2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್‌ಶಿಪ್ ಮಧ್ಯಪ್ರದೇಶದ ರಾಟ್‌ಲ್ಯಾಮ್‌ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ರಾಟ್ಲಾಮ್(ಮಧ್ಯಪ್ರದೇಶ) 2023ರ ಮಹಿಳಾ ಬಾಡಿ ಬಿಲ್ಡರ್ ಇಂಡಿಯಾ ಚಾಂಪಿಯನ್‌ಶಿಪ್ ಮಧ್ಯಪ್ರದೇಶದ ರಾಟ್‌ಲ್ಯಾಮ್‌ನಲ್ಲಿ ನಡೆದಿದ್ದು ವೇದಿಕೆ ಮೇಲೆ ಹನುಮಾನ್ ಪ್ರತಿಮೆ ಮುಂದೆ ಮಹಿಳಾ ಬಾಡಿ ಬಿಲ್ಡರ್ಗಳು ಟು ಪೀಸ್ ನಲ್ಲಿ ಪ್ರದರ್ಶನ ನೀಡಿರುವುದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಭಾನುವಾರ ಬೆಳಿಗ್ಗೆ ಈ ಸ್ಪರ್ಧೆಯು ಹನುಮಾನ್ ಜಿ ಅವರ ಪೂಜೆಯೊಂದಿಗೆ ಪ್ರಾರಂಭವಾಯಿತು. ಇದನ್ನು ಬಿಜೆಪಿಯ ಮೇಯರ್ ಸ್ವತಃ ಆಯೋಜಿಸಿದ್ದಾರೆ.
ಪ್ರದರ್ಶನದ ವೇಳೆ ಹನುಮಾನ್ ವಿಗ್ರಹದ ಮುಂದೆ ಟು ಪೀಸ್ ಮತ್ತು ಶೂಟ್ ಗಳನ್ನು ಧರಿಸಿ ಪ್ರದರ್ಶನ ನೀಡಿರುವುದು ವಿವಿಧ ಸಾಮಾಜಿಕ ಮತ್ತು ರಾಜಕೀಯ ಸಂಸ್ಥೆಗಳು ರಾಜ್ಯದಾದ್ಯಂತ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಭಟನೆ ನಡೆಸಿವೆ.
ಅದೇ ಸಮಯದಲ್ಲಿ, ಈ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರು ಮಂಡಿ ಪ್ರದೇಶದಲ್ಲಿ ಒಟ್ಟುಗೂಡಿದ್ದು ಘಟನೆಯ ವಿರುದ್ಧ ಪ್ರತಿಭಟಿಸಿ ಹನುಮಾನ್ ಚಾಲಿಸಾ ಪಠಿಸಿದರು.