆ ಹೇಗೆ ಸೋಂಕು ತಗುಲಿತು ಎಂಬುದನ್ನು ಯುಎನ್ ಏಜೆನ್ಸಿ ಹೇಳಿಲ್ಲ. ಜ್ವರ, ಉಸಿರಾಟದ ತೊಂದರೆ ಮತ್ತು ಅತಿಸಾರದಂತಹ ರೋಗಲಕ್ಷಣಗಳಿಂದ ರೋಗಿಯನ್ನು ಏಪ್ರಿಲ್ 17 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅವರು ದೀರ್ಘಕಾಲದ ಮೂತ್ರಪಿಂಡ ವೈಫಲ್ಯ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಹೊಂದಿದ್ದರು. ಈ ನಿರ್ದಿಷ್ಟ ಸೋಂಕಿನ ಮೂಲವು ಅಸ್ಪಷ್ಟವಾಗಿದ್ದರೂ, ಮೆಕ್ಸಿಕೋದಲ್ಲಿನ ಕೋಳಿಗಳಲ್ಲಿ A(H5N2) ವೈರಸ್ಗಳು ಪತ್ತೆಯಾಗಿವೆ ಎಂದು ಎಂಬುದನ್ನು ವಿಶ್ವ ಆರೋಗ್ಯ ಸಂಸ್ಥೆ ಗಮನಿಸಿದೆ.
ಹಕ್ಕಿ ಜ್ವರ ಎಂದರೇನು?
ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್ ಸೋಂಕು ಆಗಿದ್ದು ಅದು ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಮತ್ತು ಇತರ ಪ್ರಾಣಿಗಳಿಗೂ ಸೋಂಕು ತರುತ್ತದೆ.
ಮೊಟ್ಟೆ ಮತ್ತು ಹಾಲಿನಿಂದ ಸೋಂಕು ಹರಡುವುದೇ?
ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಸಮಯದಲ್ಲಿ ಮೊಟ್ಟೆಗಳು ಕಟ್ಟುನಿಟ್ಟಾದ ನಿಯಮಗಳು ಮತ್ತು ನೈರ್ಮಲ್ಯ ಪ್ರೋಟೊಕಾಲ್ಗಳನ್ನು ಅನುಸರಿಸಲಾಗುತ್ತದೆ. ಇದು ಮಾಲಿನ್ಯದ ಸಾಧ್ಯತೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ನೀವು ಮನೆಯಲ್ಲಿ ಅವುಗಳನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದೇ ಬಹಳ ಮುಖ್ಯವಾಗಿದೆ. ಅದನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಅದರ ಹಳದಿ ಅಂಶ ಕೂಡ ಹಸಿಯಾಗಿರಬಾರದು.
ಅಲ್ಲದೆ, ಯಾವಾಗಲೂ ನಿಮ್ಮ ಕೈಗಳನ್ನು ತೊಳೆಯುತ್ತಿರಿ. ಹಾಲಿನ ಸುರಕ್ಷತೆಯು ಪಾಶ್ಚರೀಕರಣದ ಮೇಲೆ ಅವಲಂಬಿತವಾಗಿರುತ್ತದೆ. ಇದು ಪಕ್ಷಿ ಜ್ವರ ಸೇರಿದಂತೆ ವೈರಸ್ಗಳನ್ನು ನಾಶಪಡಿಸುತ್ತದೆ. ವಾಸ್ತವವಾಗಿ ವಾಣಿಜ್ಯಿಕವಾಗಿ ಲಭ್ಯವಿರುವ ಎಲ್ಲಾ ಹಾಲು ಕೂಡ ಈ ಪ್ರಕ್ರಿಯೆಗೆ ಒಳಗಾಗುತ್ತದೆ. ಹೀಗಾಗಿ ಶುದ್ಧೀಕರಿಸಿದ ಹಾಲು ಬಳಕೆಗೆ ಸುರಕ್ಷಿತವಾಗಿದೆ.
ಮಂಗಳೂರು : ಎಲನ್ ಮಸ್ಕ್ ಜಗತ್ತಿನ ನಂಬರ್ ಒನ್ ಶ್ರೀಮಂತ ವ್ಯಕ್ತಿ. ಮಸ್ಕ್ ಅಮೆರಿಕಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿ, ಭಾರತದ ಚುನಾವಣಾ ಪ್ರಕ್ರಿಯೆಯನ್ನು ಹೊಗಳಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಮಸ್ಕ್, ಭಾರತದಲ್ಲಿ ಚುನಾವಣಾ ಪ್ರಕ್ರಿಯೆ ಅದ್ಬುತವಾಗಿ ನಡೆಯುತ್ತದೆ. ಒಂದೇ ಒಂದು ದಿನದಲ್ಲಿ ಇಡೀ ಲೋಕಸಭಾ ಚುನಾವಣೆಯ ಮತ ಎಣಿಕೆ ಮಾಡಿದ ಶ್ರೇಯಸ್ಸು ಭಾರತದ್ದು ಎಂದಿದ್ದಾರೆ.
ಇದನ್ನೂ ಓದಿ: ಸಾಯಿ ಪಲ್ಲವಿಯವರ ಕೈಯಲ್ಲಿದೆ ಹಲವಾರು ಸಿನಿಮಾಗಳು !
ಕ್ಯಾಲಿಫೋರ್ನಿಯಾದ ಚುನಾವಣಾ ಪ್ರಕ್ರಿಯೆಯನ್ನು ಟೀಕಿಸಿರುವ ಅವರು, ತಮ್ಮ ಎಕ್ಸ್ ಖಾತೆಯಲ್ಲಿ ಈ ಪೊಸ್ಟ್ ಹಾಕಿದ್ದಾರೆ. ಅದರ ಅಡಿಬರಹದಲ್ಲಿ, ಭಾರತದಲ್ಲಿ ಚುನಾವಣೆ ಎಂದರೆ ವಂಚನೆಯೇ ಮೊದಲ ಗುರಿ ಇರುವಲ್ಲಿ ಒಂದೇ ಒಂದು ದಿನದಲ್ಲಿ 64 ಕೋಟಿ ಮತಗಳನ್ನು ಎಣಿಕೆ ಮಾಡಿದ್ದಾರೆ. ಆದ್ರೆ ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಕೂಡ ಮತಗಳು ಎಣಿಕೆ ಆಗುತ್ತಲೇ ಇವೆ ಎಂದು ಬರೆದಿದ್ದಾರೆ.ಕ್ಯಾಲಿಫೋರ್ನಿಯಾದಲ್ಲಿ
ಮತ ಎಣಿಕೆ ಕಾರ್ಯ ವಿಳಂಬ ಯಾಕೆ :
ಅಮೆರಿಕಾದಲ್ಲಿ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದೆ. ಇದನ್ನು ಎಣಿಕೆ ಮಾಡುವ ಅನೇಕ ರೀತಿಯ ಪ್ರಕ್ರಿಯೆಗಳನ್ನು ಮಾಡುವ ಕಾರಣ ಚುನಾವಣಾ ಪ್ರಕ್ರಿಯೆ ವಿಳಂಬವಾಗುತ್ತಿದೆ. ಅದರಲ್ಲೂ ಕ್ಯಾಲಿಫೋರ್ನಿಯಾದಂತಹ ದೊಡ್ಡ ದೊಡ್ಡ ನಗರಗಳಲ್ಲಿ ಈ ಮೇಲ್ ಇನ್ ವೋಟಿಂಗ್ ಗಳು ತುಂಬಾ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಈ ವಿಳಂಬ ನೀತಿಯನ್ನು ಎಲನ್ ಮಸ್ಕ್ ಟೀಕಿಸಿ ಭಾರತವನ್ನು ಹೋಗಳಿದ್ದಾರೆ.
ಅಮೇರಿಕಾದಲ್ಲಿ ಹಿಂದಿನಿಂದಲೂ ಮೇಲ್ ಇನ್ ವೋಟಿಂಗ್ ವ್ಯವಸ್ಥೆ ಇದ್ದು, ಈಗಲೂ ಮುಂದುವರಿದುಕೊಂಡು ಬಂದಿದೆ.
ಮಂಗಳೂರು: ತಮಿಳಿನ ಶಿವ ಕಾರ್ತಿಕೇಯನ್ ಮತ್ತು ಸಾಯಿ ಪಲ್ಲವಿ ಅಭಿನಯದ ‘ಅಮರನ್’ ಚಿತ್ರ ಬಿಡುಗಡೆಯಾದಾಗಿನಿಂದಲೂ ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಾಗಲೇ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.
ನಟಿ ಸಾಯಿ ಪಲ್ಲವಿಯವರು ದಕ್ಷಿಣ ಭಾರತದ ಜನಪ್ರಿಯ ನಟಿ ಹಾಗೂ ತನ್ನ ಪ್ರತಿಭೆಯಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟಿ. ಸದಾ ಒಂದಲ್ಲಾ ಒಂದು ಸಿನಿಮಾದಲ್ಲಿ ಕಾರ್ಯನಿರತರಾಗಿರುವ ಸಾಯಿ ಪಲ್ಲವಿಯವರ ಮುಂದೆ ಸಾಲು ಸಾಲು ಸಿನಿಮಾಗಳು ಕಾಯುತ್ತಿದೆ.
ಇದನ್ನೂ ಓದಿ: ಹಾಸಿಗೆ ಹಿಡಿದಿದ್ದ 80ರ ಅಜ್ಜಿ ಮೇಲೆಯೂ ವರದಕ್ಷಿಣೆ ಕೇಸ್: ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ರಣಬೀರ್ ಕಪೂರ್, ಯಶ್ ನಟನೆಯ ಹಿಂದಿಯ ರಾಮಾಯಣ ಸಿನಿಮಾದಲ್ಲಿ ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ನಂತರ ಅಮೀರ್ ಖಾನ್ ನಿರ್ಮಾಣ ಮಾಡಿ ಅವರ ಮಗ ನಟಿಸುತ್ತಿರುವ ಹೊಸ ಹಿಂದಿ ಸಿನಿಮಾದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಈಗಾಗಲೇ, ನಟ ನಾಗಚೈತನ್ಯ ನಟಿಸಿರುವ ‘ತಾಂಡೇಲ್’ ಸಿನಿಮಾದಲ್ಲೂ ಸಾಯಿ ಪಲ್ಲವಿಯವರು ನಟಿಸಿದ್ದಾರೆ. ಇದರ ಚಿತ್ರೀಕರಣ ಮುಗಿದಿದ್ದು, ಕೆಲವೇ ತಿಂಗಳುಗಳಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಸುಕುಮಾರ್ ನಿರ್ದೇಶನದ ಹೊಸ ಸಿನಿಮಾದಲ್ಲೂ ಸಾಯಿ ಪಲ್ಲವಿ ನಟಿಸಲಿದ್ದಾರೆ. ಇದರಲ್ಲಿ ನಾಯಕನಾಗಿ ರಾಮ್ ಚರಣ್ ಅಭಿನಯಿಸಲಿದ್ದಾರೆ.
ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಸಾಯಿ ಪಲ್ಲವಿ, ಪಕ್ಕಾ ಫ್ಯಾಮಿಲಿ ಗರ್ಲ್ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಿಯೇ ಅವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.
ಮಂಗಳೂರು : ವಯಸ್ಸು ಎಂಬುದು ಕೇವಲ ಅಂಕೆಗಳು ಅಷ್ಟೇ. ಸಾಧನೆಗೆ ವಯಸ್ಸು ಅಡ್ಡಿ ಅಲ್ಲ, ಅದು ನೆಪ ಅಷ್ಟೇ. 80ರ ವಯಸ್ಸಿನಲ್ಲೂ ಫ್ಯಾಶನ್ ಲೋಕವನ್ನೆ ನಿದ್ದೆಗೆಡಿಸಿರುವ ಈ ಅಜ್ಜಿಯ ಸ್ಟೋರಿ ತುಂಬಾ ಕುತೂಹಲದಾಯಕವಾಗಿದೆ.
‘ಆಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಎಂದು ಕೆಲಸವ’ ಎಂಬ ಹಾಡಿನ ಸಾಲಿನಂತೆ ಈ ಅಜ್ಜಿಗೆ ತನ್ನ ಮೊಮ್ಮಗಳೇ ಸ್ಪೂರ್ತಿ. ಕೆಲವೊಬ್ಬರು ಅಜ್ಜಿಯಂದಿರು, ಮೊಮ್ಮಕ್ಕಳು ಏನೇ ಹೇಳಿದರು ಅದನ್ನು ಮಾಡುತ್ತಾರೆ. ಹಾಗೆನೇ ಈ ಅಜ್ಜಿ ಕೂಡ ತನ್ನ ಮೊಮ್ಮಗಳ ಆಸೆ ಈಡೇರಿಸಲು ಹೋಗಿ ಇಂದು ಲಕ್ಷಾಂತರ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ಜಾಂಬಿಯಾ ದೇಶದ 80ರ ಹರೆಯದ ಈ ವೃದ್ದೆಯ ಹೆಸರು ಮಾರ್ಗರೇಟಾ ಚೋಲಾ. ಕಟ್ಟಿಗೆ ಚೇರಲ್ಲಿ ಕೂತು, ಕಣ್ಣಿಗೆ ಸ್ಟೈಲಿಶ್ ಗ್ಲಾಸ್ ಹಾಕಿಕೊಂಡು, ಬಣ್ಣ ಬಣ್ಣದ ಕಾಸ್ಟ್ಯೂಮ್ ಗಳು ಹಾಕಿಕೊಂಡಿರುವುದನ್ನು ನೋಡಿದರೆ ಎಂಥವರಿಗೂ, ಒಂದು ಕ್ಷಣ ರೋಮಾಂಚನಕಾರಿಯಾಗಬೇಕು. ಹಾಗಂತ ಇವರು ಯಾವುದೋ ರಾಯಲ್ ಫ್ಯಾಮೀಲಿಗೆ ಸೇರಿದವರಲ್ಲ. ಮಾರ್ಗರೇಟ್ ಚೋಲಾ 12-13 ವರ್ಷದಲ್ಲಿಯೇ ಶಿಕ್ಷಣಕ್ಕೆ ಗುಡ್ ಬೈ ಹೇಳಿ, 30ನೇ ವಯಸ್ಸಿಗೆ ಮದುವೆಯಾಗಿ ಬಡತನ, ಕಷ್ಟ ಎಲ್ಲವನ್ನೂ ಕಂಡವರು.
ಆದರೆ ಮೊಮ್ಮಗಳಾದ ಡಿಯಾನಾ ಕುಂಬಾ ನ್ಯೂಯಾರ್ಕ್ ಮೂಲದ ಸ್ಟೈಲಿಸ್. ಈಕೆಗೆ, ತನ್ನ ಅಜ್ಜಿಯನ್ನು ಹೊಸ ಹೊಸ ಅವತಾರದಲ್ಲಿ ನೋಡಲು ಇಷ್ಟವಂತೆ. ಈಗಾಗೀ ಹೊಸ ಹೊಸ ಬಗೆಯ ಕಾಸ್ಟ್ಯೂಮ್ ಹಾಕಿ ಖುಷಿ ಪಡುತ್ತಾರೆ. ಈ ಅಜ್ಜಿಯ ಜನಪ್ರೀಯತೆ ಎಷ್ಟರ ಮಟ್ಟಿಗೆ ಇದೆ ಅಂದ್ರೆ, ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳೇ ಸಂದರ್ಶನ ಮಾಡಲು ಬರುತ್ತಿವೆ. ತನ್ನ ಫ್ಯಾಶನ್ ಬಗ್ಗೆ ಮಾರ್ಗರೇಟ್ ಹೆಳೋದು ಹೀಗೆ, ನಾನು ಈ ರೀತಿಯ ಉಡುಗೆ-ತೊಡುಗೆಗಳನ್ನು ಹಾಕಿಕೊಳ್ಳುವುದರಿಂದ ನನ್ನನ್ನು ನಾನು ಉಳಿದವರಿಗಿಂತ ಭಿನ್ನ ಎಂದುಕೊಳ್ಳುವಂತಹ ಭಾವ ಬರುತ್ತದೆ. ನಾನು ಇಂತಹ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾ ಮತ್ತಷ್ಟು ಜೀವಂತಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಮಾರ್ಗರೇಟ್ ರವರ ಈ ಫ್ಯಾಶನ್ ಫೋಟೋಗಳಿಗೆ, ಕ್ಲೀನ್ ಬೊಲ್ಡ್ ಆಗಿರುವ ಅವರ ಅಭಿಮಾನಿಗಳು ಅಜ್ಜಿಯನ್ನು ಕೊಂಡಾಡುತ್ತಿದ್ದಾರೆ. ಇವರಿಗೆ ಜಗತ್ತಿನಾದ್ಯಂತ ಅಭಿಮಾನಿಗಳು ಇದ್ದಾರೆ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ 1 ಲಕ್ಷ 13 ಸಾವಿರದಷ್ಟು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.
ನಿಮ್ಮ ವಯಸ್ಸು, ನಿಮ್ಮ ಗುರಿ ಸಾಧನೆಗೆ ಅಡ್ಡಿಯಾಗುವುದಿಲ್ಲ. ಗುರು ಮತ್ತು ಗುರಿ ಎರಡು ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಮಾರ್ಗರೇಟ್ ಚೋಲಾ ನಿದರ್ಶನ.