DAKSHINA KANNADA
ಬಿಲ್ಲವರ ಆರಾಧ್ಯ ವೀರ ಪುರುಷರ ಅವಹೇಳನ ಖಂಡನೀಯ!ಮಾಜಿ ಕಾರ್ಪೊರೇಟರ್-ಪ್ರತಿಭಾ ಕುಳಾಯಿ
ಬಿಲ್ಲವರ ಆರಾಧ್ಯ ವೀರ ಪುರುಷರ ಅವಹೇಳನ ಖಂಡನೀಯ!ಮಾಜಿ ಕಾರ್ಪೊರೇಟರ್-ಪ್ರತಿಭಾ ಕುಳಾಯಿ..!
Billava's adorable heroic men are despicable!former corporator Prathibha kulai
ಮಂಗಳೂರು: ತುಳುನಾಡಿನ ಸಮಸ್ತ ಬಿಲ್ಲವರು ಮಾತ್ರವಲ್ಲದೆ ವಿವಿಧ ಜಾತಿ ಮತಗಳ ಜನರು ಆರಾಧಿಸಿಕೊಂಡು ಬಂದಿರುವ ಕೋಟಿ ಚೆನ್ನಯ ಎಂಬ ವೀರ ಪುಣ್ಯಪುರುಷರ ಬಗ್ಗೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನೀಡಿರುವ ಅವಹೇಳನಕಾರಿ ಹೇಳಿಕೆ ಖಂಡನೀಯವಾದುದು. ಕೋಟಿ ಚೆನ್ನಯರು ತುಳುನಾಡಿನ ಉದ್ದಗಲಕ್ಕೂ ಗರಡಿ ನಿರ್ಮಿಸಿದ್ದು ಜನಮಾನಸದಲ್ಲಿ ಅಚ್ಚಳಿಯದೆ ಇಂದಿಗೂ ನೆಲೆನಿಂತಿದ್ದಾರೆ. ಅನೇಕ ಪವಾಡಗಳು ಕಾರಣೀಕ ಶಕ್ತಿಗಳು ನೆಲೆನಿಂತ ಗರಡಿಯಲ್ಲಿ ಇಂದಿಗೂ ನಡೆಯುತ್ತಿದ್ದು ತುಳುವರು ಧನ್ಯತಾಭಾವ ಹೊಂದಿದ್ದಾರೆ.
ಹೀಗಿರುವಾಗ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಎಂಬ ಇತಿಹಾಸ ತಿಳಿಯದ ರಾಜಕಾರಣಿಯೊಬ್ಬ ಕೋಟಿ ಚೆನ್ನಯರ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿರುವುದು ಖಂಡನೀಯ ಮಾತ್ರವಲ್ಲ ಆಶ್ಚರ್ಯ ಹುಟ್ಟಿಸುತ್ತದೆ.
ಮಾತೆತ್ತಿದರೆ ಹಿಂದೂ ಧರ್ಮ, ಹಿಂದೂ ದೈವ ದೇವರನ್ನು ಗುತ್ತಿಗೆ ಪಡೆದುಕೊಂಡಂತೆ ಮಾತಾಡುವ ಬಿಜೆಪಿ ನಾಯಕರ ನಾಲಗೆಯಲ್ಲಿ ಇಂತಹ ಮಾತು ಬರುತ್ತಿರುವುದು ಖೇದಕರ ಅಲ್ಲದೆ ಇನ್ನೇನು?
ಬಿಜೆಪಿ ಮುಖಂಡರ ನೈಜ ಹಿಂದುತ್ವ ಅಂದರೆ ಇದೇನಾ?ಬಿಲ್ಲವ ಸಮುದಾಯದ ಯುವಕರನ್ನು ಚುನಾವಣೆ ಬಂದಾಗ ತಮಗಿಷ್ಟ ಬಂದಂತೆ ತಮ್ಮ ಲಾಭಕ್ಕೋಸ್ಕರ ಬಳಸಿಕೊಂಡು ಬಳಿಕ ಅಧಿಕಾರದ ವಿಷಯ ಬಂದಾಗ ದೂರ ತಳ್ಳುವ ಬಿಜೆಪಿ ಮುಖಂಡರು ಬಿಲ್ಲವ ಸಮುದಾಯ ಮತ್ತು ಆರಾಧ್ಯ ಶಕ್ತಿಗಳ ಬಗ್ಗೆ ಯಾವ ಭಾವನೆ ಹೊಂದಿದ್ದಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.
ಬಿಲ್ಲವ ಯುವಕರು ಪ್ರತೀ ಬಾರಿ ಹರಕೆಯ ಕುರಿಗಳಾಗಿ ಮತೀಯ ದ್ವೇಷ, ಕೋಮು ಗಲಭೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಜಗದೀಶ್ ಅಧಿಕಾರಿ ಎನ್ನುವ ತುಳುನಾಡಿನ ಗಂಧ ಗಾಳಿ ಅರಿಯದ ಮೂರ್ಖ ರಾಜಕಾರಣಿ ಬಿಲ್ಲವ ಸಮುದಾಯದ ತಾಳ್ಮೆ ಪರೀಕ್ಷಿಸುವುದು ಬೇಡ. ಕೋಟಿ ಚೆನ್ನಯರ ಜೀವನ ಮತ್ತು ಹೋರಾಟವನ್ನು ಲೇವಡಿ ಮಾಡಲು ಇವರಿಗೆ ಅವಕಾಶ ಕೊಟ್ಟವರಾರು?
ಜನಾರ್ದನ ಪೂಜಾರಿ ನಮ್ಮ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಕಂಡ ನಿಷ್ಕಲಂಕ ರಾಜಕಾರಣಿ. ಇವರ ಕಾಲು ಹಿಡಿಯುವುದಲ್ಲ ಅಧಿಕಾರಿಯಂತವರು ಪಾದ ತೊಳೆದರೂ ಪಾಪ ತಟ್ಟುವುದಿಲ್ಲ.
ಅವರಿಗೆ ಇನ್ನೊಮ್ಮೆ ಬೈಯುತ್ತೇನೆ, ಪ್ರಚಾರ ಸಿಗುತ್ತದೆ ಎನ್ನುವ ಅಧಿಕಾರಿಗೆ ತಲೆ ಸರಿಯಿಲ್ಲ ಎನ್ನುವುದು ಸತ್ಯ. ಕೋಟಿ ಚೆನ್ನಯರ ಕಾರಣಿಕ ಏನೇನ್ನುವುದು ಅಧಿಕಾರಿ ವಿಷಯದಲ್ಲಿ ನಮಗೆಲ್ಲ ತಿಳಿದಿದೆ.
ಯಾಕೆಂದರೆ ಕಾಲ್ ಕಟ್ ಆಗಿದೆ ಎಂದು ತಿಳಿದು ಹಿಂದಿನಿಂದ ಬಿಲ್ಲವ ಸಮುದಾಯ ಮತ್ತು ಕೋಟಿ ಚೆನ್ನಯರನ್ನು ಅವಹೇಳನ ಮಾಡಿರುವ ಅಧಿಕಾರಿಯ ಮುಖವಾಡ ತುಳುವರ ಮುಂದೆ ಕಳಚಿಬಿದ್ದಿದೆ.
ಕೋಟಿ ಚೆನ್ನಯರನ್ನು ಮತ್ತು ಬಿಲ್ಲವ ಸಮುದಾಯವನ್ನು ಅವಹೇಳನ ಮಾಡಿರುವ ಜಗದೀಶ್ ಅಧಿಕಾರಿ ಕೂಡಲೇ ಗರಡಿಗೆ ಬಂದು ತಪ್ಪುಕಾಣಿಕೆ ಸಲ್ಲಿಸಿ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಬೇಕು.
ಇಲ್ಲವಾದರೆ ಮುಂದಿನ ದಿನಗಳಲ್ಲಿ ಅಧಿಕಾರಿ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ. ಇಂಥವರಿಗೆ ಅಧಿಕಾರ ನೀಡಿರುವ ಬಿಜೆಪಿ ಸರಕಾರ, ಹಿರಿಯ ಮುಖಂಡರು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ.
DAKSHINA KANNADA
ನಮ್ಮ ಮಾತುಗಳಿಗೆ ಅಸ್ತು ಅನ್ನುವ ಅಶ್ವಿನಿ ದೇವತೆಗಳು – ಯಾರಿವರು?
ಮಂಗಳೂರು : ಕೆಲವೊಮ್ಮೆ ನಾವು ಕೆಟ್ಟ ಮಾತುಗಳನ್ನಾಡುವಾಗ ನಮ್ಮ ಹಿರಿಯರು ತಡೆಯುತ್ತಾರೆ. ಬಿಡ್ತು ಅಂತಾ ಹೇಳು ಎಂದು ಹೇಳಿದ ಅನುಭವ ನಿಮಗೂ ಆಗಿರಬಹುದು. ನಮ್ಮ ಹಿರಿಯರು ಹೇಳುವ ಪ್ರಕಾರ ನಾವು ಕೆಟ್ಟ ಮಾತುಗಳನ್ನಾಡುವಾಗ ಅಶ್ವಿನಿ ದೇವತೆಗಳು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುತ್ತಾರೆ. ಈ ಕಾರಣಕ್ಕಾಗಿ ಅವರು ನಾವು ಬೇಜಾರಲ್ಲಿ ಏನಾದರೂ ತಪ್ಪಿ ಮಾತನಾಡಿದಾಗ ಬಿಡ್ತು ಎಂದು ಹೇಳುವಂತೆ ನಮಗೆ ಹೇಳುತ್ತಿದ್ದರು. ಹಾಗಾದರೆ ಈ ಅಸ್ತು ದೇವತೆಗಳು ಯಾರು.? ಇವರು ಅಸ್ತು ಅಂದಾಕ್ಷಣ ನಾವು ಆಡಿದ ಮಾತುಗಳು ನಿಜವಾಗುತ್ತದೆಯೇ..?
ಅಶ್ವಿನಿ ದೇವತೆಗಳು ಯಾರು.?
ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಭಗವಾನ್ ಸೂರ್ಯ ದೇವನಿಗೆ ಮತ್ತು ಸಂಧ್ಯಾದೇವಿಗೆ ಜನಿಸಿದ ಅವಳಿ ಮಕ್ಕಳು. ಇವರು ಅದೃಷ್ಟದ ದೇವತೆಗಳಾಗಿದ್ದು, ಅಸ್ತು ಅಸ್ತು ಎಂದು ಸದಾ ಪಠಿಸುವ ದೇವರು. ಇವರನ್ನು ಅಶ್ವಿನಿ ಕುಮಾರರೆಂದು, ದೇವತೆಗಳ ವೈದ್ಯರೆಂದು ಪರಿಗಣಿಸಲಾಗುತ್ತದೆ. ಅಶ್ವಿನಿ ದೇವತೆಗಳ ರೂಪವೇ ವಿಚಿತ್ರ. ಯಾಕೆಂದರೆ ಈ ಅವಳಿ ಅಶ್ವಿನಿ ಕುಮಾರರದ್ದು ಮಾನವ ದೇಹವಾದರೆ, ಕುದುರೆಯ ಮುಖ. ಆದರೂ ನೋಡಲು ಅತ್ಯಂತ ಆಕರ್ಷಕರಾಗಿದ್ದರು.
ಅಶ್ವಿನಿ ದೇವತೆಗಳಿಗೆ ಕುದುರೆ ಮುಖ ಬರಲು ಕಾರಣವೇನು.?
ಒಮ್ಮೆ ಸೂರ್ಯ ದೇವನ ಪತ್ನಿಯಾದ ಸಂಧ್ಯಾ ದೇವಿಯು ಸೂರ್ಯ ದೇವನ ತಾಪವನ್ನು ತಡೆಯಲಾರದೆ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾಳೆ. ಇದನ್ನು ನೋಡಿದ ಸೂರ್ಯ ದೇವನು ತನ್ನ ತಾಪವನ್ನು ಕಡಿಮೆ ಮಾಡಿಕೊಳ್ಳಲು ಮುಂದಾಗುತ್ತಾನೆ. ಆಗ ಸಂಧ್ಯಾ ದೇವಿಯು ಸೂರ್ಯದೇವನು ನನಗಾಗಿ ತನ್ನ ತಾಪವನ್ನು ಇನ್ನೂ ಕಡಿಮೆ ಮಾಡಿಕೊಂಡರೆ ಜಗತ್ತಿನಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಅಪಾರ ಕಷ್ಟಗಳು ಉಂಟಾಗುತ್ತವೆ ಎಂದು ಯೋಚಿಸಿ, ಹಿಮಾಲಯ ಪರ್ವತ ದತ್ತ ಸ್ವಲ್ಪ ವಿಶ್ರಾಂತಿಯನ್ನು ಪಡೆದುಕೊಳ್ಳಲು ಹೋಗುತ್ತಾಳೆ.
ಅಲ್ಲಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ಅವತಾರವನ್ನು ತಾಳಿ ಹಿಮಾಲಯದ ತಪ್ಪಲಿನಲ್ಲಿ ಹೋಗುತ್ತಿರುವಾಗ ಸೂರ್ಯ ದೇವನು ಕುದುರೆಯ ರೂಪದಲ್ಲಿ ಇರುವ ಸಂಧ್ಯಾ ದೇವಿಯನ್ನು ಗುರುತಿಸಿ ತಾನು ಕೂಡ ಕುದುರೆಯ ರೂಪವನ್ನು ತೆಗೆದುಕೊಳ್ಳುತ್ತಾನೆ. ಅಶ್ವಗಳ ಅವತಾರದಲ್ಲಿ ಇವರಿಬ್ಬರ ನಡುವೆ ನಡೆದ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ದೇವತೆಗಳು. ಹಾಗಾಗಿ ಅವರಿಗೆ ಹುಟ್ಟಿದ ಮಕ್ಕಳಿಗೂ ಕುದುರೆಯ ಮುಖ ಇರುತ್ತದೆ. ಇನ್ನು ಕೆಲವು ಕಥೆಗಳಲ್ಲಿ ಅಶ್ವಿನಿ ದೇವತೆಗಳು ಸೂರ್ಯ ಮತ್ತು ಮೋಡದ ಪುತ್ರರು ಎಂದು ಹೇಳಲಾಗಿದೆ.
ಅಶ್ವಿನಿ ದೇವತೆಗಳ ಮಹತ್ವ:
ಅಶ್ವಿನಿ ದೇವತೆಗಳಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನವನ್ನು ನೀಡಲಾಗಿದೆ. ಮುಸ್ಸಂಜೆ ಸಮಯವನ್ನು ಅಂದರೆ ಸೂರ್ಯ ಮುಳುಗುವುದಕ್ಕಿಂತ ಮೊದಲು 24 ನಿಮಿಷಗಳನ್ನು ಅಶ್ವಿನಿ ದೇವತೆಗಳ ಸಮಯವೆಂದು ಹೇಳುತ್ತಾರೆ. ಈ ಸಮಯದಲ್ಲಿ ಅಶ್ವಿನಿ ದೇವತೆಗಳು ಚಿನ್ನದ ಕುದುರೆಯಲ್ಲಿ ಸಂಚಾರವನ್ನು ಮಾಡುತ್ತಾರೆ ಎನ್ನುವುದು ನಂಬಿಕೆ. ಈ ಸಮಯದಲ್ಲಿ ಅಪಶಕುನದಂತಹ ಮಾತುಗಳನ್ನು ಆಡಬಾರದು, ಸುಳ್ಳನ್ನು ಹೇಳಬಾರದು, ಇನ್ನೊಬ್ಬರ ಮನಸ್ಸಿಗೆ ನೋವಾಗುವಂತಹ ಪದಗಳನ್ನು ಬಳಸಬಾರದು, ಮಲಗಬಾರದು ಎಂದು ಹೇಳಲಾಗುತ್ತದೆ. ಅಶ್ವಿನಿ ದೇವತೆಗಳು ಅಸ್ತು, ಅಸ್ತು ಎಂದು ನುಡಿಯುತ್ತಿರುತ್ತಾರೆ. ನಾವು ಒಂದು ವೇಳೆ ಅಪಶಕುನ ಮಾತನಾಡಿದಾಗ ಅವರು ಅಸ್ತು ಎಂದರೆ ಅದು ಖಂಡಿತ ನಡೆಯುತ್ತದೆ ಎನ್ನುವ ಕಾರಣಕ್ಕಾಗಿ ಯಾವಾಗಲೂ ನಾವು ಒಳ್ಳೆಯದನ್ನೇ ಮಾತನಾಡಬೇಕು.
ಒಟ್ಟಾರೆಯಾಗಿ ಹೇಳುವುದಾದರೆ ಅಶ್ವಿನಿ ದೇವತೆಗಳು ನಾವು ಒಳ್ಳೆಯದನ್ನ ಮಾತನಾಡಿದರೆ ಒಳ್ಳೆಯದೇ ಬಯಸುತ್ತಾರೆ ಹಾಗೆಯೇ ಕೆಟ್ಟದ್ದನ್ನೇ ಮಾತನಾಡಿದರೇ ಕೆಟ್ಟದ್ದು ಬಯಸುತ್ತಾರೆ ಎನ್ನುವುದು ಜನರ ನಂಬಿಕೆ.
DAKSHINA KANNADA
ವೋಟ್ ಮಾಡಿ, ಊಟ ಮಾಡಿ: ಹೋಟೆಲ್ಗಳಲ್ಲಿ ಸಿಗಲಿದೆ ಫ್ರೀ ದೋಸೆ, ಸಿಹಿ ತಿಂಡಿ!
ಬೆಂಗಳೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಮತ್ತು ಮತದಾನ ಪ್ರಮಾಣ ಹೆಚ್ಚಿಸುವ ಸಲುವಾಗಿ ಬೆಂಗಳೂರಿನ ಕೆಲವು ಹೋಟೆಲ್ಗಳು ವಿಶಿಷ್ಟ ಜಾಗೃತಿ ಕಾರ್ಯಕ್ರಮ ಆಯೋಜಿಸುತ್ತಿವೆ. ಕಳೆದ ವರ್ಷ ವಿಧಾನ ಚುನಾವಣೆಯಲ್ಲಿ ಮಾಡಿದಂತೆಯೇ ಈ ಬಾರಿಯೂ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬಂದವರಿಗೆ ಉಚಿತ ಆಹಾರ, ರಿಯಾಯಿತಿ ದರದಲ್ಲಿ ತಿಂಡಿ ನೀಡುವ ಬಗ್ಗೆ ಘೋಷಣೆ ಮಾಡಿವೆ.
ವೋಟ್ ಮಾಡಿ, ಊಟ ಮಾಡಿ:
ಬೆಂಗಳೂರಿನ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರ್ಯಾಂಡ್ ಹೋಟೆಲ್ ವೋಟ್ ಮಾಡಿ, ಊಟ ಮಾಡಿ’ ಅಭಿಯಾನದಡಿ ಮತದಾನದ ದಿನದಂದು ಮತದಾನ ಮಾಡಿದ ಗುರುತು ತೋರಿಸಿದವರಿಗೆ ಬೆಣ್ಣೆ ದೋಸೆ, ಲಡ್ಡು ಮತ್ತು ಜ್ಯೂಸ್ ನೀಡುವುದಾಗಿ ಘೋಷಿಸಿದೆ. 2018 ರ ವಿಧಾನಸಭಾ ಚುನಾವಣೆ ವೇಳೆಯೂ ಹೋಟೆಲ್ ಇಂತಹ ಕೊಡುಗೆ ನೀಡಿತ್ತು.
ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು. ಈ ಕುರಿತು ಜಾಗೃತಿ ಮೂಡಿಸುವ ನಮ್ಮ ನಿರಂತರ ಪ್ರಯತ್ನದ ಭಾಗವಾಗಿ ಕೆಲವು ಹೋಟೆಲ್ಗಳು ಕೆಲವು ತಿನಿಸುಗಳನ್ನು ರಿಯಾಯಿತಿ ದರದಲ್ಲಿ ಅಥವಾ ಉಚಿತವಾಗಿ ಮತದಾನದ ದಿನದಂದು ನೀಡುತ್ತವೆ. ಸಿಹಿತಿಂಡಿಗಳು ಮತ್ತು ಕೇಕ್ಗಳಂತಹ ಕೆಲವು ಆಹಾರ ಪದಾರ್ಥಗಳನ್ನು ಉಚಿತವಾಗಿ ನೀಡುತ್ತಿವೆ.
SawaariZimmedariKi ಅಭಿಯಾನದಡಿ ಶುಕ್ರವಾರ ಹಿರಿಯ ನಾಗರಿಕರು ಮತ್ತು ವಿಕಲಚೇತನ ಮತದಾರರಿಗೆ ಉಚಿತ ಆಟೋರಿಕ್ಷಾ ಮತ್ತು ಕ್ಯಾಬ್ ಸೇವೆ ದೊರೆಯಲಿದೆ.
ಈ ವಿಶೇಷ ಸೇವೆಯನ್ನು ಪಡೆಯಲು ಮತದಾರರು ‘VOTENOW’ ಕೋಡ್ ಅನ್ನು ಬಳಸಬಹುದು ಎಂದು Rapido ತಿಳಿಸಿದೆ.
ಬಿಡದಿ ಬಳಿಯ ಜನಪ್ರಿಯ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ, ಮತದಾನದ ಗುರುತು ಪ್ರದರ್ಶಿಸುವವರಿಗೆ ಏಪ್ರಿಲ್ 26, 27 ಮತ್ತು 28 ರಂದು ಟಿಕೆಟ್ ಮೇಲೆ ಶೇಕಡಾ 15 ರಷ್ಟು ರಿಯಾಯಿತಿಯನ್ನು ಘೋಷಿಸಿದೆ.
BANTWAL
ಅನಾರೋಗ್ಯದ ನಡುವೆಯೂ ಮತ ಚಲಾಯಿಸಿ ಕೊ*ನೆಯುಸಿರೆಳೆದ ನಿವೃತ್ತ ಯೋಧ
ಬಂಟ್ವಾಳ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಮಾಜಿ ಸೈನಿಕರೊಬ್ಬರು ಮತದಾನ ಪೂರೈಸಿ ಮರಳಿ ಅಸ್ಪತ್ರೆಗೆ ದಾಖಲಾಗಿದ್ದು, ಈಗ ಚಿಕಿತ್ಸೆಗೆ ಸ್ಪಂದಿಸದೆ ಮೃ*ತಪಟ್ಟಿದ್ದಾರೆ.
ಬಂಟ್ವಾಳ ವಗ್ಗ ನಿವಾಸಿ, ನಿವೃತ್ತ ಯೋಧ ಮಾಧವ ಪ್ರಭು (83) ಅನಾರೋಗ್ಯದ ನಡುವೆಯೂ ಪವಿತ್ರ ಮತದಾನ ಕರ್ತವ್ಯ ಪೂರೈಸಿದವರು.
ಮಾಧವ ಪ್ರಭುಗಳು ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 85 ವರ್ಷ ಮತ್ತು ಮೇಲ್ಪಟ್ಟವರಿಗೆ ಮನೆಯಲ್ಲೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಮಾಧವ ಪ್ರಭುಗಳು ವೈದ್ಯರ ಅನುಮತಿ ಪಡೆದು ನೇರವಾಗಿ ಮನೆಗೆ ತೆರಳಿ ಅಲ್ಪಿ ಏ.15 ರಂದು ಮತದಾನ ಕರ್ತವ್ಯ ಪೂರೈಸಿ ಆಸ್ಪತ್ರೆಗೆ ಮರಳಿದ್ದರು. ಮಾಧವ ಪ್ರಭುಗಳು ಆಸ್ಪತ್ರೆಯಲ್ಲಿ ಬುಧವಾರ ಮೃ*ತಪಟ್ಟಿದ್ದಾರೆ.
ಸೈನ್ಯಕ್ಕೆ ಸೇರುವ ಮೊದಲು ಮಲೇರಿಯಾ ನಿರ್ಮೂಲನಾ ವಿಭಾಗದ ಇನ್ಸ್ಪೆಕ್ಟರ್ ಆಗಿದ್ದರು. ಸೈನ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಇವರು ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾಗಿದ್ದರು. ಮೃ*ತರು ಪತ್ನಿ ಹಾಗೂ ಇಬ್ಬರು ಪುತ್ರಿ ಮತ್ತು ಪುತ್ರರನ್ನು ಅ*ಗಲಿದ್ದಾರೆ.