ಸುಳ್ಯ ದೇವರಗುಂಡಿ ಫಾಲ್ಸ್ ಮಾಡೆಲ್ ಗಳ ಬಿಕನಿ ಶೋ : ಫೊಟೋ ಶೂಟ್ ಗೆ ಭಕ್ತರ ಆಕ್ರೋಶ..!
ಸುಳ್ಯ : ಸುಳ್ಯ ತಾಲೂಕಿನ ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಪಟ್ಟ ಪವಿತ್ರ ದೇವರಗುಂಡಿ ಫಾಲ್ಸ್ ಬಳಿ ಬೆಂಗಳೂರಿನ ಮಾಡೆಲ್‌ಗಳು ಬಿಕಿನಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ತಿಂಗಳ ಹಿಂದೆ ಗುಪ್ತವಾಗಿ ಬಂದು ಫೋಟೋ ಶೂಟ್ ಮಾಡಿಸಿದ್ದು, ಈ ಪೋಟೋ, ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತೋಡಿಕಾನ ಗ್ರಾಮದ ದೇವರಗುಂಡಿ ಜಲಪಾತ ಸನಿಹದಲ್ಲೇ ಇರುವ ಮಲ್ಲಿಕಾರ್ಜುನ ದೇವಸ್ಥಾನಕ್ಕೆ ಸಂಬಂಧಿಸಿದ್ದಾಗಿದ್ದು, ಸಾಕ್ಷಾತ್ ಶಿವನೇ ಈ ಜಲಪಾತದಲ್ಲಿ ಸ್ನಾನಕ್ಕೆ ಆಗಮಿಸುತ್ತಿದ್ದ ಎನ್ನುವ ನಂಬಿಕೆ ಇಲ್ಲಿನ ಭಕ್ತರಲ್ಲಿದೆ.
ಆದರೆ ಈ ರೀತಿ ಯುವತಿಯರು ಬಿಕಿನಿಯಲ್ಲಿ ಕಾಣಿಸಿಕೊಂಡು ಅಶ್ಲೀಲವಾಗಿ ದೇಹಸಿರಿ ಪ್ರದರ್ಶನ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇಲ್ಲಿ ಸ್ಥಳೀಯರೇ ಸ್ನಾನ ಮಾಡುವುದಿಲ್ಲ. ಆದರೆ ಬೆಂಗಳೂರಿನ ಬಿಕಿನಿ ಸುಂದರಿಯರು ಅರೆಬೆತ್ತಲಾಗಿ ದೇವರಗುಂಡಿಯಲ್ಲಿ ಫೋಟೋಶೂಟ್ ಮಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವಸ್ಥಾಣದ ಆಡಳಿತ ಮಂಡಳಿ ನಾವು ಈ ಬಗ್ಗೆ ಯಾರಿಗೂ ಅನುಮತಿ ನೀಡಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.