Connect with us

LATEST NEWS

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ;ವಿಧಾನಸಭೆಯಲ್ಲಿ ಪಕ್ಷ ವಿಪಕ್ಷ ಹೈಡ್ರಾಮಾದ ನಡುವೆ ಬಿಲ್ ಪಾಸ್..!

Published

on

ಗೋಹತ್ಯೆ ನಿಷೇಧ ಮಸೂದೆ ಅಂಗೀಕಾರ;ವಿಧಾನಸಭೆಯಲ್ಲಿ ಪಕ್ಷ ವಿಪಕ್ಷ ಹೈಡ್ರಾಮಾದ ನಡುವೆ ಬಿಲ್ ಪಾಸ್..!

Bill passes between party opposition hydrama in Assembly

ಬೆಂಗಳೂರು: ಬಿಜೆಪಿ ಸರ್ಕಾರ ಕೊನೆಗೂ ವಿವಾದಿತ ಗೋಹತ್ಯೆ ನಿಷೇಧ ಮಸೂದೆಯನ್ನು ಎರಡು ಮನೆಯಲ್ಲೂ ಅಂಗೀಕಾರ ಮಾಡಿಕೊಳ್ಳುವಲ್ಲಿ ಸಕ್ಸಸ್ ಆಗಿದೆ.

ವಿಧಾನ ಪರಿಷತ್‍ನಲ್ಲಿ ಸೋಮವಾರ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ಹೈಡ್ರಾಮಾದ ನಡುವೆಯೇ ಬಿಲ್ ಪಾಸ್ ಆಗಿದ್ದು, ರಾಜ್ಯಪಾಲರ ಸಹಿ ಬಳಿಕ ಕಾಯ್ದೆ ಅಧಿಕೃತವಾಗಿ ಜಾರಿಗೆ ಬರೋದಷ್ಟೇ ಬಾಕಿ ಇದೆ.

ವಿಧಾನಸಭೆಯಲ್ಲಿ ಅಂಗೀಕಾರವಾಗಿದ್ದ ವಿವಾದಿತ ಗೋಹತ್ಯೆ ಪ್ರತಿಬಂಧಕ ಕಾಯ್ದೆಗೆ ವಿಧಾನಪರಿಷತ್‍ನಲ್ಲೂ ಗ್ರೀನ್‍ಸಿಗ್ನಲ್ ಸಿಕ್ಕಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭಾರೀ ವಿರೋಧದ ನಡುವೆಯೂ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರಗೊಂಡಿದೆ.

ಗೋಹತ್ಯೆ ನಿಷೇಧ ಕಾಯ್ದೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಂದ ಪ್ರಬಲ ವಿರೋಧವಿತ್ತು. ಅಲ್ಲದೇ ಅನೇಕ ಅಂಶಗಳನ್ನ ತಿದ್ದುಪಡಿ ಮಾಡಲು ಸರ್ಕಾರಕ್ಕೆ ಸಲಹೆಗಳನ್ನು ಕೂಡಾ ನೀಡಲಾಗಿತ್ತು. ಇದಲ್ಲದೆ ವಿಧೇಯಕ ವಾಪಸ್ ಪಡೆಯುವಂತೆ ಕಾಂಗ್ರೆಸ್-ಜೆಡಿಎಸ್ ಆಗ್ರಹಿಸಿವೆ. ವಿಧೇಯಕದ ಮೇಲೆ ಸತತ 3 ಗಂಟೆ ಚರ್ಚೆ ಕೂಡಾ ನಡೆಯಿತು.ಈ ವೇಳೆ ವಿಪಕ್ಷಗಳು ಚರ್ಚೆಗೆ ಇನ್ನಷ್ಟು ಸಮಯ ಬೇಕು ಅಂತ ಸಭಾಪತಿಗಳಿಗೆ ಮನವಿ ಮಾಡಿ ಗದ್ದಲ ಪ್ರಾರಂಭ ಮಾಡಿದವು. ಕೂಡಲೇ ಸಭಾಪತಿಗಳು ವಿಧೇಯಕ ಅಂಗೀಕಾರ ಪ್ರಕ್ರಿಯೆ ಪ್ರಾರಂಭ ಮಾಡಿದ್ದರು.ಸರ್ಕಾರ ವಿಧೇಯಕ ಚರ್ಚೆಗೆ ಉತ್ತರ ನೀಡದೇ ವಿಧೇಯಕ ಅಂಗೀಕಾರ ಪ್ರಕ್ರಿಯೆ ನಡೆಯಿತು. ಸಭಾಪತಿಗಳ ನಡೆ ಮತ್ತು ಕಾಯ್ದೆ ವಿರೋಧಿಸಿ, ಜೆಡಿಎಸ್ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಮುಂದೆ ಪ್ರತಿಭಟನೆ ನಡೆಸಿದ್ರು.

ಕಾಂಗ್ರೆಸ್ಸಿನ ನಾರಾಯಣಸ್ವಾಮಿ, ಆರ್.ಬಿ. ತಿಮ್ಮಾಪುರ್ ವಿಧೇಯಕ ಪ್ರತಿ ಹರಿದು ಹಾಕಿದ್ರೆ, ಕಾಂಗ್ರೆಸ್‍ನ ನಜೀರ್ ಅಹಮ್ಮದ್ ವಿಧೇಯಕದ ಪ್ರತಿಯನ್ನ ಸಭಾಪತಿಗಳ ಹಿಡಿಯಲಾಯಿತು.

ಗದ್ದಲ ಗಲಾಟೆಗಳ ನಡುವೆ ಧ್ವನಿಮತದ ಮೂಲಕ ವಿಧೇಯಕ ಅಂಗೀಕಾರ ಆಯ್ತು. 13 ವರ್ಷ ಕೆಳಗಿನ ಎಮ್ಮೆ ಮತ್ತು ಕೋಣಗಳ ಹತ್ಯೆ ನಿಷೇಧ. 13 ವರ್ಷ ಮೇಲ್ಪಟ್ಟ ದನ, ಗೋ ಹತ್ಯೆಗೆ  ಅವಕಾಶ.ಗೋಹತ್ಯೆ ಮಾಡಿದ್ರೆ 3-7 ವರ್ಷದವರೆಗೆ ಜೈಲು ಶಿಕ್ಷೆ. ಪ್ರತೀ ಗೋಹತ್ಯೆಗೆ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ. ದಂಡ. ಪುನರಾವರ್ತಿತ ಅಪರಾಧಕ್ಕೆ 1-10 ಲಕ್ಷದವರೆಗೆ ದಂಡ, 7 ವರ್ಷ ಜೈಲು. ಗೋ ಹತ್ಯೆ ಮಾಡುವವರಿಗೆ ನಿರ್ದಿಷ್ಟ ಅವಧಿವರೆಗೆ ಜಾಮೀನಿಲ್ಲ.

ಅಂತರಾಜ್ಯ ಹಾಗೂ ರಾಜ್ಯದೊಳಗಡೆ ಗೋ ಸಾಗಾಟಕ್ಕೆ ನಿಷೇಧ ಹೇರಲಾಗಿದೆ. ಗೋಹತ್ಯೆ ತಡೆ, ಸಾಗಾಟ ತಡೆ ನಿರ್ವಹಣೆಗೆ ಸಕ್ಷಮ ಪ್ರಾಧಿಕಾರ ರಚನೆ ಮಾಡಲಾಗಿದೆ.ಗೋ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಸಾಗಾಟ ಮಾಡಬೇಕು. ನಿಯಮ ಉಲ್ಲಂಘಿಸಿದ್ರೆ 3-5 ವರ್ಷದವರೆಗೆ ಜೈಲು, 50 ಸಾವಿರ ರೂ. ದಂಡ ವಿಧಿಸಲಾಗುತ್ತದೆ.ಎಸ್‍ಐ ಶ್ರೇಣಿ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಧಿಕಾರಿಗಳಿಗೆ ತಪಾಸಣೆ ಮಾಡುವ ಅಧಿಕಾರ ನೀಡಲಾಗಿದೆ. ಮುಟ್ಟುಗೋಲು ಹಾಕಿ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‍ಗೆ ವರದಿ ಮಾಡಬೇಕು.

ಗೋ ಸಾಗಾಟದ ವಾಹನ ಆರೋಪಿಗೆ ಹಿಂತಿರುಗಿಸಲು ಬ್ಯಾಂಕ್ ಗ್ಯಾರಂಟಿ ಅಗತ್ಯವಾಗಿದೆ. ಗೋಹತ್ಯೆ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯ ರಚಿಸಬಹುದು

ಸಂಶೋಧನೆಗೆ ಬಳಸುವ ಗೋವುಗಳಿಗೆ ಕಾನೂನಿನಿಂದ ವಿನಾಯಿತಿ. ಪಶು ವೈಧ್ಯಾಧಿಕಾರಿ ದೃಢೀಕರಿಸಿದರೆ ಗೋಹತ್ಯೆ ಮಾಡಲು ಅವಕಾಶ ನೀಡಲಾಗುತ್ತದೆ.

ಪಶುವೈದ್ಯಾಧಿಕಾರಿಗಳು ದೃಢೀಕರಿಸಿದ, ರೋಗಗಳಿಂದ ಬಳಲುತ್ತಿರುವ ಗೋವುಗಳ ಹತ್ಯೆಗೆ ಮಾತ್ರ ಅವಕಾಶ ಇದೆ.ಕಾಯ್ದೆಯಲ್ಲಿ ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ಗೋಹತ್ಯೆ ತಡೆ ಕಾಯ್ದೆಯ ಕಠಿಣ ನಿಯಮಗಳನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ.

ಈಗಾಗಲೇ 2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರೂಪಿಸಿದ್ದ ಕಾಯ್ದೆಯನ್ನು ಮತ್ತಷ್ಟು ಪರಿಷ್ಕರಿಸಿ ಹೊಸ ಮಸೂದೆ ರೂಪಿಸಲಾಗಿದೆ. ಒಟ್ಟಾರೆ ಗೋಹತ್ಯೆ ನಿಷೇಧ ಕಾಯ್ದೆ ಎರಡು ಮನೆಯಲ್ಲೂ ಅಂಗೀಕಾರವಾಗಿದ್ದು, ರಾಜ್ಯಪಾಲರ ಅಂಕಿತದ ಬಳಿಕ ಅಧಿಕೃತವಾಗಿ ಕಾಯ್ದೆ ಜಾರಿಗೆ ಬರಲಿದೆ.

Click to comment

Leave a Reply

Your email address will not be published. Required fields are marked *

DAKSHINA KANNADA

ದೇವಸ್ಥಾನದಲ್ಲಿ ಚಪ್ಪಲಿ ಕಳೆದುಹೋದರೆ ಒಳ್ಳೆಯದಾ..? ಕೆಟ್ಟದ್ದಾ..?

Published

on

ಸಾಮಾನ್ಯವಾಗಿ ಎಲ್ಲರೂ ಚಪ್ಪಲಿ ತೆಗೆದುಕೊಳ್ಳುವಾಗ ಕೊಟ್ಟಂತಹ ಗಮನವನ್ನ ಅದನ್ನು ತೆಗೆದುಕೊಂಡು ಆದ ಮೇಲೆ ಯಾರೂ ಅದನ್ನ ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಚಪ್ಪಲಿಯನ್ನ ಇನ್ನು ಮುಂದೆ ನಿರ್ಲಕ್ಷ್ಯ ಮಾಡಬೇಡಿ. ಚಪ್ಪಲಿ ಸಹ ನಮ್ಮ ನಸೀಬನ್ನ ಬದಲಿಸಿ ನಮ್ಮ ಜೀವನದಲ್ಲಿ ಬದಲಾವಣೆಯನ್ನು ತರಬಲ್ಲದು.

ನಾವು ಫ್ಯಾಶನೇಬಲ್ ಆದ್ರೆ ಮಾತ್ರ ಬೇರೆಯವರ ಗಮನವನ್ನು ನಮ್ಮ ಕಡೆಗೆ ಸೆಳೆಯಬಹುದು ಅಂತ ತುಂಬಾ ಜನ ಅಂದುಕೊಂಡು ಇರುತ್ತಾರೆ. ಫ್ಯಾಶನೇಬಲ್ ಬಟ್ಟೆ, ಟ್ರೆಂಡೀ ಶೂ ಅಥವಾ ಚಪ್ಪಲಿಗಳಿರಬಹುದು ಅಥವಾ ಫ್ಯಾಶನೇಬಲ್ ಜ್ಯುವೆಲ್ಲರಿ ಆಗಿರಬಹುದು ಈ ರೀತಿ ಟ್ರೆಂಡಿಯಾಗಿ ಡ್ರೆಸ್ ಮಾಡಿದ್ರೆ ಎಲ್ಲರ ಗಮನ ನಮ್ಮ ಹತ್ತಿರ ತಿರುಗುತ್ತೆ. ಭಾರತೀಯ ಸಂಸ್ಕೃತಿಯಲ್ಲಿ ಮನೆಯೊಳಗೆ ಚಪ್ಪಲಿಯನ್ನು ಹಾಕಿಕೊಂಡು ಹೋಗುವುದು ಸೂಕ್ತವಲ್ಲ. ನಾವು ಚಪ್ಪಲಿಯನ್ನು ಹೊರಗಡೆ ಎಲ್ಲಿಗೂ ಹೋಗುವಾಗಲು ಹಾಕುತ್ತೇವೆ.

ಹೀಗೆ ದೇವಸ್ಥಾನಕ್ಕೆ ಹೋಗುವಾಗ ಚಪ್ಪಲಿಯನ್ನು ಹಾಕಿಕೊಂಡು ಹೋಗುತ್ತೇವೆ. ಕೆಲವೊಂದು ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ತುಂಬಾ ಭಕ್ತಾಧಿಗಳು ಹೋಗುತ್ತಾ ಬರುತ್ತಾ ಇರುತ್ತಾರೆ. ಅಲ್ಲಿ ಚಪ್ಪಲಿಗೆಂದೇ ಸ್ಟ್ಯಾಂಡ್ ಇಟ್ಟಿರುತ್ತಾರೆ. ನಾವು ಹಣ ಕೊಟ್ಟು ನಮ್ಮ ಚಪ್ಪಲಿಯನ್ನ ಅಲ್ಲಿ ಕಾಪಾಡಬಹುದು. ಆದ್ರೆ ಕೆಲವರು ಚಪ್ಪಲಿಯನ್ನು ಹೊರಗಡೇ ಇಟ್ಟು ಹೋಗುತ್ತಾರೆ. ದೇವರ ದರ್ಶನ ಮಾಡಿ ಹೊರಗೆ ಬರುವಾಗ ಆ ಚಪ್ಪಲಿ ಕಾಣುವುದಿಲ್ಲ. ಕೆಲವೊಮ್ಮೆ ರಶ್ ಇರಬೇಕಾದ್ರೆ ತಿಳಿಯದೇ ಜನರು ಹಾಕಿಕೊಂಡು ಹೋಗುತ್ತಾರೆ. ಕೆಲವೊಮ್ಮೆ ಬೇಕುಬೇಕಂತಲೆ ಅದನ್ನು ಕದ್ದುಕೊಂಡು ಹೋಗುತ್ತಾರೆ. ದೇವಸ್ಥಾನಗಳಲ್ಲಿ ಚಪ್ಪಲಿ ಕಳುವಾದ್ರೆ ಅದು ಒಳ್ಳೆಯದೇ ಎನ್ನುವ ನಂಬಿಕೆ ಕೂಡ ಇದೆ.

ಚಪ್ಪಲಿ ಹಾಳತ್ತಾಗಿದ್ದರೆ ಕಳೆದು ಹೋದರೂ ಬೇಜಾರಿಲ್ಲ. ಆದರೆ ಹೊಸತ್ತಾದರೆ ತುಂಬಾ ಬೇಜಾರ್ ಆಗುತ್ತದೆ. ಇಂತ ಸಮಯದಲ್ಲಿ ಕೆಲವರು ಹೇಳುತ್ತಾರೆ ಚಪ್ಪಲಿ ಕಳೆದು ಹೋದರೆ ನಿನ್ನ ದಾರಿದ್ರ್ಯ ಹೋಯಿತು. ಇನ್ನು ಮುಂದಕ್ಕೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ:

ಚಪ್ಪಲಿ ಕಳೆದುಹೋದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಭ ಚಿಹ್ನೆ ಎಂದು ಹೇಳುತ್ತಾರೆ. ಅದರಲ್ಲೂ ವಿಶೇಷವಾಗಿ ಶನಿವಾರ ಚಪ್ಪಲಿ ಕಳೆದುಹೋದರೆ ಪಾದರಕ್ಷೆಯೊಂದಿಗೆ ನಿಮ್ಮ ಶನಿಯು ದೂರವಾಯಿತು ಎಂದು ಅರ್ಥ. ನಮ್ಮ ದೇಹದ ಭಾಗಗಳು ಗ್ರಹಗಳಿಂದ ಪ್ರಭಾವಿತವಾಗಿರುತ್ತದೆ. ಶನಿ ಚರ್ಮ ಮತ್ತು ಪಾದಗಳಲ್ಲಿ ವಾಸಿಸುತ್ತಾನೆ. ಹೀಗೆ ಪಾದರಕ್ಷೆ ಕಳುವಾದ್ರೆ ನಿಮ್ಮ ಸಮಸ್ಯೆ ದೂರವಾಯ್ತು ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.

Continue Reading

LATEST NEWS

ಇಲ್ಲಿ ಕಂಠಪೂರ್ತಿ ವೈನ್‌‌ ಕುಡಿದ್ರೂ ಫ್ರೀ! ಆದ್ರೆ ಒಂದು ಕಂಡೀಷನ್‌!

Published

on

ಫ್ರೀ ಎಂದರೆ ಯಾರು ತಾನೇ ಬಿಡ್ತಾರೆ ಹೇಳಿ. ಫ್ರೀ ಅನ್ನುವ ಪದ ಕೇಳಿದ ಕೂಡಲೇ ಜನ ನಾ ಮುಂದು ತಾ ಮುಂದು ಅಂತ ನುಗ್ಗುತ್ತಾ ಇರುತ್ತಾರೆ. ಇನ್ನು ವೈನ್ ಫ್ರೀ ಅಂದರೆ ಬಾಯಿ ಬಿಡೋದು ಗ್ಯಾರಂಟಿನೇ. ಆದರೆ ವೈನ್ ಫ್ರೀ ಆಫರ್ ನಮ್ಮ ಭಾರತದಲ್ಲಿ ಅಲ್ವೇ ಅಲ್ಲ. ಈ ರೀತಿಯ ಆಫರ್ ಇರೋದು ಇಟಲಿ ದೇಶದಲ್ಲಿ. ಇಟಲಿಯಲ್ಲಿರುವ ರೆಸ್ಟೋರೆಂಟ್ ಒಂದರಲ್ಲಿ ಎಷ್ಟೇ ವೈನ್ ಕುಡಿದರೂ ಹಣ ಕೇಳಲ್ಲ. ಆದರೆ ರೆಸ್ಟೋರೆಂಟ್ ಮಾಲೀಕರ ಒಂದು ಕಂಡೀಷನ್ ಮಾತ್ರ ಫಾಲೋ ಮಾಡಲೇಬೇಕು. ವೈನ್ ಫ್ರೀ ಆಫರ್, ಮಾಲೀಕರ ಕಂಡೀಷನ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಈ ಸುದ್ದಿ ನೋಡಿದವರೆಲ್ಲಾ ವ್ಹಾವ್ ಎನ್ನುತ್ತಾ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ರೆಸ್ಟೋರೆಂಟ್‌ನಲ್ಲಿ ಎಷ್ಟಾದರೂ ವೈನ್ ಕುಡಿಯಬಹುದು!

ಇಟಲಿಯಲ್ಲಿನ ವೆರೋನಾದಲ್ಲಿರುವ ಅಲ್ ಕಾಂಡೋಮಿನಿಯೊ ಹೆಸರಿನ ಇಟಾಲಿಯನ್ ರೆಸ್ಟೋರೆಂಟ್ ಗೆ ಭೇಟಿ ಕೊಡುವ ಗ್ರಾಹಕರಿಗೆ ಉಚಿತವಾಗಿ ವೈನ್ ದೊರೆಯುತ್ತದೆ. ಆದರೆ ಊಟಕ್ಕೆ ಕುಳಿತುಕೊಳ್ಳುವಾಗ ಗ್ರಾಹಕರ ಬಳಿ ಮೊಬೈಲ್ ಫೋನ್ ಗಳು ಇರಬಾರದು. ರೆಸ್ಟೋರೆಂಟ್ ಗೆ ಪ್ರವೇಶಿಸಿದ ಕೂಡಲೇ ಮೊಬೈಲ್ ಫೋನ್ ಅನ್ನು ಸಿಬ್ಬಂದಿ ಬಳಿ ಒಪ್ಪಿಸಿಬಿಡಬೇಕು.

ಮೊಬೈಲ್‌ ಸೈಡಿಗಿಟ್ಟು ವೈನ್‌ ಕುಡಿಯಿರಿ!

ಇದೇ ಉದ್ದೇಶಕ್ಕಾಗಿ ಒಂದು ಬಾಟಲ್ ವೈನ್ ಅನ್ನು ಫ್ರೀ ಆಗಿ ಕೊಟ್ಟಿರಬಹುದು ಎಂದು ಅನ್ನಿಸುತ್ತದೆ. ಆದರೆ ಕಾರಣವೇನೆಂದರೆ ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನವೇ ಸಮಸ್ಯೆ ಆಗೋಗಿದೆ. ಪ್ರತಿ 5 ಸೆಕೆಂಡ್‌ಗೆ ಜನರು ತಮ್ಮ ಫೋನ್ ನೋಡುತ್ತಾ ಇರುತ್ತಾರೆ. ಆದರೆ ಆಗಾಗ ಫೋನ್ ನೋಡುವ ಅವಶ್ಯಕತೆ ಜನರಿಗೆ ಇಲ್ಲ ಕಾಣಿಸುತ್ತದೆ. ಈ ರೆಸ್ಟೊರೆಂಟ್‌ನಲ್ಲಿ ಜನರು ಸ್ವಲ್ಪ ಕಾಲ ಮೊಬೈಲ್ ಪಕ್ಕಕ್ಕೆ ಇಟ್ಟು ವೈನ್ ಕುಡಿಯಬೇಕು. ವೈನ್ ಕುಡಿದು ಮುಗಿಸುವವರೆಗೆ ಜನರು ಮೋನ್ ಮುಟ್ಟುವಂತಿಲ್ಲ.

ಇನ್ ಸ್ಟಾಗ್ರಾಂನಲ್ಲಿ ರೆಸ್ಟೋರೆಂಟ್ ನ ಆಫರ್, ಕಂಡೀಷನ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದೆ. ಪೋಸ್ಟ್ ಗೆ ಸುಮಾರು 68000 ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವರು ತಮಾಷೆ ಸಹ ಮಾಡಿದ್ದಾರೆ.

ರೆಸ್ಟೋರೆಂಟ್ ಮಾಲೀಕರ ಈ ಕಾರ್ಯಕ್ಕೆ ಮೆಚ್ಚುಗೆ ತಿಳಿಸಿದ ನೆಟ್ಟಿಗರೊಬ್ಬರು, ಗ್ರಾಹಕರು ತಮ್ಮ ಸಮಯವನ್ನು ಆನಂದಿಸಲು ಈ ಮಾಲೀಕರು ತಮ್ಮ ಹಣವನ್ನು ವೆಚ್ಚ ಮಾಡುತ್ತಿದ್ದಾರೆ. ನಿಜಕ್ಕೂ ಮಾಲೀಕರು ಒಳ್ಳೆಯ ಮನುಷ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

Continue Reading

LATEST NEWS

ರಜೆಯಿದೆ ಎಂದು ಪ್ರವಾಸಕ್ಕೆ ಹೊರಟಿದ್ದೀರಾ? ಗಮನಿಸಿ, ಈ ಪ್ರವಾಸಿ ತಾಣಗಳಿಗಿದೆ ನಿರ್ಬಂಧ

Published

on

ಮೈಸೂರು : ಶುಕ್ರವಾರ ಮತದಾನ ನಡೆಯಲಿದೆ. ಶನಿವಾರ ಹಾಗೂ ಭಾನುವಾರ ರಜೆ ಇರುತ್ತೆ. ಹಾಗಾಗಿ ಮೈಸೂರಿಗೆ ಪ್ರವಾಸ ಬೆಳೆಸೋಣ ಅಂತ ನೀವಂದುಕೊಂಡಿದ್ರೆ ಅದು ಸಾಧ್ಯವಿಲ್ಲ. ಯಾಕೆಂದ್ರೆ, ಮೈಸೂರಿನ ಪ್ರವಾಸಿ ತಾಣಗಳು ಏಪ್ರಿಲ್ 26 ರಂದು ಬಂದ್ ಆಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.


ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಹೀಗಾಗಿ ಈ ಕ್ಷೇತ್ರದ ವ್ಯಾಪ್ತಿಯ ಮೈಸೂರು ಮೃಗಾಲಯ, ಕಾರಂಜಿ ಕೆರೆ ಸೇರಿದಂತೆ ಇತರ ಪ್ರವಾಸಿ ತಾಣಗಳನ್ನು ಬಂದ್ ಮಾಡಲು ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ. ಏಪ್ರಿಲ್ 26 ರಂದು ಪ್ರವಾಸಿ ತಾಣಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು ರೆಸಾರ್ಟ್ ಬುಕ್ಕಿಂಗ್ ನಿರ್ಬಂಧ

ಉಡುಪಿ – ಚಿಕ್ಕಮಗಳೂರು ಕ್ಷೇತ್ರದಲ್ಲೂ ಏಪ್ರಿಲ್ 26 ರಂದು ಚುನಾವಣೆ ನಡೆಯಲಿದೆ. ಹಾಗಾಗಿ ಏಪ್ರಿಲ್ 25 ಹಾಗೂ 26 ರಂದು ಹೋಂ ಸ್ಟೇ, ರೆಸಾರ್ಟ್ ಗಳಲ್ಲಿ ಬೇರೆ ಬೇರೆ ಜಿಲ್ಲೆಯ ಪ್ರವಾಸಿಗರ ಬುಕ್ಕಿಂಗ್ ಸ್ವೀಕರಿಸಬಾರದು ಎಂದು ಡಿಸಿ ಮೀನಾ ನಾಗರಾಜ್ ರೆಸಾರ್ಟ್ ಮಾಲಕರಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ : ರಿಯಾಲಿಟಿ ಶೋಗಳಲ್ಲೂ ಕಾಸ್ಟಿಂಗ್ ಕೌಚ್! ಡ್ಯಾನ್ಸಿಂಗ್ ಕ್ವೀನ್ ಬಿಚ್ಚಿಟ್ಟ ಸತ್ಯವೇನು?

ನಂದಿ ಗಿರಿಧಾಮಕ್ಕೂ ನಿರ್ಬಂಧ :

ನಂದಿ ಗಿರಿಧಾಮಕ್ಕೂ ನಿರ್ಬಂಧ ವಿಧಿಸಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಇತ್ತೀಚೆಗೆ ಆದೇಶ ಹೊರಡಿಸಿದೆ. ಏಪ್ರಿಲ್ 25 ಹಾಗೂ 26 ರಂದು ನಂದಿಗಿರಿಧಾಮಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

Continue Reading

LATEST NEWS

Trending